For Quick Alerts
ALLOW NOTIFICATIONS  
For Daily Alerts

ಪುರುಷರೇ, ತಡರಾತ್ರಿವರೆಗಿನ ಕೆಲಸ ಒಳ್ಳೆಯದಲ್ಲ

By Super
|

ಇಂದಿನ ಆಧುನಿಕ ಯುಗದಲ್ಲಿ ನಾವೆಲ್ಲರು ವಿಪರೀತವಾದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿರುತ್ತೇವೆ. ಹಲವರಿಗೆ ಇದರ ಪರಿಣಾಮವಾಗಿ ತಡರಾತ್ರಿಯವರೆಗು ಕೆಲಸ ಮಾಡುವ ಅನಿವಾರ್ಯತೆ ಎದುರಾಗಿರುತ್ತದೆ. ತಡರಾತ್ರಿಯವರೆಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ನಿರ್ವಹಿಸುವ ಇವರಲ್ಲಿ ಹಲವಾರು ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಏಕೆಂದರೆ ಹಲವಾರು ಜನ ತಡ ರಾತ್ರಿಯವರೆಗು ಕೆಲಸ ಮಾಡಬೇಕೆಂದರೆ ಕೆಫೀನ್ ನಂತಹ ಪದಾರ್ಥಗಳನ್ನು ಸೇವಿಸಿ ಕೆಲಸ ಮಾಡುತ್ತಾರೆ. ಹಾಗಾಗಿ ಅವರ ಆರೋಗ್ಯವು ಕೆಡುವುದರಲ್ಲಿ ಸಂಶಯವಿಲ್ಲ.

ನಿರಂತರವಾಗಿ ತಡ ರಾತ್ರಿಯವರೆಗು ಕೆಲಸ ಮಾಡುವವರಲ್ಲಿ ನಿದ್ರಾಹೀನತೆಯ ಸಮಸ್ಯೆ ತಲೆದೋರುತ್ತದೆ. ಇದರಿಂದಾಗಿ ಹೃದಯಾಘಾತ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ. ಇದರ ಜೊತೆಗೆ ಕಿರು ಅವಧಿ ಮತ್ತು ಧೀರ್ಘ ಅವಧಿಯ ಆರೋಗ್ಯದ ಸಮಸ್ಯೆಗಳು ತಲೆದೋರುತ್ತವೆ. ಇದರಿಂದಾಗಿ ಕಿರು ಅವಧಿಯಲ್ಲಿ ಜಠರದಲ್ಲಿ ಸಮಸ್ಯೆಗಳು, ವಾಂತಿ, ಡಯೋರಿಯಾ, ಮಲಬದ್ಧತೆ ಮತ್ತು ಎದೆ ಉರಿ, ಇನ್ಸೋಮ್ನಿಯಾ ಇತ್ಯಾದಿ ಸಮಸ್ಯೆಗಳು ಕಂಡು ಬರುತ್ತವೆ. ಧೀರ್ಘ ಅವಧಿಯಲ್ಲಿ ಹೃದ್ರೋಗ ಸಮಸ್ಯೆ, ಮಧುಮೇಹ, ಮೆಟಬಲಿಕ್ ಸಿಂಡ್ರೋಮ್, ಸ್ಥೂಲ ಕಾಯ, ಸಂತಾನ ಹೀನತೆಯ ಸಮಸ್ಯೆಗಳನ್ನು ಇದು ಉಂಟು ಮಾಡುತ್ತದೆ.

ಹಾಗಾಗಿ ನಮ್ಮ ಜೀವನ ಶೈಲಿಯಲ್ಲಿ ನಾವು ಸದಾ ಸಮತೋಲನವನ್ನು ಕಾಪಾಡಿಕೊಳ್ಳುವುದು ಉತ್ತಮ. ನಾವು ಜಗತ್ತಿನಲ್ಲಿ ಶಾಶ್ವತವಾಗಿ ಬದುಕುವುದಿಲ್ಲ. ಆದರೂ ಬದುಕಿದಷ್ಟು ಕಾಲ ಉತ್ತಮ ಆರೋಗ್ಯದಿಂದ ಬದುಕುವುದು ಒಳ್ಳೆಯದಲ್ಲವೇ? ಹಾಗಾಗಿ ನಮ್ಮ ಜೀವನ ಶೈಲಿ ಮತ್ತು ಕೆಲಸ ಕಾರ್ಯಗಳ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾದುದು ಅತ್ಯಾವಶ್ಯಕ. ಯಾವುದೇ ಕಾರಣಕ್ಕು ಆರೋಗ್ಯವೇ ಮಹಾಭಾಗ್ಯವೆಂಬುದನ್ನು ಮರೆಯಬೇಡಿ.

