For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಅಪಾಯಕಾರಿ ರೋಗಗಳ ಬಗ್ಗೆ ಎಚ್ಚರವಿರಲಿ

By Super
|

ಮಳೆಗಾಲ ಬೇಸಿಗೆಯಲ್ಲಿಯೇ ಶುರುವಾಗಿ ಬಿಟ್ಟಿದೆ. ಹಳೆಯ ಸೇಡನ್ನೆಲ್ಲ ನಮ್ಮ ಮೇಲೆ ತೀರಿಸಿಕೊಳ್ಳುವ ರೀತಿಯಲ್ಲಿ ಮಳೆ ಈಗ ಸುರಿಯುತ್ತಿದೆ. ಜೊತೆಗೆ ಇದು ಅಂತ್ಯವಿಲ್ಲದ ಸಮಸ್ಯೆಗಳಾದ, ಕಾಯಿಲೆಗಳು, ಗುಂಡಿ ತುಂಬಿದ ರಸ್ತೆಗಳು ಮತ್ತು ಅಂತ್ಯವಿಲ್ಲದ ಟ್ರಾಫಿಕ್ ಸಮಸ್ಯೆಗಳನ್ನು ತರುತ್ತಿದೆ. ಗಟ್ಟಿ ಮುಟ್ಟಾದ ಛತ್ರಿ ಮತ್ತು ನಂಬಿಕಸ್ಥ ರೇನ್ ಕೋಟ್ ನಿಮ್ಮನ್ನು ಈ ಮಳೆಯಲ್ಲಿ ನೆನೆಯದಂತೆ ಕಾಪಾಡಬಹುದು.

ಆದರೆ ನಿಮ್ಮ ಮನೆಯವರನ್ನು ಮತ್ತು ಕುಟುಂಬ ಸದಸ್ಯರನ್ನು ಯಾರು ಕಾಪಾಡುತ್ತಾರೆ? ಹೌದು ನೀರು ತುಂಬಿದ ಗುಂಡಿಗಳು ಕಾಯಿಲೆಗಳನ್ನು ಸೃಷ್ಟಿಸುವ ಮತ್ತು ಸೂಕ್ಷ್ಮಾಣು ಜೀವಿಗಳನ್ನು ಉತ್ಪಾದಿಸುವ ಶಾಖೆಗಳಂತೆ ಕಾರ್ಯನಿರ್ವಹಿಸುತ್ತವೆ. ಮಳೆಗಾಲದಲ್ಲಿ ಕಾಯಿಲೆ ಬೀಳದಿರಲು ಇವುಗಳನ್ನು ಪಾಲಿಸಿ

ಈ ಕಾಯಿಲೆಗಳಿಗೆ ಯಾರು ಬೇಕಾದರು ಗುರಿಯಾಗಬಹುದು. ಅದರಲ್ಲಿಯೂ ಮಕ್ಕಳು ಈ ಕಾಯಿಲೆಗಳಿಗೆ ಹೆಚ್ಚು ಗುರಿಯಾಗುತ್ತಾರೆ. ಎಳೆ ಮಕ್ಕಳಿಗೆ ಕಾಯಿಲೆ ಬಂದಾಗ ಹೆಚ್ಚು ಕಾಳಜಿ ವಹಿಸಿ, ಅದನ್ನು ಗುಣಪಡಿಸಲು ಪ್ರಯತ್ನಿಸಿ. ಈ ಕಾಯಿಲೆಗಳು ಬಂದರೆ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಮಾಡುವುದರ ಜೊತೆಗೆ, ಮಕ್ಕಳ ಜೀವಕ್ಕೂ ಸಹ ಅಪಾಯವನ್ನುಂಟು ಮಾಡುತ್ತವೆ. ಆದ್ದರಿಂದ ಇವುಗಳನ್ನು ಉದಾಸೀನ ಮಾಡಬೇಡಿ. ಬನ್ನಿ ಈ ಮಳೆಗಾಲದಲ್ಲಿ ನಿಮ್ಮನ್ನು ಕಾಡಲು ಕಾದು ಕುಳಿತಿರುವ ಕಾಯಿಲೆಗಳು ಯಾವುವು ಎಂಬುದನ್ನು ಒಮ್ಮೆ ನೋಡೋಣ...

