For Quick Alerts
ALLOW NOTIFICATIONS  
For Daily Alerts

ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?

By Arshadh
|

ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ. ಮಗುವಿನ ಜನನವಾದ ಬಳಿಕ ಮೊತ್ತಮೊದಲಾಗಿ ಕುಡಿಯುವುದೇ ಹಾಲನ್ನು. ಆದರೆ ವಯಸ್ಕರಾದ ಬಳಿಕ ಹಾಲು ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವುವಂತೆಯೇ ಕೊಂಚ ಕೆಟ್ಟದನ್ನೂ ಮಾಡುತ್ತದೆ ಎಂದರೆ ನಂಬುತ್ತೀರಾ? ಹಾಲಿಗೆ ಅರಿಶಿನ ಹಾಕಿ ಕುಡಿದರೆ ಹತ್ತಾರು ಲಾಭ

ಹೌದು, ವಿಜ್ಞಾನ ಮುಂದುವರೆದಂತೆಲ್ಲಾ ಹೊಸ ನೀರು ಬಂದು ಹಳೆನೀರನ್ನು ಕೊಚ್ಚಿಕೊಂಡು ಹೋಗುವಂತೆ ಹಿಂದಿನ ಮಾಹಿತಿಗಳನ್ನು ಅಳಿಸಿ ಹೊಸ ವಿಷಯಗಳನ್ನು ನೀಡುತ್ತಾ ಹೋಗುತ್ತದೆ. ಇದಕ್ಕೆ ಅಪ್ಪಟ ಉದಾಹರಣೆ ಎಂದರೆ ಲ್ಯಾಂಡ್ ಲೈನ್ ಟೆಲಿಫೋನ್. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಮನೆಗೊಂದು ಲ್ಯಾಂಡ್ ಲೈನ್ ಬೇಕಿದ್ದರೆ ಟೆಲಿಫೋನ್ ಸಂಸ್ಥೆಗೆ ಅರ್ಜಿ ಬರೆದು ವರ್ಷಗಟ್ಟಲೇ ಕಾಯಬೇಕಿತ್ತು.

ಇಂದು ಮೊಬೈಲ್ ಯುಗ ಪ್ರಾರಂಭವಾದ ಬಳಿಕ ಲ್ಯಾಂಡ್ ಲೈನ್ ಅವನತಿಯ ಹಾದಿ ಹಿಡಿಯುತ್ತಿದೆ. ಹಾಲಿನ ಬಗ್ಗೆ ಒಳ್ಳೆಯದನ್ನೇ ಕೇಳಿ ಬಂದಿರುವ ನಮಗೆ ಇತ್ತೀಚಿನ ಸಂಶೋಧನೆಗಳು ನೀಡುವ ಮಾಹಿತಿಗಳು ಹಾಲಿನ ಅಡ್ಡಪರಿಣಾಮಗಳ ದೆಸೆಯಿಂದ ಹಾಲು ಸಹಾ ಹಾಲಾಹಲ ಎಂಬುದಾಗಿ ತಿಳಿಸುತ್ತಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ. ದಿನವೂ ಹಾಲು ಕುಡಿಯಬೇಕು ಏಕೆ?

