For Quick Alerts
ALLOW NOTIFICATIONS  
For Daily Alerts

ವೈಜ್ಞಾನಿಕ ಸತ್ಯ: ಬಾಳೆ ಎಲೆಯಲ್ಲಿ ಉಂಡವನೇ ಜಾಣ..!

By manu
|

ದಕ್ಷಿಣ ಭಾರತೀಯ ಊಟಗಳನ್ನು ಪ್ರಸ್ತುತಪಡಿಸುವ ಹೋಟೆಲುಗಳ ಪಟ್ಟಿಯಲ್ಲಿ ಬಾಳೆ ಎಲೆ ಊಟ ಎಂದು ಒಂದಿದ್ದರೆ ಅಚ್ಚರಿಗೊಳ್ಳಬೇಡಿ. ಇಲ್ಲಿ ಬಾಳೆ ಎಲೆ ಅಥವಾ ಬಾಳೆಲೆಯನ್ನು ತಿನ್ನುವುದಕ್ಕಲ್ಲ, ತಟ್ಟೆಯ ಬದಲಿಗೆ ನೀಡಲಾಗುತ್ತದೆ. ಇಂದಿಗೂ ಎಷ್ಟೋ ಮನೆಗಳಲ್ಲಿ ಬಾಳೆಯೆಲೆಗಳಲ್ಲಿಯೇ ಊಟ ಬಡಿಸಲಾಗುತ್ತಿದೆ. ಬಡಿಸಲು ಉಪಯೋಗಿಸುವ ಈ ಬಾಳೆಲೆಯ ತುಂಡು ಇಡಿಯ ಎಲೆಯ ಯಾವ ಭಾಗದ್ದು ಎಂಬುದೂ ಪ್ರಾಮುಖ್ಯತೆ ವಹಿಸುತ್ತದೆ. ಬಾಳೆ ಎಲೆಯಿಂದ ಮಾಡಬಹುದು ತ್ವಚೆ ಆರೈಕೆ!

ಸಾಮಾನ್ಯವಾಗಿ ಬಾಳೆಲೆಯ ಎಳೆಯ ತುದಿಯ ಭಾಗವನ್ನು ಅತಿಥಿಗಳಿಗೂ ಕೆಳಗಿನ ಕೊಂಚ ದೃಢವಾದ ಭಾಗವನ್ನು ಮನೆಯವರು ತಮಗಾಗಿ ಉಪಯೋಗಿಸಿಕೊಳ್ಳುವ ಮೂಲಕ ಅತಿಥಿಗಳಿಗೆ ಗೌರವವನ್ನು ಪ್ರಕಟಿಸುತ್ತಾರೆ. ಅದರಲ್ಲೂ ನೆಲದಲ್ಲಿ ಚಕ್ಕಲಮಕ್ಕಲ ಕುಳಿತು ಎಲ್ಲರೂ ಜೊತೆಗೂಡಿ ಸಾವಕಾಶವಾಗಿ ಮಾತನಾಡುತ್ತಾ ಆಹಾರವನ್ನು ಹಂಚಿಕೊಂಡು ಸ್ಫೂನು, ಫೋರ್ಕುಗಳ ಬಿಗುಮಾನವಿಲ್ಲದೇ ಕೈಗಳಿಂದಲೇ ಆಹಾರವನ್ನು ಸವಿಯುವುದರಿಂದ ನಿಜವಾದ ಊಟದ ಮಹತ್ವವೇನೆಂಬುದರ ಅರಿವಾಗುತ್ತದೆ.

ಅನ್ನ, ಸಾಂಬಾರು, ಪಲ್ಯ, ಉಪ್ಪಿನಕಾಯಿ, ಉಪ್ಪು ಎಲ್ಲವನ್ನೂ ಬಡಿಸುವುದು ಎಲೆಯ ಮೇಲೆಯೇ. ಅನ್ನದ ಚಿಕ್ಕ ಕೋಟೆ ಕಟ್ಟಿ ನಡುವೆ ಸಾಂಬಾರನ್ನು ಸೇರಿಸಿ ಕಲಸಿಕೊಂಡು ಎಲೆಯಿಂದ ಹೊರಹರಿಯದಂತೆ ಕಾಳಜಿ ವಹಿಸುತ್ತಾ ಮಾಡುವ ಊಟದ ಮಜವೇ ಬೇರೆ. ಇದು ತಟ್ಟೆ ಚಮಚಗಳ ಊಟದಲ್ಲಿ ಎಂದಿಗೂ ಸಿಗದು. ಬಾಳೆ ಎಲೆಯಲ್ಲಿ ಸುತ್ತಿ ಮಾಡುವ ಮೀನಿನ ಅಡುಗೆ

