ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

Posted By: Super Admin
Subscribe to Boldsky

ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ಕಾಲುಚೀಲದೊಳಗೆ (ಸಾಕ್ಸ್) ಹಾಕಿ ಧರಿಸಿ ಮಲಗುವುದೇ? ವಿಚಿತ್ರವಾಗಿದೆಯೆಲ್ಲಾ, ಆದರೆ ತಜ್ಞರ ಪ್ರಕಾರ ಈ ರೀತಿಯ ಕ್ರಮ ಅನುಸರಿಸುವುದರಿಂದ ಹಲವು ಲಾಭಗಳಿವೆ.

ಪ್ರಮುಖವಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆವರಿನ ದುರ್ವಾಸನೆಗೆ ಕಾರಣವಾಗಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಿ ದುರ್ವಾಸನೆಯಿಂದ ಮುಕ್ತಿ ನೀಡುತ್ತವೆ. ಈರುಳ್ಳಿಯ ಈ ಗುಣವನ್ನು ಉತ್ತಮಗೊಳಿಸಲು ಈರುಳ್ಳಿಯನ್ನು ಕೊಚ್ಚಿ ಕಾಲುಚೀಲದಲ್ಲಿ ಹಾಕಿ ಮಲಗುವುದರಿಂದ ಸಾಧ್ಯವಾಗುತ್ತದೆ. ಈ ವಿಧಾನದಿಂದ ಪಾದಗಳ ಅಡಿಯ ಚರ್ಮ ಈರುಳ್ಳಿಯ ರಸವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ

ವಿಶೇಷವಾಗಿ ಈರುಳ್ಳಿ ರಸದ ಪಾಸ್ಪಾರಿಕ್ ಆಮ್ಲ ರಕ್ತವನ್ನು ಸೇರಿ ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೇ ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಪಾದದ ಚರ್ಮದ ಮೂಲಕ ಹೊರಗೆಳೆದುಕೊಳ್ಳಲು ಸಹಕರಿಸುತ್ತದೆ. ಈ ವಿಧಾನದಿಂದ ಇನ್ನು ಯಾವ ಯಾವ ಪ್ರಯೋಜನಗಳಿವೆ ಎಂದು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ... 

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಈರುಳ್ಳಿ ರಸದಲ್ಲಿರುವ ಫಾಸ್ಪಾರಿಕ್ ಆಮ್ಲವನ್ನು ಪಾದದ ಚರ್ಮದ ಮೂಲಕ ಹೀರಿಕೊಳ್ಳುವ ಮೂಲಕ ರಕ್ತವನ್ನು ಶುದ್ಧೀಕರಿಸಲು ನೆರವಾಗುತ್ತದೆ. ಈ ಕಾರ್ಯ ಮಲಗಿರುವ ಸಮಯದಲ್ಲಿ ಆಗುವುದರಿಂದ ಶುದ್ಧೀಕರಣ ಕಾರ್ಯ ಸುಗಮವಾಗಿ ನೆರವೇರುತ್ತದೆ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಈರುಳ್ಳಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ಜೀವಿರೋಧಿ ಗುಣಗಳು ಆರೋಗ್ಯಕ್ಕೆ ಹಾನಿಕರವಾದ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವನ್ನು ಹೊಂದಿದೆ.

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ

ಈ ಗುಣದ ಗರಿಷ್ಟ ಪರಿಣಾಮವನ್ನು ರಾತ್ರಿ ಕಾಲುಚೀಲದಲ್ಲಿ ಈರುಳ್ಳಿ ಇಟ್ಟು ಧರಿಸಿ ಮಲಗುವುದರಿಂದ ದೊರಕುತ್ತದೆ.

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಹೃದಯದ ಕ್ಷಮತೆ ಹೆಚ್ಚಿಸುತ್ತದೆ

ಈರುಳ್ಳಿಯನ್ನು ಪಾದದಡಿಗೆ ಇಟ್ಟು ಮಲಗುವುದರಿಂದ ರಕ್ತ ಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಹೃದಯದ ಕ್ಷಮತೆ ಮತ್ತು ಆರೋಗ್ಯ ಉತ್ತಮಗೊಳ್ಳುತ್ತದೆ.

