Latest Updates
-
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದಲ್ಲಿ ಟಾಟಾ ಮುಂಬೈ ಮ್ಯಾರಥಾನ್ 2027 ತಯಾರಿ: ಸುರಕ್ಷಿತವಾಗಿ ಓಡಲು 14 ನಿಮಿಷಗಳ ಬೆಸ್ಟ್ ವರ್ಕೌಟ್ ಟಿಪ್ಸ್ -
ಬೆಕ್ಕು ಸಾಕುವ ದಂಪತಿಗಳೇ ಎಚ್ಚರ! ಜಗಳ ತಪ್ಪಿಸಲು ಈ 'ಪೆಟ್-ಕೇರ್ ಒಪ್ಪಂದ' ಕಡ್ಡಾಯ
ಮಳೆಗಾಲದಲ್ಲಿ ನಾಲಿಗೆಯ ಚಪಲಕ್ಕೆ ಸ್ವಲ್ಪ ಬ್ರೇಕ್ ಹಾಕಿ!
ಮುಂಗಾರು ಮಳೆ ಶುರುವಾಗಿ ಬಿಟ್ಟಿದೆ, ಸಂತಸದ ಹೊಳೆಯನ್ನೇ ಹರಿಸಿದೆ. ಬಿಸಿಲಿನಿಂದ ಬೆಂಡಾಗಿದ್ದ ಭೂಮಿ ತಣ್ಣಗಾಗಿದೆ, ಮನೆಯೊಳಗೆ ಅಡಗಿದ್ದ ಕೊಡೆ, ರೇನುಕೋಟುಗಳು ಹೊರಬಂದಿವೆ. ಸಂಜೆಯಾಗುತ್ತಿದ್ದಂತೆಯೇ ಅಂಗಡಿಗಳು ಬೇಗನೇ ಮುಚ್ಚುತ್ತಿವೆ. ಆದರೆ ರಸ್ತೆಬದಿಯ ಬಿಸಿಬಿಸಿ ಈರುಳ್ಳಿ ಬೋಂಡಾ, ಹಸಿಮೆಣಸಿನ ಬೋಂಡಾ, ಎಗ್ ಫ್ರೈಡ್ ರೈಸ್ ಮೊದಲಾದ ತಿಂಡಿಗಳು ಮಳೆಯಲ್ಲಿ ನೆನೆದವರ ಮನದಲ್ಲಿ ಲಾಲಸೆಯುಂಟುಮಾಡುತ್ತಿವೆ.
ರಸ್ತೆಯ ಕೊಚ್ಚೆ, ಒಣಗದ ಬಟ್ಟೆ, ಎತ್ತಲೂ ಬೆಳೆಯುವ ಕಳೆ, ಮನೆಯೊಳಗೇ ನುಗ್ಗುವ ಕಪ್ಪೆ, ಕ್ರಿಮಿಗಳು, ರಾತ್ರಿಯಾಗುತ್ತಿದ್ದಂತೆ ಹೆಚ್ಚುವ ವಟವಟ ಜೊತೆಗೇ ಬರುತ್ತವೆ ಶೀತ ನೆಗಡಿ ಕೆಮ್ಮು. ಇಂತಹ ಪರಿಸ್ಥಿತಿಯಲ್ಲಿ ಮನಮೆಚ್ಚುವ ಆಹಾರವೆಂದರೆ ಬಿಸಿಬಿಸಿ ಕುಚ್ಚಲಕ್ಕಿಯ ಗಂಜಿ ಮತ್ತು ಉಪ್ಪಿನಕಾಯಿ. ಮಳೆಗಾಲದ ಅಪಾಯಕಾರಿ ರೋಗಗಳ ಬಗ್ಗೆ ಎಚ್ಚರವಿರಲಿ
ಮಳೆಗಾಲದ ಸ್ವಾದವನ್ನು ಸವೆಯುವ ಭರದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಕೊಂಚ ಗಮನ ಹರಿಸದಿದ್ದರೆ ವಿವಿಧ ತೊಂದರೆಗಳಿಗೆ ಆಹ್ವಾನ ನೀಡಿದಂತೆ. ಇದುವರೆಗೂ ಮಳೆಗಾಲದಲ್ಲಿ ಬಿಸಿಬಿಸಿ ಬಜ್ಜಿ, ತಿನ್ನುವುದೇ ಒಂದು ಸುಖ ಎಂದು ಅನುಭವಿಸುತ್ತಿರುವವರಿಗೆ ಆಹಾರತಜ್ಞರು ಬಜ್ಜಿ ಮಳೆಗಾಲದಲ್ಲಿ ಸರ್ವಥಾ ಒಳ್ಳೆಯದಲ್ಲ ಎಂಬ ಮಾಹಿತಿಯನ್ನು ಬರೆಯೆಳೆದಂತೆ ನೀಡಿದ್ದಾರೆ. ಮಳೆಗಾಲದಲ್ಲಿ ಇದುವರೆಗೆ ನಾವು ಆಸ್ವಾದಿಸುತ್ತಿದ್ದ ಆಹಾರಗಳನ್ನು ಈಗ ನಿರಾಸೆಯಿಂದಲೇ ದೂರ ಮಾಡಬೇಕಾಗಿದೆ. ಈ ಬಗ್ಗೆ ವಿವರಗಳನ್ನು ಇಲ್ಲಿ ನೀಡಲಾಗಿದೆ. ಅತ್ಯಂತ ಅಪಾಯಕರ ಮಳೆಗಾಲದ 10 ಕಾಯಿಲೆಗಳು

