For Quick Alerts
ALLOW NOTIFICATIONS  
For Daily Alerts

ಇಳಿಸಿದ ತೂಕವನ್ನು ಕಾಯ್ದುಕೊಳ್ಳಲು 11 ಸುಲಭ ಸಲಹೆಗಳು

|

ತೂಕ ಹೆಚ್ಚಿಸಿಕೊಳ್ಳುವುದಕ್ಕಿಂತ ತೂಕ ಇಳಿಸಿಕೊಳ್ಳುವುದು ತುಂಬಾ ಕಷ್ಟಕರ. ಅದರಲ್ಲೂ ಇಳಿಸಿದ ತೂಕ ಮತ್ತೆ ಏರದಂತೆ ನೋಡಿಕೊಳ್ಳುವುದು ಸವಾಲಿನ ವಿಷಯ. ಇಂದಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಹಲವಾರು ವಿಧಾನಗಳಿವೆ. ಹಲವಾರು ವೃತ್ತಿಪರ ಉದ್ಯಮಗಳಿವೆ.

ಆಯುರ್ವೇದದಿಂದ ಹಿಡಿದು ಅತ್ಯಾಧುನಿಕ ಜಿಮ್ ವರೆಗೆ ವಿವಿಧ ಬೆಲೆಯ, ವಿವಿಧ ರೂಪದ ವಿಧಾನಗಳಿವೆ. ಎಲ್ಲವೂ ಒಂದು ಅವಧಿಯಲ್ಲಿ ತೂಕ ಕಳೆದುಕೊಳ್ಳಲು ಕಾರ್ಯಕ್ರಮ ರೂಪಿಸಿ ಹೆಚ್ಚಿನ ಪಕ್ಷ ಯಶಸ್ವಿಯೂ ಆಗುತ್ತವೆ. ಆದರೆ ಆ ಅವಧಿ ಕಳೆದ ಬಳಿಕ ಇಳಿದ ತೂಕವನ್ನು ಉಳಿಸಿಕೊಳ್ಳಲಾರದೇ ಮತ್ತೆ ಸ್ಥೂಲಕಾಯದತ್ತ ದೇಹ ಹೊರಳುವುದು ಮಾತ್ರ ವಿಪರ್ಯಾಸವಾಗಿದೆ.

ತ್ವರಿತ ತೂಕ ಇಳಿಕೆಗೆ ಹಸಿರು ಚಹಾವನ್ನು ಒಮ್ಮೆ ಪ್ರಯತ್ನಿಸಿ

ತೂಕ ಇಳಿದ ಬಳಿಕ ಅಲ್ಲಿಯೇ ಸ್ಥಿರವಾಗಿರುವಂತೆ ನೋಡಿಕೊಳ್ಳುವುದು ಹಾಗೂ ಮತ್ತೊಮ್ಮೆ ಹೆಚ್ಚದಂತೆ ನೋಡಿಕೊಳ್ಳಲು ಹೆಚ್ಚಿನ ಕಾಳಜಿ ಅಗತ್ಯವಾಗಿದೆ. ಇದಕ್ಕಾಗಿ ನಮ್ಮ ಜೀವನದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಳ್ಳುವುದೂ ಅಗತ್ಯ. ಉತ್ತಮ ಆರೋಗ್ಯಕ್ಕೆ ಹಾಗೂ ಸುದೃಢ ಮೈಕಟ್ಟಿಗೆ ಈ ಮಾರ್ಪಾಡುಗಳ ಜೊತೆಗೇ ಸುಮಾರು ಮೂವತ್ತು ನಿಮಿಷಗಳ ವ್ಯಾಯಾಮವೂ ಅಗತ್ಯ.

