Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಒಂದೇ ತಿಂಗಳಿನಲ್ಲಿ ಅಸ್ತಮಾವನ್ನು ನಿವಾರಿಸುವ ಮನೆಮದ್ದುಗಳು
ಪ್ರತಿಯೊಂದು ರೋಗಗಳು ನಾವು ತಿನ್ನುವ ಆಹಾರ ಮತ್ತು ವಾಸಿಸುವ ಪ್ರದೇಶಕ್ಕೆ ಅನುಗುಣವಾಗಿ ಬರುತ್ತದೆ. ಕೆಲವೊಂದು ಕಾಯಿಲೆಗಳು ಋತುಮಾನಕ್ಕೆ ತಕ್ಕಂತೆ ಬಂದರೆ ಬೇರೆ ಋತು ಕಾಲಿಡುತ್ತಿದ್ದಂತೆ ಕಾಯಿಲೆಯು ದೂರ ಹೋಗುತ್ತದೆ. ಅದರಲ್ಲಿ ಪ್ರಮುಖವಾಗಿ ಅಸ್ತಮಾ ರೋಗಿಗಳಿಗೆ ಪ್ರತಿಯೊಂದು ಋತುವಿನಲ್ಲೂ ಈ ರೋಗವು ಕಾಡಿದರೂ ಚಳಿಗಾಲದಲ್ಲಿ ಇದು ಅತಿಯಾಗಿ ಕಾಡುತ್ತದೆ.
ಇದರಿಂದಾಗಿಯೇ ಚಳಿಗಾಲದಲ್ಲಿ ಅಸ್ತಮಾ ಇರುವವರು ಎಚ್ಚರಿಕೆ ವಹಿಸಬೇಕು ಎಂದು ಹೇಳಲಾಗುತ್ತದೆ. ಉಸಿರಾಟದ ವ್ಯವಸ್ಥೆಯಲ್ಲಿ ಆಗುವಂತಹ ತೊಂದರೆಯನ್ನು ಅಸ್ತಮಾ ಎನ್ನಬಹುದು. ಉಸಿರಾಟದ ವ್ಯವಸ್ಥೆಯಲ್ಲಿ ಉರಿಯೂತ ಮತ್ತು ಅತಿಯಾದ ಕಫ ಶೇಖರಣೆಯಿಂದಾಗಿ ಹೀಗೆ ಆಗುತ್ತದೆ.
12 ಮಂದಿಯಲ್ಲಿ ಒಬ್ಬರಿಗೆ ಅಸ್ತಮಾದ ಸಮಸ್ಯೆಯಿದೆ ಎಂದು ಅಧ್ಯಯನಗಳು ಹೇಳುತ್ತವೆ. ಅದರಲ್ಲೂ ಅಸ್ತಮಾಘಾತಕ್ಕೆ ಒಳಗಾದರೆ ಆ ರೋಗಿಗೆ ಉಸಿರಾಡಲು ತುಂಬಾ ಸಮಸ್ಯೆಯಾಗುತ್ತದೆ. ಅಸ್ತಮಾ ರೋಗಿಗಳಿಗೆ ದೈನಂದಿನ ಚಟುವಟಿಕೆಗಳನ್ನು ಮಾಡಿಕೊಳ್ಳಲು ಕಷ್ಟವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು.
ಇಂತಹ ಸಮಯದಲ್ಲಿ ಮೆಟ್ಟಿಲು ಹತ್ತುವುದು, ವ್ಯಾಯಮ ಮಾಡುವುದು ಮತ್ತು ಯಾವುದೇ ಆಟವಾಡುವುದು ಕಷ್ಟಸಾಧ್ಯವಾಗಬಹುದು. ಒಣ ಕೆಮ್ಮು, ಉಸಿರಾಟದ ಸೋಂಕು, ಎದೆ ಬಿಗಿಯಾಗುವುದು, ಉಸಿರಾಡಲು ಕಷ್ಟವಾಗುವುದು, ಗಂಟಲು ನೋವು ಮೊದಲಾದವುಗಳು ಅಸ್ತಮಾದ ಲಕ್ಷಣಗಳಾಗಿವೆ. ಅಸ್ತಮಾಗೆ ಇರುವ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಅದನ್ನು ನಿಯಂತ್ರಿಸಲು ಪ್ರಯತ್ನಿಸಿ...

