For Quick Alerts
ALLOW NOTIFICATIONS  
For Daily Alerts

ಡಾರ್ಕ್ ಚಾಕಲೇಟ್ ನಲ್ಲಿರುವ ಗುಣಗಳು

By Hema
|

ಚಾಕಲೇಟ್ ಎಂದರೆ ಎಲ್ಲರಿಗೂ ಇಷ್ಟ ಆದರೆ ಚಾಕಲೇಟ್ ತಿನ್ನುವುದರಿಂದ ಹಲ್ಲು ಹುಳುಕಾಗುತ್ತದೆ ಅರೋಗ್ಯ ಕೆಡುತ್ತದೆ ಇದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬ ತಪ್ಪು ಕಲ್ಪನೆ ಎಲ್ಲರಲ್ಲಿಯೂ ಇರುತ್ತದೆ.ಆದರೆ ಡಾರ್ಕ್ ಚಾಕಲೇಟ್ ತಿನ್ನುವುದರಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನವಿದೆ ಎಂಬುದನ್ನು ಸಂಶೋಧನೆಗಳು ಕಂಡು ಹಿಡಿದಿವೆ.ಚಾಕಲೇಟ್ ಉಲ್ಲಾಸ ನೀಡಿ ಸಂತೋಷ ಹೆಚ್ಚಿಸುತ್ತದೆ ಎನ್ನಲಾಗುತ್ತದೆ.

ಡಾರ್ಕ್ ಚಾಕಲೇಟ್ ನಲ್ಲಿರುವ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಧನಾತ್ಮಕ ಪರಿಣಾಮವನ್ನು ನೀಡುತ್ತದೆ. ಕೋಕೋ ಬೀಜದಿಂದ ತಯಾರಿಸಲಾಗುವ ಈ ಚಾಕಲೇಟ್ ಭೂಮಿಯ ಮೇಲಿರುವ ಉತ್ತಮ ಉತ್ಕರ್ಷಣ ನಿರೋಧಕವಾಗಿದೆ.

ಅಧ್ಯಯನದ ಪ್ರಕಾರ ಡಾರ್ಕ್ ಚಾಕಲೇಟ್ ಹೃದಯ ಸಂಬಂಧಿ ಕಾಯಿಲೆಗಳನ್ನು ತಪ್ಪಿಸುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ.ಇತ್ತೀಚಿಗೆ ಡಾರ್ಕ್ ಚಾಕಲೇಟ್ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ತಿಳಿದು ಬಂದಿದೆ. ಅದರಿಂದ ಆಗುವ ಅನುಕೂಲಗಳನ್ನು ಈ ಕೆಳಗೆ ನೀಡಲಾಗಿದೆ.

ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಡಾರ್ಕ್ ಚಾಕೊಲೇಟ್ ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಅಧ್ಯಯನದ ಪ್ರಕಾರ ವಾರದಲ್ಲಿ 2- 3 ಬಾರಿ ಸ್ವಲ್ಪ ಪ್ರಮಾಣದಲ್ಲಿ ಡಾರ್ಕ್ ಚಾಕಲೇಟ್ ತಿನ್ನುವುದರಿಂದ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.ಡಾರ್ಕ್ ಚಾಕೊಲೇಟ್ ರಕ್ತದ ಹರಿವನ್ನು ಸುಗಮಗೊಳಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಡಾರ್ಕ್ ಚಾಕಲೇಟ್ ತಿನ್ನುವುದರಿಂದ ಆರ್ಟೆರಿಯೊಸೆಲ್ರಾಸಿಸ್ (ಅಪಧಮನಿಗಳು ಗಟ್ಟಿಯಾಗುವಿಕೆ) ತಡೆಗಟ್ಟಬಹುದು.

