For Quick Alerts
ALLOW NOTIFICATIONS  
For Daily Alerts

ತಲೆ ತುರಿಕೆಗೆ ದಾಸವಾಳ ಸಮರ್ಪಕ ಉತ್ತರವಾಗಬಲ್ಲುದೇ?

By Arshad
|

ತಲೆಯಲ್ಲಿ ಕೂದಲಿದ್ದವರಿಗೆ ತುರಿಕೆ ಸಾಮಾನ್ಯವಾಗಿದೆ. ಇದನ್ನು ನಿವಾರಿಸಲು ತಲೆಗೂದಲನ್ನು ನಿವಾರಿಸುವ ಕ್ರಮವನ್ನು ಯಾರೂ ಬಯಸುವುದಿಲ್ಲ. ಇದಕ್ಕೆ ಸೂಕ್ತ ಮನೆಮದ್ದು ಎಂದರೆ ದಾಸವಾಳ ಹೂವಿನ ಬಳಕೆ. ಇದು ಬಹಳ ಪುರಾತನ ವಿಧಾನವಾಗಿದ್ದು ದಾಸವಾಳ ಹೂವು ಮತ್ತು ಎಲೆಗಳನ್ನು ಹಲವಾರು ದೇಶಗಳಲ್ಲಿ ಬಳಸಲ್ಪಡುತ್ತಾ ಬರಲಾಗಿದೆ. ಆಯುರ್ವೇದದ ಪುರಾತನ ಗ್ರಂಥದಲ್ಲಿಯೂ ಈ ವಿಧಾನದ ಉಲ್ಲೇಖವಿದೆ. ದಾಸವಾಳ ಹೂವಿನಲ್ಲಿದೆ 14 ಔಷಧೀಯ ಗುಣಗಳು!

ಭಾರತವನ್ನಾಳಿದ ಹಲವು ರಾಜ ಮಹಾರಾಜರ, ಮೊಗಲ್ ದೊರೆಗಳ ಉದ್ಯಾನದಲ್ಲಿ ದಾಸವಾಳದ ಗಿಡಗಳನ್ನು ಬೆಳೆಸುತ್ತಿದ್ದು ಇವುಗಳ ಹೂವು ಎಲೆಗಳನ್ನು ಸೌಂದರ್ಯವರ್ಧಕವಾಗಿ ಬಳಸಲಾಗುತ್ತಿತ್ತು. ಸೌಂದರ್ಯವರ್ಧಕವಾಗಿ ಏನೋ ಸರಿ, ಆದರೆ ತುರಿಕೆಯನ್ನು ಇದು ಕಡಿಮೆ ಮಾಡಬಲ್ಲುದೇ ಎಂದು ಕೇಳಿದರೆ ಸೌಂದರ್ಯ ತಜ್ಞರು ಹೌದು ಎಂಬ ಉತ್ತರವನ್ನೇ ನೀಡುತ್ತಾರೆ. ತಲೆ ತುರಿಕೆಗೆ ಪ್ರಮುಖ ಕಾರಣವೆಂದರೆ ಒಣಚರ್ಮ ಮತ್ತು ಪಕಳೆಯಾಗಿ ಎದ್ದಿರುವ ಒಣಚರ್ಮ ಅಥವಾ ತಲೆಹೊಟ್ಟು. ತಲೆ ತುರಿಕೆಗೆ ಕೆಲವು ಚರ್ಮದ ತೊಂದರೆಗಳೂ ಕಾರಣವಾಗಿರಬಹುದು. ಅಥವಾ ಹೇನು ಸೀರುಗಳೂ ಕಾರಣವಾಗಿರಬಹುದು. ಒಂದು ವೇಳೆ ತಲೆತುರಿಕೆ ಕೇವಲ ತಲೆಹೊಟ್ಟಿನ ಕಾರಣದಿಂದಾದರೆ ದಾಸವಾಳದ ಬಳಕೆ ಉತ್ತಮ. ದಾಸವಾಳ ಹೂವಿನ ಚಹಾ-ಸ್ವಲ್ಪ ಹುಳಿ, ದುಪ್ಪಟ್ಟು ಸಿಹಿ..!