ಆವಕಾಡೊ (ಬೆಣ್ಣೆ ಹಣ್ಣು)
ಅಸ್ತಮಾ ರೋಗಿಗಳಿಗೆ ಉಸಿರಾಟ ವ್ಯವಸ್ಥೆಯಲ್ಲಿ ಉರಿಯೂತ ಉಂಟಾಗುತ್ತದೆ. ಇಂತಹ ಸಮಸ್ಯೆ ನಿವಾರಣೆಗೆ ಆವಕಾಡೊ ಒಳ್ಳೆಯ ಹಣ್ಣು. ಆವಕಾಡೊನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಗ್ಲುಟಾಥಿಯೊನ್ ಎನ್ನುವ ಅಂಶಗಳು ಉಸಿರಾಟವನ್ನು ಸರಾಗಗೊಳಿಸಲು ನೆರವಾಗುವುದು.

ಬಾಳೆಹಣ್ಣು
ಹೆಚ್ಚಾಗಿ ಅಸ್ತಮಾ ರೋಗಿಗಳು ಬಾಳೆಹಣ್ಣು ತಿನ್ನಬಾರದು ಎನ್ನುವ ನಂಬಿಕೆಯಿದೆ. ಆದರೆ ದೇಹದಲ್ಲಿ ಪೊಟಾಶಿಯಂ ಕಡಿಮೆ ಆಗಿರುವುದು ಕೂಡ ಅಸ್ತಮಾಗೆ ಕಾರಣವಾಗಬಹುದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಸಮೃದ್ಧವಾಗಿರುವ ಕಾರಣದಿಂದ ಇದು ಅಸ್ತಮಾವನ್ನು ನಿವಾರಣೆ ಮಾಡುವುದು.

ಶುಂಠಿ
ಶುಂಠಿಯಲ್ಲಿ ಹೆಚ್ಚಿನ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಇದು ಉಸಿರಾಟದ ವ್ಯವಸ್ಥೆಯ ಉರಿಯೂತ ನಿವಾರಣೆ ಮಾಡುತ್ತದೆ. ಇದರಿಂದ ಅಸ್ತಮಾದ ಲಕ್ಷಣಗಳು ಕಡಿಮೆಯಾಗುವುದು.

ಅರಿಶಿನ
ಇದು ಅಡುಗೆ ಕೋಣೆಯಲ್ಲಿರುವ ಮತ್ತೊಂದು ಉರಿಯೂತ ಶಮನಕಾರಿ ಸಾಂಬಾರ ಪದಾರ್ಥ. ಅರಶಿನವು ಉಸಿರಾಟದ ವ್ಯವಸ್ಥೆಯ ಸ್ನಾಯುಗಳನ್ನು ಸರಾಗವಾಗಿಸಿ ಅತಿಯಾಗಿ ಶೇಖರಣೆಯಾಗಿರುವ ಕಫವನ್ನು ಹೊರಹಾಕುತ್ತದೆ.

ಸೇಬು
ಅಸ್ತಮಾ ರೋಗಿಗಳು ಸೇಬು ತಿಂದರೆ ಅದರಲ್ಲಿನ ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ದೇಹದಲ್ಲಿರುವ ವಿಷವನ್ನು ಹೊರಹಾಕುತ್ತದೆ. ಇದರಿಂದ ಅಸ್ತಮಾ ಹೆಚ್ಚಾಗುವುದು ತಪ್ಪುತ್ತದೆ.

ಜೇನು
ಜೇನುತುಪ್ಪದಲ್ಲಿ ಉತ್ತಮ ಮಟ್ಟದ ಉರಿಯೂತ ಶಮನಕಾರಿ ಗುಣಗಳು ಇವೆ. ಅಸ್ತಮಾದಿಂದ ಬರುವಂತಹ ಸೋಂಕು ಮತ್ತು ಅಲರ್ಜಿಯನ್ನು ಇದು ನಿವಾರಣೆ ಮಾಡುತ್ತದೆ.



Click it and Unblock the Notifications