ಅಲ್ಲದೇ ತೂಕ ಇಳಿದ ಬಳಿಕ ತೆಗೆದುಕೊಳ್ಳುವ ಆಹಾರದಲ್ಲಿಯೂ ಕೊಂಚ ಬದಲಾವಣೆ ಅಗತ್ಯ. ಯಾವ ಆಹಾರದಲ್ಲಿ ತೂಕ ಹೆಚ್ಚಿಸುವ ಅಂಶಗಳಿವೆಯೋ ಅವುಗಳನ್ನು ಸ್ವೀಕರಿಸದಿರಲು ಅಥವಾ ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸಲು ಮನವನ್ನು ಸಜ್ಜುಗೊಳಿಸುವುದಕ್ಕೆ ಪ್ರಥಮ ಆದ್ಯತೆ. ಇಳಿದ ತೂಕವನ್ನು ಅಲ್ಲಿಯೇ ಉಳಿಸಿಕೊಳ್ಳಲು, ತನ್ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಈ ಕೆಳಗಿನ ಹನ್ನೊಂದು ಸಲಹೆಗಳು ಸಹಕಾರಿಯಾಗಿವೆ.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಅತ್ಯುತ್ತಮ ವ್ಯಾಯಾಮಗಳು

ನಿಯಮಿತವಾಗಿ ನಿಮ್ಮ ತೂಕವನ್ನು ಪರಿಶೀಲಿಸಿ

ನಿಯಮಿತವಾಗಿ ನಿಮ್ಮ ತೂಕವನ್ನು ಪರಿಶೀಲಿಸಿ

ತೂಕ ನೋಡುವ ತಕ್ಕಡಿಯೊಂದನ್ನು ಮನೆಯಲ್ಲಿರಿಸಿ ಪ್ರತಿದಿನ ಅಥವಾ ವಾರಕ್ಕೆ ಮೂರು ಬಾರಿ ದಿನದ ಒಂದೇ ಸಮಯದಲ್ಲಿ ಪರಿಶೀಲಿಸುತ್ತಾ ಇರಿ ಹಾಗೂ ಪ್ರತಿ ಬಾರಿಯೂ ಚಿಕ್ಕ ಪುಸ್ತಕದಲ್ಲಿ ದಾಖಲಿಸಿ. ಇದರಿಂದಾಗಿ ನಿಮ್ಮ ತೂಕ ಹೆಚ್ಚುತ್ತಿದೆಯೇ, ಇಳಿಯುತ್ತಿದೆಯೇ, ಸ್ಥಿರವಾಗಿದೆಯೇ ಎಂದು ಹೋಲಿಸಿ ನೋಡಲು ಅನುಕೂಲವಾಗುತ್ತದೆ. ಈ ಹೋಲಿಕೆಯಿಂದ ನಂತದ ದಿನಗಳಲ್ಲಿ ಆಹಾರ ಮತ್ತು ವ್ಯಾಯಾಮವನ್ನು ಹೆಚ್ಚಿಸಬೇಕೋ ಕಡಿಮೆಗೊಳಿಸಬೇಕೋ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ.

ಪ್ರತಿದಿನ ಕನಿಷ್ಟ ಮೂವತ್ತು ನಿಮಿಷಗಳ ವ್ಯಾಯಾಮ ಅಗತ್ಯ

ಪ್ರತಿದಿನ ಕನಿಷ್ಟ ಮೂವತ್ತು ನಿಮಿಷಗಳ ವ್ಯಾಯಾಮ ಅಗತ್ಯ

ತೂಕ ಕಳೆದುಕೊಳ್ಳಲು ಜಿಮ್ ಅಥವಾ ಬೇರಾವುದೋ ಸಂಸ್ಥೆಗೆ ನೀಡಿದ್ದ ಅವಧಿ ಮುಗಿದುಹೋದರೂ ಪ್ರತಿದಿನ ಕನಿಷ್ಟ ಮೂವತ್ತು ನಿಮಿಷಗಳ ವ್ಯಾಯಾಮ ಮಾಡುತ್ತಲಿರಿ. ಜಿಮ್ ಹೋಗಲು ಸಾಧ್ಯವಾಗದಿದ್ದರೆ ಮನೆಯಲ್ಲಿಯೇ ಲಭ್ಯವಿರುವ ಸುಲಭ ಸಲಕರಣೆಗಳ ಮೂಲಕ ಸಾಧ್ಯವಾದ ವ್ಯಾಯಾಮಗಳನ್ನು ಮಾಡುತ್ತಿರಿ. ಯೋಗ, ನಿಧಾನಗತಿಯ ಓಟ (ಜಾಗಿಂಗ್), ಈಜು ಮೊದಲಾದವುಗಳನ್ನು ಆಯ್ದುಕೊಳ್ಳಬಹುದು.