Health Problems In Men Who Work Till Late

ಹೀಗಾಗಿ ನಾವು ಇಲ್ಲಿ ನಿಮಗಾಗಿ ಕೆಲವು ವಿಷಯಗಳನ್ನು ಇಲ್ಲಿ ನೀಡಿದ್ದೇವೆ ಓದಿ ಮನದಟ್ಟು ಮಾಡಿಕೊಳ್ಳಿ.

1.ಉದ್ದೀಪಕಗಳ ಮೇಲೆ ಅವಲಂಬನೆ
ತಡ ರಾತ್ರಿಯವರೆಗು ಕೆಲಸ ಮಾಡುವವರು ಉದ್ದೀಪಕಗಳ ಮೇಲೆ ಹೆಚ್ಚು ಅವಲಂಬನೆಯಾಗುತ್ತಾರೆ. ಅದು ಕಾಫೀ, ಸಿಗರೇಟ್, ಮುಂತಾದವು ಇರಬಹುದು. ಇವುಗಳೆಲ್ಲವು ಆರೋಗ್ಯಕ್ಕೆ ಮಾರಕ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ.

2. ಗ್ಯಾಸ್ಟ್ರೋಇಂಟಿಸ್ಟಿನಲ್ ಡಿಸಾರ್ಡರ್
ಅತಿಯಾಗಿ ನಿದ್ದೆ ಕೆಡುವುದರಿಂದ ಡಯೋರಿಯಾ, ಮಲಬದ್ಧತೆ ಮತ್ತು ಎದೆ ಉರಿಗಳಂತಹ ಗ್ಯಾಸ್ಟ್ರೋಇಂಟಿಸ್ಟಿನಲ್ ಡಿಸಾರ್ಡರುಗಳು ಕಂಡು ಬರುತ್ತವೆ. ಅದರಲ್ಲೂ ನೀರು ಹೆಚ್ಚಾಗಿ ಸೇವಿಸದಿದ್ದರೆ ಇವುಗಳು ಮುಂದೆ ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ.

3. ಇನ್ಸೋಮ್ನಿಯಾ
ತಡರಾತ್ರಿಯವರೆಗು ಗಂಡಸರು ಕೆಲಸ ಮಾಡುತ್ತಿದ್ದರೆ ಅವರಿಗೆ ಬೇಕಾದಷ್ಟು ನಿದ್ದೆಯನ್ನು ಅವರು ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರಿಗೆ ನಿದ್ರಾಹೀನತೆಯ ಸಮಸ್ಯೆ ತಲೆದೋರುತ್ತದೆ. ಇದರಿಂದಾಗಿ ಅವರಿಗೆ ಇನ್ಸೋಮ್ನಿಯಾ ಬರುತ್ತದೆ. ಇದು ನಿದ್ರಾಹೀನತೆಯ ಭಯಾನಕ ಸಮಸ್ಯೆಯನ್ನುಂಟು ಮಾಡುವ ಕಾಯಿಲೆಯಾಗಿದೆ.

4. ಹೃದಯ ಸಂಬಂಧಿ ಕಾಯಿಲೆಗಳು
ಹಲವಾರು ಹೃದಯ ಸಂಬಂಧಿ ಕಾಯಿಲೆಗಳಿಗೆ ಮೂಲ ಕಾರಣ ತಡ ರಾತ್ರಿಯವರೆಗು ಕೆಲಸ ಮಾಡುವುದೇ ಆಗಿದೆ. ಹೃದ್ರೋಗವು ಈ ದಿನಗಳಲ್ಲಿ ಸಾಮಾನ್ಯ. ಆದರೂ ನಿರಂತರವಾಗಿ ತಡರಾತ್ರಿಯವರೆಗು ಕೆಲಸ ಮಾಡುವವರಲ್ಲಿ ಹೃದ್ರೋಗವು ಹೆಚ್ಚಾಗಿ ಕಂಡು ಬರುತ್ತದೆ. ಹಾಗಾಗಿ ತಡರಾತ್ರಿ ಕೆಲಸ ಮಾಡುವ ಮುನ್ನ ಒಮ್ಮೆ ಯೋಚಿಸಿ.

