For Quick Alerts
ALLOW NOTIFICATIONS  
For Daily Alerts

ಋತುಚಕ್ರದ ವೇಳೆ ಮಾಡಬಹುದಾದ 7 ವ್ಯಾಯಾಮಗಳು

By Hemanth P
|

ವ್ಯಾಯಾಮದ ಮೇಲೆ ಮುಟ್ಟಿನ ಪರಿಣಾಮಗಳ ಬಗ್ಗೆ ನಡೆದಿರುವ ಹಲವಾರು ಅಧ್ಯಯನಗಳು ವ್ಯಾಪಕವಾಗಿ ಬದಲಾಗಿರಬಹುದು. ಕೆಲವರು ಇದು ನೆರವಾಗುತ್ತದೆ ಎಂದರೆ, ಮತ್ತೆ ಕೆಲವರು ಇದರಿಂದ ಹಾನಿಯಾಗುತ್ತದೆ ಎನ್ನುತ್ತಾರೆ. ಇದರಿಂದ ಬೇಗನೆ ಗಾಯಾಳುವಾಗುತ್ತಾರೆಂದು ಇನ್ನು ಕೆಲವರು ಹೇಳುತ್ತಾರೆ. ನಿಜಾಂಶವೆಂದರೆ ಋತುಚಕ್ರದ ವೇಳೆ ವ್ಯಾಯಾಮದ ಬಗ್ಗೆ ಇರುವ ಒಂದೇ ಒಂದು ನಿಯಮವೆಂದರೆ ನಿಮ್ಮ ಮನಸ್ಸಿನ ಮಾತು ಕೇಳುವುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ವಯಸ್ಸಾದವರಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು

1. ವಾಕಿಂಗ್

1. ವಾಕಿಂಗ್

ಋತುಚಕ್ರದ ವೇಳೆ ಕಠಿಣ ವ್ಯಾಯಾಮ ಮಾಡುವುದರ ವಿರುದ್ಧವಾಗಿರುವ ತಜ್ಞರು, ವಾಕಿಂಗ್ ನಿಂದ ಗಾಯಾಳು ಅಥವಾ ಅಪಾಯದ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ. ಸ್ನೀಕರ್ ಮತ್ತು ಸನ್ ಬ್ಲಾಕ್ ನ್ನು ಹಾಕಿಕೊಂಡು ರಸ್ತೆಗೆ ಬನ್ನಿ. ವಾಕಿಂಗ್ ನಿಂದ ನಿಮ್ಮ ಕ್ಯಾಲರಿ ನಷ್ಟವಾಗುವುದು ಮಾತ್ರವಲ್ಲದೆ ವ್ಯಾಯಾಮ ಮಾಡಿದ್ದೀರೆಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ನಿಖರ ಕ್ಯಾಲರಿ ಎಣಿಕೆಗೆ ಒತ್ತಡ ಬೇಡ.

2. ಓಡುವುದು

2. ಓಡುವುದು

ನಿಮಗೆ ಜಾಗಿಂಗ್ ಮಾಡಬೇಕೆಂಬ ಭಾವನೆಯಾಗುತ್ತಿದ್ದರೆ ಆಗ ಅದನ್ನು ಮಾಡಿ. ನೀವು ತೀವ್ರವಾಗಿ ಮಾಡುವ ಹೃದಯ ವ್ಯಾಯಾಮದಿಂದಾಗಿ ಬಿಡುಗಡೆಯಾಗುವ ಎಂಡೋರ್ಫಿನ್ ಋತುಚಕ್ರದ ವೇಳೆ ಉಂಟಾಗುವ ಕಿರಿಕಿರಿ ನಿವಾರಿಸಬಹುದು. ಓಡುವ ಮೊದಲು ಅಥವಾ ಬಳಿಕ ಸರಿಯಾಗಿ ನೀರು ಕುಡಿಯಿರಿ. ಋತುಚಕ್ರದ ವೇಳೆ ನೀವು ಬೇಗನೆ ತೇವಾಂಶ ಕಳಕೊಳ್ಳುತ್ತೀರಿ. ಇದು ಸತ್ಯವೋ ಅಥವಾ ಅಲ್ಲವೋ ಎಂದು ತಿಳಿದಿಲ್ಲ. ಸುರಕ್ಷತೆ ದೃಷ್ಟಿಯಿಂದ ನೀವು ನೀರು ಕುಡಿಯುತ್ತಾ ಇರಿ.

3. ಏರೋಬಿಕ್ಸ್

3. ಏರೋಬಿಕ್ಸ್

ಋತುಚಕ್ರದ ಅವಧಿಯಲ್ಲಿ ನೀವು ತುಂಬಾ ಸ್ವಲ್ಪ ಅಸಾಮಾನ್ಯರಾಗುತ್ತೀರಿ. ಏರೋಬಿಕ್ಸ್ ವ್ಯಾಯಾಮವು ಇದಕ್ಕೆ ಒಳ್ಳೆಯದು. ಏರೋಬಿಕ್ಸ್ ತರಗತಿಗಳು ಒತ್ತಡವಿಲ್ಲದ ವಾತಾವರಣದಲ್ಲಿ ನಡೆಸಲಾಗುತ್ತದೆ. ಇದರ ಮುಖ್ಯ ಉದ್ದೇಶವೇ ಮನೋರಂಜನೆ.

