For Quick Alerts
ALLOW NOTIFICATIONS  
For Daily Alerts

ಚಪಾತಿ ಅಂದ್ರೆ ಕೇವಲ ಗೋಧಿಹಿಟ್ಟು ಕಲಸಿದರೆ ಸಾಲದು!

By Su.Ra
|

ಚಪಾತಿ ಅಂದ್ರೆ ಕೇವಲ ಗೋಧಿಹಿಟ್ಟು ಕಲಸಿ, ಲಟ್ಟಿಸಿ ಬೇಯಿಸಿಬಿಡೋದು ಅಷ್ಟೇ ಅಲ್ಲ. ಸ್ವಲ್ಪ ರುಚಿ ಬಯಸೋರು, ಸ್ವಲ್ಪ ಫುಡ್‌ನಲ್ಲಿ ವೆರೈಟಿ ಬಯಸೋರು ಚಪಾತಿಯಲ್ಲೂ ಹಲವು ಪ್ರಯೋಗಗಳನ್ನು ಮಾಡ್ಬಹುದು..ಆ ಪ್ರಯೋಗಗಳು ಬಾಯಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಹಿತವೆನಿಸುತ್ತೆ.

ಅಂತಹ ಕೆಲವು ಚಪಾತಿ ವೆರೈಟಿಗಳನ್ನು ಮಾಡುವ ಸಿಂಪಲ್ ವಿಧಾನವನ್ನು ನಾವಿಲ್ಲಿ ಹೇಳ್ತಿವಿ ಕೇಳಿ. ಮಕ್ಕಳು ಊಟತಿಂಡಿ ಮಾಡುವಾಗ ಹಠ ಮಾಡೋದು ಮಾಮೂಲು. ಹಠ ಮಾಡೋ ಮಕ್ಕಳಿಗೆ ನ್ಯೂಟ್ರೀಷಿಯಸ್‌ ಆಗಿರುವ ಆಹಾರ ಕೊಡ್ಬೇಕು ಅಂದ್ರೆ ನೀವು ಅಡುಗೆಯಲ್ಲಿ ಸ್ವಲ್ಪ ಬುದ್ಧಿವಂತರಾಗ್ಬೇಕು. ಚಪಾತಿ ಇಷ್ಟ ಪಡದ ಮಕ್ಕಳೂ ಕೂಡ ಚಪಾತಿಯ ಬಣ್ಣ ನೋಡಿ ಇಷ್ಟಪಟ್ಟು ತಿನ್ನುವ ಹಾಗೆ ಮಾಡುವ ಸ್ಪೆಷಲ್‌ ರೆಸಿಪಿಗಳಿವು..

ಹೆಸರುಕಾಳಿನ ಚಪಾತಿ

ಹೆಸರುಕಾಳಿನ ಚಪಾತಿ

ಮೊದಲು ಹೆಸರು ಕಾಳನ್ನು ನೆನಸಿಡಿ. 24 ಗಂಟೆ ನಂತ್ರ ಮಿಕ್ಸಿಯಲ್ಲಿ ಅದನ್ನು ರುಬ್ಬಿಕೊಳ್ಳಿ. ರುಬ್ಬುವಾಗ ಆದಷ್ಟು ನುಣ್ಣಗೆ ಮಾಡಿಕೊಳ್ಳಿ. ಹೆಚ್ಚು ನೀರನ್ನು ಬಳಸ್ಬೇಡಿ..ಮಿಕ್ಸಿ ಮಾಡಿದ ಹೆಸರುಕಾಳಿನ ಮಿಶ್ರಣವನ್ನು ಗೋಧಿಹಿಟ್ಟು, ಚಿಟಿಕೆ ಉಪ್ಪು ಮತ್ತು ಜೀರಿಗೆ ಪುಡಿಯೊಂದಿಗೆ ಕಲಸಿ.

