For Quick Alerts
ALLOW NOTIFICATIONS  
For Daily Alerts

ಪುರುಷ ಹಾರ್ಮೋನ್ ಹೆಚ್ಚಿಸುವ ಆಹಾರಗಳು

|

ಸತು (Zinc) ದೇಹಕ್ಕೆ ಅವಶ್ಯಕವಾದ ಖನಿಜಾಂಶ. ಇದು ದೇಹಕ್ಕೆ ಅಲ್ಪ ಪ್ರಮಾಣದಲ್ಲಿ ಸಾಕು, ಆದರೆ ಅದನ್ನು ನಮ್ಮ ದೇಹ ಉತ್ಪತ್ತಿ ಮಾಡುವುದಿಲ್ಲ. ಅದು ಆಹಾರದ ಮುಖಾಂತರವೇ ನಮ್ಮ ದೇಹವನ್ನು ಸೇರಬೇಕು. ದೇಹದಲ್ಲಿ ಸತುವಿನ ಪ್ರಮಾಣ ಇಲ್ಲದಿದ್ದರೆ ಕೂದಲು ಉದುರುವುದು, ತಲೆ ಹೊಟ್ಟು, ಜೀರ್ಣಕ್ರಿಯೆಯಲ್ಲಿ ತೊಂದರೆ , ತ್ವಚೆ ಸಮಸ್ಯೆ ಈ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ.

ಅದರಲ್ಲೂ ಪುರುಷರಲ್ಲಿ ಪುರುಷ ಹಾರ್ಮೋನ್ (testosterone) ಉತ್ಪತ್ತಿಯಾಗಲು ಇದು ಅವಶ್ಯಕ. ಸತು ಮಾಂಸಾಹಾರದಲ್ಲಿ ಹೆಚ್ಚಾಗಿ ಇದ್ದರೂ ಕೆಲವೊಂದು ತರಕಾರಿಗಳಲ್ಲೂ ಕಂಡು ಬರುವುದರಿಂದ ಅವುಗಳನ್ನು ತಿಂದು ಸತುವಿನಂಶದ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು.

ಮೊಟ್ಟೆಯ ಹಳದಿ

ಮೊಟ್ಟೆಯ ಹಳದಿ

ಡಯಟ್ ಮಾಡುವವರು ಮೊಟ್ಟೆಯ ಹಳದಿಯನ್ನು ಮುಟ್ಟುವುದಿಲ್ಲ, ಇದರಲ್ಲಿ ಕೊಲೆಸ್ಟ್ರಾಲ್ ಇದ್ದು ದೇಹದ ತೂಕವನ್ನು ಹೆಚ್ಚಿಸುತ್ತದೆ ಅನ್ನುವುದು ನಿಜ. ಆದರೆ ಇದನ್ನು ಅಪರೂಪಕ್ಕೆ ತಿನ್ನುವುದು ಒಳ್ಳೆಯದು. ಏಕೆಂದರೆ ಇದರಲ್ಲಿ ಸತುವಿನಂಶವಿದೆ.

ಎಳ್ಳು

ಎಳ್ಳು

ಪುರುಷ ಹಾರ್ಮೋನ್ ಹೆಚ್ಚು ಬಿಡುಗಡೆಯಾಗದವರು ಇದನ್ನು ತಿಂದು ಪುರುಷ ಹಾರ್ಮೋನ್ ಗಳನ್ನು ಹೆಚ್ಚಿಸಬಹುದು. ಎಳ್ಳು ತಿಂದರೆ ಸತು ಮತ್ತು ಕ್ಯಾಲ್ಸಿಯಂ ಅಂಶ ದೇಹಕ್ಕೆ ದೊರೆಯುತ್ತದೆ.

ಮೃದ್ವಂಗಿಗಳು

ಮೃದ್ವಂಗಿಗಳು

ಸಮುದ್ರಾಹಾರಗಳಲ್ಲಿ ಸತುವಿನಂಶ ಅಧಿಕವಿರುತ್ತದೆ. ಅದರಲ್ಲೂ ಮೃದ್ವಂಗಿಗಳಲ್ಲಿ ಈ ಅಂಶ ಅಧಿಕವಾಗಿರುತ್ತದೆ. ಮೃದ್ವಂಗಿಗಳಲ್ಲಿ ಸತುವಿನಂಶ ಮಾತ್ರವಲ್ಲ ಇತರ ಖನಿಜಾಂಶಗಳು ಕೂಡ ಇರುವುದರಿಂದ ಇದು ಆರೋಗ್ಯವನ್ನು ವೃದ್ಧಿಸುತ್ತದೆ.