ಎಣ್ಣೆಯಲ್ಲಿ ಕರಿದ ಪಕೋಡ, ಬಜ್ಜಿ, ವಡೆ ಬೋಂಡಾಗಳು
ಯಾವುದೇ ತಿಂಡಿಯನ್ನು ಎಣ್ಣೆಯಲ್ಲಿ ಕರಿದಿದ್ದರೆ ಮಳೆಗಾಲದಲ್ಲಿ ಅವುಗಳ ಸೇವನೆ ಸಲ್ಲದು ಏಕೆಂದರೆ ಈ ತಿಂಡಿಗಳಲ್ಲಿ ವಿಪರೀತವಾಗಿ ಎಣ್ಣೆಯ ಪ್ರಮಾಣವಿದ್ದು ಜೀರ್ಣಾಂಗಗಳಲ್ಲಿ ಪೂರ್ಣವಾಗಿ ಜೀರ್ಣಗೊಳ್ಳಲು ಬೇಸಿಗೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಏಕೆಂದರೆ ವಾಯುವಿನಲ್ಲಿ ಆರ್ದ್ರತೆ ಹೆಚ್ಚಿರುವ ಕಾರಣ ದೇಹದ ಹೆಚ್ಚಿನ ಶಕ್ತಿ ದೇಹದ ಶಾಖವನ್ನು ಹೆಚ್ಚಿಸಿ ಉಷ್ಣತೆಯನ್ನು ಕಾಪಾಡಿಕೊಳ್ಳಲು ಉಪಯೋಗವಾಗುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಆಹಾರದ ಪ್ರಮಾಣ ಹೆಚ್ಚಿದ್ದರೆ ಅಜೀರ್ಣವಾಗಿ ಅಲ್ಸರ್ (ಕರುಳು ಹುಣ್ಣು) ಆಗುವ ಸಂಭವವಿರುತ್ತದೆ. ಆದ್ದರಿಂದ ಮಳೆಗಾಲ ಕಳೆಯುವವರೆಗೂ ಬಿಸಿ ಬಿಸಿ ಬೋಂಡಾ ಬೇಡ.

ವಿವಿಧ ಚಾಟ್‌ಗಳು
ಹಾದಿಬದಿಯಲ್ಲಿ ಸಿಗುವ ಚಾಟ್, ಚಟ್ನಿ ಮೊದಲಾದವುಗಳನ್ನು ತಯಾರಿಸುವ ನೀರು ಶುದ್ಧವಾಗಿರುವ ಸಾಧ್ಯತೆ ಮಳೆಗಾಲದಲ್ಲಿ ಕಡಿಮೆ. ಇದು ಹಲವು ಕಲ್ಮಶಗಳನ್ನು ಒಳಗೊಂಡಿರಬಹುದು. ಚಾಟ್ ಬಿಸಿಮಾಡದ ಆಹಾರವಾಗಿರುವುದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳು ಸುಲಭವಾಗಿ ತುತ್ತಾಗುವ ಸಂಭವಿರುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಹೆಚ್ಚಿನವರು ಶೀತ ಕೆಮ್ಮಿಗೆ ಒಳಗಾಗುವುದರಿಂದ ಎಲ್ಲರ ಸೀನು ಕೆಮ್ಮುಗಳ ಮೂಲಕ ಗಾಳಿಯಲ್ಲಿ ಹರಡುವ ಕ್ರಿಮಿಗಳಿಗೆ ಈ ಚಾಟ್ ಉತ್ತಮ ಆಶ್ರಯತಾಣವಾಗಿದೆ. ಈ ಚಾಟ್ ಚಟ್ನಿಗಳನ್ನು ಸವಿಯುವ ಮೂಲಕ ಬ್ಯಾಕ್ಟೀರಿಯಾಗಳನ್ನು ನಾವೇ ನಮ್ಮ ಕೈಯಾರೆ ದೇಹದೊಳಗೆ ಅತಿಥಿಯಾಗಿ ಆಹ್ವಾನಿಸಿ ನಮ್ಮನ್ನೇ ಬಲಿಗೊಡುತ್ತಿದ್ದೇವೆ.

