For Quick Alerts
ALLOW NOTIFICATIONS  
For Daily Alerts

ಈ ಆಹಾರಗಳು ಕಹಿಯಾದರೆ ಏನಂತೆ?

|

ಇವತ್ತು ವಿಶ್ವ ಆಹಾರ ದಿನ. ಈ ದಿನ ನಿಮಗೊಂದು ಪ್ರಶ್ನೆ ಕೇಳುತ್ತಿದ್ದೇನೆ, ಪ್ರತಿಯೊಬ್ಬರಿಗೂ ಕೆಲವೊಂದು ಇಷ್ಟದ ಆಹಾರಗಳು ಇರುತ್ತದೆ ಅಲ್ವಾ? ನೀವು ಇಷ್ಟ ಪಡುವ ಆಹಾರಗಳಲ್ಲಿ ಅದರ ರುಚಿ ನಿಮಗೆ ಇಷ್ಟವಾಗಿ ಆ ಆಹಾರಗಳು ನಿಮಗೆ ಪ್ರಿಯವಾಗಿದೆಯೋ ಅಥವಾ ಆ ಆಹಾರಗಳಲ್ಲಿರುವ ಆರೋಗ್ಯಕರ ಗುಣಗಳಿಂದ ಆ ಆಹಾರ ನಿಮಗೆ ಪ್ರಿಯವಾಗಿದೆಯೋ?

ಖಂಡಿತ ಅದರ ರುಚಿಗೆ ಅಲ್ವಾ? ಪ್ರತಿಯೊಬ್ಬರು ಆಹಾರವನ್ನು ಸೇವಿಸುವಾಗ ಬಾಯಿಗೆ ರುಚಿಕರವಾದ ಆಹಾರವನ್ನು ತಿನ್ನ ಬಯಸುತ್ತೇವೆ ಹೊರತು, ಈ ಆಹಾರ ಎಷ್ಟು ಆರೋಗ್ಯಕರ ನೋಡುವುದಿಲ್ಲ. ದೇಹದ ತೂಕವನ್ನು ನಿಯಂತ್ರಣದಲ್ಲಿ ಇಡಬಯಸುವವರು ಮಾತ್ರ ಆಹಾರದ ಕ್ಯಾಲೋರಿ ಬಗ್ಗೆ ಸ್ವಲ್ಪ ಗಮನ ಕೊಡುತ್ತಾರಷ್ಟೇ. ಆಹಾರದ ರುಚಿಯಲ್ಲಿ ಕೆಲವರಿಗೆ ಸಿಹಿ ಅಂದರೆ ಇಷ್ಟ, ಮತ್ತೆ ಕೆಲವರಿಗೆ ಖಾರ, ಇನ್ನು ಸ್ವಲ್ಪ ಜನರು ಹುಳಿಯಾಗಿರುವ ಆಹಾರವನ್ನು ಇಷ್ಟ ಪಡುತ್ತಾರೆ. ಆದರೆ ಕಹಿಯನ್ನು ಇಷ್ಟ ಪಡುವವರ ಸಂಖ್ಯೆ ಕಡಿಮೆ. ಕಹಿ ಆಹಾರಗಳನ್ನು ನೀಡಿದ ತಕ್ಷಣ ಮುಖ ಸೊಟ್ಟಗೆ ಮಾಡುತ್ತೇವೆ, ಆದರೆ ಈ ಕಹಿ ಆಹಾರಗಳೇ ಎಲ್ಲಾ ಆಹಾರಗಳಿಗಿಂತ ಆರೋಗ್ಯಕರವಾಗಿರುವುದರಿಂದ, ಈ ಆಹಾರವನ್ನು ತಿನ್ನುವಾಗ ಅದರ ರುಚಿಗಿಂತ, ಅದರ ಆರೋಗ್ಯವರ್ಧಕ ಗುಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ.

ಇಲ್ಲಿ ನಾವು ಕೆಲ ಕಹಿ ಆಹಾರಗಳನ್ನು ಪಟ್ಟಿ ಮಾಡಿದ್ದೇವೆ, ಅವುಗಳಲ್ಲಿರುವ ಆರೋಗ್ಯಕರ ಗುಣಗಳೇನು ಎಂದು ತಿಳಿಯೋಣ:

 ಹಾಗಾಲಕಾಯಿ

ಹಾಗಾಲಕಾಯಿ

ಹಾಗಾಲಕಾಯಿಯಲ್ಲಿರುವ ಆರೋಗ್ಯವರ್ಧಕ ಗುಣಗಳು ಒಂದೆರಡಲ್ಲ. ಇದು ದೇಹದಲ್ಲಿರುವ ವಿಷ ಅಂಶಗಳನ್ನು ಹೊರಹಾಕುತ್ತದೆ. ಕಾಲರಾ, ಮಧುಮೇಹ, ನಿದ್ರಾಹೀನತೆ, ದೃಷ್ಟಿದೋಷ, ಪೈಲ್ಸ್, ಮಲಬದ್ಧತೆ, ಉಸಿರಾಟದ ತೊಂದರೆ ಈ ರೀತಿಯ ಕಾಯಿಲೆಗಳನ್ನು ತಡೆಗಟ್ಟುತ್ತದೆ ಹಾಗೂ ರಕ್ತವನ್ನು ಶುದ್ಧೀಕರಿಸುತ್ತದೆ.