ಡಾರ್ಕ್ ಚಾಕಲೇಟ್ ಮೆದುಳಿಗೆ ಒಳ್ಳೆಯದು

ಡಾರ್ಕ್ ಚಾಕಲೇಟ್ ಮೆದುಳಿಗೆ ಒಳ್ಳೆಯದು

ಡಾರ್ಕ್ ಚಾಕಲೇಟ್ ಮೆದುಳಿಗೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಆದ್ದರಿಂದ ಇದು ಮೆದುಳನ್ನು ಚುರುಕಾಗಿಸುತ್ತದೆ.ಜೊತೆಗೆ ಇದು ಪಾರ್ಶ್ವವಾಯು ಬರುವುದನ್ನು ತಡೆಯುವ ಗುಣವನ್ನು ಹೊಂದಿದೆ.

ಡಾರ್ಕ್ ಚಾಕಲೇಟ್ ಹಲವಾರು ರಾಸಾಯನಿಕ ಸಂಯುಕ್ತಗಳನ್ನು ಹೊಂದಿದ್ದು ಭಾವನೆ ಮತ್ತು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.ಚಾಕಲೇಟ್ ನಲ್ಲಿ ಪೆನಿಲೆಥಿಲಮೈನ್ (PEA )ಎಂಬ ಗುಣವಿದ್ದು ಇದು ನಿಮ್ಮ ಮೆದುಳಿಗೆ ನೀವು ಪ್ರೀತಿಯಲ್ಲಿ ಬೀಳುತ್ತಿರುವ ಭಾವನೆಯನ್ನು ಮೂಡಿಸುತ್ತದೆ. PEA ನಿಮ್ಮ ಮೆದುಳಿಗೆ ಎನ್ದೊರ್ಫಿನ್ ಉತ್ಪತ್ತಿ ಮಾಡುವಂತೆ ಪ್ರಚೋದಿಸುತ್ತದೆ ಆದ್ದರಿಂದ ಚಾಕಲೇಟ್ ತಿನ್ನುವುದರಿಂದ ಆನಂದ ಉಂಟಾಗುತ್ತದೆ.

ಡಾರ್ಕ್ ಚಾಕಲೇಟ್ ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ

ಡಾರ್ಕ್ ಚಾಕಲೇಟ್ ರಕ್ತದಲ್ಲಿ ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ

ಡಾರ್ಕ್ ಚಾಕಲೇಟ್ ರಕ್ತನಾಳಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಟೈಪ್ 2 ಮಧುಮೇಹದ ವಿರುದ್ಧ ಹೋರಾಡುತ್ತದೆ. ಡಾರ್ಕ್ ಚಾಕಲೇಟ್ ನಲ್ಲಿರುವ ಫ಼್ಲವೊನೈಡ್ ಗಳು ದೇಹವು ಇನ್ಸುಲಿನ್ ಅನ್ನು ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿರುವ ಕಡಿಮೆ ಗ್ಲೈಸೆಮಿಕ್ ಅಂಶ ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚು ಮಾಡುವುದಿಲ್ಲ.

ಡಾರ್ಕ್ ಚಾಕಲೇಟ್ ಸಂಪೂರ್ಣವಾಗಿ ಉತ್ಕರ್ಷಣ ನಿರೋಧಕವಾಗಿದೆ

ಡಾರ್ಕ್ ಚಾಕಲೇಟ್ ಸಂಪೂರ್ಣವಾಗಿ ಉತ್ಕರ್ಷಣ ನಿರೋಧಕವಾಗಿದೆ

ಡಾರ್ಕ್ ಚಾಕಲೇಟ್ ಆಂಟಿ ಆಕ್ಸಿಡೆಂಟ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ.ಈ ಆಂಟಿಆಕ್ಸಿಡೆಂಟ್ ಗಳು ದೇಹದ ಜೀವಕೊಶಗಳಿಗೆ ರಾಡಿಕಲ್ಸ್ ನಿಂದ ಆಗುವ ಹಾನಿಯನ್ನು ತಪ್ಪಿಸುತ್ತವೆ.ಈ ರಾಡಿಕಲ್ಸ್ ಗಳಿಂದ ಬೇಗ ವಯಸ್ಸಾದಂತೆ ಅನಿಸುತ್ತದೆ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ,ಆದ್ದರಿಂದ ಆಂಟಿಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿ ಇರುವ ಡಾರ್ಕ್ ಚಾಕಲೇಟ್ ಅನ್ನು ತಿನ್ನುವುದರಿಂದ ಅನೇಕ ರೀತಿಯ ಕ್ಯಾನ್ಸರ್ ಗಳನ್ನು ತಪ್ಪಿಸಬಹುದು ಮತ್ತು ವಯಸ್ಸಾಗುವ ಚಿನ್ಹೆಯನ್ನು ಕೂಡ ತಡೆಗಟ್ಟಬಹುದು.

ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಅಧಿಕಪ್ರಮಾಣದಲ್ಲಿ ಇರುತ್ತವೆ

ವಿಟಮಿನ್ಸ್ ಮತ್ತು ಮಿನರಲ್ಸ್ ಗಳು ಅಧಿಕಪ್ರಮಾಣದಲ್ಲಿ ಇರುತ್ತವೆ

ಡಾರ್ಕ್ ಚಾಕಲೇಟ್ ಆರೋಗ್ಯಕ್ಕೆ ಬೆಂಬಲಿಸುವ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿರುತ್ತದೆ.ಡಾರ್ಕ್ ಚಾಕಲೇಟ್ ನಲ್ಲಿ ಪೊಟ್ಯಶಿಯಂ,ಕಬ್ಬಿಣದ ಅಂಶ,ಮೆಗ್ನೀಷಿಯಂ ಮತ್ತು ತಾಮ್ರದ ಅಂಶವಿರುತ್ತದೆ.ತಾಮ್ರ ಮತ್ತು ಪೊಟಾಷಿಯಂ ಅಂಶ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ರೋಗಗಳಿಂದ ತಪ್ಪಿಸುತ್ತದೆ.ಕಬ್ಬಿಣದ ಅಂಶ ಅನೇಮಿಯ ಬರದಂತೆ ತಡೆಯುತ್ತದೆ ಮತ್ತು ಡಾರ್ಕ್ ಚಾಕಲೇಟ್ ನಲ್ಲಿರುವ ಮ್ಯಾಗ್ನಿಶಿಯಂ ಅಂಶ ಟೈಪ್ 2 ಮಧುಮೇಹ ,ರಕ್ತದ ಒತ್ತಡ ಹೆಚ್ಚದಂತೆ ಮತ್ತು ಹೃದಯ ತೊಂದರೆಗಳು ಬರದಂತೆ ಕಾಪಾಡುತ್ತವೆ.

ಡಾರ್ಕ್ ಚಾಕಲೇಟ್ Theobromine ಒಳಗೊಂಡಿರುತ್ತದೆ

ಡಾರ್ಕ್ ಚಾಕಲೇಟ್ Theobromine ಒಳಗೊಂಡಿರುತ್ತದೆ

ಡಾರ್ಕ್ ಚಾಕಲೇಟ್ ನಲ್ಲಿರುವ Theobromine ದಂತವನ್ನು ದೃಢವಾಗುವಂತೆ ಮಾಡುತ್ತದೆ.ನೀವು ಹಲ್ಲನ್ನು ಸ್ವಚ್ಚವಾಗಿ ಇಟ್ಟುಕೊಂಡರೆ ಡಾರ್ಕ್ ಚಾಕಲೇಟ್ ಇತರ ಸಿಹಿ ತಿನಿಸುಗಳಂತೆ ನಿಮ್ಮ ಹಲ್ಲನ್ನು ಹಾಳುಗೆಡುವುದಿಲ್ಲ.

Theobromine ಎಂಬುದು ಸೌಮ್ಯವಾದ ಮಾದಕವಾಗಿದ್ದು ಕೆಫಿನ್ ಅಷ್ಟು ಪರಿಣಾಮಕಾರಿಯಾಗಿ ಇರುವುದಿಲ್ಲ ಜೊತೆಗೆ ಇದರಿಂದ ಕೆಮ್ಮು ಕೂಡ ನಿವಾರಣೆಯಾಗುತ್ತದೆ.

English summary

Health Benefits Of Dark Chocolate

Dark chocolate has recently been discovered to have a number of healthy benefits. While eating dark chocolate can lead to the health benefits as we mentioned here.
X
Desktop Bottom Promotion