ಇತಿಹಾಸವನ್ನು ಕೆದಕಿದರೆ ಸಾವಿರಾರು ವರ್ಷಗಳಿಂದ ಭಾರತದಲ್ಲಿ ಬಾಳೆಲೆಯ ಮೇಲೆ ಊಟ ಮಾಡಲಾಗುತ್ತಾ ಬಂದಿರುವುದನ್ನು ಗಮನಿಸಬಹುದು. ಬಾಳೆಲೆಯ ಊಟ ಕೇವಲ ಸ್ವಾದವನ್ನು ಹೆಚ್ಚಿಸುವುದು ಮಾತ್ರವಲ್ಲ, ಹಲವು ರೀತಿಯಲ್ಲಿ ಆರೋಗ್ಯಕರವೂ ಆಗಿದೆ. ಇದು ಯಾವ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಪೂರಕವಾಗಿದೆ ಎಂಬ ಅಮೂಲ್ಯ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಬಾಳೆಲೆಯ ಊಟ ಆರೋಗ್ಯಕರ ಎಂಬುದನ್ನು ಇತಿಹಾಸ ಸಾಬೀತುಪಡಿಸಿದೆ. ಇದರ ವೈಜ್ಞಾನಿಕ ಪರಿಶೀಲನೆಯಿಂದ ಬಾಳೆಲೆಯ ಮೇಲ್ಪದರದಲ್ಲಿ EGCG ಅಥವಾ epigallocatechin gallate ಎಂಬ ಪಾಲಿಫಿನಾಲ್ ಇದೆ. ಬಿಸಿಯಾದ ಆಹಾರಪದಾರ್ಥಗಳು ಬಾಳೆಯೆಲೆಯ ಮೇಲ್ಭಾಗವನ್ನು ಕೊಂಚ ಬಿಸಿಮಾಡಿದಾಕ್ಷಣ ಇವು ಬಿಡುಗಡೆಯಾಗಿ ಆಹಾರದಲ್ಲಿ ಸೇರುತ್ತವೆ.

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಆರೋಗ್ಯಕ್ಕೆ ಉತ್ತಮ ಎಂದು ಈಗ ಸಾಬೀತಾಗಿರುವ ಹಸಿರು ಟೀಯಲ್ಲಿಯೂ ಇರುವ ಇದೇ ಪೋಷಕಾಂಶ ಒಂದು ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಆಗಿದ್ದು ಕ್ಯಾನ್ಸರ್‌ಗೆ ಆಹ್ವಾನ ನೀಡುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ನಿವಾರಿಸಲು ಸಮರ್ಥವಾಗಿವೆ.

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಆರೋಗ್ಯಕರ ಆಹಾರ ಸೇವನೆಯ ವಿಧಾನ

ಇದೇ ಕಾರಣದಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಹಲವು ರೋಗಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ. ಅಲ್ಲದೇ ಬಾಳೆಯೆಲೆ ಒಂದು ನೈಸರ್ಗಿಕ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲುವ ಕ್ಷಮತೆ ಪಡಿದಿದೆ. ಇದರಿಂದ ಆಹಾರದ ಮೂಲಕ ಅನಾರೋಗ್ಯಕ್ಕೆ ತುತ್ತಾಗುವ ಸಂಭವವನ್ನು ಬಹಳಷ್ಟು ಕಡಿಮೆಗೊಳಿಸಿದಂತಾಗುತ್ತದೆ.