ಕಚೋರಿ, ಸಮೋಸಾ
ಇದುವರೆಗೆ ಗುಜರಾತ್, ಉತ್ತರ ಭಾರತಗಳಲ್ಲಿ ಜನಪ್ರಿಯವಾಗಿದ್ದ ಈ ತಿಂಡಿಗಳು ಈಗ ಕರ್ನಾಟಕದಲ್ಲಿಯೂ ಜನಪ್ರಿಯವಾಗಿವೆ. ಆದರೆ ಇವುಗಳ ಒಡಲಲ್ಲಿರುವ ಬೇಯಿಸಿದ ಆಲುಗಡ್ಡೆ ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಜಠರರಸದ ಪ್ರಭಾವ ಕಡಿಮೆಯಾಗುವುದರಿಂದ ಆಲುಗಡ್ಡೆಯನ್ನು ಪೂರ್ಣವಾಗಿ ಜೀರ್ಣಿಸಿಕೊಳ್ಳಲಾಗದೇ ಆಮ್ಲೀಯತೆ ಹೆಚ್ಚುತ್ತದೆ. ಇದು ಹೊಟ್ಟೆಯ ಉಬ್ಬರ, ಹುಳಿತೇಗು, ಎದೆಯುರಿ, ಮಧುಮೇಹ ಮೊದಲಾದ ತೊಂದರೆಗಳಿಗೆ ಕಾರಣವಾಗುತ್ತದೆ. ಹಠಕಟ್ಟಿ ತಿನ್ನುತ್ತಲೇ ಹೋದರೆ ಸ್ಥೂಲಕಾಯ ಬೇಗನೇ ಆವರಿಸುತ್ತದೆ.

ಭಾರತೀಯ-ಚೈನೀಸ್ ತಿನಿಸುಗಳು
ನೂಡಲ್ಸ್ ಮೊದಲಾದ ಚೀನೀ ಆಹಾರಗಳನ್ನು ತಯಾರಿಸಲು ಮೈದಾಹಿಟ್ಟನ್ನು ರಬ್ಬರಿನಂತೆ ಕಲಸಿ ನೂಲಾಗಿಸಿ ವಿವಿಧ ಖಾರವಾದ ದ್ರವಗಳನ್ನು ಹಾಕಲಾಗಿರುತ್ತದೆ. ನೂಡಲ್ಸ್ ಬೇಯಿಸಲು ಉಪಯೋಗಿಸಿದ ನೀರು ಸಹಾ ಕಲುಷಿತವಾಗಿರಬಹುದು. ನೂಡಲ್ಸ್ ತಯಾರಾದ ಬಳಿಕ ಮಸಾಲೆಗಳ ವಾಸನೆಗೆ ನೊಣ ಮತ್ತು ಇನ್ನೂ ಚಿಕ್ಕ ಕ್ರಿಮಿಗಳು ಧಾಳಿಯಿಡುತ್ತವೆ. ಇವು ಆಹಾರದ ಮೂಲಕ ಹೊಟ್ಟೆ ಸೇರಿ ಆರೋಗ್ಯವನ್ನು ಕೆಡಿಸಬಹುದು.