ಈಗಿನ ತೂಕಕ್ಕೆ ಅನುಗುಣವಾದ ದಿರಿಸುಗಳನ್ನು ಧರಿಸಿ

ಈಗಿನ ತೂಕಕ್ಕೆ ಅನುಗುಣವಾದ ದಿರಿಸುಗಳನ್ನು ಧರಿಸಿ

ತೂಕ ಕಳೆದುಕೊಂಡ ಬಳಿಕ ಹಳೆಯ ದಿರಿಸುಗಳಿಗೆ ವಿದಾಯ ಹೇಳಿ ಇಂದಿನ ತೂಕಕ್ಕೆ ಅನುಗುಣವಾದ ದಿರಿಸುಗಳನ್ನೇ ತೊಡಲು ಪ್ರಾರಂಭಿಸಿ. ಹಳೆಯ, ದೊಗಲೆ ಬಟ್ಟೆಗಳನ್ನು ಧರಿಸುವುದರಿಂದ ಹಿಂದಿನ ಸ್ಥೂಲಕಾಯ ನೆನಪಿಗೆ ಬಂದು ತೂಕ ಹೆಚ್ಚಲು ಪ್ರೇರಣೆ ನೀಡಲೂಬಹುದು.

ಮನೆಯ ಊಟ ಅಮೃತ

ಮನೆಯ ಊಟ ಅಮೃತ

ಅತ್ಯಂತ ಅನಿವಾರ್ಯವಾದ ಕಾರಣಗಳಲ್ಲದೇ ಮನೆಯ ಊಟವನ್ನೇ ಮಾಡಿ. ನಿಮಗೆ ಕಡಿಮೆ ಕ್ಯಾಲೋರಿಯ ಊಟ ಅಗತ್ಯ ಎಂದು ಹೋಟೆಲಿನ ಬಾಣಸಿಗನಿಗೆ ಗೊತ್ತಿರುವುದುದಿಲ್ಲವಲ್ಲ, ಹಾಗಾಗಿ ಆ ಊಟದಲ್ಲಿ ತೂಕ ಹೆಚ್ಚಿಸುವ ಅಂಶಗಳು ಹೆಚ್ಚೇ ಇರುತ್ತವೆ. ಮನೆಯ ಊಟ, ಅದರಲ್ಲೂ ನೀವೇ ಅಡುಗೆ ಮಾಡಿ ಉಣ್ಣುವಿರಾದರೆ ಆ ಆಹಾರ ಸ್ವಾದಿಷ್ಟವೂ, ಪೌಷ್ಟಿಕವೂ, ತೂಕ ಹೆಚ್ಚಿಸದಂತಹದ್ದೂ ಆಗಿರುತ್ತದೆ.

ಟೀವಿಯ ಗುಲಾಮರಾಗಬೇಡಿ

ಟೀವಿಯ ಗುಲಾಮರಾಗಬೇಡಿ

ಇಂದು ದಿನದ ಇಪ್ಪತ್ತನಾಲ್ಕೂ ಘಂಟೆ ಟೀವಿಯಲ್ಲಿ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತದೆ. ನಿಮ್ಮ ನೆಚ್ಚಿನ ಕಾರ್ಯಕ್ರಮ ನೋಡುತ್ತಾ ಹೆಚ್ಚಿನ ಸಮಯವನ್ನು ಟೀವಿಯ ಮುಂದೆ ಕಳೆಯುವುದರಿಂದ ದೇಹದ ಕೊಬ್ಬು ಕರಗದೇ ಮತ್ತೆ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ. ಆದುದರಿಂದ ಟೀವಿಯ ಗುಲಾಮರಾಗದೇ ದೈಹಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೊಬ್ಬು ಕರಗಿಸಿ ತೂಕ ಉಳಿಸಿಕೊಳ್ಳಿ.