ಹೆಸರುಕಾಳಿನ ಚಪಾತಿ

ಹೆಸರುಕಾಳಿನ ಚಪಾತಿ

ಹೆಸರುಕಾಳನ್ನು ಗಟ್ಟಿಯಾಗಿ ಮಿಕ್ಸಿ ಮಾಡಿಕೊಂಡಿದ್ರೆ ನೀವು ಚಪಾತಿ ಹಿಟ್ಟನ್ನು ಕಲಸುವಾಗ ಸ್ವಲ್ಪ ಮೊಸರು ಸೇರಿಸಿದ್ರೆ ಚಪಾತಿ ಮತ್ತಷ್ಟು ಸಾಫ್ಟ್‌ ಆಗಲಿದೆ. ಚಪಾತಿ ಹದಕ್ಕೆ ಮಿಶ್ರಣವನ್ನು ಕಲಸಿಕೊಳ್ಳಿ. ನಂತ್ರ ಚಪಾತಿ ಲಟ್ಟಿಸಿ, ಬೇಯಿಸಿ. ರುಚಿರುಚಿಯಾದ ಹೆಸರುಕಾಳಿನ ಚಪಾತಿ ರೆಡಿಯಾಗುತ್ತೆ.

Most Read:ವಾರದ ಪ್ರಕಾರ ದೇವರ ಮಂತ್ರ ಪಠಿಸಿ- ಸಕಲ ಸಂಕಷ್ಟ ಪರಿಹಾರವಾಗುವುದು

ಬಾಳೆಹಣ್ಣಿನ ಚಪಾತಿ

ಬಾಳೆಹಣ್ಣಿನ ಚಪಾತಿ

ಒಂದು ನಾಲ್ಕು ಪಚ್ಚಬಾಳೆಹಣ್ಣು, ಚಿಟಿಕಿ ಉಪ್ಪು, ಒಂದು ಸ್ಪೂನ್ ಸಕ್ಕರೆಯನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ.. ಬೇಕಿದ್ರೆ ಒಂದು ಸ್ಪೂನ್ ತುಪ್ಪ ಮತ್ತು ಸ್ವಲ್ಪ ಹಾಲು ಹಾಕಿದ್ರೆ ಚಪಾತಿ ಸಖತ್‌ ಟೇಸ್ಟ್ ಆಗಿರುತ್ತೆ. ಬಾಳೆಹಣ್ಣು ಚಪಾತಿ ಹಿಟ್ಟಿನೊಂದಿಗೆ ಚೆನ್ನಾಗಿ ಮಿಕ್ಸ್ ಆಗುವಂತೆ ಕಲಸಿ, ಬಾಳೆಹಣ್ಣು ಚೆನ್ನಾಗಿ ಹಣ್ಣಾಗಿದ್ದಾಗ ಗೋಧಿಹಿಟ್ಟಿನೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತೆ.

ಬಾಳೆಹಣ್ಣಿನ ಚಪಾತಿ

ಬಾಳೆಹಣ್ಣಿನ ಚಪಾತಿ

ಅರೆಬರೆ ಹಣ್ಣಾಗಿರುವ ಬಾಳೆಹಣ್ಣನ್ನು ಬಳಸಿದ್ರೆ ಚಪಾತಿ ಹದಕ್ಕೆ ಹಿಟ್ಟನ್ನು ಕಲಸೋದು ಕಷ್ಟವಾಗುತ್ತೆ. ಚಪಾತಿ ಹದಕ್ಕೆ ಕಲಸಿದ ಹಿಟ್ಟನ್ನು ಲಟ್ಟಿಸಿ ಬೇಯಿಸಿ. ಟೇಸ್ಟ್‌ ನೋಡಿ. ವೆರೈಟಿ ಪಲ್ಯ, ಕರಿ ತಯಾರಿಸಿಕೊಂಡು ಇದನ್ನು ಸವಿಬಹುದು. ಬಾಳೆಹಣ್ಣು ಸೇರಿಸಿದ ಚಪಾತಿ ಆಗಿರೋದ್ರಿಂದ ಸ್ವಲ್ಪ ಸಿಹಿಯಾಗಿಯೂ ಇರುತ್ತೆ ಬೇರೆ ಯಾವುದೇ ಸೈಡ್ಸ್ ಇಲ್ಲದೇ ತಿಂದ್ರೂ ವಾವ್ ಅನ್ನಿಸುವ ಟೇಸ್ಟ್‌ ಇರುತ್ತೆ.