ಸವಿಯನ್ನು ಹೆಚ್ಚಿಸುತ್ತದೆ

ಸವಿಯನ್ನು ಹೆಚ್ಚಿಸುತ್ತದೆ

ಬಾಳೆಲೆಯ ಅತ್ಯಂತ ಮೇಲಿನ ಪದರವನ್ನು ಗಮನಿಸಿದರೆ ತೆಳುವಾದ ಮೇಣದಂತಹ ಪದರವಿರುವುದು ಗಮನಕ್ಕೆ ಬರುತ್ತದೆ. ಬಿಸಿ ಆಹಾರ ಇದರ ಮೇಲೆ ಬಿದ್ದಾಕ್ಷಣ ಇದು ಕರಗಿ ಆಹಾರದಲ್ಲಿ ಮಿಶ್ರಣಗೊಳ್ಳುತ್ತದೆ.

courtesy

ಸವಿಯನ್ನು ಹೆಚ್ಚಿಸುತ್ತದೆ

ಸವಿಯನ್ನು ಹೆಚ್ಚಿಸುತ್ತದೆ

ಈ ಮೇಣ ಆರೋಗ್ಯಕರವಾಗಿದ್ದು ಉತ್ತಮ ರುಚಿಯನ್ನೂ ಹೊಂದಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುವ ಜೊತೆಗೇ ಇದರಲ್ಲಿರುವ ಪೋಷಕಾಂಶಗಳನ್ನು ದೇಹಕ್ಕೆ ಸೇರಿಸಲೂ ನೆರವಾಗುತ್ತದೆ.

courtesy

 ಪರಿಸರ ಸ್ನೇಹಿಯಾಗಿದೆ

ಪರಿಸರ ಸ್ನೇಹಿಯಾಗಿದೆ

ಇತ್ತೀಚೆಗೆ ಕಾಗದ ಅಥವಾ ಪ್ಲಾಸ್ಟಿಕ್ಕಿನ ತಟ್ಟೆ-ಲೋಟಗಳನ್ನು ಮದುವೆ-ಸಮಾರಂಭಗಳ ಊಟದಲ್ಲಿ ಬಳಸುವುದನ್ನು ಕಾಣಬಹುದು. ಊಟದ ಸಮಯದಲ್ಲಿ ಇದು ಅತ್ಯಂತ ಉಪಯುಕ್ತವೆಂದು ಕಂಡುಬಂದರೂ ತ್ಯಜಿಸಿದ ಬಳಿಕ ಇದರ ವಿಲೇವಾರಿಯೇ ದೊಡ್ಡ ತಲೆನೋವಿನ ಕೆಲಸವಾಗಿದೆ. ಏಕೆಂದರೆ ಪರಿಸರದಲ್ಲಿ ಇವು ಕೊಳೆಯದ ಕಾರಣ ಪ್ರದೂಷಣೆಯನ್ನು ಹೆಚ್ಚಿಸುತ್ತವೆ. ಮಳೆನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರು ಹೊರಹೋಗುವ ತೂತುಗಳನ್ನು ಮುಚ್ಚಿ ಪ್ರವಾಹ ರಸ್ತೆಮೇಲೆ ಹರಿದು ಮನೆಗಳ ಒಳಗೆ ನುಗ್ಗಲು ಕಾರಣವಾಗಿವೆ.

courtesy

ಪರಿಸರ ಸ್ನೇಹಿಯಾಗಿದೆ

ಪರಿಸರ ಸ್ನೇಹಿಯಾಗಿದೆ

ಅದೇ ಬಾಳೆಲೆ ನಿಸರ್ಗದಲ್ಲಿ ಸುಲಭವಾಗಿ ಮತ್ತು ಶೀಘ್ರವಾಗಿ ಕೊಳೆಯುವ ಎಲೆಯಾಗಿದ್ದು ಕಡಿಮೆ ಸಮಯದಲ್ಲಿ ಸಾವಯವ ಗೊಬ್ಬರವಾಗಿ ಪರಿವರ್ತಿತವಾಗುತ್ತದೆ. ಇದನ್ನು ಕೃಷಿಗೆ ಬಳಸುವ ಮೂಲಕ ನೆಲದ ಸಾರವನ್ನು ಹೆಚ್ಚಿಸಲು ಮತ್ತು ಹಣವನ್ನು ಉಳಿಸಲೂ ಸಾಧ್ಯವಾಗುತ್ತದೆ.