 ನೆಲಗಡಲೆ

ನೆಲಗಡಲೆ

ನೆಲೆಗಡಲೆಯಲ್ಲಿ ಆರೋಗ್ಯಕರವಾದ ಕೊಲೆಸ್ಟ್ರಾಲ್ ಮತ್ತು ಸತುವಿನಂಶವಿದೆ. ಆದ್ದರಿಂದ ಸತುವಿನಂಶ ಕಡಿಮೆಯಾದರೆ ಪ್ರತಿನಿತ್ಯ ಇದನ್ನು ತಿಂದರೆ ದೇಹಕ್ಕೆ ಅಗತ್ಯವಾದ ಸತುವಿನಂಶ ದೊರೆಯುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಇದರಲ್ಲಿ ಸತುವಿನಂಶವಿದ್ದು ಇದನ್ನು ಆಹಾರದಲ್ಲಿ ಸೇರಿಸುವುದರಿಂದ ಇದು ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ ನಮ್ಮನ್ನು ಆರೋಗ್ಯವಂತರಾಗಿ ಇರಲು ಸಹಾಯ ಮಾಡುತ್ತದೆ. ಹಸಿ ಬೆಳ್ಳುಳ್ಳಿ ತಿಂದರೆ ಅಧಿಕ ಕೊಲೆಸ್ಟ್ರಾಲ್ ಅನ್ನು ಕರಗಿಸಬಹುದು.

ಅಣಬೆ

ಅಣಬೆ

ಅಣಬೆಯಲ್ಲಿ ಸತುವಿನಂಶ ಮಾತ್ರವಲ್ಲದೆ ಕ್ಯಾಲ್ಸಿಯಂ , ವಿಟಮಿನ್ ಬಿ2, antibiotic, ವಿಟಮಿನ್ ಡಿ ಇದ್ದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

 ಫ್ಲಾಕ್ಸ್ ಸೀಡ್ಸ್

ಫ್ಲಾಕ್ಸ್ ಸೀಡ್ಸ್

ಅಗಸದ ಬೀಜ ಅಥವಾ ಫ್ಲಾಕ್ಸ್ ಸೀಡ್ಸ್ ನಲ್ಲಿ ಸತು ಮತ್ತು ಒಮೆಗಾ 3 ಇರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಿಡ್ನಿ ಬೀನ್ಸ್

ಕಿಡ್ನಿ ಬೀನ್ಸ್

ಇದರಲ್ಲಿ ಪ್ರೊಟೀನ್ ಮತ್ತ ಸತುವಿನಂಶವಿದೆ. ಕಿಡ್ನಿ ಬೀನ್ಸ್ ಹೃದಯದ ಸ್ವಾಸ್ಥ್ಯಕ್ಕೂ ತುಂಬಾ ಒಳ್ಳೆಯದು.

 ಏಡಿ

ಏಡಿ

ಸಮುದ್ರಾಹಾರ ತಿನ್ನುವವರಿಗೆ ಸತುವಿನ ಕೊರತೆ ಉಂಟಾಗುವುದಿಲ್ಲ. ಏಡಿ, ಮೃದ್ವಂಗಿ ಈ ರೀತಿಯ ಆಹಾರಗಳಲ್ಲಿ ಅಧಿಕವಿರುತ್ತದೆ.

ಕೆಂಪಕ್ಕಿ ಅನ್ನ

ಕೆಂಪಕ್ಕಿ ಅನ್ನ

ಕೆಂಪಕ್ಕಿಯಲ್ಲಿ ಸತು ಮತ್ತು ನಾರಿನಂಶ ಅಧಿಕವಿರುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಧುಮೇಹ ಇರುವವರು ಕೂಡ ಕೆಂಪಕ್ಕಿ ಅನ್ನವನ್ನು ತಿನ್ನಬಹುದು.

ಸೊಪ್ಪು

ಸೊಪ್ಪು

ಸೊಪ್ಪಿನಲ್ಲಿ, ಸತು, ಕಬ್ಬಿಣದಂಶ, ಕ್ಯಾಲ್ಸಿಯಂ, ವಿಟಮಿನ್ ಕೆ ಇದ್ದು ಇದನ್ನು ತಿಂದರೆ ನಿಮಗೆ ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.

 ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್

ಡಾರ್ಕ್ ಚಾಕಲೇಟ್ ತಿನ್ನಲು ಸ್ವಲ್ಪ ಕಹಿ ಅನಿಸಿದರೂ ಹೃದಯಕ್ಕೆ ತುಂಬಾ ಒಳ್ಳೆಯದು. ಇದು ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ.

ಸಿಹಿ ಕುಂಬಳಕಾಯಿ ಬೀಜ

ಸಿಹಿ ಕುಂಬಳಕಾಯಿ ಬೀಜ

ಈ ಬೀಜವನ್ನು ತಿನ್ನಲು ರುಚಿಕರವಾಗಿದ್ದು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದರಲ್ಲಿ ಸತುವಿನಂಶವಿರುವುದರಿಂದ ಇದನ್ನು ತಿಂದರೆ ಸತುವಿನ ಕೊರತೆ ಉಂಟಾಗುವುದಿಲ್ಲ

English summary

Zinc-Rich Foods For Men | Tips For Health | ಪುರುಷ ಹಾರ್ಮೋನ್ ಹೆಚ್ಚಿಸುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Zinc has many health benefits. According to medical experts, zinc can actually help cure diabetes. That is why it is important to concentrate on eating appropriate amount of zinc rich foods. Zinc is also essential for the proper functioning of the immune system. It prevents dandruff and a hoard of other skin diseases.
X
Desktop Bottom Promotion