For Quick Alerts
ALLOW NOTIFICATIONS  
For Daily Alerts

ಹಚ್ಚ ಹಸಿರು ಬೀನ್ಸ್‌ನಲ್ಲಿ ಅಡಗಿದೆ ತೂಕ ಇಳಿಸುವ ರಹಸ್ಯ!

By Super
|

ಇತ್ತೀಚೆಗೆ ಸ್ಥೂಲಕಾಯ ಹೆಚ್ಚಿತ್ತಿರುವುದು ಕಾಳಜಿಯ ಸಂಗತಿಯಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಏಕೆಂದರೆ ತೂಕ ಇಳಿಸಲು ಕೈಗೊಳ್ಳುವ ಕ್ರಮಗಳಿಂದ ಪುರುಷರಿಗಿಂತಲೂ ಮಕ್ಕಳ ಮತ್ತು ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಏರುಪೇರಿನಿಂದ ಹತ್ತು ಹಲವು ಬದಲಾವಣೆಯಾಗಬಹುದು. ಬೀನ್ಸ್‌ನಲ್ಲಿರುವ ಕ್ಯಾಲೋರಿಗಳು ಮತ್ತು ಕೊಬ್ಬು ಕಡಿಮೆ ಇದ್ದು ಅವಶ್ಯಕ ವಿಟಮಿನ್ನುಗಳು ಅದರಲ್ಲೂ ವಿಟಮಿನ್ ಕೆ ಹೆಚ್ಚಿನ ಪ್ರಮಾಣದಲ್ಲಿದೆ. ತೂಕ ಇಳಿಸುವ ಭರದಲ್ಲಿ ಮಾಡಬಾರದ 10 ತಪ್ಪುಗಳು

ರಕ್ತದ ಉತ್ಪತ್ತಿಯಲ್ಲಿ ವಿಟಮಿನ್ ಕೆ ಪ್ರಮುಖ ಪಾತ್ರವಹಿಸುವುದರಿಂದ ಮಹಿಳೆಯರಿಗೆ ಈ ಆಹಾರ ಅತ್ಯುತ್ತಮವಾಗಿದೆ. ಇದೇ ಕಾರಣದಿಂದ ಪೋಷಕಾಂಶದಲ್ಲಿ ಕಡಿಮೆಯಾಗದೇ ತೂಕ ಇಳಿಸಲು ಬೀನ್ಸ್ ಅತ್ಯುತ್ತಮ ಆಹಾರವಾಗಿದೆ. ಜೊತೆಗೇ ಬೀನ್ಸ್ ಸೇವನೆ ಹೃದಯಕ್ಕೂ ಒಳ್ಳೆಯದು. ಆದರೆ ಬೀನ್ಸ್ ಸೇವಿಸುವ ಕ್ರಮವನ್ನು ಸರಿಯಾಗಿ ಅನುಸರಿಸಬೇಕು. ಹುರಿದ ಬೀಜಗಳಿಗಿಂತಲೂ ಬೇಯಿಸಿದ ಬೀಜಗಳೇ ಒಳಿತು. ಅದರಲ್ಲೂ ಕುಕ್ಕರ್ ನಲ್ಲಿ ಬೇಯಿಸಿದ ಕಾಳುಗಳಲ್ಲಿ ಪೋಷಕಾಂಶಗಳು ನಷ್ಟವಾಗುವ ಪ್ರಮಾಣ ಅತಿ ಕಡಿಮೆ. ಬೀಜಗಳನ್ನು ಮಾತ್ರವಲ್ಲ, ಹಸಿ ಕೋಡುಗಳನ್ನೂ ತರಕಾರಿಯಂತೆ ಬಳಸುವುದರಿಂದ ಬೀಜಗಳ ಪ್ರಯೋಜನವನ್ನು ಪಡೆಯಬಹುದು. ಬೀನ್ಸ್‌ನ ಇನ್ನೂ ಹಲವು ಮಹತ್ವಗಳನ್ನು ಈ ಕೆಳಗೆ ವಿವರಿಸಲಾಗಿದೆ. ಏನಿದು ಆಶ್ಚರ್ಯ, ಕೇವಲ ಎರಡೇ ವಾರಗಳಲ್ಲಿ ತೂಕ ಇಳಿಸಿಕೊಳ್ಳಬಹುದೇ?

ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ

ಬೀನ್ಸ್‌ನಲ್ಲಿರುವ ನಾರುಗಳು ಅಷ್ಟು ಸುಲಭವಾಗಿ ಜೀರ್ಣವಾಗದಿರುವುದರಿಂದ ಪೂರ್ಣವಾಗಿ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಬೇಗನೇ ಹಸಿವಾಗದೇ ಹೆಚ್ಚು ಹೆಚ್ಚು ತಿನ್ನುವ ಬಯಕೆ ಕುಂಠಿತವಾಗುತ್ತದೆ. ಪರಿಣಾಮವಾಗಿ ತೂಕ ಕಳೆದುಕೊಳ್ಳಲು ಪರೋಕ್ಷವಾಗಿ ಸಹಕರಿಸುತ್ತದೆ.

ಅತಿ ಹೆಚ್ಚಿನ ನಾರು

ಅತಿ ಹೆಚ್ಚಿನ ನಾರು

ಬೀನ್ಸ್ ನಲ್ಲಿರುವ ನಾರನ್ನು ಜೀರ್ಣಿಸಲು ಜೀರ್ಣಾಂಗಗಳಿಗೆ ಹೆಚ್ಚಿನ ಶಕ್ತಿ ಅವಶ್ಯವಿರುವ ಕಾರಣ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ.ತನ್ಮೂಲಕ ಕೊಬ್ಬು ಕಡಿಮೆಯಾಗಿ ತೂಕ ಇಳಿಯುತ್ತದೆ.

ಉತ್ತಮ ಪ್ರಮಾಣದ ಪ್ರೋಟೀನ್ ಲಭ್ಯವಿದೆ

ಉತ್ತಮ ಪ್ರಮಾಣದ ಪ್ರೋಟೀನ್ ಲಭ್ಯವಿದೆ

ಸಾಮಾನ್ಯವಾಗಿ ಪ್ರೋಟೀನುಗಳು ನಮಗೆ ಮಾಂಸಾಹಾರದ ಮೂಲಕ ಹೆಚ್ಚು ಪ್ರಮಾಣದಲ್ಲಿ ದೊರಕುತ್ತದೆ.ಆದರೆ ಜೊತೆಗೇ ಕೊಬ್ಬು ಮತ್ತು ಇತರ ಅನಗತ್ಯ ಪೋಷಕಾಂಶಗಳು ಆಗಾಧ ಪ್ರಮಾಣದಲ್ಲಿ ದೊರಕುವುದರಿಂದ ಮಾಂಸಾಹಾರ ಸೇವನೆಯಿಂದ ತೂಕ ಬೇಗನೇ ಕಡಿಮೆಯಾಗದು, ಬದಲಿಗೆ ಇನ್ನಷ್ಟು ಹೆಚ್ಚುವ ಅಪಾಯವಿದೆ. ಇದರ ಬದಲಿಗೆ ಬೀನ್ಸ್ ಗಳನ್ನು ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಪ್ರಮಾಣದಲ್ಲಿ ಪ್ರೋಟೀನನ್ನೂ ಪಡೆಯಬಹುದು ಹಾಗೂ ಅನಗತ್ಯವಾದ ಕೊಬ್ಬು ಬೆಳೆಯುವುದನ್ನೂ ತಡೆಯಬಹುದು. ಇದರಿಂದಲೂ ದೇಹದ ತೂಕ ಕಡಿಮೆಯಾಗಲು ಸಾಧ್ಯವಾಗುತ್ತದೆ.

ಕಡಿಮೆ ಕ್ಯಾಲೋರಿಗಳು

ಕಡಿಮೆ ಕ್ಯಾಲೋರಿಗಳು

ಸಾಮಾನ್ಯವಾಗಿ ಒಂದು ಪ್ರಮಾಣದ ಇತರ ಆಹಾರಗಳಿಗಿಂತಲೂ ಬೇಯಿಸಿದ ಬೀನ್ಸ್ ನಲ್ಲಿ ಮೂರರ ಒಂದು ಪ್ರಮಾಣದಷ್ಟು ಮಾತ್ರ ಕ್ಯಾಲೋರಿಗಳಿರುತ್ತವೆ. ಇದರಿಂದ ಹಸಿವು ಪೂರ್ಣವಾದರೂ ದೇಹಕ್ಕೆ ಅಗತ್ಯವಾದ ಶಕ್ತಿ ದೊರಕದೇ ಇರುವುದರಿಂದ ಅನಿವಾರ್ಯವಾಗಿ ದೇಹ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಲೇಬೇಕಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಕೊಬ್ಬು ಕರಗಿ ತೂಕ ಇಳಿಯಲು ಸಾಧ್ಯವಾಗುತ್ತದೆ.

