Just In
Don't Miss
- News
ಅಚ್ಚರಿಯ ಬೆಳವಣಿಗೆ: ರಾಜಕೀಯ ಸನ್ಯಾಸತ್ವ ಪ್ರಕಟಿಸಿದ ಶಶಿಕಲಾ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Automobiles
ಬಿಡುಗಡೆಗೆ ಸಜ್ಜಾಗುತ್ತಿದೆ ಹೊಸ ಫೋಕ್ಸ್ವ್ಯಾಗನ್ ಟಿಗ್ವಾನ್ ಎಸ್ಯುವಿ
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Movies
13 BIFFES: ಸಿನಿಮಾ ಮಾಂತ್ರಿಕನಿಗೆ 'ಶತಮಾನೋತ್ಸವ ಗೌರವ'
- Education
Karnataka SSLC Exam 2021 Time Table: ಎಸ್ಎಸ್ಎಲ್ಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಾಸವಾಳ ಹೂವಿನ ಹತ್ತಾರು ಔಷಧೀಯ ಗುಣಗಳು!
ಮಲೆನಾಡು ಕರಾವಳಿಯಲ್ಲಿ ದಾಸವಾಳದ ಗಿಡವನ್ನು ಅಲಂಕಾರಿಕಾ ಸಸ್ಯದಂತೆ ನೋಡದೇ ಸಾಮಾನ್ಯವಾಗಿ ಬೇಲಿಗೆ ನೆಡುವ ಕಾರಣದಿಂದ ದಾಸವಾಳದ ಹೂವು ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. Malvaceae ಎಂಬ ಸಸ್ಯ ಸಂಕುಲಕ್ಕೆ ಸೇರಿದ ದಾಸವಾಳ ಹೂವನ್ನು Rosemallow ಎಂದೂ ಕರೆಯುತ್ತಾರೆ.
ವಾಸ್ತವವಾಗಿ ಈ ಹೂವಿನ ಔಷಧೀಯ ಗುಣಗಳನ್ನು ಪರಿಗಣಿಸಿದರೆ ಈ ಗಿಡವನ್ನು ಬೇಲಿಯಲ್ಲಲ್ಲ, ಬದಲಿಗೆ ತುಳಸಿಯಂತೆ ಕಟ್ಟೆ ಕಟ್ಟಿ ಪೂಜಿಸಬೇಕಾದ ಹೂವಾಗಿದೆ. ಭಾರತದ ಯಾವುದೇ ರಾಜ್ಯದಲ್ಲಿಯೂ, ಯಾವುದೇ ಹವಾಮಾನದಲ್ಲಿಯೂ ಹೆಚ್ಚಿನ ಆರೈಕೆ ಬೇಡದೇ ಸುಲಭವಾಗಿ ಬೆಳೆಯುವ ಈ ಗಿಡ common Indian garden flower ಎಂಬ ಅನ್ವರ್ಥನಾಮವನ್ನೂ ಪಡೆದಿದೆ. ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!
ಸುಮಾರು ಹತ್ತಿಪ್ಪತ್ತು ವರುಷಗಳ ಹಿಂದೆ, ಸೇಬಿನ ಗಿಡ ಎಂದು ಹೇಳಿ ದಾಸವಾಳದ ಗಿಡದ ಗೆಲ್ಲುಗಳನ್ನೇ ಚಿಗುರುಬರಿಸಿ ಮಲೆನಾಡಿನಾದ್ಯಂತ ಕೆಲವ ಧೂರ್ತರು ಮೋಸ ಮಾಡಿದ್ದಿದೆ. ಆದರೆ ಸೇಬಿನ ಗಿಡ ಎಂದು ನಂಬಿ ನೆಟ್ಟವರ ಮನೆಯಲ್ಲಿ ಈಗ ದಾಸವಾಳದ ಹೆಮ್ಮರಗಳು ಹೂವು ಬಿಡುತ್ತಿವೆ...! ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?
ಚಿಕ್ಕ ತುತ್ತೂರಿಯಂತಿರುವ ಇದರ ಹೂವುಗಳಿಗೆ ಆಯುರ್ವೇದದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಕೂದಲ ಪೋಷಣೆಯ ತೈಲಗಳಲ್ಲಿ ಈ ಹೂವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಕೂದಲ ಹೊರತಾಗಿ ಆರೋಗ್ಯಕ್ಕೂ ದಾಸವಾಳ ಹಲವು ರೀತಿಯಲ್ಲಿ ಉತ್ತಮವಾಗಿದ್ದು ಅವುಗಳಲ್ಲಿ ಪ್ರಮುಖವಾದುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ....