courtesy

ಅತಿ ನಿರ್ಮಲರೂಪದಲ್ಲಿ ಲಭ್ಯವಿದೆ

ಅತಿ ನಿರ್ಮಲರೂಪದಲ್ಲಿ ಲಭ್ಯವಿದೆ

ಬಾಳೆಲೆಯ ಮೇಲಿನ ತೆಳುವಾದ ಪದರಕ್ಕೆ ಸೂಕ್ಷ್ಮಜೀವಿಗಳನ್ನು ವಿಕರ್ಷಿಸುವ ಗುಣವಿದೆ. ಆದ್ದರಿಂದ ಬಾಳೆಲೆ ಸರಿಸುಮಾರು ಅಪ್ಪಟ, ನಿರ್ಮಲವಾದ ಸ್ಥಿತಿಯಲ್ಲಿ ದೊರಕುತ್ತದೆ. ಗಾಳಿಯಲ್ಲಿರುವ ಧೂಳು ತೆಳುವಾಗಿ ಲೇಪಿಸಿದ್ದು ಬಿಟ್ಟರೆ ಎಲೆ ಮಾತ್ರ ಅಪ್ಪಟವಾಗಿದೆ. ಈ ಧೂಳನ್ನು ನಿವಾರಿಸಲು ಕೊಂಚ ನೀರಿನಿಂದ ತೊಳೆದರೆ ಸಾಕು. ಈ ಕೆಲಸವನ್ನು ಅತಿಥಿಗಳೇ ಸ್ವತಃ ಮಾಡುವುದರಿಂದ ತಟ್ಟೆಗಳಂತೆ ತೊಳೆದು ತರಬೇಕಾದ ಅಗತ್ಯ ಇಲ್ಲ.

courtesy

ಅತಿ ನಿರ್ಮಲರೂಪದಲ್ಲಿ ಲಭ್ಯವಿದೆ

ಅತಿ ನಿರ್ಮಲರೂಪದಲ್ಲಿ ಲಭ್ಯವಿದೆ

ಇತ್ತೀಚಿನ ದಿನಗಳಲ್ಲಿ ನೈರ್ಮಲ್ಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದ್ದರೂ ಬಾಳೆಲೆಗಳ ವಿಧಾನದಲ್ಲಿ ಮಾತ್ರ ಈ ಕ್ರಮದಲ್ಲಿ ಒಂದಿನಿತೂ ಬದಲಾವಣೆಯಾಗಿಲ್ಲ. ಅಲ್ಲದೇ ಹೋಟೆಲುಗಳಲ್ಲಿ ನೀಡುವ ತಟ್ಟೆ ಲೋಟಗಳನ್ನು ಸಮಯ ಮತ್ತು ಕಾರ್ಮಿಕರ ಆಭಾವದಿಂದ ಸರಿಯಾಗಿ ತೊಳೆದಿರದಿದ್ದರೆ ಅದರಲ್ಲಿ ಊಟ ಮಾಡಲು ಮುಜುಗರವಾಗುತ್ತದೆ.

courtesy

ರಾಸಾಯನಿಕ ರಹಿತವಾಗಿದೆ

ರಾಸಾಯನಿಕ ರಹಿತವಾಗಿದೆ

ಸಾಮಾನ್ಯವಾಗಿ ತಟ್ಟೆಲೋಟಗಳನ್ನು ಪ್ರಬಲ ರಾಸಾಯನಿಕಗಳಿರುವ ಮಾರ್ಜಕಗಳನ್ನು ಉಪಯೋಗಿಸಿ ತೊಳೆಯಲಾಗುತ್ತದೆ. ಮನೆಯಲ್ಲಾದರೆ ಗೃಹಿಣಿಯರು ಸ್ವಚ್ಛತೆಗೆ ಅತಿ ಹೆಚ್ಚಿನ ಮಹತ್ವ ನೀಡುವ ಕಾರಣ ಮಾರ್ಜಕಗಳನ್ನು ಬಳಸಿದರೂ ಕೊಳೆಯ ಬಳಿಕ ಆದರ ನೊರೆಯೂ ಪೂರ್ಣವಾಗಿ ಹೋಗುವವರೆಗೆ ನೀರಿನಿಂದ ಹಲವು ಬಾರಿ ಸ್ವಚ್ಛಗೊಳಿಸುವುದನ್ನು ಕಾಣಬಹುದು. ಸ್ವಚ್ಛಗೊಳಿಸಿದ ಬಳಿಕವೂ ಒಳಗೆ ಇನ್ನೊಮ್ಮೆ ಪರಿಶೀಲಿಸಿ ಒಂದು ಚಿಕ್ಕ ಚುಕ್ಕೆಯೂ ಇಲ್ಲದಂತೆ ಪರಿಶೀಲಿಸುವ ಗೃಹಿಣಿಯರ ಅಚ್ಚುಕಟ್ಟುತನ ಮತ್ತು ಕಾಳಜಿಯನ್ನು ನಾವು ಹೋಟೆಲುಗಳಲ್ಲಿ, ಕಲ್ಯಾಣ ಮಂಟಪಗಳಲ್ಲಿ ನಿರೀಕ್ಷಿಸಲಾಗದು.