ಮಲೇರಿಯಾ

ಮಲೇರಿಯಾ

ವಿಶ್ವದ ಅತ್ಯಂತ ಅಪಾಯಾಕಾರಿ ಕಾಯಿಲೆ, ಮಲೇರಿಯಾ. ಇದು ಪ್ರೊಟೊಜೋವಾನ್ ಪ್ಲಾಸ್ಮೊಡಿಯಂ ಎಸ್‌ಪಿಪಿನಿಂದ ಹರಡುತ್ತದೆ. (ಪಿ.ವಿವಾಕ್ಸ್, ಪಿ.ಪಾಲ್ಸಿಪರಂ, ಪಿ.ಮಲೇರಿಯೆ ಅಥವಾ ಪಿ.ಓವಲ್). ಈ ಕಾಯಿಲೆಯು ಆನೊಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುತ್ತದೆ. ಇದು ರೋಗಗ್ರಸ್ಥ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಪಾಥೊಜೆನ್ ಅನ್ನು ವರ್ಗಾವಣೆ ಮಾಡುತ್ತದೆ.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ಮಲೇರಿಯಾ ಬಂದಾಗ, ಜ್ವರವು ನಿಯಮಿತವಾಗಿ ಕಾಣಿಸಿಕೊಳ್ಳುತ್ತಿರುತ್ತದೆ. ಸಾಮಾನ್ಯವಾಗಿ ಒಂದೇ ಸಮಯದಲ್ಲಿ ಇದು ಕಾಣಿಸಿಕೊಳ್ಳುತ್ತದೆ. ತಲೆನೋವು, ನಾಸಿಯಾ ಮತ್ತು ನಡುಗಿಸುವಂತಹ ಚಳಿ ರೋಗಿಯನ್ನು ಕಾಡುತ್ತದೆ. ಜೊತೆಗೆ ಅವರಿಗೆ ಸ್ನಾಯು ನೋವು ಮತ್ತು ಸುಸ್ತು ಸಹ ಕಾಡುತ್ತದೆ.

ಕಾಲರಾ

ಕಾಲರಾ

ವಿಬ್ರಿಯೊ ಕೊಲೆರೆ ಎಂಬುದು ಪಾಥೊಜೆನ್, ಇದು ಒಂದು ಅಪಾಯಾಕಾರಿ ಕಾಯಿಲೆಯಾಗಿದ್ದು, ಸಣ್ಣ ಕರುಳಿನಲ್ಲಿ ಇದು ಕಾಣಿಸಿಕೊಳ್ಳುತ್ತದೆ. 6-48 ಗಂಟೆಗಳ ಇನ್‍ಕ್ಯುಬೇಷನ್ ಅವಧಿಯಲ್ಲಿ, ಇನ್‌ಫೆಕ್ಷನ್ ಆದ ತಕ್ಷಣ ರೋಗವು ಉಲ್ಬಣಗೊಳ್ಳುತ್ತ ಸಾಗುತ್ತದೆ. ರಸ್ತೆ ಬದಿಯ ಆಹಾರ ಮತ್ತು ನೀರಿನ ಮೂಲಕ ಇದು ಹರಡುತ್ತದೆ. ಕಾಲರಾ ತೀರಾ ಅಪಾಯಕಾರಿ, ಇದು ದೇಹವನ್ನು ರೋಗಗಳ ಗೂಡನ್ನಾಗಿ ಮಾಡುತ್ತದೆ. ಅದರಲ್ಲಿಯೂ ಕಡಿಮೆ ಶುಚಿತ್ವವಿರುವ ಕಡೆ ಇದು ಹೆಚ್ಚು ರೋಗಗಗಳನ್ನು ಉಂಟು ಮಾಡುತ್ತದೆ.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ಇದು ಬಂದ ಮೇಲೆ ರೋಗಿಗೆ ಅತಿ ಹೆಚ್ಚು ಡಯೇರಿಯಾ ಕಾಣಿಸಿಕೊಳ್ಳುತ್ತದೆ. ಮಲವು ದ್ರವರೂಪದಲ್ಲಿರುತ್ತದೆ, ಆದರೆ ನೋವಿರುವುದಿಲ್ಲ. ಯಾವುದೇ ನಾಸಿಯಾ ಮತ್ತು ಪ್ರಯತ್ನವಿಲ್ಲದೆ ವಾಂತಿ ಬರುತ್ತಿರುತ್ತದೆ. ಕೆಲವೇ ಗಂಟೆಗಳಲ್ಲಿ ರೋಗಿಯ ದೇಹದಲ್ಲಿ ನೀರಿನ ಅಂಶವು ಕಡಿಮೆಯಾಗುತ್ತದೆ. ಜೊತೆಗೆ ತೀವ್ರತರನಾಗಿ ತೂಕ ಕಡಿಮೆಯಾಗುತ್ತದೆ ಮತ್ತು ಮೈ-ಕೈನೋವು ತೀವ್ರವಾಗಿ ಭಾದಿಸುತ್ತದೆ.