4. ನೃತ್ಯ

4. ನೃತ್ಯ

ನೃತ್ಯ ವೇದಿಕೆಯಲ್ಲಿ ಕೈ ಕಾಲುಗಳನ್ನು ಅಲ್ಲಾಡಿಸುವುದು ಸಾಂಪ್ರದಾಯಿಕವಾಗಿ ಮಾಡುವಂತಹ ವ್ಯಾಯಾಮವಲ್ಲವೇ? ಇದು ನಿಮ್ಮ ಹೃದಯ ಬಡಿತ ಹೆಚ್ಚಿಸಿ, ಕ್ಯಾಲರಿ ದಹಿಸುತ್ತದೆ. ಇದು ಅತ್ಯುತ್ತಮ ಆಯ್ಕೆ. ಯಾಕೆಂದರೆ ಇದು ನಿಮಗೆ ವ್ಯಾಯಾಮದಂತಹ ಭಾವನೆ ಮೂಡಿಸದು. ಋತುಚಕ್ರದ ವೇಳೆ ನಿಮ್ಮ ಬಗ್ಗೆ ಶ್ರೇಷ್ಠ ಭಾವನೆ ಮೂಡಲು ಪ್ರೇರಣೆ ಬೇಕಾಗುತ್ತದೆ. ನೃತ್ಯ ಕ್ಲಾಸ್ ಗೆ ಸಂಜೆ ವೇಳೆ ಹೋಗುವುದು ನಿಮಗೆ ಹೆಚ್ಚಿನ ಪ್ರೇರಣೆ ಮತ್ತು ಅದ್ಭುತವನ್ನುಂಟು ಮಾಡುತ್ತದೆ.

5. ಸಿನೆಮಾ ಮಧ್ಯೆ ವ್ಯಾಯಾಮ

5. ಸಿನೆಮಾ ಮಧ್ಯೆ ವ್ಯಾಯಾಮ

ಋತುಚಕ್ರದ ಅವಧಿಯಲ್ಲಿ ನೀವು ಮನೆಯಲ್ಲೇ ಉಳಿದುಕೊಂಡು ಜೀವಮಾನದ ಸಿನೆಮಾಗಳನ್ನು ನೋಡಬಹುದು. ಜಾಹೀರಾತು ಬರುತ್ತಿರುವ ವೇಳೆ ನೀವು ಮರದ ಹಲಗೆಯ ಭಂಗಿಯಲ್ಲಿ ನಿಲ್ಲಬಹುದು.

ನೆಲದ ಮೇಲೆ ಮಲಗಿ. ನಿಮ್ಮ ಕೈಗಳು ಮತ್ತು ಮೊಣಕೈಯನ್ನು ಹೃದಯದ ಕೆಳಗಡೆ ತನ್ನಿ. ಮುಂದೋಳುಗಳು ಮತ್ತು ಕಾಲ್ಬೆರಳುಗಳನ್ನು ಬಳಸಿ ದೇಹವನ್ನು ಎತ್ತಿ ಮತ್ತು ಹಾಗೆ ಇಡಿ. ಇದು ಒಂದು ರೀತಿಯ ಆಳವಾದ ವ್ಯಾಯಾಮ. ಪ್ರತೀ ಸಲ ಜಾಹೀರಾತು ಬರುವಾಗ ಹೀಗೆ ಮಾಡಿ.

6. ಮನೆಯಲ್ಲೇ ವ್ಯಾಯಾಮ

6. ಮನೆಯಲ್ಲೇ ವ್ಯಾಯಾಮ

ಋತುಚಕ್ರದ ವೇಳೆ ನಿಮ್ಮ ಫಿಟ್ ನೆಸ್ ನ್ನು ಸ್ವಲ್ಪವೂ ಕಡೆಗಣನೆ ಮಾಡಬೇಡಿ. ಆದರೆ ಆರಾಮ ಬೇಕಾಗಿದ್ದರೆ ಆಗ ದೇಹದ ಮಾತು ಕೇಳಿ. ಮೇಲಿನ ವ್ಯಾಯಾಮಗಳನ್ನು ಋತುಚಕ್ರದ ವೇಳೆ ಪ್ರಯತ್ನಿಸಬಹುದು.

Read more about: health ಆರೋಗ್ಯ
English summary

7 Best exercises during your period

Studies vary widely regarding menstruation's effects on workouts. Some say it helps, while others say it harms.
Story first published: Monday, January 20, 2014, 10:38 [IST]
X
Desktop Bottom Promotion