ಮಿತಿಯೊಳಗೆ ಏನನ್ನು ಬೇಕಾದರೂ ತಿನ್ನಿ

ಮಿತಿಯೊಳಗೆ ಏನನ್ನು ಬೇಕಾದರೂ ತಿನ್ನಿ

ತೂಕ ಇಳಿಸುವಾಗ ತಿಲಾಂಜಲಿ ಇತ್ತಿದ್ದ ಹಲವು ತಿಂಡಿ ತಿನಿಸುಗಳು ಕಣ್ಣಿಗೆ ಕಂಡಾಗ ಭುಗಿಲೇಳುವ ಜಿಹ್ವಾಚಾಪಲ್ಯವನ್ನು ದಮನಿಸುವುದು ತುಂಬಾ ಕಷ್ಟ. ಆದರೆ ತಿನ್ನದೇ ಇದ್ದು ಅನ್ಯಮನಸ್ಕರಾಗುವುದಕ್ಕಿಂತ ಚಿಕ್ಕ ಪರಿಮಾಣದಲ್ಲಿ ಸೇವಿಸಿ ತೂಕವನ್ನು ಮಿತಿಯೊಳಗೆ ಇರಿಸಿಕೊಳ್ಳುವುದು ಜಾಣತನ.

 ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ

ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ

ಸಿದ್ಧರೂಪದಲ್ಲಿ, ಸುಲಭವಾಗಿ ಸಿಗುತ್ತದೆ ಎಂಬ ಕಾರಣಕ್ಕೆ ಲಭ್ಯವಿರುವ ಜಂಕ್ ಆಹಾರಗಳಿಗೆ ತಿಲಾಂಜಲಿ ನೀಡಿ. ಇವುಗಳಲ್ಲಿ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಗಳು ಇರುವುದಿಲ್ಲ ಹಾಗೂ ಅನಗತ್ಯವಾದ ಕೊಬ್ಬು ಹೆಚ್ಚಿರುವುದರಿಂದ ಇಂತಹ ಆಹಾರಗಳನ್ನು ಪ್ರಚಾರ ಮಾಡುವ ಜಾಹೀರಾತುಗಳಿಗೆ, ಪೊಳ್ಳು ಪ್ರತಿಷ್ಠೆಗೆ ಮರುಳಾಗದೇ ಮನೆಯ ಊಟವನ್ನು ಆಸ್ವಾದಿಸಿ.

ದೈನಂದಿನ ವ್ಯಾಯಾಮಗಳನ್ನು ಸರಿಯಾಗಿ ಮಾಡಿ

ದೈನಂದಿನ ವ್ಯಾಯಾಮಗಳನ್ನು ಸರಿಯಾಗಿ ಮಾಡಿ

ಪ್ರತಿದಿನ ತೂಕ ನೋಡಿಕೊಂಡು ಏನೂ ವ್ಯಾಯಾಮ ಮಾಡದೇ ಬಳಿಕ ವಾರದ ಕೊನೆಗೆ ಧಿಡೀರನೇ ಏರಿದ ಆ ತೂಕವನ್ನು ನೋಡಿ ಬೆಚ್ಚಿಬಿದ್ದು ಒಂದು ವಾರದ ವ್ಯಾಯಾಮವನ್ನು ಒಂದು ದಿನಕ್ಕೇ ಮಾಡಿ ಮುಗಿಸುವಂತಹ ಯಾವುದೇ ಪ್ರಯತ್ನ ಮಾಡಬೇಡಿ. ತೂಕ ಏರಲಿ ಬಳಿಕ ನೋಡಿದರಾಯಿತು ಎಂಬ ಉದಾಸೀನಭಾವವೂ ಬೇಡ. ನಿಗದಿತ ದೈನಂದಿನ ವ್ಯಾಯಾಮಗಳನ್ನು ಅಂದಂದೇ ಪೂರೈಸಿ.