ಅಪಾನವಾಯುವಿಗೆ ಆಹ್ವಾನ

ಅಪಾನವಾಯುವಿಗೆ ಆಹ್ವಾನ

ಹಾಲು ಜೀರ್ಣವಾದ ಬಳಿಕ ಉತ್ಪತ್ತಿಯಾಗುವ ವಿವಿಧ ಅನಿಲಗಳು ಅಪಾನವಾಯುವಿಗೆ ಕಾರಣವಾಗುತ್ತವೆ. ವಿಪರೀತ ಮುಜುಗರ ತರಿಸುವ ಈ ತೊಂದರೆಗೆ ಹಾಲೇ ಮುಖ್ಯ ಕಾರಣ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ಹೇಗೆ? ಹಸುವಿನ ಹಾಲಿನಲ್ಲಿ ಸಕ್ಕರೆಯ ಇನ್ನೊಂದು ರೂಪವಾದ ಲ್ಯಾಕ್ಟೋಸ್ ಇದೆ. ಇದು ಕರುಳಿನಲ್ಲಿರುವಾಗ ಕರುಳುಗಳ ಒಳಗಣ ವಿಲ್ಲೈಗಳೆಂಬ ಹೀರುವ ಅಂಗಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದಾಗಿ ಇತರ ಆಹಾರಗಳನ್ನು ಪೂರ್ತಿಯಾಗಿ ಜೀರ್ಣಿಸಿಕೊಳ್ಳದೇ ಅನಿಲಗಳನ್ನಾಗಿ ಪರಿವರ್ತಿಸುತ್ತದೆ. ಈ ಅನಿಲಗಳು ಒತ್ತಡ ತಾಳಲಾರದೇ ಹೊರದಬ್ಬಲ್ಪಟ್ಟು ಮುಜುಗರಕ್ಕೆ ಕಾರಣವಾಗುತ್ತವೆ.

ವಾಂತಿ ಅಥವಾ ವಾಕರಿಕೆ ಬರುವಂತಾಗುವುದು

ವಾಂತಿ ಅಥವಾ ವಾಕರಿಕೆ ಬರುವಂತಾಗುವುದು

ಸಾಮಾನ್ಯವಾಗಿ ಮಕ್ಕಳು ಹಾಲು ಕುಡಿಯಲು ತಂಟೆ ಮಾಡುವುದು ಇದೇ ಕಾರಣಕ್ಕೆ. ಹಾಲು ಕುಡಿದ ಬಳಿಕ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಅನಿಲಗಳು ಹೊಟ್ಟೆಯುಬ್ಬರ ಮತ್ತು ವಾಕರಿಕೆ ಉಂಟುಮಾಡುತ್ತವೆ.ಹಿರಿಯರಲ್ಲಿ ಹೇಳಿದರೆ ಬೇರೆಯ ಅರ್ಥವನ್ನೇ ನೀಡುವ ಅವರು ಸುತಾರಾಂ ಹಾಲಿನ ಮೇಲೆ ಅಪವಾದ ಹೊರಿಸಲು ಸಿದ್ಧರಿಲ್ಲ. ಹೀಗಾದಾಗ ಹಾಲು ಮಕ್ಕಳಿಗೆ ಬೇಡವೆನಿಸುತ್ತದೆ. ಕೆಲವೊಮ್ಮೆ ವಾಕರಿಕೆ ಹೆಚ್ಚಾಗಿ ವಾಂತಿಯಾಗಲೂಬಹುದು.

ಹೇಗೆ? ಇಲ್ಲೂ ಸಹಾ ಹಾಲಿನಲ್ಲಿರುವ ಸಕ್ಕರೆಯಾದ ಲ್ಯಾಕ್ಟೋಸ್ ಖಳನ ಪಾತ್ರ ವಹಿಸುತ್ತದೆ. ಕರುಳುಗಳಲ್ಲಿ ನೀಡುವ ಪ್ರಚೋದನೆ ಹೊಟ್ಟೆ ಮತ್ತು ಕರುಳುಗಳಲ್ಲಿ ಕಿರಿಕಿರಿಯುಂಟುಮಾಡಿ ವಾಕರಿಕೆಗೆ ಕಾರಣವಾಗುತ್ತದೆ. ಹಲವರಿಗೆ ಹಾಲು ಪೂರ್ಣವಾಗಿ ಜೀರ್ಣವಾಗುವುದೂ ಇಲ್ಲ.

ಸ್ತನದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಸ್ತನದ ಕ್ಯಾನ್ಸರ್ ಗೆ ಕಾರಣವಾಗುತ್ತದೆ.