courtesy

ರಾಸಾಯನಿಕ ರಹಿತವಾಗಿದೆ

ರಾಸಾಯನಿಕ ರಹಿತವಾಗಿದೆ

ಭಾರೀ ಪ್ರಮಾಣದಲ್ಲಿರುವ ಪಾತ್ರೆಗಳು, ಕಡಿಮೆ ಸಮಯದಲ್ಲಿ ಮತ್ತೆ ಮೇಜಿಗೆ ರವಾನಿಸಬೇಕಾದ ಆತುರ, ಕೆಲಸಗಾರರಲ್ಲಿ ಇಲ್ಲದ ಕಾಳಜಿ, ಅಚ್ಚುಕಟ್ಟುತನದ ಪರಿಣಾಮವಾಗಿ ಅರ್ಧಂಬರ್ಧ ತೊಳೆದ ಬಳಿಕ ಮೇಜಿಗೆ ಬಂದಿರುವ ತಟ್ಟೆ ಅತ್ಯಂತ ಸ್ವಚ್ಛ ಎಂದು ಹೇಳಲಾಗುವುದಿಲ್ಲ. ಅದರಲ್ಲಿ ಕೊಂಚವಾದರೂ ಸೋಪಿನ ಅಂಶ ಇರುವ ಸಂಭವವಿದೆ. ಆದರೆ ಬಾಳೆಲೆಯನ್ನು ನಾವೇ ಕೈಯಾರೆ ಸ್ವಚ್ಛಗೊಳಿಸಿರುವುದರಿಂದ ಯಾವುದೇ ಅಳುಕು ಇರುವುದಿಲ್ಲ.

courtesy

ವಿವಿಧ ಬಗೆಯ ಖಾದ್ಯಗಳನ್ನು ಬಡಿಸಲು ಸಾಧ್ಯ

ವಿವಿಧ ಬಗೆಯ ಖಾದ್ಯಗಳನ್ನು ಬಡಿಸಲು ಸಾಧ್ಯ

ನಿಮ್ಮ ಅಡುಗೆಯಲ್ಲಿ ಎಷ್ಟು ವಿಧದ ಖಾದ್ಯಗಳಿವೆಯೋ ಅದಕ್ಕನುಗುಣವಾಗಿ ತಟ್ಟೆಯ ವ್ಯಾಸವೂ ಅಗಲವಾಗುತ್ತಾ ಹೋಗಬೇಕು. ಆದರೂ ಎಲ್ಲಾ ಖಾದ್ಯಗಳನ್ನು ತಟ್ಟೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೂ ಒಂದರ ಮೇಲೊಂದು ಕೂತು ಸಿಹಿಯ ಮೇಲೆ ಉಪ್ಪು, ಪಲ್ಯದ ಮೇಲೆ ಪಾಯಸ ಬೀಳುವ ಸಂಭವವಿದ್ದೇ ಇರುತ್ತದೆ. ಚಿಕ್ಕ ಬೋಗುಣಿಗಳಲ್ಲಿ ಪ್ರತ್ಯೇಕವಾಗಿ ನೀಡಬೇಕೆಂದರೆ ಮದುವೆ, ಸಮಾರಂಭಗಳಲ್ಲಿ ಇದು ಅಸಾಧ್ಯ. ಆದರೆ ಬಾಳೆಲೆಯಲ್ಲಿ ಎಷ್ಟೇ ವಿಧದ ಖಾದ್ಯಗಳಿರಲಿ, ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬಹುದು.