ಮೂಗು ಕಟ್ಟುವುದು, ಕುತ್ತಿಗೆ ನೋವು, ಕಿವಿಯ ಸೋಂಕು ಕಡಿಮೆಗೊಳಿಸುತ್ತದೆ

ಮೂಗು ಕಟ್ಟುವುದು, ಕುತ್ತಿಗೆ ನೋವು, ಕಿವಿಯ ಸೋಂಕು ಕಡಿಮೆಗೊಳಿಸುತ್ತದೆ

ಕಾಲುಚೀಲದಲ್ಲಿ ಈರುಳ್ಳಿ ಇಟ್ಟು ಮಲಗುವುದರಿಂದ ಸೈನಸ್ ಅಥವಾ ಕುಹರದಲ್ಲಿ ಸೋಂಕು, ಕುತ್ತಿಗೆ ನೋವು ಮತ್ತು ಕಿವಿಯೊಳಗೆ ಆಗಿರುವ ಸೋಂಕು ಕಡಿಮೆಯಾಗುತ್ತದೆ.

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

ಹೊಟ್ಟೆಯ ತೊಂದರೆಗಳನ್ನು ನಿವಾರಿಸುತ್ತದೆ

ಹೊಟ್ಟೆಯಲ್ಲಿ ತೊಂದರೆ ಇದ್ದರೆ ಈರುಳ್ಳಿಯ ಭಾಗವನ್ನು ಕಾಲುಚೀಲದ ನಟ್ಟನಡುವೆ ಇಟ್ಟು ಮಲಗುವುದರಿಂದ ಹೊಟ್ಟೇಯ ಸೋಂಕು ನಿವಾರಣೆಯಾಗುತ್ತದೆ. ಅಲ್ಲದೇ ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸಲು ನೆರವಾಗುತ್ತದೆ.

ಕರುಳುಗಳಲ್ಲಿ ಹುಣ್ಣು ಮತ್ತು ಮೂತ್ರಕೋಶದಲ್ಲಿ ಸೋಂಕು ನಿವಾರಿಸುತ್ತದೆ

ಕರುಳುಗಳಲ್ಲಿ ಹುಣ್ಣು ಮತ್ತು ಮೂತ್ರಕೋಶದಲ್ಲಿ ಸೋಂಕು ನಿವಾರಿಸುತ್ತದೆ

ಸಣ್ಣಕರುಳು ಮತ್ತು ಮೂತ್ರಕೋಶ, ಮೂತ್ರನಾಳದಲ್ಲಿ ಸೋಂಕು ಉಂಟಾಗಿದ್ದರೆ ಈರುಳ್ಳಿಯನ್ನು ಕಾಲುಚೀಲದಲ್ಲಿಟ್ಟು ಮಲಗುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ಕಾಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕಾಲಿನ ದುರ್ವಾಸನೆಯನ್ನು ನಿವಾರಿಸುತ್ತದೆ

ಕೆಲವರಿಗೆ ಪಾದದಲ್ಲಿ ವಿಪರೀತವಾದ ಬೆವರು ಹರಿದು ದುರ್ವಾಸನೆ ಶೀಘ್ರವೇ ಉಂಟಾಗುತ್ತದೆ. ಈ ವಿಧಾನದಿಂದ ಪಾದದ ದುರ್ವಾಸನೆ ಶೀಘ್ರವೇ ದೂರವಾಗುತ್ತದೆ.

ಜ್ವರ ದೂರವಾಗುತ್ತದೆ

ಜ್ವರ ದೂರವಾಗುತ್ತದೆ

ಈರುಳ್ಳಿಯನ್ನು ಕಾಲುಚೀಲದಲ್ಲಿಟ್ಟು ಮಲಗುವುದರಿಂದ ಜ್ವರ ಮತ್ತು ಇತರ ಚಿಕ್ಕಪುಟ್ಟ ಬಾಧೆಗಳು ಸುಲಭವಾಗಿ ನಿವಾರಣೆಯಾಗುತ್ತವೆ.

English summary

Why Put Onions In Socks Before Sleeping?

Sleeping with onions in your socks!! Wondering if you heard this right? Well, yes. According to experts, there are a million benefits of putting onions on your feet and sleeping through the night. If you must know, onions and garlic are known as air purifiers and when applied to the skin, they effectively kill germs and bacteria in the body.