Most Read:ಒಂದೇ ಒಂದು ರಸಗುಲ್ಲಾ ತಿಂದರೂ ಸಾಕು-ಆರೋಗ್ಯಕ್ಕೆ ಬಹಳ ಒಳ್ಳೆಯದು

ಮೆಂತೆ ಸೊಪ್ಪಿನ ಚಪಾತಿ

ಮೆಂತೆ ಸೊಪ್ಪಿನ ಚಪಾತಿ

ಗೋಧಿ ಹಿಟ್ಟಿಗೆ ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು,ಜೀರಿಗೆ, ಬೆಳ್ಳುಳ್ಳಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ ಚೆನ್ನಾಗಿ ಕಲಸಿ ನಾದಿಡಬೇಕು. ಬಳಿಕ ಲಟ್ಟಿಸಿ, ಎಣ್ಣೆ ಅಥ್ವಾ ತುಪ್ಪ ಹಾಕಿ ಬೇಯಿಸಿದ್ರೆ ರುಚಿರುಚಿಯಾದ ಮೆಂತೆ ಸೊಪ್ಪಿನ ಚಪಾತಿ ಸವಿಯಲು ಸಿದ್ದ.

ಪಾಲಾಕ್ ಚಪಾತಿ

ಪಾಲಾಕ್ ಚಪಾತಿ

ಮೊದಲು ಪಾಲಾಕ್ ಸೊಪ್ಪನ್ನು ಉಪ್ಪಿನಲ್ಲಿ ತೊಳೆದು ಬೇಯಿಸಿಕೊಳ್ಳಿ. ಬೇಯಿಸಿದ ಪಾಲಾಕ್‌ನ್ನು ಜೀರಿಗೆ ಉಪ್ಪು, ಹಸಿಮೆಣಸಿನಕಾಯಿ ಹಾಕಿ ಮಿಕ್ಸಿ ಮಾಡ್ಕೊಳ್ಳಿ. ಮಿಕ್ಸಿ ಮಾಡಿದ ಮಿಶ್ರಣವನ್ನು ಗೋಧಿಹಿಟ್ಟಿನೊಂದಿಗೆ ಕಲಸಿ. ನಂತ್ರ ಲಟ್ಟಿಸಿ ಎಣ್ಣೆಹಾಕಿ ಬೇಯಿಸಿದ್ರೆ ಪಾಲಾಕ್ ಚಪಾತಿ ರೆಡಿ.. ಹಸಿರು ಬಣ್ಣದಲ್ಲಿ ಕಂಗೊಳಿಸುವ ಈ ಚಪಾತಿ ತಿನ್ನಲು ಸಿಕ್ಕಾಪಟ್ಟೆ ಟೇಸ್ಟಿಯಾಗಿರುತ್ತೆ.

 ಬೀಟ್‌ರೂಟ್ ಚಪಾತಿ

ಬೀಟ್‌ರೂಟ್ ಚಪಾತಿ

ಮೊದಲು ಬೀಟ್‌ರೂಟ್‌ನ್ನು ತುರಿದು, ಬೇಯಿಸಿಕೊಳ್ಳಿ. ಬೆಂದ ಬೀಟ್‌ರೋಟ್‌ಗೆ ಚಿಟಿಕೆ ಕಾಳುಮೆಣಸಿನ ಪುಡಿ, ಉಪ್ಪು, ಜೀರಿಗೆ, ಹಾಕಿ ಮಿಕ್ಸಿ ಮಾಡ್ಕೊಳ್ಳಿ. ಮಿಕ್ಸಿ ಮಾಡಿದ ಮಿಶ್ರಣವನ್ನು ಗೋಧಿಹಿಟ್ಟಿನೊಂದಿಗೆ ಕಲಸಿ. ನಂತ್ರ ಲಟ್ಟಿಸಿ, ಸ್ವಲ್ಪ ಎಣ್ಣೆ ಹಾಕಿ ಬೇಯಿಸಿ.. ಚಪಾತಿ ಕೆಂಪು ಕಲರ್‌ನಲ್ಲಿ ಕಂಗೊಳಿಸುತ್ತೆ. ಟೇಸ್ಟೂ ಅದ್ಭುತವೆನಿಸುತ್ತೆ.

