For Quick Alerts
ALLOW NOTIFICATIONS  
For Daily Alerts

ಸ್ತ್ರೀಯರ ಈ ಸಮಸ್ಯೆಗಳಿಗೆ ಮದ್ದು-ಎಳನಿರು

|

ಎಳನೀರು ತುಂಬಾ ಆರೋಗ್ಯಕರವಾದ ಪಾನೀಯ ಅನ್ನುವುದು ಎಲ್ಲರಿಗೆ ತಿಳಿದಿರುವ ವಿಷಯ. ನಮ್ಮಲ್ಲಿ ತ್ವಚೆ ಸಮಸ್ಯೆ, ಉಷ್ಣ, ವಿಟಮಿನ್ ಕೊರತೆ ಈ ರೀತಿಯ ಸಮಸ್ಯೆಯಿದ್ದರೆ ಎಳೆನೀರು ಕುಡಿದರೆ ಸಾಕು ಕಡಿಮೆಯಾಗುವುದು.

ಅದರಲ್ಲೂ ಸ್ತ್ರೀಯರು ಪ್ರತಿನಿತ್ಯವಲ್ಲದಿದ್ದರೂ ವಾರದಲ್ಲಿ 2-3 ಬಾರಿ ಕುಡಿಯುವುದು ಒಳ್ಳೆಯದು. ಏಕೆಂದರೆ ಎಳೆನೀರು ಕುಡಿಯುವುದರಿಂದ ಸ್ತ್ರೀಯರಲ್ಲಿ ಕಂಡು ಬರುವ ಈ ಕೆಳಗಿನ ಸಮಸ್ಯೆಗಳನ್ನು ಹೋಗಲಾಡಿಸಬಹುದು.

Coconut Water Health Benefits On Women

ಗರ್ಭಿಣಿಯರಿಗೆ ಆರೋಗ್ಯಕರವಾದ ಟಾನಿಕ್
ಗರ್ಭಿಣಿಯಾದಾಗ ಮೊದಲು ಮೂರು ತಿಂಗಳಿನಲ್ಲಿ ಕಾಣಿಸಿಕೊಳ್ಳುವ ಸುಸ್ತು, ವಾಂತಿ ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಎಲೆಕ್ಟ್ರೋಲೈಟ್ಸ್, ಕ್ಲೋರೈಡ್, ಕ್ಯಾಲ್ಸಿಯಂ, ಪೊಟಾಷ್ಯಿಯಂ, ಸೋಡಿಯ , ರೈಬೋಪ್ಲೇವಿನ್ ಈ ರೀತಿಯ ಅಂಶಗಳಿವೆ. ಆದ್ದರಿಂದ ಗವ ಗರ್ಭಿಣಿಯರಿಗೆ ಅಗತ್ಯವಿರುವ ಕೆಲವೊಂದು ಪೋಷಕಾಂಶಗಳು ಎಳೆನೀರಿನಿಂದ ದೊರೆಯುತ್ತವೆ.

ಉರಿ ಮುತ್ರಕ್ಕೆ ಮದ್ದು
ಉರಿ ಮೂತ್ರದ ಸಮಸ್ಯೆ ಇರುವವರು ತಪ್ಪದೇ ಒಂದು ವಾರ ಎಳನೀರು ಕುಡಿದರೆ ಉರಿ ಮೂತ್ರ ಕಡಿಮೆಯಾಗುವುದು.

ನಿರ್ಜಲೀಕರಣವನ್ನು ತಡೆಯುತ್ತದೆ
ದೇಹದಲ್ಲಿ ನಿರ್ಜಲೀಕರಣ ಉಂಟಾದರೆ ಎಳೆನೀರು ಕುಡಿಯಿರಿ. ಎಳನೀರು ದೇಹದಲ್ಲಿರುವ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ತ್ವಚೆಗೆ ಒಳ್ಳೆಯದು
ಮುಖದಲ್ಲಿ ಕಲೆಯಿದ್ದರೆ ಎಳನೀರನ್ನು ಮುಖಕ್ಕೆ ಹಾಕಿ ಸ್ವಲ್ಪ ಹೊತ್ತು ಬಿಟ್ಟು ಮುಖ ತೊಳೆಯಿರಿ ಹಾಗೂ ಎಳನೀರನ್ನು ಪ್ರತಿದಿನ ಕುಡಿಯಿರಿ. ಈ ರೀತಿ ಒಂದು ತಿಂಗಳು ಮಾಡಿದರೆ ಕಲೆರಹಿತ ತ್ವಚೆ ನಿಮ್ಮದಾಗುವುದು.

ಯೋನಿ ಉರಿಯನ್ನು ಕಡಿಮೆ ಮಾಡುತ್ತದೆ

ದೇಹದಲ್ಲಿ ನೀರಿನಂಶ ಕಡಿಮೆಯಾದರೆ, ಸೋಂಕಾಣು ಇವುಗಳಿಂದ ಯೋನಿಯಲ್ಲಿ ಉರಿ ಕಂಡು ಬರುತ್ತದೆ. ಈ ರೀತಿ ಉಂಟಾದಾಗ ಎಳನೀರು ಕುಡಿದು ಈ ಸಮಸ್ಯೆಯನ್ನು ಪರಿಹರಿಸಬಹುದು.

English summary

Coconut Water Health Benefits On Women | Tips For Health | ಸ್ತ್ರೀಯರ ಕೆಲ ಸಮಸ್ಯೆಗಳನ್ನು ಪರಿಹರಿಸುತ್ತೆ ಎಳನೀರು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

You would be surprised to know that coconut water has many health benefits on women. Many women all over the world have coconut water to increase their fertility and have a healthy pregnancy. Check out to know other health benefits of coconut water on women.
X
Desktop Bottom Promotion