ಹೃದಯದ ಆರೋಗ್ಯಕ್ಕೆ
ದಾಸವಾಳ ಹೂವಿನಿಂದ ಪ್ರತ್ಯೇಕಿಸಲ್ಪಟ್ಟ ದ್ರವದಿಂದ ಹೃದಯಕ್ಕೆ ಸಂಬಂಧಪಟ್ಟ ಹಲವು ಕಾಯಿಲೆಗಳಿಗೆ ಔಷಧವನ್ನು ತಯಾರಿಸಲಾಗುತ್ತದೆ.

ಅಧಿಕ ರಕ್ತದೊತ್ತಡದ ಸಮಸ್ಯೆಗೆ
ಅಧಿಕ ರಕ್ತದೊತ್ತಡ ಇರುವ ರೋಗಿಗಳು ದಾಸವಾಳ ಹೂವನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ನಿತ್ಯವೂ ಕುಡಿಯುವುದರಿಂದ ರಕ್ತದೊತ್ತಡ ಸಾಮಾನ್ಯ ಮಟ್ಟಕ್ಕೆ ಬರಲು ಸಾಧ್ಯವಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ
ಸ್ಥೂಲಕಾಯವನ್ನು ಕರಗಿಸಲು ಈ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ. ದಾಸವಾಳ ಹೂವಿನ ಒಣಗಿದ ಪಕಳೆಗಳ ಪುಡಿಯನ್ನು ನಿತ್ಯವೂ ಒಂದು ಚಮಚದಷ್ಟು ಸೇವಿಸುವ ಮೂಲಕ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಣನೀಯವಗಿ ಕಡಿಮೆಯಾಗುತ್ತದೆ. ಇದರಿಂದ ಎದುರಾಗಬಹುದಾಗಿದ್ದ ತೊಂದರೆಗಳನ್ನು ಮತ್ತು ಹೃದಯ ಸ್ತಂಭನದ ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ
ಯಾವುದೇ ಕಾರಣಕ್ಕೆ ಶರೀರದ ತಾಪಮಾನ ವಿಪರೀತವಾಗಿ ಏರಿದ್ದರೆ ಇದನ್ನು ಇಳಿಸಲು ದಾಸವಾಳದ ಹೂವಿನ ನೀರು ಅತ್ಯುತ್ತಮವಾಗಿದೆ. ಜ್ವರ ವಿಪರೀತವಾಗಿದ್ದಾಗ ಈ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರನ್ನು ಹಣ್ಣಿನ ರಸದ ಬದಲಿಗೆ ಕುಡಿಸಿದರೆ ಜ್ವರ ತಕ್ಷಣ ಕಡಿಮೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಜ್ವರದ ಸಮಸ್ಯೆಗೆ....
ಬಿಳಿ ದಾಸವಾಳದ ಹೂವು ವಿಶೇಷವಾಗಿ ಅತಿಜ್ವರವನ್ನು ಇಳಿಸಲು ಹೆಚ್ಚು ಸಮರ್ಥವಾಗಿದೆ. ಅಲ್ಲದೇ ಬಿಳಿ ಹೂವಿನ ದಳಗಳನ್ನು ಅರೆದು ಲೇಪನ ಮಾಡಿ ಮುಖದ ಮೊಡವೆಗಳಿಗೆ ಹಚ್ಚಿದರೆ ಶೀಘ್ರವೇ ಕಡಿಮೆಯಾಗುತ್ತದೆ. ಕಣ್ಣುಗಳ ಒತ್ತಡವನ್ನು ಕಡಿಮೆಗೊಳಿಸಲೂ ಈ ಹೂವಿನ ಪಕಳೆಗಳು ಸಮರ್ಥವಾಗಿದೆ.

ಮಧುಮೇಹ ಮತ್ತು ಮೂತ್ರಪಿಂಡಗಳ ತೊಂದರೆಗೆ ರಾಮಬಾಣ
ದಾಸವಾಳ ಒಂದು ಉತ್ತಮ ಮೂತ್ರವರ್ಧಕವಾಗಿದೆ. ಇದೇ ಕಾರಣಕ್ಕೆ ಮಧುಮೇಹ ಮತ್ತು ಮೂತ್ರಪಿಂಡಗಳ ತೊಂದರೆಯಿಂದ ಬಳಲುತ್ತಿರುವವರು ದಾಸವಾಳ ಹೂವಿನ ಪಕಳೆಗಳನ್ನು ಅರೆದು ತಯಾರಿಸಿದ ಜ್ಯೂಸ್ ಅನ್ನು ಕುಡಿಯಲು ಆಯುರ್ವೇದದಲ್ಲಿ ಶಿಫಾರಸ್ಸು ಮಾಡಲಾಗಿದೆ.