ಟೈಫಾಯ್ಡ್

ಟೈಫಾಯ್ಡ್

ಈ ರೋಗವು ಬ್ಯಾಕ್ಟೀರಿಯಂ ಸಲ್ಮೊನೆಲ್ಲಾ ಟೈಫಿ ಮತ್ತು ಇನ್ನಿತರ ಹೆಚ್ಚು ಇನ್‌ಫೆಕ್ಷನ್‌ಗಳಿಂದ ಬರುತ್ತದೆ. ಈ ಬ್ಯಾಕ್ಟೀರಿಯಾವು ಮಾನವನ ಕಶ್ಮಲಗಳಲ್ಲಿ ಇರುತ್ತದೆ. ಈ ಕಲ್ಮಶಗಳಿರುವ ಆಹಾರ ಮತ್ತು ನೀರು ಸೇವಿಸುವ ಆರೋಗ್ಯಕರ ವ್ಯಕ್ತಿಯು ಇದಕ್ಕೆ ಸಾಮಾನ್ಯವಾಗಿ ಇದಕ್ಕೆ ಗುರಿಯಾಗುತ್ತಾನೆ (ಇದನ್ನು ಫೇಸಿಯೊ-ಓರಲ್ ರೂಟ್ ಎಂದು ಕರೆಯುತ್ತಾರೆ) ಕೆಲವು ರೋಗಿಗಳಲ್ಲಿ ಈ ಇನ್‌ಫೆಕ್ಷನ್ ಕಾಯಿಲೆ ವಾಸಿಯಾದ ಮೇಲೂ ಅವರ ಮೂತ್ರಕೋಶದಲ್ಲಿ ಈ ಇನ್‍ಫೆಕ್ಷನ್ ಇರುತ್ತದೆ. ಮೂತ್ರದ ಮೂಲಕ ಹೊರ ಬರುವ ಪಾಥೊಜೆನ್ ಮುಂದೆ ಕಾಯಿಲೆ ಕಾರಕವಾಗಿ ವರ್ತಿಸುತ್ತದೆ.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ತುಂಬಾ ದಿನಗಳಿಂದ ಇರುವ ಜ್ವರವು ಐದನೇ ದಿನದಿಂದ ಹೆಚ್ಚಾಗುತ್ತಾ ಹೋಗುತ್ತದೆ. ತಲೆನೋವು ಮತ್ತು ತೀವ್ರತರನಾದ ಹೊಟ್ಟೆನೋವು ಇದರಲ್ಲಿ ಸಾಮಾನ್ಯ.

ಹೆಪಟೈಟಿಸ್ಎ

ಹೆಪಟೈಟಿಸ್ಎ

ಹೆಪಟೈಟಿಸ್ ಎ ಎಂಬುದು ಒಂದು ವೈರಸ್‌ನಿಂದ ಹರಡುವ ಕಾಯಿಲೆಯಾಗಿರುತ್ತದೆ. ಇದು ಸಹ ಫೆಸಿಯೊ-ಓರಲ್ ಮಾರ್ಗದ ಮೂಲಕ ಹರಡುತ್ತದೆ. ಇದು ಒಂದು ಬಗೆಯ ವಿಭಿನ್ನ ರೋಗ. ಆರೋಗ್ಯವಂತ ವ್ಯಕ್ತಿಯು ರೋಗಿಯ ಸಂಪರ್ಕಕ್ಕೆ ಬರುವ ಮೂಲಕ ಈ ಕಾಯಿಲೆ ಹರಡುತ್ತದೆ. ಇದು ಅಂಟು ರೋಗವಾಗಿದ್ದು, ನೊಣಗಳಿಂದ ಇದು ಹರಡುತ್ತದೆ.

ರೋಗ ಲಕ್ಷಣಗಳು

ರೋಗ ಲಕ್ಷಣಗಳು

ರೋಗಿಗಳು ಜ್ವರದ ರೀತಿಯ ಲಕ್ಷಣಗಳನ್ನೆ ಇದರಲ್ಲಿ ತೋರಿಸುತ್ತಾರೆ. ದೇಹದ ಉಷ್ಣಾಂಶವು ತೀರಾ ಹೆಚ್ಚಾಗಿರುತ್ತದೆ. ಜೊತೆಗೆ ತಲೆನೋವು, ಕೀಲು ನೋವುಗಳು ಸಹ ಕಾಡುತ್ತದೆ. ರೋಗಿಯು ಹಸಿವನ್ನು ಕಳೆದುಕೊಳ್ಳುತ್ತಾನೆ ಮತ್ತು ನಾಸಿಯಾ ಹಾಗು ವಾಂತಿ ಅವರಿಗೆ ಹೆಚ್ಚು ಭಾದಿಸುತ್ತದೆ.

English summary

Diseases to be wary of this monsoon

The rain clouds have arrived with a vengeance this year -- bringing with them bottomless potholes, waterlogged roads and endless traffic jams. While a sturdy umbrella and faithful raincoat will keep you warm and dry from the lashing winds and rain, there's another more sinister threat that you need to protect yourself and your family from.
Story first published: Monday, June 8, 2015, 19:16 [IST]
X
Desktop Bottom Promotion