ಹಾಲಿನ ಅತ್ಯಂತ ತೀವ್ರತರದ ಅಡ್ಡಪರಿಣಾಮವೆಂದರೆ ಸ್ತನದ ಕ್ಯಾನ್ಸರ್ ಗೆ ಕಾರಣವಾಗುವುದು. ಇದಕ್ಕೆ ಹಸುವಿನ ಅಪ್ಪಟ ಹಾಲು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗಿದೆ. ಏಕೆಂದರೆ ಹಸುಗಳಿಂದ ಹೆಚ್ಚು ಹಾಲು ಬರುವಂತಾಗಲು rBGH, ಅಥವಾ recombinant bovine somatotropin ಎಂಬ ರಾಸಾಯನಿಕವನ್ನು ಹಸುಗಳಿಗೆ ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ. ಇದೊಂದು ತಳಿವಿಜ್ಞಾನಕ್ಕೆ ಸಂಬಂಧಪಟ್ಟ ಮತ್ತು ತಳಿಗಳನ್ನು ಬದಲಿಸಬಲ್ಲ ಗುಣವಿರುವ ಪ್ರಬಲ ರಾಸಾಯನಿಕವಾಗಿದೆ. ಈ ರಾಸಾಯನಿಕ ಹಾಲಿನ ಮೂಲಕ ಮನುಷ್ಯರ ದೇಹ ಪ್ರವೇಶಿಸಿದ ಬಳಿಕ ದೇಹದಲ್ಲಿ ಕ್ಯಾನ್ಸರ್ ಕಾರಕ ಕಣಗಳ ಉತ್ಪತ್ತಿ ಮತ್ತು ಅಭಿವೃದ್ದಿಗೆ ಇಂಬು ನೀಡುತ್ತದೆ. ಇದರ ಪರಿಣಾಮವಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಅತಿ ಹೆಚ್ಚಾಗುತ್ತದೆ(ಪ್ರತಿ ಎಂಟು ಮಹಿಳೆಯರಲ್ಲಿ ಒಬ್ಬರಿಗೆ) ಪುರುಷರಲ್ಲಿಯೂ ಈ ಕ್ಯಾನ್ಸರ್ ಬರುವ ಅಪಾಯವಿದೆಯಾದರೂ ಪ್ರಾಬಲ್ಯ ಕಡಿಮೆ. ಈ ರಾಸಾಯನಿಕದ ಇನ್ನೊಂದು ಅಡ್ಡಪರಿಣಾಮವಿದೆ. ಹಸುಗಳಲ್ಲಿ ನೀಡಲಾಗುವ ಈ ರಾಸಾಯನಿಕದ ಪ್ರಭಾವವನ್ನು ಎದುರಿಸಲು (udder infections (mastitis)) ಹಸುಗಳಿಗೆ ಹೆಚ್ಚು ಪ್ರಬಲವಾದ ಆಂಟಿ ಬಯೋಟಿಕ್ ಗಳನ್ನು ನೀಡಲಾಗುತ್ತದೆ. ಪರಿಣಾಮವಾಗಿ ಹಸುವಿನ ದೇಹದಲ್ಲಿರುವ ಬ್ಯಾಕ್ಟೀರಿಯಾಗಳೂ ಈ ಪ್ರಬಲ ಆಂಟಿ ಬಯೋಟಿಕ್ ಗಳನ್ನು ಎದುರಿಸುವಂತೆಯೇ ಬೆಳೆಯುತ್ತವೆ. ಹಾಲಿನ ಮೂಲಕ ಮನುಷ್ಯರ ದೇಹ ಪ್ರವೇಶಿಸುವ ಈ ಬ್ಯಾಕ್ಟೀರಿಯಾಗಳು ಯಾವ ರೀತಿಯ ಅಪಾಯವನ್ನೂ ತಂದೊಡ್ಡಬಹುದು, ಆದರೆ ಇದುವರೆಗೆ ಸಂಶೋಧನೆಗಳಿಂದ ಯಾವುದೇ ನೇರ ಪರಿಣಾಮದ ಫಲಿತಾಂಶ ಹೊರಬಂದಿಲ್ಲ.