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ
ಕೆಂಪು ದಾಸವಾಳ ಹೂವಿನ ದಳಗಳನ್ನು ಒಳಗಿಸಿ ಚೂರ್ಣದ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ರಕ್ತ ಶುದ್ಧಿಯಾಗುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚುತ್ತದೆ. ಇದೇ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಈ ಹೂವು ಉತ್ತಮವಾಗಿದೆ. ಪೂರ್ವ ದೇಶಗಳಲ್ಲಿ ಸಿಹಿತಿಂಡಿಗಳ ಮೇಲೆ ದಾಸವಾಳ ಹೂವಿನ ದಳಗಳನ್ನು ಕಲಾತ್ಮಕವಾಗಿ ಅಲಂಕರಿಸಿ ಸಿಹಿಯ ಜೊತೆಯಲ್ಲಿಯೇ ಸೇವಿಸುವ ಸಂಪ್ರದಾಯವಿದೆ.

ಕೂದಲಿನ ಸಮಸ್ಯೆಗೆ...
ಈ ಹೂವಿನ ದಳಗಳನ್ನು ಅರೆದು ಸಂಗ್ರಹಿಸಲಾದ ಲೋಳೆ ಕೂದಲ ಪೋಷಣೆಗೆ ಅತ್ಯುತ್ತಮವಾಗಿದ್ದು ಹಲವು ನೈಸರ್ಗಿಕ ಕೂದಲ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದರ ಗಿಡದ ಚೆಕ್ಕೆಯ ಪುಡಿಯನ್ನು ಶಾಂಪೂ ಮೂಲಕ ಬಳಸುವುದರಿಂದ ತಲೆಯ ಚರ್ಮ ಒಣಗುವುದು ಮತ್ತು ತಲೆಹೊಟ್ಟಾಗುವುದರಿಂದ ರಕ್ಷಿಸುತ್ತದೆ.

ಬಿಳಿ ಕೂದಲಿನ ಸಮಸ್ಯೆಗೆ
ದಾಸವಾಳ ಹೂವಿನ ದಳಗಳನ್ನು ಬಿಸಿ ನೀರಿನಲ್ಲಿ ಹಾಕಿ 20 ನಿಮಿಷ ಕಾಯಿಸಿ. ಆನಂತರ ಅದನ್ನು ತಣ್ಣಗೆ ಮಾಡಿ, ಪೇಸ್ಟ್ ರೀತಿ ಮಾಡಿಕೊಳ್ಳಿ.ಇನ್ನು ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. 20 ನಿಮಿಷ ಬಿಟ್ಟು ನಂತರ ಇದನ್ನು ತೊಳೆಯಿರಿ. ಇದನ್ನು ಪ್ರತಿದಿನ ಮಾಡಿ, ಅದರ ನಂತರ ದಾಸವಾಳ ನೆನೆಸಿದ ಎಣ್ಣೆಯನ್ನು ಹಚ್ಚಿ.

ಮಧುಮೇಹ ನಿಯಂತ್ರಣಕ್ಕೆ
ಬಯೋಕೆಮಿಕಲ್ ಅಂಡ್ ಬಯೋಫಿಸಿಕಲ್ ರಿಸರ್ಚ್ ಕಮ್ಯೂನಿಕೇಶನ್‌ರವರ ಅಧ್ಯಯನದಲ್ಲಿ ತಿಳಿದುಬಂದಿರುವಂತೆ, ದಾಸವಾಳದಿಂದ ತಯಾರಿಸಲಾಗುವ ಒಂದು ಔಷಧಿಯು ನಿಮ್ಮ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ದಾಸವಾಳದಲ್ಲಿ ಫೆರುಲಿಕ್ ಆಮ್ಲದಂತಹ ಪಾಲಿಫೆನಾಲ್‌ಗಳು ಲಭ್ಯವಿರುತ್ತವೆ. ಇದು ಮಧುಮೇಹವನ್ನು ನಿವಾರಿಸುವ ಅಂಶವಾಗಿ ಕಾರ್ಯ ನಿರ್ವಹಿಸುತ್ತದೆ.