For Quick Alerts
ALLOW NOTIFICATIONS  
For Daily Alerts

ತರಕಾರಿಯ ಎಲೆಗಳು ಕೂಡ ಆರೋಗ್ಯ ವೃದ್ಧಿಸಲು ಸಹಾಯಕ

|

ಹಸಿರು ಸೊಪ್ಪು ಸೇವನೆಯಿ೦ದ ಶರೀರಕ್ಕಾಗುವ ಲಾಭಗಳ ಬಗ್ಗೆ ನಾವೆಲ್ಲರೂ ನಮ್ಮ ಶಾಲೆಯ ದಿನಗಳಲ್ಲಿಯೇ ಅಭ್ಯಸಿಸಿ ತಿಳಿದುಕೊ೦ಡಿರುವೆವಾದರೂ ಸಹ, ನಮ್ಮಲ್ಲಿ ಹೆಚ್ಚಿನವರು ಸೊಪ್ಪುಯುಕ್ತ ಆಹಾರ ಸೇವನೆಯ ಕುರಿತ೦ತೆ ದಿವ್ಯ ನಿರ್ಲಕ್ಷ್ಯದ ಧೋರಣೆಯನ್ನು ಅನುಸರಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣವೇನೆ೦ದರೆ, ಬೆಳೆದು ಪ್ರೌಢ ವಯಸ್ಕರಾದ ಬಳಿಕ, ನಾವೆಲ್ಲರೂ ಜ೦ಕ್ ಫುಡ್‌ಗಳ ಚಾಪಲ್ಯಕ್ಕೆ ಬಲಿಯಾಗಿ, ಅನೇಕ ರೀತಿಯ ರೋಗರುಜಿನಗಳನ್ನು ಮೈಮೇಲೆ ಎಳೆದುಕೊಂಡಿದ್ದೇವೆ.

ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸಿ ಅದನ್ನು ಮಾತ್ರ ಅಡುಗೆಗೆ ಬಳಸುತ್ತೇವೆ, ಆದರೆ ಅದರ ಎಲೆಗಳನ್ನು ಮಾತ್ರ ಹಾಗೆಯೇ ಕಸದ ಬುಟ್ಟಿಗೆ ಹಾಕುತ್ತೇವೆ. ಉದಾಹರಣೆಗೆ ಹೂ ಕೋಸಿನ ಎಲೆಗಳನ್ನು ಬಿಸಾಡಿ, ಅದರ ಹೂವನ್ನು ಮಾತ್ರ ಅಡುಗೆಗೆ ಬಳಸುತ್ತಾರೆ. ಇವುಗಳಲ್ಲಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಎಲ್ಲಾ ವಿಟಮಿನ್ ಬಿ ಅಧಿಕವಾಗಿರುತ್ತವೆ ಹಾಗೂ ನಿಮ್ಮ ಎಲ್ಲಾ ಪೋಷಕಾಂಶಗಳ ಅಗತ್ಯವನ್ನು ನೀಗಿಸುತ್ತವೆ. ಹಸಿರು ಎಲೆಗಳಲ್ಲಿ, ಅಧಿಕ ಪ್ರಮಾಣದ ಆಂಟಿ ಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳನ್ನು ಒಳಗೊಂಡಿರುತ್ತವೆ. ಸಮೃದ್ಧ ಪೋಷಕಾಂಶಗಳ ಆಗರ ಹೂಕೋಸು

ನಮ್ಮ ದಿನ ನಿತ್ಯದ ಅಡುಗೆಗೆ ಕೆಲವೊಂದು ಎಲೆಗಳನ್ನು ಬಳಸುತ್ತಾ ಇರುತ್ತೇವೆ. ಆದರೆ ಈ ಎಲೆಗಳನ್ನು ನಾವು ನೆಪಕ್ಕೆ ಅಡುಗೆಗೆ ಹಾಕಿ, ತಿನ್ನುವಾಗ ಮಾತ್ರ ಅದನ್ನು ಎತ್ತಿ ಪಕ್ಕದಲ್ಲಿಡುವುದೇ ಹೆಚ್ಚು. ಆದರೆ ಹೀಗೆ ಎಸೆಯುವ ಮುನ್ನ ಅವುಗಳಲ್ಲಿರುವ ಪೋಷಕಾಂಶದ ಕುರಿತು ಒಮ್ಮೆ ತಿಳಿದುಕೊಳ್ಳಿ! ಇದು, ನಿಮ್ಮ ರುಚಿ ಗ್ರಂಥಿಗಳನ್ನು ಉದ್ದೀಪನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಸಾಸಿವೆ ಎಲೆಗಳಂತಹವು ನಿಮ್ಮ ರುಚಿ ಗ್ರಂಥಿಗಳನ್ನು ಮತ್ತಷ್ಟು ಕಾರ್ಯಕ್ಷಮತೆಯಿಂದ ದುಡಿಯುವಂತೆ ಮಾಡುತ್ತವೆ. ಇವುಗಳು ಪೋಷಕಾಂಶವನ್ನು ಹೊಂದಿರುವುದರ ಜೊತೆಗೆ ಆಹಾರದ ರುಚಿಯನ್ನು ಸಹ ಹೆಚ್ಚಿಸುತ್ತವೆ.