ಹೊಟ್ಟೆಯುಬ್ಬರದ ತೊಂದರೆ ಪ್ರಾರಂಭವಾಗುತ್ತದೆ

ಹೊಟ್ಟೆಯುಬ್ಬರದ ತೊಂದರೆ ಪ್ರಾರಂಭವಾಗುತ್ತದೆ

ಹಾಲು ಕುಡಿದ ಬಳಿಕ ಹೊಟ್ಟೆ ತುಂಬಿದಂತಾಗುವುದು ಹಾಗೂ ಹೊಟ್ಟೆ ಹೊರಬರುವುದು ಅಥವಾ ಊದಿಕೊಂಡಂತಿರುವುದು.

ಹೇಗೆ? ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣೀಸಲು ಚಿಕ್ಕಕರುಳು ಲ್ಯಾಕ್ಟೇಸ್ ಎಂಬ ಕಿಣ್ವವನ್ನು ಉತ್ಪಾದಿಸಬೇಕು. ಆದರೆ ಪ್ರಚೋದನೆಯ ಕಾರಣ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಮಾಡದೇ ಅರ್ಧಂಬರ್ಧ ಜೀರ್ಣಿಸುತ್ತದೆ. ಪೂರ್ಣವಾಗಿ ಜೀರ್ಣವಾಗದ ಆಹಾರ ದೊಡ್ಡಕರುಳಿನೊಳಗೆ ಪ್ರವೇಶಿಸುತ್ತದೆ. ಪರಿಣಾಮವಾಗಿ ಉತ್ಪತ್ತಿಯಾದ ಅನಿಲಗಳು ಸಣ್ಣಕರುಳು ಮತ್ತು ಜಠರವನ್ನು ಆವರಿಸುತ್ತವೆ. ಈ ಒತ್ತಡ ಹೊಟ್ಟೆಯುಬ್ಬರಕ್ಕೆ ಕಾರಣವಾಗುತ್ತದೆ.

ಮಕ್ಕಳಲ್ಲಿ ನೆತ್ತರ ಕೊರತೆಯುಂಟುಮಾಡುತ್ತದೆ

ಮಕ್ಕಳಲ್ಲಿ ನೆತ್ತರ ಕೊರತೆಯುಂಟುಮಾಡುತ್ತದೆ

ಹಸುವಿನ ಹಾಲು ಮಕ್ಕಳ ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಕಡಿಮೆಗೊಳಿಸುವುದು ಆತಂಕದ ವಿಷಯವಾಗಿದೆ.

ಹೇಗೆ? : ಹಸುವಿನ ಹಾಲಿನಲ್ಲಿ ಕಬ್ಬಿಣದ ಅಂಶ ಕಡಿಮೆ ಇದೆ. ಮಕ್ಕಳಿಗೆ ಹೆಚ್ಚು ಕಾಲು ಕುಡಿಸುವುದರಿಂದ ಅಷ್ಟು ಪ್ರಮಾಣದ ಇತರ ಆಹಾರಗಳ ಮೂಲಕ ಸಿಗಬಹುದಾಗಿದ್ದ ಕಬ್ಬಿಣದ ಅಂಶ ಹಾಲಿನಿಂದ ಸಿಗುವುದಿಲ್ಲ. ಇದು ರಕ್ತದಲ್ಲಿ ಹೀಮೋಗ್ಲೋಬಿನ್ ಅಂಶವನ್ನು ಕಡಿಮೆಗೊಳಿಸಲು ನೇರವಾಗಿ ಕಾರಣವಾಗುತ್ತದೆ. ಪಾರ್ಶ್ವ ಪರಿಣಾಮವಾಗಿ ಮಕ್ಕಳ ಕರುಳಿನಲ್ಲಿ ಸಾಕಷ್ಟು ಪ್ರಮಾಣದ ರಕ್ತ ಸರಬರಾಜು ಆಗದೇ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

 ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಹಸುವಿನ ಹಾಲಿನ ಸೇವನೆಯಿಂದ ಕಫ ಹೆಚ್ಚಾಗುತ್ತದೆ. ತನ್ಮೂಲಕ ವಿವಿಧ ಶ್ವಾಸಸಂಬಂಧಿ ರೋಗಗಳಿಗೆ ಆಹ್ವಾನ ನೀಡುತ್ತದೆ.