Most Read:ಈ ಆರು ರಾಶಿಚಕ್ರದ ಜೋಡಿಗಳ ದಾಂಪತ್ಯ ಜೀವನ ಸಂತೋಷವಾಗಿರುತ್ತದೆಯಂತೆ

ಕ್ಯಾರೆಟ್ ಚಪಾತಿ

ಕ್ಯಾರೆಟ್ ಚಪಾತಿ

ಮೊದಲು ಕ್ಯಾರೆಟ್‌ನ್ನು ಸಣ್ಣಸಣ್ಣ ತುಂಡುಗಳಾಗಿ ಕತ್ತರಿಸಿ ಬೇಯಿಸಿಕೊಳ್ಳಿ.. ನಂತ್ರ ಕ್ಯಾರೆಟ್‌ಗೆ ಸ್ವಲ್ಪ ಸಕ್ಕರೆ ಹಾಕಿ ಮಿಕ್ಸಿ ಮಾಡ್ಕೊಳ್ಳಿ. ಗೋಧಿಹಿಟ್ಟಿಗೆ ಬಿಸಿಹಾಲು, ಸ್ವಲ್ಪ ತುಪ್ಪ, ಮಿಕ್ಸಿ ಮಾಡಿಕೊಂಡು ಕ್ಯಾರೆಟ್‌ ಮಿಶ್ರಣ ಸೇರಿಸಿ ಚೆನ್ನಾಗಿ ಕಲಸಿ, ಚಪಾತಿ ಹದಕ್ಕೆ ಬಂದ ನಂತ್ರ ನಾದಿಕೊಳ್ಳಿ. ನಂತ್ರ ಲಟ್ಟಿಸಿ, ಬೇಯಿಸಿ. ವಾವ್‌ ಅನ್ನಿಸೋ ಟೇಸ್ಟಿಯಾದ ಸ್ವಲ್ಪ ಸಿಹಿಸಿಹಿಯಾಗಿರುವ ಕ್ಯಾರೆಟ್‌ ಚಪಾತಿ ಸವಿಯಲು ಸಿದ್ಧ. ಬೀಟ್‌ರೂಟ್, ಕ್ಯಾರೆಟ್ ಮಾತ್ರವಲ್ಲ, ಹೀಗೆ ಹೆಚ್ಚಿನ ತರಕಾರಿಗಳನ್ನು ಬೇಯಿಸಿ, ಮಿಕ್ಸಿ ಮಾಡಿ ಚಪಾತಿ ಹಿಟ್ಟಿನೊಂದಿಗೆ ಕಲಸಿ, ಚಪಾತಿ ಮಾಡ್ಬಹುದು.

ಕ್ಯಾರೆಟ್ ಚಪಾತಿ

ಕ್ಯಾರೆಟ್ ಚಪಾತಿ

ಟೇಸ್ಟೂ ಅದ್ಭುತವೆನಿಸುತ್ತೆ. ಉದಾಹರಣೆಗೆ ಸಿಹಿಗುಂಬಳ, ಸೌತೆಕಾಯಿಯನ್ನೂ ಕೂಡ ಹೀಗೆ ಬೀಟ್‌ರೂಟ್ ಬದಲಿಗೆ ಬಳಸಿ ಚಪಾತಿ ಮಾಡ್ಬಹುದು.. ಮಕ್ಕಳಿಗಂತೂ ಸಿಕ್ಕಾಪಟ್ಟೆ ಇಷ್ಟವಾಗುತ್ತೆ. ಆರೋಗ್ಯಕ್ಕೂ ಉತ್ತಮವೆನಿಸುತ್ತೆ. ನೀವೂ ಒಮ್ಮೆ ಟ್ರೈ ಮಾಡಿ ನೋಡಿ..ಬರೀ ಗೋಧಿಹಿಟ್ಟನ್ನು ಕಲಸಿ ಮಾಡುವ ಚಪಾತಿಗಳಿಗಿಂತ ಇವು ಟೇಸ್ಟಿ ಅನ್ನಿಸುತ್ತೆ ಮತ್ತು ಹೆಲ್ತಿ ಕೂಡ ಆಗಿರುತ್ತೆ.


English summary

Health benefits of Different Types Of Chapati

Most of us are not aware of how to make chapathi and health benefits of chapati, but today we share some variety styles of chapthi have a look
X
Desktop Bottom Promotion