For Quick Alerts
ALLOW NOTIFICATIONS  
For Daily Alerts

ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

By manu
|

ಚಹಾ ಅಥವಾ ಟೀ ಎಂದರೆ ಕಪ್ಪು ಚಹಾ ಒಂದೇ ಎಂದುಕೊಂಡಿದ್ದವರಿಗೆ ಅಚ್ಚರಿ ಕಾದಿದೆ. ಏನೆಂದರೆ ಇಂದು ವಿವಿಧ ಸ್ವಾದಗಳ ಚಹಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಕ್ಯಾಮೋಮೈಲ್ ಚಹಾ, ಹಸಿರು ಚಹಾ, ವೆನಿಲಾ ಚಹಾ, ಜಾಸ್ಮಿನ್ ಚಹಾ, ದಾಸವಾಳ ಚಹಾ, ಹರ್ಬಲ್ ಚಹಾ, ಲಿಂಬೆಯ ಚಹಾ, ಜೇನಿನ ಚಹಾ ಇತ್ಯಾದಿ.

ಸಾಮಾನ್ಯ ಚಹಾದೊಂದಿಗೆ ಯಾವ ಅಂಶವನ್ನು ಪ್ರಮುಖವಾಗಿ ಸೇರಿಸಲಾಗುತ್ತದೆಯೋ ಆಯಾ ಹೆಸರಿನ ಚಹಾ ಎಂದೇ ಹೇಳುವುದು ವಾಡಿಕೆ. ಇನ್ನೂ ಮುಂದುವರೆದು ಕೆಲವು ವಿಚಿತ್ರ ಹೆಸರಿನ ಚಹಾಗಳೂ ಇವೆ. ಇಂದು ನಮ್ಮ ಮನೆಯ ಬೇಲಿ, ಹಿತ್ತಲಿನಲ್ಲಿ ಹೆಚ್ಚಿನ ಆರೈಕೆಯಿಲ್ಲದೇ ಬೆಳೆಯುವ ದಾಸವಾಳದ ಚಹಾ ಮತ್ತು ಇದರ ಆರೋಗ್ಯಕರ ಗುಣವನ್ನು ಅರಿಯೋಣ.

ಕೆಂಪಗಿನ ದಾಸವಾಳದ ಹೂವಿನ ದಳಗಳನ್ನು ಬಿಡಿಸಿ ಒಣಗಿಸಿ ಪುಡಿಮಾಡಿ ಚಹಾದೊಂದಿಗೆ ಬೆರೆಸಿ ತಯಾರಿಸಲಾಗುತ್ತದೆ. ಇದರ ಒಂದು ಉತ್ತಮ ಅಂಶವೆಂದರೆ ತಣ್ಣೀರಿನಲ್ಲಿಯೂ ಕರಗುವುದು. ಅಂತೆಯೇ ದಾಸವಾಳದ ಚಹಾವನ್ನು ಶರಬತ್ತಿನಂತೆಯೂ ಅತಿಥಿಗಳಿಗೆ ನೀಡಬಹುದು. ಇದರ ಕೊಂಚ ಸಿಹಿಮಿಶ್ರಿತ ಹುಳಿಯಾದ ರುಚಿ ವಿಭಿನ್ನ ಅನುಭವ ನೀಡುತ್ತದೆ. ಇದೇ ಕಾರಣಕ್ಕೆ ಇದನ್ನು ಹುಳಿಚಹಾ (sour tea) ಎಂದು ಕರೆಯಲಾಗುತ್ತದೆ. ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಈ ಚಹಾ ಕೊಂಚ ಕೆಂಪು ಬಣ್ಣಕ್ಕಿದ್ದು ಸ್ವಾದಿಷ್ಟವಾರುತ್ತದೆ. ಅಲ್ಲದೇ ಇದರಲ್ಲಿ ವಿವಿಧ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ದಾಸವಾಳ ಹೂವಿನಲ್ಲಿದೆ 14 ಔಷಧೀಯ ಗುಣಗಳು!

ರುಚಿಯಲ್ಲಿ ಹುಳಿಯಾಗಿದ್ದರೂ ಇದರ ಆರೋಗ್ಯಕರ ಪರಿಣಾಮಗಳು ಮಾತ್ರ ಸಿಹಿಯಾಗಿವೆ. ಅಲ್ಲದೆ ಸಾಂಪ್ರಾದಾಯಿಕವಾಗಿ ಕೂಡ ಈ ಹೂವನ್ನು ಹಲವು ಆರೋಗ್ಯದ ತೊಂದರೆಗಳನ್ನು ನಿವಾರಿಸಲು ಉಪಯೋಗಿಸಲ್ಪಡುತ್ತಾ ಬರಲಾಗಿದೆ. ಬನ್ನಿ ದಾಸವಾಳದ ಹೂವಿನ ಚಹಾ ಸೇವನಿಯಿಂದ ಆರೋಗ್ಯಕ್ಕಾಗುವ ಲಾಭಗಳನ್ನು ಬೋಲ್ಡ್ ಸ್ಕೈ ತಂಡ ಕೆಳಗಿನ ಸ್ಲೈಡ್ ಶೋ ಮೂಲಕ ಹಂಚಿಕೊಳ್ಳುತ್ತಿದೆ ಮುಂದೆ ಓದಿ...

 ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ

ದಾಸವಾಳದ ಚಹಾ ಸೇವನೆಯಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನರಗಳ ಒಳಗೋಡೆಗಳಿಗೆ ಅಂಟಿಕೊಂಡಿದ್ದುದು ಸಡಿಲಗೊಳ್ಳುವ ಮೂಲಕ ನಿವಾರಣೆಯಾಗಲು ಸಾಧ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

 ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತದೆ

ಇದರಿಂದ ರಕ್ತನಾಳಗಳು ಮತ್ತು ತನ್ಮೂಲಕ ಹೃದಯಕ್ಕೆ ಆಗುವ ಹಾನಿಯನ್ನು ಸಂಭವಿಸುತ್ತದೆ. ಅದರಲ್ಲೂ ದಿನಕ್ಕೆ ಕೆಲವಾರು ಕಪ್ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಅಂಶ ನಿಯಂತ್ರಣಕ್ಕೆ ಬರಲು ಸಾಧ್ಯವಾಗುತ್ತದೆ.

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್‌ನ (lಲಿವರ್) ತೊಂದರೆಗಳಿಗೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉತ್ತಮ ಸಹಕಾರ ನೀಡುತ್ತವೆ ಎಂದು ಸಂಶೋಧನೆಗಳು ದೃಢಗೊಳಿಸಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಯಕೃತ್ ಅನ್ನು ರಕ್ಷಿಸುತ್ತದೆ

ಯಕೃತ್ ಅನ್ನು ರಕ್ಷಿಸುತ್ತದೆ

ಇವು ರಕ್ತದಲ್ಲಿನ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿಷ್ಕ್ರಿಯಗೊಳಿಸಿ ಯಕೃತ್ ಸಹಿತ ದೇಹದ ಇತರ ಅಂಗಗಳನ್ನು ಹಾನಿಯಿಂದ ರಕ್ಷಿಸುತ್ತದೆ ಹಾಗೂ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಕ್ಯಾನ್ಸರ್ ಬರುವುದರಿಂದ ರಕ್ಷಿಸುತ್ತದೆ

ಕ್ಯಾನ್ಸರ್ ಬರುವುದರಿಂದ ರಕ್ಷಿಸುತ್ತದೆ

ಇನ್ನೊಂದು ಸಂಶೋಧನೆಯ ಪ್ರಕಾರ ನಿಯಮಿತವಾಗಿ ದಾಸವಾಳದ ಚಹಾ ಸೇವಿಸುವುದರಿಂದ ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ತಗ್ಗುತ್ತದೆ ಹಾಗೂ ಒಂದು ವೇಳೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದರೆ ಪೂರ್ಣವಾಗಿ ನಿವಾರಿಸಲು ನೆರವಾಗುತ್ತದೆ.

ರಕ್ತದೊತ್ತಡವನ್ನು ತಗ್ಗಿಸುತ್ತದೆ

ರಕ್ತದೊತ್ತಡವನ್ನು ತಗ್ಗಿಸುತ್ತದೆ

ಇದರಲಿರುವ ಉರಿಯೂತ ನಿವಾರಕ ಗುಣ ಅಧಿಕ ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ದಾಸವಾಳದ ಹೂವಿನ ಚಹಾ ಒಂದು ವರದಾನವಾಗಿದೆ.

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಇದರಲ್ಲಿರುವ ವಿಟಮಿನ್ನುಗಳು, ಖನಿಜಗಳು ಹಾಗೂ ಫ್ಲೇವನಾಯ್ಡ್ ಗಳೆಂಬ ಸಸ್ಯಜನ್ಯ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಕಣಗಳು ಮನದ ಬೇಗುದಿಯನ್ನು ಕಡಿಮೆಗೊಳಿಸುವ ಗುಣವನ್ನು ಹೊಂದಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ಮನಸ್ಸಿನ ಒತ್ತಡವನ್ನು ಕಡಿಮೆಗೊಳಿಸುತ್ತದೆ

ದಾಸವಾಳದ ಚಹಾವನ್ನು ನಿಯಮಿತವಾಗಿ ಸೇವಿಸುವ ಮೂಲಕ ಉದ್ರೇಕಗೊಂಡ ನರವ್ಯವಸ್ಥೆಯನ್ನು ಶಾಂತಗೊಳಿಸಲು ಸಾಧ್ಯವಾಗುತ್ತದೆ. ಈ ಚಹಾ ಖಿನ್ನತೆಯಿಂದ ಬಳಲುತ್ತಿರುವವರಿಗೂ ಉತ್ತಮವಾಗಿದೆ.