ಹೇಗೆ? : ಕಫ ಜಾಸ್ತಿಯಾದರೆ ಹಾಲು ಕುಡಿಯಬೇಡಿ ಎಂದು ಆಯುರ್ವೇದ ಹೇಳುತ್ತದೆ. ಆದರೆ ಹಾಲಿನ ಎಲ್ಲಾ ಅಂಶಗಳ ಕಾರಣ ಕಫ ಉಂಟಾಗುವುದಿಲ್ಲ. beta-CM-7 ಎಂಬ ಹೆಸರಿನ ಪ್ರೋಟೀನ್ ಸೇವಿಸುವುದರಿಂದ ಕಫ ಹೆಚ್ಚುತ್ತದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಜೊತೆಗೇ ಜೀರ್ಣಾಂಗಳ ಒಳಪದರಗಳಲ್ಲಿಯೂ ಕಫ ಕಟ್ಟುವುದು ಕಂಡುಬಂದಿದೆ.

ಮೊಸರು ಕೆಲವರಲ್ಲಿ ಅಲರ್ಜಿಯುಂಟುಮಾಡುತ್ತದೆ

ಮೊಸರು ಕೆಲವರಲ್ಲಿ ಅಲರ್ಜಿಯುಂಟುಮಾಡುತ್ತದೆ

ಹಸುವಿನ ಹಾಲಿನಲ್ಲಿರುವ ವಿವಿಧ ಪ್ರೋಟೀನ್ ಗಳು ಕೆಲವರಿಗೆ ಅಲರ್ಜಿಯುಂಟುಮಾಡುತ್ತವೆ.

ಹೇಗೆ?: ಮೊಸರಿನಲ್ಲಿ ಎಂಭತ್ತು ಶೇಖಡಾ ಹಾಲಿನ ಪ್ರೋಟೀನುಗಳಿವೆ. ಉಳಿದ ನೀರಿನ ಭಾಗ ಇಪ್ಪತ್ತು ಶೇಖಡಾ ಇದೆ. ಒಂದು ವೇಳೆ ಹಾಲಿನ ಅಲರ್ಜಿ ಇರುವ ವ್ಯಕ್ತಿ ಮೊಸರನ್ನು ಸೇವಿಸಿದರೆ ಆತನ ರೋಗ ನಿರೋಧಕ ವ್ಯವಸ್ಥೆ ಈ ಆಹಾರವನ್ನು ವಿಷ ಎಂದು ಪರಿಗಣಿಸುತ್ತದೆ. ಪರಿಣಾಮವಾಗಿ ಆಹಾರವಾಗಿ ಸ್ವೀಕರಿಸಿದ್ದ ಪ್ರೋಟೀನುಗಳ ವಿರುದ್ದವೇ ರಕ್ಷಣಾ ಕಾರ್ಯವನ್ನು ಪ್ರಾರಂಭಿಸುತ್ತದೆ. ಇದು ಅಲರ್ಜಿಗೆ ಕಾರಣವಾಗುತ್ತದೆ.

English summary

Severe Side Effects Of Milk

Do you drink milk? Are you under this constant impression that consuming glasses of milk is only making your body healthier? Then maybe you should rethink. Please don’t get me wrong. But things have become much clearer now. Didn’t understand? Just sit back and read on these milk side effects!
X
Desktop Bottom Promotion