Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೆಳ್ಳುಳ್ಳಿ ಜ್ಯೂಸ್ ಯಾವತ್ತಾದರೂ ಕುಡಿದಿದ್ದೀರಾ?
ಬೆಳ್ಳುಳ್ಳಿಯೆಂದರೆ ಹೆಚ್ಚಿನವರಿಗೆ ಹಾಗಲ್ಲ. ಯಾಕೆಂದರೆ ಅದರ ಘಾಟು ಹಿಡಿಸಲ್ಲ. ಆದರೆ ಇದರಲ್ಲಿರುವ ಹಲವಾರು ರೀತಿಯ ಆರೋಗ್ಯ ಗುಣಗಳನ್ನು ನಾವು ತಿರಸ್ಕರಿಸುವಂತಿಲ್ಲ. ಬೆಳ್ಳುಳ್ಳಿಯ ಘಾಟು ವಾಸನೆಯನ್ನು ಸಹಿಸಿಕೊಂಡು ಅದನ್ನು ಬಳಸಿಕೊಂಡರೆ ಅದರಿಂದ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಹಣ್ಣುಗಳ ಜ್ಯೂಸ್ ನ್ನು ನಾವು ಬಳಸುತ್ತೇವೆ. ಆದರೆ ಬೆಳ್ಳುಳ್ಳಿ ಜ್ಯೂಸ್ ನ ಬಗ್ಗೆ ಯಾವತ್ತಾದರೂ ಕೇಳಿದ್ದೀರಾ? ಬೆಳ್ಳುಳ್ಳಿಯ ಕಮಟು ವಾಸನೆಗೆ ಮುಖ ಸಿಂಡರಿಸಬೇಡಿ!
ಹೌದು, ಬೆಳ್ಳುಳ್ಳಿ ಜ್ಯೂಸ್ ನಿಂದ ಆಗುವಂತಹ ಆರೋಗ್ಯ ಲಾಭಗಳು ಅಪಾರ. ಬೆಳ್ಳುಳ್ಳಿ ಜ್ಯೂಸ್ ಮಾಡಬೇಕಾದರೆ ಕೆಲವು ಬೆಳ್ಳುಳ್ಳಿಯನ್ನು ಸಿಪ್ಪೆಯನ್ನು ತೆಗೆದು ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದರ ರಸವನ್ನು ತೆಗೆದು ಒಂದು ಡಬ್ಬದಲ್ಲಿ ಹಾಕಿ ಪ್ರಿಡ್ಜ್ ನಲ್ಲಿ ಇಟ್ಟರೆ ದಿನಾಲೂ ಇದನ್ನು ಬಳಸಬಹುದು. ಬೆಳ್ಳುಳ್ಳಿಯಲ್ಲಿ ಇಷ್ಟೆಲ್ಲಾ ಗುಣಗಳಿವೆಯೇ? ನಂಬಿಕೆಯೇ ಬರುತ್ತಿಲ್ಲ!
ಪ್ರತೀ ದಿನ ಒಂದು ಚಮಚ ಜ್ಯೂಸ್ ಅನ್ನು ಸೇವಿಸಿ. ತರಕಾರಿ ಜ್ಯೂಸ್‌ಗೆ ಇದನ್ನು ಹಾಕಿಕೊಂಡು ಕುಡಿಯಬಹುದು. ಆದರೆ ಅಲ್ಸರ್‌ನಂತಹ ಆರೋಗ್ಯ ಸಮಸ್ಯೆಯಿರುವವರು ಈ ಜ್ಯೂಸ್ ಅನ್ನು ಕುಡಿಯಬಾರದು. ಬೆಳ್ಳುಳ್ಳಿ ಜ್ಯೂಸ್ ಅನ್ನು ಕುಡಿಯುವ ಮೊದಲು ವೈದ್ಯರಿಂದ ಸಲಹೆ ಪಡೆಯಿರಿ. ಬೆಳ್ಳುಳ್ಳಿ ಜ್ಯೂಸ್‌ನ ಲಾಭಗಳು ಔಷಧೀಯ ಗುಣಗಳ ಆಗರ-ಬಿಳಿ ಬಿಳಿ ಬೆಳ್ಳುಳ್ಳಿ

ಗಂಟಲು ಕಟ್ಟಿದ್ದರೆ
ಗಂಟಲು ಕಟ್ಟಿದ್ದರೆ ಅಥವಾ ಕಫವಿದ್ದರೆ ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಅನ್ನು ಬಿಸಿ ನೀರಿಗೆ ಹಾಕಿಕೊಂಡು ಕುಡಿಯಿರಿ.

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ
ನೀವು ನಿಯಮಿತವಾಗಿ ಬೆಳ್ಳುಳ್ಳಿ ಜ್ಯೂಸ್ ಕುಡಿದರೆ ಮಟ್ಟವು ಕುಸಿಯುವುದು. ಇದು ಅಪಧಮನಿಗಳಿಗೆ ಒಳ್ಳೆಯದು.

ಬಂಜೆತನ ಸಮಸ್ಯೆಗೆ
ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಅನ್ನು ಹಾಲಿಗೆ ಹಾಕಿಕೊಂಡು ನಿಯಮಿತವಾಗಿ ಕುಡಿದರೆ ಬಂಜೆತನ ನಿವಾರಣೆಯಾಗುವುದು.

ಅಸ್ತಮಾ ಲಕ್ಷಣ ನಿಯಂತ್ರಣಕ್ಕೆ
ಒಂದು ಚಮಚ ಬೆಳ್ಳುಳ್ಳಿ ಜ್ಯೂಸ್ ಮತ್ತು ಕೆಲವು ಹನಿ ಜೇನನ್ನು ಬೆರೆಸಿಕೊಂಡು ಕುಡಿದರೆ ಅಸ್ತಮಾ ಲಕ್ಷಣಗಳನ್ನು ನಿಯಂತ್ರಿಸಬಹುದು.

ಕೀಟಗಳು ಅಥವಾ ನೋಣಗಳು ಕಡಿದರೆ
ಯಾವುದೇ ಕೀಟಗಳು ಅಥವಾ ನೋಣಗಳು ಕಡಿದರೆ ಆ ಜಾಗಕ್ಕೆ ಸ್ವಲ್ಪ ಬೆಳ್ಳುಳ್ಳಿ ರಸವನ್ನು ಹಚ್ಚಿಕೊಳ್ಳಿ.

ಕೂದಲಿನ ಬೆಳವಣಿಗೆ
ಬೆಳ್ಳುಳ್ಳಿ ಜ್ಯೂಸ್ ನ ರಸವನ್ನು ತಲೆ ಬುರುಡೆಗೆ ಹಚ್ಚಿಕೊಳ್ಳುವುದರಿಂದ ಕೂದಲಿನ ಬೆಳವಣಿಗೆಯಾಗುವುದು.

ಹೃದಯದ ಆರೋಗ್ಯಕ್ಕೆ
ಒಂದು ಚಮಚ ಬೆಳ್ಳುಳ್ಳಿ ರಸವನ್ನು ಕುಡಿದರೆ ಅದು ನಿಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿ ರಸವನ್ನು ಕುಡಿಯುವ ಮೊದಲು ವೈದ್ಯರಿಂದ ಸಲಹೆ ಪಡೆದುಕೊಂಡರೆ ಉತ್ತಮ.



Click it and Unblock the Notifications
