For Quick Alerts
ALLOW NOTIFICATIONS  
For Daily Alerts

ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

By Manu
|

ಅಸ್ತಮಾವೆಂದರೆ ಅದು ಜೀವಂತವಾಗಿ ಕೊಲ್ಲುವಂತಹ ರೋಗವಾಗಿದೆ. ಹೊಗೆ, ಧೂಳು ಹಾಗೂ ಇತರ ಕೆಲವೊಂದು ಅಲರ್ಜಿಗಳಿಂದ ಅಸ್ತಮಾವು ಉಲ್ಬಣಗೊಳ್ಳುತ್ತದೆ. ಅಸ್ತಮಾ ಹೊಂದಿರುವವರ ಪಾಡು ಹೇಳತೀರದು. ಅಸ್ತಮಾ ಇರುವಂತವರಿಗೆ ಕೆಲವೊಂದು ಆಹಾರವನ್ನು ತಿಂದರೂ ಅವರಿಗೆ ಇದರಿಂದ ಅಲರ್ಜಿ ಉಂಟಾಗುತ್ತದೆ. ಒಂದೇ ತಿಂಗಳಿನಲ್ಲಿ ಅಸ್ತಮಾವನ್ನು ನಿವಾರಿಸುವ ಮನೆಮದ್ದುಗಳು

ಶ್ವಾಸಕೋಶದಲ್ಲಿ ಸೋಂಕು ಉಂಟಾದಾಗ ಅಸ್ತಮಾ ಕಾಣಿಸಿಕೊಳ್ಳುತ್ತದೆ. ಆದರೆ ಭಾರತದಲ್ಲಿ ಹಿಂದಿನಿಂದಲೂ ಆಯುರ್ವೇದ ಚಿಕಿತ್ಸಾ ಕ್ರಮವನ್ನು ಹೆಚ್ಚಾಗಿ ಪಾಲಿಸಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಅಸ್ತಮಾವನ್ನು ಶ್ವಾಸರೋಗವೆಂದು ಕರೆಯಲಾಗುತ್ತದೆ. ಈ ಸಮಸ್ಯೆಗಳು ಅಸ್ತಮಾಕ್ಕೆ ತಿರುಗಬಹುದು ಜಾಗ್ರತೆ!

ಅಸ್ತಮಾ ಮತ್ತು ಅದರ ಲಕ್ಷಣಗಳಿಗೆ ಆಹಾರ ಕ್ರಮ ಮತ್ತು ಕೆಲಸ ಇತ್ಯಾದಿ ಪ್ರಮುಖ ಕಾರಣವಾಗುತ್ತದೆ ಎಂದು ಆಯುರ್ವೇದವು ಹೇಳಿದೆ. ಅಸ್ತಮಾವನ್ನು ನಿವಾರಿಸಲು ಅಥವಾ ನಿಯಂತ್ರಿಸಲು ಬಳಸಬಹುದಾದ ಗಿಡಮೂಲಿಕೆ ಹಾಗೂ ಆಯುರ್ವೇದದ ಔಷಧಿಗಳನ್ನು ಇಲ್ಲಿ ನೀಡಲಾಗಿದೆ. ಇದನ್ನು ಪಾಲಿಸಿಕೊಂಡು ಹೋಗಿ...

ಜೇನು

ಜೇನು

ನೈಸರ್ಗಿಕವಾಗಿ ಸಿಗುವಂತಹ ಜೇನಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಹಾಗೂ ಶಮನಕಾರಿ ಗುಣಗಳಿವೆ. ಅಸ್ತಮಾ ಇರುವವರಿಗೆ ಇದು ತುಂಬಾ ಲಾಭಕಾರಿ.

ಅರಿಶಿನ

ಅರಿಶಿನ

ಅರಿಶಿನವು ಹಲವಾರು ರೀತಿಯ ಸಣ್ಣ ರೋಗಗಳನ್ನು ಗುಣಪಡಿಸುತ್ತದೆ. ಬ್ಯಾಕ್ಟೀರಿಯಾ ವಿರೋಧಿ, ಉರಿಯೂತ ಶಮನಕಾರಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಅರಿಶಿನವು ಅಸ್ತಮಾ ನಿವಾರಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಪ್ರತಿಯೊಂದು ಆಹಾರದಲ್ಲೂ ಬೆಳ್ಳುಳ್ಳಿಯನ್ನು ಬಳಸುತ್ತಾರೆ. ಇದರಲ್ಲಿರುವ ಉರಿಯೂತ ಶಮನಕಾರಿ ಗುಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಹೃದಯ ಹಾಗೂ ಅಸ್ತಮಾದಂತಹ ಹಲವಾರು ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ.ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿರುವ ಉರಿಯೂತ ಶಮನಕಾರಿ ಗುಣವು ಉಸಿರಾಟದ ವ್ಯವಸ್ಥೆಯ ದ್ವಾರದ ಉರಿಯೂತವನ್ನು ನಿಯಂತ್ರಣದಲ್ಲಿಡುತ್ತದೆ. ಕೆಲವು ಎಸಲು ಬೆಳ್ಳುಳ್ಳಿ ಸೇವನೆ ಮಾಡಿದರೆ ಅದರಿಂದ ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳು ದೂರವಾಗುತ್ತದೆ.