ತಿಂಗಳ ರಜಾದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ತಿಂಗಳ ರಜಾದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ತಿಂಗಳ ರಜಾದಿನಗಳ ವೇಳೆಯಲ್ಲಿ ಕಾಡುವ ನೋವು ಮತ್ತು ಹೊಟ್ಟೆಯ ಸೆಳೆತವನ್ನು ಕಡಿಮೆಗೊಳಿಸಲು ದಾಸವಾಳದ ಚಹಾದಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಸ್ರಾವವನ್ನು ಸೂಕ್ತ ಮಟ್ಟದಲ್ಲಿರಿಸಲೂ ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಿಂಗಳ ರಜಾದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ತಿಂಗಳ ರಜಾದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಇದರ ಏರುಪೇರಿನಿಂದ ಉಂಟಾಗಬಹುದಾದ ಮನೋಭಾವದ ಬದಲಾವಣೆ, ಖಿನ್ನತೆ, ಅಧಿಕ ಪ್ರಮಾಣದಲ್ಲಿ ಆಹಾರ ಸೇವನೆ ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

ಇದರಲ್ಲಿರುವ ಮೂತ್ರವರ್ಧಕ ಗುಣ ಜೀರ್ಣಾಂಗಗಳಲ್ಲಿ ಹೆಚ್ಚಿನ ನೀರು ಒದಗಿಸುವ ಮೂಲಕ ಮಲಬದ್ದತೆಯನ್ನು ತಡೆದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದರಿಂದ ಕರುಳಿನಲ್ಲಿ ಹುಣ್ಣು ಮತ್ತು ಕ್ಯಾನ್ಸರ್ ಬರುವ ಸಂಭವತೆ ಕಡಿಮೆಯಾಗುತ್ತದೆ.

ಒಟ್ಟಾರೆ ಆರೋಗ್ಯದ ವಿಷಯದಲ್ಲಿ ಎತ್ತಿದ ಕೈ

ಒಟ್ಟಾರೆ ಆರೋಗ್ಯದ ವಿಷಯದಲ್ಲಿ ಎತ್ತಿದ ಕೈ

ಇದರಲ್ಲಿ ಕೆಲವು ಸಸ್ಯಜನ್ಯ ರಾಸಾಯನಿಕಗಳು ಅಧಿಕ ಪ್ರಮಾಣದಲ್ಲಿದ್ದು. ಮ್ಯಾಲಿಕ್ ಆಮ್ಲ, ಹುಣಸೆಯಲ್ಲಿರುವ ಟಾರ್ಟಾರಿಕ್ ಆಮ್ಲ, ದ್ರಾಕ್ಷಿ ಮತ್ತು ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಇದರಲ್ಲಿದೆ. ಈ ಆಮ್ಲಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚರ್ಮದ ಕಾಂತಿ ಹೆಚ್ಚಿಸಲು, ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಲು, ಉರಿಯೂತ ಕಡಿಮೆಗೊಳಿಸಲು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದೊಂದು ಉತ್ತಮ ಮೂತ್ರವರ್ಧಕವೂ ಆಗಿರುವ ಕಾರಣ ರಕ್ತದಲ್ಲಿನ ಹೆಚ್ಚಿನ ನೀರಿನ ಅಂಶವನ್ನು ಹೊರಹಾಕಲು ನೆರವಾಗಿ ರಕ್ತ ತೆಳ್ಳಗಾಗುವ ಸಂಭವವನ್ನು ತಪ್ಪಿಸುತ್ತದೆ.

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಬೇಕಾಗುವ ಸಾಮಾಗ್ರಿಗಳು

*ಚೆನ್ನಾಗಿ ಒಣಗಿಸಿದ ದಾಸವಾಳ ಹೂವಿನ ದಳಗಳು

*ಎರಡು ಚಮಚ ಸಕ್ಕರೆ

*ನೀರು - 1 ಕಪ್

*ಲಿಂಬೆಹಣ್ಣಿನ ರಸ - 2 ಟೀ.ಚಮಚ

*ಶುಂಠಿ - ಸಣ್ಣಕ್ಕೆ ಹೆಚ್ಚಿರುವುದು

ಮಾಡುವ ವಿಧಾನ

ಮಾಡುವ ವಿಧಾನ

1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ)

2. ಇದು ಚೆನ್ನಾಗಿ ಕುದಿದ ನಂತರ ಸೋಸಿಕೊಂಡು ಇದಕ್ಕೆ 2 ಚಮಚದಷ್ಟು ಸಕ್ಕರೆ ಮತ್ತು ಎರಡು ಟೀ ಚಮಚದಷ್ಟು ಲಿಂಬೆಯ ರಸವನ್ನು ಸೇರಿಸಿ

3. ಅರೋಗ್ಯಕರವಾದ ದಾಸವಾಳ ದಳಗಳ ಚಹಾವನ್ನು ಸವಿಯಿರಿ.

English summary

Unknown Health Benefits Of Hibiscus Tea

Hibiscus tea is one of the best healthy herbal beverages available today. It is prepared from the petals of a hibiscus flower. It can be consumed either hot or cold. It is a rich source of vitamin C, minerals and various antioxidants. Hibiscus flower is ruby red in colour and has a sour taste. In this article, we at Boldsky have listed out some of the health benefits of hibiscus tea. Read on to know more about it.
X