ಆದರೆ ಇದರ ಹೊರತಾದ ಬೇರೆ ಕಾರಣಗಳಿದ್ದರೆ ಚರ್ಮವೈದ್ಯರ ಸಲಹೆಯ ಹೊರತಾಗಿ ಬೇರೆ ಯಾವುದೇ ಕ್ರಮ ಕೈಗೊಳ್ಳಬೇಡಿ. ದಾಸವಾಳದ ಬಳಕೆಯಿಂದ ತುರಿಕೆ ಕಡಿಮೆಯಾಗುವುದು ಮಾತ್ರವಲ್ಲದೇ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ಉದ್ದವಾಗಿ ಮತ್ತು ಕಾಂತಿಯುಕ್ತವಾಗಿ ಬೆಳೆಯಲೂ ನೆರವಾಗುತ್ತದೆ. ಇದೇ ಕಾರಣಕ್ಕೆ ದಾಸವಾಳದ ಅಂಶವನ್ನು ಎಲ್ಲಾ ಪ್ರಮುಖ ಆಯುರ್ವೇದೀಯ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಸೇರಿಸಿರುವುದನ್ನು ಗಮನಿಸಬಹುದು. ತಲೆ ತುರಿಕೆಗೆ ದಾಸವಾಳವನ್ನು ಹೇಗೆ ಉಪಯೋಗಿಸಬಹುದು ಎಂಬ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ತಲೆಹೊಟ್ಟು ನಿವಾರಿಸುತ್ತದೆ

ತಲೆಹೊಟ್ಟು ನಿವಾರಿಸುತ್ತದೆ

ತಲೆಹೊಟ್ಟು ಹೆಚ್ಚಾಗಿದ್ದು ಸತತವಾಗಿ ತಲೆ ತುರಿಕೆಯಾಗುತ್ತಿದೆಯೇ? ಇದಕ್ಕೆ ದಾಸವಾಳದ ಎಣ್ಣೆ ಉತ್ತಮ ಪರಿಹಾರವಾಗಿದೆ. ನಿಯಮಿತವಾಗಿ ದಾಸವಾಳದ ಎಣ್ಣೆಯನ್ನು ತಲೆಗೆ ಹಚ್ಚುತ್ತ ಬರುವ ಮೂಲಕ ಶೀಘ್ರವೇ ತಲೆಹೊಟ್ಟು ಇಲ್ಲವಾಗಿ ತುರಿಕೆಯೂ ಇಲ್ಲವಾಗುತ್ತದೆ. ಮಾರುಕಟ್ಟೆಯಲ್ಲಿ ಈ ಎಣ್ಣೆ ಸಿಗದೇ ಇದ್ದರೆ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಕೊಂಚ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಇದರಲ್ಲಿ ಪೂರ್ಣ ಮುಳುಗುವಂತೆ ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಇದರೊಂದಿಗೆ ಕೆಲವು ನೆಲ್ಲಿಕಾಯಿ ಮತ್ತು ತುಳಸಿ ಎಲೆಗಳನ್ನು ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಯಲು ಬಿಡಿ. ಸುಮಾರಾಗಿ ಎಲ್ಲಾ ಹೂವಿನ ದಳಗಳು ಕರಗಿವೆ ಅನ್ನಿಸಿದ ಬಳಿಕ ಇಳಿಸಿ ಹಾಗೇ ತಣಿಯಲು ಬಿಡಿ. ಬಳಿಕ ಇದನ್ನು ಬಟ್ಟೆಯಲ್ಲಿ ಹಾಕಿ ಹಿಂಡಿ ಸೋಸಿ ಬಳಸಿ.

ತಲೆಗೂದಲಿಗೆ ಟಾನಿಕ್ ಆಗಿದೆ

ತಲೆಗೂದಲಿಗೆ ಟಾನಿಕ್ ಆಗಿದೆ

ತಲೆಯ ತುರಿಕೆಯನ್ನು ನಿವಾರಿಸುವ ದಾಸವಾಳ ಹೂವು ತಲೆಗೂದಲಿಗೆ ಉತ್ತಮ ಟಾನಿಕ್ ಸಹಾ ಆಗಿದೆ. ಇದಕ್ಕಾಗಿ ಒಂದು ಜಗ್ ನಲ್ಲಿ ತಣ್ಣೀರು ತುಂಬಿ ಇದರಲ್ಲಿ ದಾಸವಾಳದ ಹೂವು ಮತ್ತು ಎಲೆಗಳನ್ನು ಕೊಂಚವೇ ಜಜ್ಜಿ ನೀರಿನಲ್ಲಿ ಹಾಕಿ. ಇಡಿಯ ರಾತ್ರಿ ಹಾಗೇ ಬಿಡಿ. ಬೆಳಿಗ್ಗೆ ಇದನ್ನು ಸೋಸಿ ನೀರನ್ನು ಸಂಗ್ರಹಿಸಿ. ಈ ನೀರಿನಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ತಲೆಗೂದಲಿಗೆ ಹಚ್ಚುತ್ತಾ ಬನ್ನಿ. ಇದೊಂದು ಅತ್ಯುತ್ತಮವಾದ ಕೂದಲ ಟಾನಿಕ್ ಆಗಿದೆ.

ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ

ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ

ದಾಸವಾಳದಲ್ಲಿ ಉತ್ತಮ ಪೋಷಕಾಂಶಗಳಿದ್ದು ಇವು ಆಮ್ಲೀಯ ಮತ್ತು ಕ್ಷಾರೀಯತೆಯನ್ನು ಪರಿಗಣಿಸುವ ಪಿಎಚ್ ಮಟ್ಟವನ್ನು ಸಮಸ್ಥಿತಿಯಲ್ಲಿಡಲು ನೆರವಾಗುತ್ತವೆ. ಅಂದರೆ ತಲೆಗೂದಲ ಬುಡದಲ್ಲಿ ಆಮ್ಲೀಯತೆ ಹೆಚ್ಚಾಗಿದ್ದ ಕಾರಣದಿಂದಲೇ ಚರ್ಮ ಒಣಗುತ್ತಾ ಪಕಳೆಯಂತೆ ಏಳುತ್ತದೆ. ದಾಸವಾಳ ಇದನ್ನು ತಡೆಗಟ್ಟುತ್ತದೆ. ಇದರಿಂದ ತಲೆಯ ಚರ್ಮ ಕೆಂಪಗಾಗುವುದು ಮೊದಲಾದ ತೊಂದರೆಗಳೂ ಇಲ್ಲವಾಗಿ ಚರ್ಮ ಉತ್ತಮ ಆರೋಗ್ಯ ಹೊಂದುತ್ತದೆ.

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ಕೂದಲ ಬೆಳವಣಿಗೆಯನ್ನು ಹೆಚ್ಚಿಸುತ್ತದೆ

ದಾಸವಾಳದ ಅತ್ಯುತ್ತಮ ಗುಣವೆಂದರೆ ಕೂದಲು ಉದುರುವುದನ್ನು ನಿಲ್ಲಿಸುವುದು. ಇದರ ನಿಯಮಿತ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗಿ ಬಕ್ಕತನ ಆವರಿಸುವುದರಿಂದ ತಡೆದಂತಾಗುತ್ತದೆ. ಇದಕ್ಕಾಗಿ ಕೆಲವು ದಾಸವಾಳದ ಹೂವಿನ ದಳಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಕುದಿಸಿ ತಣಿಸಿ ಬಟ್ಟೆಯಲ್ಲಿ ಹಿಂಡಿ ಸೋಸಿ. ಪ್ರತಿಬಾರಿ ಸ್ನಾನಕ್ಕೂ ಒಂದು ಘಂಟೆಗೂ ಮುನ್ನ ಹೆಚ್ಚು ಪ್ರಮಾಣದಲ್ಲಿ ನಯವಾದ ಮಸಾಜ್ ನೊಂದಿಗೆ ತಲೆಗೆ ಹಚ್ಚಿ ಬಳಿಕ ಉಗುರುಬೆಚ್ಚನೆಯ ನೀರಿನಲ್ಲಿ ಸ್ನಾನ ಮಾಡಿ. ಸೌಮ್ಯ ಶಾಂಪೂ ಬಳಸಿ.

ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುತ್ತದೆ

ಕೂದಲಿಗೆ ದೃಢತೆ ಮತ್ತು ಕಾಂತಿ ನೀಡುತ್ತದೆ

ಕೆಲವು ದಾಸವಾಳದ ಹೂವಿನ ದಳಗಳನ್ನು ಜಜ್ಜಿ ಮೊಸರಿನಲ್ಲಿ ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ಇಡಿಯ ತಲೆಗೆ ಹಚ್ಚಿ ಅರ್ಧ ಘಂಟೆ ಹಾಗೇ ಒಣಗಲು ಬಿಡಬೇಕು. ನಂತರ ಉಗುರುಬೆಚ್ಚನೆಯ ನೀರನ್ನು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಬೇಕು. ಈ ವಿಧಾನವನ್ನು ವಾರಕ್ಕೊಮ್ಮೆ ಅನುಸರಿಸಿದರೆ ಕೂದಲ ಬುಡಕ್ಕೆ ಉತ್ತಮ ಪೋಷಣೆ ದೊರೆತು ಕೂದಲು ಹೆಚ್ಚು ದೃಢ ಮತ್ತು ಕಾಂತಿಯುಕ್ತವಾಗುತ್ತದೆ. ನೀಳತೆಯೂ ಹೆಚ್ಚುತ್ತದೆ.

English summary

Does Hibiscus Flower Reduce Itchiness in Scalp?

Does hibiscus flower reduce itchiness in scalp? Yes, definitely. There is no second thought about it. From an ancient time, hibiscus flowers and leaves are popular among beauty therapists in several countries. The effectiveness of the hibiscus flower for hair is mentioned in the old manuscripts of Ayurveda too. So, how to use hibiscus flower to reduce itchiness on the scalp and solve other hair problems? Here are the ways. Read on to know more.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more