ವಿವಿಧ ಬಗೆಯ ಖಾದ್ಯಗಳನ್ನು ಬಡಿಸಲು ಸಾಧ್ಯ

ವಿವಿಧ ಬಗೆಯ ಖಾದ್ಯಗಳನ್ನು ಬಡಿಸಲು ಸಾಧ್ಯ

ಇದನ್ನು ಪ್ರತ್ಯಕ್ಷವಾಗಿ ನೋಡಬೇಕೆಂದರೆ ಇನ್ನೇನು ಬರಲಿರುವ ಓಣಂ ಹಬ್ಬದ ವಿಶೇಷ ಬಾಳೆಲೆ ಊಟವನ್ನು ಸವಿಯುವ ಮುನ್ನ ಎಷ್ಟು ವಿಧದ ಖಾದ್ಯಗಳಿವೆ ಎಂದು ಲೆಕ್ಕ ಮಾಡಿ. ಒಂದು ಸಾಂಪ್ರಾದಾಯಿಕ ಓಣಂ ಊಟದಲ್ಲಿ ಇಪ್ಪತ್ತಾರು ಬಗೆಗಳಿರುತ್ತವೆ. ಅಷ್ಟನ್ನೂ ಒಂದು ಬಾಳೆಲೆಯ ಅಗಲಕ್ಕೆ ಹರಡಿರುವಂತೆ ಒಪ್ಪವಾಗಿ ಜೋಡಿಸಿಟ್ಟಿರುವುದನ್ನು ನೋಡುವುದೇ ಒಂದು ಅಂದ.

ಸುಟ್ಟಗಾಯವೇ, ಕೂಡಲೇ ಬಾಳೆಲೆ ಸುತ್ತಿ

ಸುಟ್ಟಗಾಯವೇ, ಕೂಡಲೇ ಬಾಳೆಲೆ ಸುತ್ತಿ

ಬಾಳೆಲೆಯ ಉಪಯೋಗ ಕೇವಲ ಊಟಕ್ಕೆ ಮಾತ್ರ್ತಎಂದು ತಿಳಿದುಕೊಂಡಿದ್ದರೆ ಅದು ತಪ್ಪಾಗುತ್ತದೆ. ಏಕೆಂದರೆ ಬಾಳೆಲೆಯನ್ನು ಹಲವು ಔಷಧಿಗಳಿಗೂ ಉಪಯೋಗಿಸಲಾಗುತ್ತದೆ. ಆಯುರ್ವೇದದ ಬಿಸಿ ಎಣ್ಣೆಯ ಮಸಾಜ್ ಮಾಡಿದ ಬಳಿಕ ಆ ಬಿಸಿಯನ್ನು ಹೆಚ್ಚಿನ ಕಾಲ ಉಳಿಸಿಕೊಳ್ಳಲು ಅಗಲವಾದ ಬಾಳೆಲೆಗಳನ್ನು ಮೈಗೆ ಸುತ್ತಲಾಗುತ್ತದೆ. ಇದರಿಂದ ಎಣ್ಣೆಯ ಕಾವು ಹೆಚ್ಚಿನ ಕಾಲ ಉಳಿದುಕೊಳ್ಳುವ ಜೊತೆಗೇ ಬಿಸಿಯ ಕಾರಣದಿಂದ ತೆರೆದ ರಂಧ್ರಗಳಿಂದ ಹೊರಬಂದ ಕಲ್ಮಶಗಳನ್ನು ಬಾಳೆಲೆ ತನಗೆ ಅಂಟಿಸಿಕೊಳ್ಳುತ್ತದೆ.

ಸುಟ್ಟಗಾಯವೇ, ಕೂಡಲೇ ಬಾಳೆಲೆ ಸುತ್ತಿ

ಸುಟ್ಟಗಾಯವೇ, ಕೂಡಲೇ ಬಾಳೆಲೆ ಸುತ್ತಿ

ಒಂದು ವೇಳೆ ಬೆಂಕಿ, ಬಿಸಿನೀರು, ಹಬೆ ಮೊದಲಾದ ಕಾರಣದಿಂದ ಸುಟ್ಟಗಾಯವಾದರೆ ಸುಟ್ಟ ಚರ್ಮದ ಮೇಲೆ ಕೂಡಲೇ ತಣ್ಣೀರು ಸುರಿದು ಬಾಳೆಲೆಯನ್ನು ಸುತ್ತುವುದು ಬಹಳ ಹಿಂದಿನಿಂದ ನಡೆದುಕೊಂದು ಬಂದಂತಹ ಚಿಕಿತ್ಸೆಯಾಗಿದೆ. ಇದು ಶಮನ ನೀಡುವುದು ಮಾತ್ರವಲ್ಲ, ಹೊಸ ಚರ್ಮ ಶೀಘ್ರವಾಗಿ ಬೆಳೆಯಲೂ ನೆರವಾಗುತ್ತದೆ.