ಬೀನ್ಸ್ ನಲ್ಲಿ ಕ್ಯಾಲೋರಿ ಕಡಿಮೆ ಇದ್ದರೂ ಶಕ್ತಿ ಹೆಚ್ಚಿದೆ

ಬೀನ್ಸ್ ನಲ್ಲಿ ಕ್ಯಾಲೋರಿ ಕಡಿಮೆ ಇದ್ದರೂ ಶಕ್ತಿ ಹೆಚ್ಚಿದೆ

ಜೀರ್ಣಕ್ರಿಯೆಯಿಂದ ನಮ್ಮ ರಕ್ತದಲ್ಲಿ ಸೇರುವ ಕ್ಯಾಲೋರಿಗಳಿಗೂ ಪೋಷಕಾಂಶಗಳಿಗೂ ನೇರ ಸಂಬಂಧವಿದೆ. ಕ್ಯಾಲೋರಿ ಕಡಿಮೆ ಇದ್ದರೂ ಪೋಷಕಾಂಶಗಳ ಕಾರಣ ಜೀವಕೋಶಗಳಿಗೆ ಅಗತ್ಯಪ್ರಮಾಣದ ಶಕ್ತಿ ಲಭ್ಯವಾಗಿ ದಿನದ ಚಟುವಟಿಕೆಯಲ್ಲಿ ಯಾವುದೇ ತೊಂದರೆ ಕಂಡುಬರದೇ ಇರುವುದು ಬೀನ್ಸ್‌ನ ಹೆಗ್ಗಳಿಕೆಯಾಗಿದೆ. ಆದ್ದರಿಂದ ಕ್ರೀಡಾಪಟುಗಳು ಮತ್ತು ಅಧಿಕ ದೈಹಿಕ ಶ್ರಮ ಪಡುವವರು ಬೀನ್ಸ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು.

ಮಾಂಸಾಹಾರಿಗಳಿಗೂ ಸೂಕ್ತವಾಗಿದೆ

ಮಾಂಸಾಹಾರಿಗಳಿಗೂ ಸೂಕ್ತವಾಗಿದೆ

ಒಂದು ವೇಳೆ ಮಾಂಸಾಹಾರದಿಂದ ವಿಮುಖರಾಗಲು ಇಚ್ಛಿಸದೇ ತೂಕ ಹೆಚ್ಚಿಸಿಕೊಳ್ಳಲೂ ಇಷ್ಟವಿಲ್ಲದವರಿಗೆ ಬೀನ್ಸ್ ಅತ್ಯುತ್ತಮ ಆಯ್ಕೆಯಾಗಿದೆ.ಇದಕ್ಕಾಗಿ ಸ್ವಲ್ಪ ಪ್ರಮಾಣದಲ್ಲಿ ಕೋಳಿಮಾಂಸವನ್ನು ಹೆಚ್ಚಿನ ಪ್ರಮಾಣದ ಬೀನ್ಸ್ ನ ಜೊತೆ ಸೇವಿಸುವುದರಿಂದ ಎರಡೂ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು.

ಮಧುಮೇಹಿಗಳಿಗೂ ಸೂಕ್ತವಾಗಿದೆ

ಮಧುಮೇಹಿಗಳಿಗೂ ಸೂಕ್ತವಾಗಿದೆ

ಮೊದಲ ವಿಧದ ಮಧುಮೇಹಿಗಳು ಬೀನ್ಸ್ ಅನ್ನು ಆತಂಕವಿಲ್ಲದೇ ಸೇವಿಸಬಹುದು. ಏಕೆಂದರೆ ಬೀನ್ಸ್ ನಲ್ಲಿರುವ ಕರಗುವ ನಾರು ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರಿಂದ ಕಡಿಮೆ ಇನ್ಸುಲಿನ್ ರಕ್ತದಲ್ಲಿ ಸೇರಿಸಿದರೆ ಸಾಕಾಗುತ್ತದೆ. ಬೀನ್ಸ್ ನಲ್ಲಿ ಸಕ್ಕರೆ ಅಂಶ ಅತ್ಯಲ್ಪ ಪ್ರಮಾಣದಲ್ಲಿರುವುದು ಹಾಗೂ ರಕ್ತದ ಸಕ್ಕರೆಯನ್ನು ನಿಯಂತ್ರಿಸುವ ಗುಣಗಳಿಂದ ಮಧುಮೇಹಿಗಳೂ ಸೇವಿಸಬಹುದಾದ ಉತ್ತಮ ಆಹಾರವಾಗಿದೆ.

English summary

Reasons To Eat Beans For Weight Loss

Weight loss is always on the mind of every woman. Nowadays, men too are trying every possible way to lose weight. If you are one of those who wants to cut down on calories, then here are some of the reasons why you should eat beans. take a look at some of the reasons to eat beans for weight loss, it will make your jaws drop.
X
Desktop Bottom Promotion