ಈ ಎಲೆಗಳನ್ನು ಆಹಾರಕ್ಕೆ ಅಥವಾ ಸಲಾಡ್‌ಗೆ ಬಳಸುವ ಮುನ್ನ ಚೆನ್ನಾಗಿ ತೊಳೆಯುವುದನ್ನು ಮರೆಯಬೇಡಿ. ಆದರೂ ಇವುಗಳನ್ನು ಕತ್ತರಿಸಿದ ಮೇಲೆ ಹೆಚ್ಚಾಗಿ ತೊಳೆಯಲು ಹೋಗಬೇಡಿ. ಏಕೆಂದರೆ ಇದರಿಂದ ಅತಿ ಹೆಚ್ಚು ಪೋಷಕಾಂಶಗಳು ಹಾನಿಗೊಳಗಾಗುತ್ತವೆ. ಕತ್ತರಿಸಿದ ತಕ್ಷಣ ಇವುಗಳನ್ನು ಬಳಸಿ. ಇವುಗಳಲ್ಲಿ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ಇರುತ್ತವೆ. ಬನ್ನಿ ಅವು ಯಾವುವು ಎಂದು ತಿಳಿದುಕೊಳ್ಳೋಣ.....

ಹೂ ಕೋಸುಗಳು

ಹೂ ಕೋಸುಗಳು

ಹೂ ಕೋಸಿನ ಎಲೆಗಳನ್ನು ನೀವು ಇದಕ್ಕೆ ಮೊದಲು ಬಿಸಾಡುವ ಪರಿಪಾಠವನ್ನು ಇರಿಸಿಕೊಂಡಿರಬಹುದು. ಇನ್ನು ಮುಂದೆ ಹಾಗೆ ಮಾಡಬೇಡಿ. ಇವುಗಳಲ್ಲಿ, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಮೆದುಳಿಗೆ ಒಳ್ಳೆಯದು ಮತ್ತು ಖಿನ್ನತೆಯನ್ನು ನಿವಾರಿಸುತ್ತವೆ. ಹೂಕೋಸಿನ ಎಲೆಗಳು ನಿಮ್ಮ ಮೂಳೆಗಳನ್ನು ಆರೋಗ್ಯವಂತವಾಗಿ ಮಾಡುವುದರ ಜೊತೆಗೆ ನಿಮ್ಮ ಹಿಮೊಗ್ಲೋಬಿನ್ ಮಟ್ಟವನ್ನು ಸಹ ಸುಸ್ಥಿತಿಯಲ್ಲಿಡುತ್ತವೆ.

ನವಿಲು ಕೋಸು ಎಲೆಗಳು

ನವಿಲು ಕೋಸು ಎಲೆಗಳು

ಹಿಮೊಗ್ಲೋಬಿನ್ ಪ್ರಮಾಣ ಕಡಿಮೆ ಇರುವವರು ನವಿಲು ಕೋಸು ಎಲೆಗಳನ್ನು ತಪ್ಪದೇ ಸೇವಿಸಬೇಕು. ಇದರಲ್ಲಿರುವ ಕಬ್ಬಿಣಾಂಶ ಮತ್ತು ಫೋಲೆಟ್ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಮೆಂತ್ಯೆ ಸೊಪ್ಪು

ಮೆಂತ್ಯೆ ಸೊಪ್ಪು

ಮೂತ್ರಪಿಂಡದ ಸಮಸ್ಯೆಗಳನ್ನು ಎದುರಿಸುವವರಿಗೆ ಇದು ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ. ಮೆಂತ್ಯೆ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಎ ಅಧಿಕ ಪ್ರಮಾಣದಲ್ಲಿರುತ್ತವೆ, ಹಾಗೂ ಪೊಟಾಶಿಯಂನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇಷ್ಟೇ ಅಲ್ಲದೆ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ನಿಮ್ಮ ಆರೋಗ್ಯವನ್ನು ಸದಾ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಮೂಲಂಗಿ ಎಲೆಗಳು

ಮೂಲಂಗಿ ಎಲೆಗಳು

ಮೂಲಂಗಿ ಎಲೆಗಳು ಸಮೃದ್ಧವಾದ ಬೀಟಾ ಕೆರೋಟಿನ್‌ಗಳ ಜೊತೆ (ವಿಟಮಿನ್ ಎ ನ ನಿಷ್ಕ್ರಿಯ ರೂಪ) ಜೊತೆಗೆ ವಿಟಮಿನ್ ಕೆ ಮತ್ತು ಸಿ ಯನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ, ಅಷ್ಟೇ ಏಕೆ ಕ್ಯಾಲ್ಸಿಯಂ ಮತ್ತು ನಾರಿನಂಶವನ್ನು ಕೂಡ ಅಗಣಿತ ಪ್ರಮಾಣದಲ್ಲಿ ತನ್ನಲ್ಲಿರಿಸಿಕೊಂಡಿದೆ. ಹಾಗಾಗಿ ಇವುಗಳನ್ನು ಎಸೆಯಲು ಹೋಗಬೇಡಿ. ಇವುಗಳಲ್ಲಿರುವ ಪೋಷಕಾಂಶಗಳು ಮೂಳೆಗಳಿಗೆ, ಕಣ್ಣುಗಳಿಗೆ, ರಕ್ತಕ್ಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತವೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಮುಖ್ಯವಾಗಿ ಚರ್ಮದ ತುರಿಕೆ, ರಕ್ತದಲ್ಲಿ ಹೆಚ್ಚಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅತಿಸಾರ, ಬಾಯಿಯ ಹುಣ್ಣು, ರಕ್ತಹೀನತೆ, ಅಜೀರ್ಣ, ಋತುಚಕ್ರದಲ್ಲಿ ಏರುಪೇರು, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರುಪೇರು ಹಾಗೂ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೊತ್ತಂಬರಿ ಸೊಪ್ಪು ಉಪಯುಕ್ತವಾಗಿದೆ.

English summary

Indian Green Leaves You Should Never Miss Eating

You must have heard that green leaves are important for maintaining a good health. Green leaves are sometimes ignored by most of us and they are thrown away without knowing their nutritional value. An example is cauliflower leaves, they are usually thrown and cauliflower is cooked.
Story first published: Tuesday, June 9, 2015, 23:24 [IST]
X