ಬಿಳಿ ಕೂದಲನ್ನು ನಿವಾರಿಸುತ್ತದೆ

ಬಿಳಿ ಕೂದಲನ್ನು ನಿವಾರಿಸುತ್ತದೆ

ಬಿಳಿ ಕೂದಲನ್ನು ನಿವಾರಿಸುತ್ತದೆ ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಬಿಳಿ ಕೂದಲು ಬಂದಿರುವ ಯುವಕರು ಪ್ರತಿ ದಿನವು ಬಾಳೆ ಎಲೆಯಲ್ಲಿ ಊಟವನ್ನು ಸೇವಿಸುವ ಮೂಲಕ ತಮ್ಮ ನರೆತ ಕೂದಲನ್ನು ಕಪ್ಪಗೆ ಮಾಡಿಕೊಳ್ಳಬಹುದು.

ತ್ಚಚೆಗೆ ಉತ್ತಮ

ತ್ಚಚೆಗೆ ಉತ್ತಮ

ಬಾಳೆ ಎಲೆಯಲ್ಲಿ ಎಪಿಗ್ಯಾಲೊಕೇಟೆಚಿನ್ ಗ್ಯಾಲೆಟ್ ಎನ್ನುವ ಪಾಲಿಫೆನೊಲ್‍ಗಳು (EGCG) ಯಥೇಚ್ಛವಾಗಿ ಕಂಡು ಬರುತ್ತವೆ. ಫಾಲಿಫೆನಲ್‍ಗಳು ಪ್ರಕೃತಿ ದತ್ತವಾದ ಆಂಟ್ಟಿ ಆಕ್ಸಿಡೆಂಟ್‍ಗಳಾಗಿದ್ದು, ಇವು ಬಾಳೆ ಎಲೆಯಲ್ಲಿ ಕಂಡು ಬರುತ್ತವೆ. ಇದು ತ್ಚಚೆಗೆ ಉತ್ತಮ ಪೋಷಕಾಂಶವಾಗಿರುತ್ತದೆ.

ಮಕ್ಕಳ ತ್ವಚೆಗೆ ಪರಿಹಾರ

ಮಕ್ಕಳ ತ್ವಚೆಗೆ ಪರಿಹಾರ

ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.

ಅಧಿಕ ಪ್ರಮಾಣದ ವಿಟಮಿನ್-ಡಿ

ಅಧಿಕ ಪ್ರಮಾಣದ ವಿಟಮಿನ್-ಡಿ

ಆಗ ತಾನೆ ಜನಿಸಿದ ಮಕ್ಕಳನ್ನು ಶುಂಠಿ ಎಣ್ಣೆಯನ್ನು ಸವರಿರುವ ಬಾಳೆ ಎಲೆಯಿಂದ ಸುತ್ತಿ (ಒಂದು ಎಲೆ ಮೇಲೆ ಮತ್ತೊಂದು ಕೆಳಗೆ), ಬೆಳಗ್ಗೆ ಸೂರ್ಯನ ಕಿರಣಗಳಿಗೆ ಇಡುವುದರಿಂದ ಚರ್ಮ ರೋಗಗಳು ಮಗುವನ್ನು ಭಾದಿಸದಂತೆ ತಡೆಯಬಹುದು. ಹೀಗೆ ಮಾಡುವುದರಿಂದ ಅಧಿಕ ಪ್ರಮಾಣದ ವಿಟಮಿನ್-ಡಿ ಮಗುವಿಗೆ ದೊರೆಯುತ್ತದೆ.

ತ್ವಚೆಯ ಸಮಸ್ಯೆಗೆ

ತ್ವಚೆಯ ಸಮಸ್ಯೆಗೆ

ತ್ವಚೆಯ ಮೇಲೆ ಕಂಡು ಬರುವ ಸುಕ್ಕುಗಳು, ಸುಟ್ಟ ಗಾಯಗಳು ಮುಂತಾದ ಸಮಸ್ಯೆಗಳಿಗೆ ಬಾಳೆ ಎಲೆಗೆ ತೆಂಗಿನ ಎಣ್ಣೆಯನ್ನು ಸವರಿ, ಅದನ್ನು ಭಾದಿತ ಪ್ರದೇಶದಲ್ಲಿ ಇಡಿ. ಹೀಗೆ ಮಾಡುವುದರಿಂದ ತ್ವಚೆಯ ಸಮಸ್ಯೆಯು ಶೀಘ್ರ ಗುಣಮುಖವಾಗುತ್ತದೆ.