ಸಾಗರೋತ್ಪನ್ನ ಆಹಾರಗಳು
ಮಳೆಗಾಲ ಬಂತೆಂದರೆ ಮೀನುಗಾರಿಕೆಗೆ ರಜೆ ಘೋಷಿಸಲಾಗುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಮೀನೆಲ್ಲಾ ಹಿಂದಿನ ದಿನಗಳಲ್ಲಿ ಹಿಡಿದು ಶೈತ್ಯೀಕರಿಸಿದ ಮೀನುಗಳು ಮಾತ್ರ. ಸೂಕ್ತವಾಗಿ ಸಂರಕ್ಷಿಸಿರದ ಮೀನು ಶೀಘ್ರವಾಗಿ ಕೊಳೆಯಲು ಆರಂಭವಾಗುತ್ತದೆ. ಮೀನುಗಾರರು ತಮ್ಮ ಮಾತಿನ ಚಾಕಚಕ್ಯತೆಯಿಂದ ಈ ಕೊಳೆಯುತ್ತಿರುವ ಮೀನನ್ನು ಗಿರಾಕಿಗಳಿಗೆ ದಾಟಿಸುತ್ತಾರೆ. ಈ ಮೀನು ತಿಂದವರ ಹೊಟ್ಟೆ ಕೆಡುವ ಅಪಾಯವಿರುತ್ತದೆ. ಕೆಲವೆಡೆ ಮಳೆಗಾಲದಲ್ಲಿಯೂ ಕದ್ದುಮುಚ್ಚಿ ಮೀನು ಹಿಡಿಯುತ್ತಾರೆ. ಆದರೆ ಈ ಸಮಯ ಮೀನುಗಳು ಮರಿಮಾಡುವ ಸಮಯವಾದುದರಿಂದ ಮೀನುಗಳ ಹೊಟ್ಟೆಯಲ್ಲಿ ಮೊಟ್ಟೆಗಳಿರುತ್ತವೆ. ಈ ಮೀನುಗಳನ್ನು ತಿನ್ನುವುದು ಅನಾರೋಗ್ಯಕರ ಎಂದು ಹಿರಿಯರು ತಿಳಿಸುತ್ತಾರೆ. ಅಲ್ಲದೇ ಈ ಮೀನುಗಳಿಗೆ ಗಿರಾಕಿಗಳಿದ್ದರೆ ಕದ್ದು ಹಿಡಿಯುವ ಮೀನುಗಾರರಿಂದ ಸಾಗರದ ಜೀವಿಗಳ ಸಂತತಿಯೇ ಉಡುಗಿ ಹೋಗುವ ಅಪಾಯವಿದೆ.

ಹಣ್ಣಿನ ರಸಗಳು
ಇತರ ವೇಳೆಯಲ್ಲಿ ದೇಹದ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಹಣ್ಣುಗಳ ರಸ ಅತ್ಯುತ್ತಮ ಆಹಾರವಾಗಿದೆ. ಆದರೆ ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಹೆಚ್ಚುವುದರಿಂದ ಹಾಗೂ ಹಣ್ಣುಗಳ ಪೆಟ್ಟಿಗೆಗಳಿಗೆ ವಿವಿಧ ಗೊದ್ದ ಮತ್ತು ಕ್ರಿಮಿಗಳು ಧಾಳಿಯಿಡುವುದರಿಂದ ಹಣ್ಣುಗಳು ಶೀಘ್ರವೇ ಕೊಳೆಯಲಾರಂಭಿಸುತ್ತವೆ. ಹಣ್ಣುಗಳ ಜ್ಯೂಸ್ ಮಾಡುವವರು ಈ ಹಣ್ಣುಗಳ ಕೊಳೆತ ಭಾಗವನ್ನಷ್ಟೇ ನಿವಾರಿಸಿ ಉಳಿದ ಹಣ್ಣುಗಳ ರಸವನ್ನು ಗ್ರಾಹಕರಿಗೆ ನೀಡುತ್ತಾರೆ. ಈ ಹಣ್ಣುಗಳು ಪೂರ್ಣವಾಗಿ ಕ್ರಿಮಿಗಳಿಂದ ಮುಕ್ತವಾಗಿರದ ಕಾರಣ ಆರೋಗ್ಯಕ್ಕೆ ಉತ್ತಮವಲ್ಲ. ಉತ್ತಮ ಮತ್ತು ತಾಜಾ ಹಣ್ಣುಗಳನ್ನು ಖರೀದಿಸಿ ಮನೆಯಲ್ಲಿಯೇ ಜ್ಯೂಸ್ ತಯಾರಿಸಿಕೊಂಡು ಕುಡಿಯುವುದು ಉತ್ತಮವಾಗಿದೆ.



Click it and Unblock the Notifications