ಪ್ರತಿದಿನದ ಆಹಾರದ ಪ್ರಮಾಣ ಕಡಿಮೆ ಇರಲಿ

ಪ್ರತಿದಿನದ ಆಹಾರದ ಪ್ರಮಾಣ ಕಡಿಮೆ ಇರಲಿ

ತೂಕ ಕಳೆದುಕೊಳ್ಳುವಾಗ ಸೇವಿಸುತ್ತಿದ್ದ ಕಡಿಮೆ ಪ್ರಮಾಣದ ಆಹಾರವನ್ನೇ ಈಗಲೂ ಮುಂದುವರೆಸಿ. ಈ ವಿಧಾನದಿಂದ ದೇಹಕ್ಕೆ ಹೆಚ್ಚಿನ ಹೊರೆಯನ್ನು ಹೊರುವುದು ತಪ್ಪಿ ಚಯಾಪಚಯ ಕ್ರಿಯೆಯಲ್ಲಿ ಉತ್ತಮ ಸುಧಾರಣೆ ಕಂಡುಬರುತ್ತದೆ.

ಪ್ರತಿದಿನ ಕುಡಿಯುತ್ತಿದ್ದ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಪ್ರತಿದಿನ ಕುಡಿಯುತ್ತಿದ್ದ ಚಹಾ ಬದಲಿಗೆ ಹಸಿರು ಚಹಾ ಸೇವಿಸಿ

ಆರೋಗ್ಯಕರವಾದ ಹಸಿರು ಚಹಾದಲ್ಲಿ ಕೊಬ್ಬು ಕರಗಿಸುವ ಹಲವು ಆಂಟಿ ಆಕ್ಸಿಡೆಂಟುಗಳಿದ್ದು ಕೊಬ್ಬು ಕರಗಿಸಲು ಸಹಾಯ ಮಾಡುತ್ತವೆ. ಕಪ್ಪು ಚಹಾದಲ್ಲಿ ಹಾಲು ಸೇರಿಸುವ ಕಾರಣ ಅರಿವಿಲ್ಲದೇ ಮತ್ತೆ ಕೊಬ್ಬು ಸಂಗ್ರಹವಾಗುತ್ತದೆ. ಅದರ ಬದಲಿಗೆ ಹಸಿರು ಚಹಾ ಸೇವಿಸುವುದರಿಂದ ಹೊಸತಾಗಿ ಕೊಬ್ಬು ಸೇರದಂತೆ ಹಾಗೂ ಈಗಾಗಲೇ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಾಧ್ಯವಾಗುತ್ತದೆ.

ಆಹಾರ-ವ್ಯಾಯಾಮದಲ್ಲಿ ಸಮತೋಲನವಿರಲಿ

ಆಹಾರ-ವ್ಯಾಯಾಮದಲ್ಲಿ ಸಮತೋಲನವಿರಲಿ

ಪ್ರತಿದಿನದ ಚಟುವಟಿಕೆಗಳಲ್ಲಿ ಆಹಾರ ಮತ್ತು ವ್ಯಾಯಾಮದಲ್ಲಿ ಸಮತೋಲನವಿರಲಿ. ಅಂದರೆ ಒಂದು ವೇಳೆ ಹೆಚ್ಚಿನ ಆಹಾರ ತೆಗೆದುಕೊಂಡಲ್ಲಿ ಹೆಚ್ಚಿನ ವ್ಯಾಯಾಮ ಹಾಗೂ ನಿಯಮಿತ ಆಹಾರ ತೆಗೆದುಕೊಂಡರೆ ನಿಯಮಿತ ವ್ಯಾಯಾಮ ಇರಲಿ. ಸಾಧ್ಯವಾದಷ್ಟು ಆರೋಗ್ಯಕರ ಆಹಾರಗಳನ್ನೇ ಸೇವಿಸಿ. ದೇಹದ ತೂಕ ಒಂದೇ ತೆರನಾಗಿದ್ದು ಉತ್ತಮ ಆರೋಗ್ಯ, ಸುಖಕರ ಬಾಳು ನಿಮ್ಮದಾಗಲಿ.

English summary

11 Ways To Maintain Your Weight Loss

Most people would agree that losing weight is one of the toughest things in the world to do. However, maintaining your weight after you have lost it is much tougher than the process of losing weight. Here are some the best ways to maintain your weight loss after you have slimmed down.
X
Desktop Bottom Promotion