Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬದನೆಕಾಯಿ ಇಷ್ಟವಿಲ್ಲವೇ? ಆದರೂ ತಿನ್ನಿ!

ಬದನೆಕಾಯಿ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಒಳ್ಳೆಯದು ಎಂದು ನೋಡೋಣ ಬನ್ನಿ:
ಇದರಲ್ಲಿ ನಾರಿನಂಶ ಅಧಿಕವಿರುತ್ತದೆ. ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗಿದೆ. ಒಂದು ಬದನೆಕಾಯಿಯಲ್ಲಿ 2ಗ್ರಾಂನಷ್ಟು ನಾರಿನಂಶವಿರುತ್ತದೆ.
ಇದು ತ್ವಚೆಯಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ಒಣ ತ್ವಚೆ ಇರುವವರು ಇದನ್ನು ತಿಂದರೆ ತ್ವಚೆಯಲ್ಲಿ ಮಾಯಿಶ್ಚರೈಸರ್ ಅನ್ನು ಕಾಪಾಡಬಹುದು. ಇದರಲ್ಲಿ ನಾರಿನಂಶ ಅಧಿಕವಾಗಿದೆ. ನಾರಿನಂಶ ಅಧಿಕವಿರುವ ಆಹಾರಗಳು ದೇಹದ ತೂಕವನ್ನು ಹೆಚ್ಚಿಸುವುದಿಲ್ಲ.
ಬದನೆಕಾಯಿ ಕ್ಯಾನ್ಸರ್ ಕಣಗಳ ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಬದನೆಕಾಯಿ ತಿಂದರೆ ಲೈಂಗಿಕ ತೊಂದರೆ ನಿವಾರಿಸಲು ಸಹಕಾರಿಯಾಗಿದೆ. ಹೆಚ್ಚಿನವರಿಗೆ ಭಯದ ಸಮಸ್ಯೆ ಇರುತ್ತದೆ. ಈ ಭಯದ ಕಾಯಿಲೆಯನ್ನು ಹೋಗಲಾಡಿಸಲು ನೀಡುವ ಔಷಧಿಯಲ್ಲಿ ಬದನೆಕಾಯಿಯನ್ನು ಬಳಸಲಾಗುವುದು. ಭಯದ ಕಾಯಿಲೆಗೆ ಸೂಕ್ತವಾದ ಮನೆಮದ್ದಾಗಿದೆ.
ಕೊರಿಯಾದಲ್ಲಿ ಬದನೆಕಾಯಿಯನ್ನು ಒಣಗಿಸಿ ಇದನ್ನು ಗ್ಯಾಸ್ಟ್ರಿಕ್ , ಸೊಂಟ ನೋವು, ಮೈಕೈ ನೋವು, ಚಿಕನ್ ಪಾಕ್ಸ್ ಕಾಯಿಲೆಗಳನ್ನು ಗುಣಪಡಿಸಲು ಮನೆಮದ್ದಾಗಿ ಉಪಯೋಗಿಸುತ್ತಾರೆ. ಮದ್ಯಪಾನ ಚಟ ಬಿಡಿಸುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ.
ಬದನೆಕಾಯಿಯನ್ನು ಮದುಮೇಹಿಗಳು ತಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು. ಇದು ದೇಹದಲ್ಲಿ ಸಕ್ಕರೆಯಶವನ್ನು ನಿಯಂತ್ರಣದಲ್ಲಿಡುವ ಸಾಮರ್ಥ್ಯವನ್ನು ಹೊಂದಿದೆ.
ದೇಹದಲ್ಲಿರುವ ಜೀವಕಣಗಳಿಗೆ ಹಾನಿ ಉಂಟಾದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುವುದು. ಬದನೆಕಾಯಿ ದೇಹದಲ್ಲಿ ಹಾಳಾದ ಜೀವ ಕಣಗಳನ್ನು ಸರಿಪಡಿಸಲು ಸಹಕಾರಿಯಾಗಿದೆ. ಇದರಿಂದ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ತಡೆಗಟ್ಟಬಹುದು.
ಇದು ಮೂಳೆಗಳು ಹಾನಿಯುಂಟಾಗುವುದನ್ನು ತಡೆಗಟ್ಟುತ್ತದೆ. atherosclerosis ಎಂಬ ಮೂಳೆ ಸಂಬಂಧಿ ಕಾಯಿಲೆಯು ರಕ್ತ ಕಣದಲ್ಲಿ ಅಧಿಕ ಕೊಬ್ಬಿನಂಶ ಮತ್ತು ಕೊಲೆಸ್ಟ್ರಾಲ್ ಅಂಶಗಳಿಂದಾಗಿ ಉಂಟಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕೂಡ ಉಂಟಾಗುವುದು, ಈ ರೀತಿ ರಕ್ತ ನಾಳಗಳಲ್ಲಿ ಕಂಡು ಬರುವ ಸಮಸ್ಯೆಯನ್ನು ಬದನೆಕಾಯಿಯಿಂದ ಗುಣಪಡಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