Kale

Kale

ಈ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಮತ್ತು ಕ್ಯಾಲ್ಸಿಯಂ, ಕ್ಯಾರೋಟಿನ್, ಬೇಟಾ ಕ್ಯಾರೋಟಿನ್ ಅಂಶವಿದ್ದು ರಕ್ತಕಣಗಳುನ್ನು ವೃದ್ಧಿಸುತ್ತದೆ, ಆರೋಗ್ಯವನ್ನು ಹೆಚ್ಚಿಸುತ್ತದೆ.

ಅರಿಶಿಣ ಪುಡಿ

ಅರಿಶಿಣ ಪುಡಿ

ಅರಿಶಿಣ ತನ್ನ ನಾನಾ ಔಷಧೀಯ ಗುಣದಿಂದಾಗಿ ಪರಿಣಾಮಕಾರಿಯಾದ ಮನೆ ಮದ್ದಾಗಿದೆ. ಇದನ್ನು ಅಜೀರ್ಣ, ಹೊಟ್ಟೆ ನೋವು, ಶೀತ, ತ್ವಚೆ ಸಮಸ್ಯೆ ಮುಂತಾದ ಸಣ್ಣ ಪುಟ್ಟ ಕಾಯಿಲೆಗಳನ್ನು ಗುಣ ಪಡಿಸಲು ಮನೆ ಮದ್ದಾಗಿ ಬಳಸುತ್ತಾರೆ. ಅರಿಶಿಣವನ್ನು ದಿನಾ ತಿಂದರೆ ಕ್ಯಾನ್ಸರ್ ತಡೆಗಟ್ಟಬಹುದು ಮತ್ತು ಇದು ರಕ್ತವನ್ನು ಶುದ್ಧೀಕರಿಸುತ್ತದೆ.

ಕೋಕಾ

ಕೋಕಾ

ಕೋಕಾ ಕಹಿಯಾಗಿದ್ದರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೋಕಾದಿಂದ ತಯಾರಿಸುವ ಡಾರ್ಕ್ ಚಾಕಲೇಟ್ ಅನೇಕ ಆರೋಗ್ಯವರ್ಧಕ ಗುಣಗಳನ್ನು ಹೊಂದಿದೆ.

ಮೆಂತೆ

ಮೆಂತೆ

ಮೆಂತೆಯಲ್ಲಿ ವಿಟಮಿನ್ ಸಿ, ನಿಯಾಸಿನ್, ಪೊಟಾಷ್ಯಿಯಂ ಇದ್ದು ಹಾರ್ಮೋನ್ ಗಳ ಅಸಮತೋಲನ ಉಂಟಾಗದಂತೆ ತಡೆಯುತ್ತದೆ, ಇದನ್ನು ತಿನ್ನುವುದರಿಂದ ಸ್ತ್ರೀ ಮತ್ತು ಪುರುಷರಿಗೆ ಅನೇಕ ರೀತಿಯ ಆರೋಗ್ಯಕರ ಗುಣಗಳು ಲಭ್ಯವಾಗುವುದು. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಕಾಡುವ ಹಿಟ್ಟೆ ನೋವು ಕಡಿಮೆಯಾಗುತ್ತದೆ, ಎದೆ ಹಾಲಿನ ಉತ್ಪತ್ತಿ ಹೆಚ್ಚಾಗುವುದು, ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ವೃದ್ಧಿಸುವುದು.

ಜೀರಿಗೆ

ಜೀರಿಗೆ

ಇದರಲ್ಲಿ ವಿಟಮಿನ್ ಇ ಇದ್ದು ಅನೇಕ ಆರೋಗ್ಯವರ್ಧಕ ಗುಣವನ್ನು ಹೊಂದಿದೆ. ದೇಹದ ಉಷ್ಣತೆ ಹೆಚ್ಚದಂತೆ ತಡೆಯುತ್ತದೆ, ಜೀರ್ಣಕ್ರಿಯೆಗೆ ಒಳ್ಳೆಯದು, ಉರಿ ಮೂತ್ರ ಸಮಸ್ಯೆಯನ್ನು ನಿವಾರಿಸುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಎಳ್ಳು

ಎಳ್ಳು

ಎಳ್ಳು ತಿನ್ನಲು ಕಹಿ ಅನಿಸಿದರು, ಆರೋಗ್ಯಕ್ಕೆ ಸಿಹಿಯಾದ ಆಹಾರ ಇದಾಗಿದೆ. ಇದು ಮೂಳೆ ನೋವನ್ನು ಕಡಿಮೆ ಮಾಡುತ್ತದೆ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹಾರ್ಮೋನ್ ಗಳನ್ನು ಸಮತೋಲನದಲ್ಲಿಡುತ್ತದೆ.

ಬದನೆಕಾಯಿ

ಬದನೆಕಾಯಿ

ಬದನೆಕಾಯಿ ಸ್ವಲ್ಪ ಕಹಿಯಾಗಿದ್ದು ಒಗರು-ಒಗರು ಅನಿಸುವುದು. ಇದರಲ್ಲಿ ವಿಟಮಿನ್ ಕೆ, ಸಿ, ಬಿ6, ಫೋಲೆಟ್, ನಿಯಾಸಿನ್ ಅಂಶವಿದೆ. ಇದು ರಕ್ತ ಸಂಚಾರ ಸರಾಗವಾಗಿ ನಡೆಯುವಂತೆ ಮಾಡುತ್ತದೆ.

English summary

Bitter Foods Which Are Good For Health

Most people are not to have bitter foods. But If you like it or not, you should include these foods in your diet to be healthy. 
X
Desktop Bottom Promotion