ಅಶ್ವಗಂಧ

ಅಶ್ವಗಂಧ

ಆಯುರ್ವೇದದಲ್ಲಿ ಅಶ್ವಗಂಧವನ್ನು ಅನೇಕ ಕಾಯಿಲೆಗಳಿಗೆ ಮನೆಮದ್ದಾಗಿ ಬಳಿಸಲಾಗುವುದು. ಅಶ್ವಗಂಧ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಸ್ತಮಾ ನಿಯಂತ್ರಣಕ್ಕೆ ಬರುವುದು, ಕ್ಯಾನ್ಸರ್‌ನಂಥ ಮಾರಕ ರೋಗ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ. ಅಶ್ವಗಂಧ ಸೇವಿಸಿದರೆ ನಿದ್ದೆ ಚೆನ್ನಾಗಿ ಬರುವುದು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ಖಿನ್ನತೆಯನ್ನು ಹೋಗಲಾಡಿಸುತ್ತದೆ. ಇನ್ನು ಅಶ್ವಗಂಧ ಬಳಿಸುವುದರಿಂದ ಮೆದುಲಿನ ಸಾಮಾರ್ಥ್ಯ ಕೂಡ ಹೆಚ್ಚಾಗುವುದು.

ಜೀರಿಗೆ

ಜೀರಿಗೆ

ಅಸ್ತಮಾ ಅಥವಾ ಉಬ್ಬಸ ಕಾಯಿಲೆ ಶಮನಗೊಳಿಸುವ ಸಾಮರ್ಥ್ಯ‌ ಜೀರಿಗೆಗೆ ಇರುವುದರಿಂದ ಇದೊಂದು ಅತ್ಯುತ್ತಮವಾದ ಮನೆಮದ್ದಾಗಿದೆ. ಜೀರಿಗೆಯಲ್ಲಿ ಆ್ಯಂಟಿಆಕ್ಸಿಡೆಂಟ್‌ ಅಂಶವಿರುವುದರಿಂದ ರೋಗ ನಿರೋಧಕ ಸಾಮಾರ್ಥ್ಯ ಹೆಚ್ಚುವುದು ಹಾಗು ದೇಹದಲ್ಲಿ ಬೇಡವಾಗಿರುವ ರಾಸಾಯನಿಕಗಳನ್ನು ಹೊರಹಾಕಿ ಕೆಲವು ಸೋಂಕುಗಳನ್ನು ತಡೆಗಟ್ಟುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ. ಗಂಟಲು ನೋವು, ಗಂಟಲು ಕೆರೆತ ಮುಂತಾದ ಸಮಸ್ಯೆಗಳಿದ್ದಾಗ ಜೀರಿಗೆ ನೀರನ್ನು ಬಿಸಿ ಬಿಸಿಯಾಗಿ ಕುಡಿದರೆ ಒಳ್ಳೆಯದು. ಜೀರಿಗೆಗೆ ಸ್ವಲ್ಪ ಕಾಳು ಮೆಣಸು ಹಾಕಿ ಕಾಯಿಸಿ ಕುಡಿಯಿರಿ, ಇದರಿಂದ ಅಸ್ತಮಾ ನಿಯಂತ್ರಣಕ್ಕೆ ಬರುತ್ತದೆ.

ಶುಂಠಿ

ಶುಂಠಿ

ಶೀತ, ಕೆಮ್ಮು, ಗಂಟಲು ಕೆರೆತ ಕಡಿಮೆ ಮಾಡುವಲ್ಲಿ ಶುಂಠಿ ಪರಿಣಾಮಕಾರಿಯಾಗಿದೆ. ಅಸ್ತಮಾ ಸಮಸ್ಯೆ ಇರುವವರು ಶುಂಠಿ ಬಳಸಿ ತಮ್ಮ ಕಾಯಿಲೆ ಹೆಚ್ಚಾಗದಂತೆ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಶುಂಠಿ ಮೈಯನ್ನು ಬೆಚ್ಚಗಿಡುವುದರಿಂದ ಚಳಿಗಾಲದಲ್ಲಿ ಶುಂಠಿ ಬಳಕೆ ಮಾಡಿ. ಬೆಳಗ್ಗೆ ಒಂದು ಕಪ್ ಶುಂಠಿ ಟೀ ಕುಡಿಯುವ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಿ, ಇನ್ನು ಅಡುಗೆಯಲ್ಲಿ ಶುಂಠಿ ಬಳಸಿ, ಇದರಿಂದ ನಿಮ್ಮ ದೇಹ ಬೆಚ್ಚಗಿರುವುದು.

English summary

Ayurvedic Remedies To Cure Asthma

In Ayurveda, asthma is referred to as Shwas Roga. According to Ayurveda, there are other factors that can contribute to asthma and its symptoms. However, here, we have listed a few remedies that you can use to cure asthma. Let’s have a look at some of the herbs and medicines which we can consume to alleviate asthma.
X
Desktop Bottom Promotion