5. ಮಧುಮೇಹ
ಮಧುಮೇಹವು ತಡರಾತ್ರಿಯವರೆಗು ಕೆಲಸ ಮಾಡುವವರಲ್ಲಿ ಕಂಡು ಬರುವ ಮತ್ತೊಂದು ಸಮಸ್ಯೆಯಾಗಿರುತ್ತದೆ. ಇದಕ್ಕೆ ಕಾರಣ ಆಹಾರ ವಿಚಾರಗಳಲ್ಲಿ ಉದಾಸೀನ ತೋರುವ ಇವರ ಮನೋಭಾವ. ಇದರಿಂದಾಗಿ ಅವರಲ್ಲಿ ಕಂಡು ಬರುವ ಅಧಿಕ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗುವುದು ಮತ್ತು ಅನಾರೋಗ್ಯಕಾರಿ ಕೊಲೆಸ್ಟ್ರಾಲ್ ಅಧಿಕಗೊಂಡು ಮಧುಮೇಹವನ್ನುಂಟು ಮಾಡುತ್ತದೆ.

6. ಸ್ಥೂಲ ಕಾಯ
ನಿರಂತರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಸ್ಥೂಲ ಕಾಯ ಬರುತ್ತದೆ ಎಂದು ಅಧ್ಯಯನಗಳು ದೃಢಪಡಿಸಿವೆ. ಏಕೆಂದರೆ ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವವರು ಆಹಾರ ವಿಚಾರಗಳ ವಿಷಯದಲ್ಲಿ ಅಂತಹ ಮುತುವರ್ಜಿಯನ್ನು ವಹಿಸುವುದಿಲ್ಲ. ಇದರಿಂದಾಗಿ ನಮ್ಮ ದೇಹದಲ್ಲಿನ ಹಾರ್ಮೋನುಗಳ ಸಮತೋಲನ ತಪ್ಪಿ ಸ್ಥೂಲಕಾಯವು ಬರುತ್ತದೆ.

7. ಖಿನ್ನತೆ ಮತ್ತು ಮೂಡ್ ಡಿಸಾರ್ಡರ್
ಕೆಲವೊಮ್ಮೆ ತಡ ರಾತ್ರಿಯವರೆಗು ಕೆಲಸ ಮಾಡುವವರು ಖಿನ್ನತೆ ಮತ್ತು ಮೂಡ್ ಡಿಸಾರ್ಡರಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಅವರಲ್ಲಿ ಉದ್ವಿಗ್ನತೆ ಅಧಿಕವಾಗಿರುತ್ತದೆ. ಈ ತಡರಾತ್ರಿಯವರೆಗು ಕೆಲಸ ಮಾಡುವವರಲ್ಲಿನ ಮೆದುಳಿನಲ್ಲಿ ಸೆರೊಟೊನಿನ್ ಎಂಬ ರಾಸಾಯನಿಕವು ಕಡಿಮೆ ಇರುತ್ತದೆ. ಇದು ನಮ್ಮ ಮೂಡಿನ ಮೇಲೆ ಪ್ರಭಾವ ಬೀರುತ್ತದೆ.

8. ಸಂತಾನ ಶಕ್ತಿಯ ಮೇಲೆ ಪ್ರಭಾವ ಬೀರುತ್ತದೆ.
ತಡರಾತ್ರಿಯವರೆಗು ಕೆಲಸ ಮಾಡುವುದರಿಂದ ಸಂತಾನ ಶಕ್ತಿಯ ಮೇಲೆ ಖಂಡಿತವಾಗಿ ಪ್ರಭಾವ ಬೀರುತ್ತದೆ. ಅದರಲ್ಲೂ ಸಂತಾನ ಹೀನತೆ, ಲಿಂಗವು ನಿಮಿರುವಿಕೆಯಲ್ಲಿನ ನ್ಯೂನತೆಗಳು, ವೀರ್ಯಾಣುಗಳ ಕೊರತೆ ಮತ್ತು ವೀರ್ಯದ ಪ್ರಮಾಣದಲ್ಲಿ ಕಡಿಮೆಯಾಗುವುದು ಹೀಗೆ ಹಲವಾರು ಸಮಸ್ಯೆಗಳು ಕಂಡುಬರುತ್ತವೆ. ತಡ ರಾತ್ರಿಯವರೆಗು ಕೆಲಸ ಮಾಡುವವರು ನಿಕೋಟಿನ್ ಮತ್ತು ಕೆಫೀನ್ನಂಗತಹ ಪದಾರ್ಥಗಳನ್ನು ಸೇವಿಸುವ ಕಾರಣವಾಗಿ ಅವರಲ್ಲಿ ಲೈಂಗಿಕ ಸಾಮರ್ಥ್ಯ ಮತ್ತು ಸಂತಾನ ಶಕ್ತಿಯ ಸಮಸ್ಯೆಗಳು ತಲೆದೋರುತ್ತವೆ.

English summary

Health Problems In Men Who Work Till Late

There a lot of health problems and risks involved in working late on regular basis. Most men tend to push that extra hour by taking help of un-natural methods like caffeine to keep going
X
Desktop Bottom Promotion