ಕನಸಿನಲ್ಲಿ ಬಾಳೆ ಎಲೆ ಬಂದರೆ

ಕನಸಿನಲ್ಲಿ ಬಾಳೆ ಎಲೆ ಬಂದರೆ

ಕನಸಿನಲ್ಲಿ ಬಾಳೆ ಬಂದರೆ ಹಣ, ಉಳಿತಾಯ, ಭ್ರೂಣ, ಸ್ಮಶಾನದಲ್ಲಿರುವ ಮನುಷ್ಯ, ಬಂಧಿಖಾನೆಯಲ್ಲಿರುವ ಬಂಧಿ, ಮುಚ್ಚಿದ ಪುಸ್ತಕ,ಗತ ಕಾಲದ ಸುದ್ದಿ, ಅಥವಾ ಇದು ಆಂತರಿಕ ಜ್ಞಾನವನ್ನು ಸಹ ಪ್ರತಿನಿಧಿಸುತ್ತದೆ. ಇದರ ಜೊತೆಗೆ ಬಾಳೆ ಎಂದರೆ ಬಟ್ಟೆ, ಪ್ರೇಮ, ಮಮತೆ, ಉದಾರವಾದ ವ್ಯಕ್ತಿ, ಏಕ ದೇವೋಪಾಸಕ ಅಥವಾ ಒಳ್ಳೆಯ ಮನುಷ್ಯನನ್ನು ಸಹ ಇದು ಸೂಚಿಸುತ್ತದೆ. ಹೀಗೆ ಬಾಳೆ ಕನಸಿನಲ್ಲಿ ಬಂದಾಗ ಅದರ ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಅದರಲ್ಲು ಒಂದು ಬಾಳೆ ಮರವು ಕನಸು ಕಾಣುವಾತನ ಮನೆಯ ಒಳಗೆ ಬೆಳೆದಿರುವಂತಹ ಕನಸು ಬಂದರೆ, ಆತನಿಗೆ ತಪ್ಪದೆ ಪುತ್ರ ಸಂತಾನವಾಗುತ್ತದೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ಬಾಳೆ ಎಲೆ ಬಂದರೆ

ಕನಸಿನಲ್ಲಿ ಬಾಳೆ ಎಲೆ ಬಂದರೆ

ವ್ಯವಹಾರ ಮಾಡುವವರ ಕನಸಿನಲ್ಲಿ ಬಾಳೆ ಹಣ್ಣು ಬಂದರೆ ಅದು ಅವರಿಗೆ ಬರುವ ಲಾಭ ಮತ್ತು ಅವರು ಸಾಧಿಸಬೇಕೆಂದಿರುವ ಮಹತ್ವಾಕಾಂಕ್ಷೆ ಕೈಗೂಡುತ್ತದೆ ಎಂದರ್ಥ. ಅವರ ಬಹು ದಿನದ ಶ್ರಮ ಕೈಗೂಡುವ ಕಾಲ ಬಂದಿದೆ ಎಂದು ವಿಶ್ಲೇಷಣೆ ಮಾಡಬಹುದು. ಇನ್ನು ರೋಗಿಯೊಬ್ಬ ಆತನ ಕನಸಿನಲ್ಲಿ ಬಾಳೆ ಹಣ್ಣನ್ನು ಸೇವಿಸಿದರೆ, ಅದು ರೋಗದ ಉಲ್ಪಣ ಮತ್ತು ಸಾವಿನ ಸಂಕೇತವಾಗಿ ಪರಿಗಣಿಸಲಾಗುತ್ತದೆ.

English summary

The Benefits Of Eating Food On Banana Leaves

In several south Indian states, it is traditional to serve food on banana leaves. Guests are given the top part of the leaf while family members are given the lower parts. Everybody sits together on the floor and eats with their hands. Rice, meat, vegetables, lentils, curries and pickles are all served on the same leaf, since it is large enough to carry a whole meal.
Story first published: Thursday, August 27, 2015, 15:33 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X