For Quick Alerts
ALLOW NOTIFICATIONS  
For Daily Alerts

ಚಹಾ ಚಟದಿಂದ ಸಿಗುವ 10 ಪ್ರಯೋಜನಗಳು!

|
Health Benefits of Drinking Tea
ಬೆಳಗ್ಗೆ ಎದ್ದು ಹಲ್ಲುಜ್ಜಿ (ಕೆಲವರಿಗೆ ಟೀ ಸಿಕ್ಕಿದ ನಂತರ ಏಳುವ ಅಭ್ಯಾಸ) ಒಂದು ಕಪ್ ಟೀ ಕುಡಿದರೆ ನಂತರವೆ ದಿನ ನಿತ್ಯದ ಚಟುವಟಿಕೆಗಳನ್ನು ಮಾಡಲು ಮನಸ್ಸು ಹುರುಪು ತೋರಿಸುತ್ತದೆ. ಆದರೆ ಬೆಳಗ್ಗೆ ಎದ್ದು ಟೀ ಕುಡಿಯುವುದನ್ನು ಕೆಟ್ಟ ಚಟ (ಎಲ್ಲರೂ ಕಲಿಯಬೇಕಾದ ಕೆಟ್ಟ ಚಟ ಓದಿ) ಅನ್ನುವವರು ಇದ್ದಾರೆ. ಆದರೆ ಟೀ ಕುಡಿಯುವುದು ಒಳ್ಳೆಯ ಚಟ! ಆದರೆ ಮಿತಿ ಮೀರಿ ಟೀ ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಂಡರೆ ಮಾತ್ರ ಅದು ಚಟವಾಗುತ್ತದೆ.

ಟೀ ಕುಡಿಯುವುದರಿಂದ ಆರೋಗ್ಯಕ್ಕೆ 10 ಲಾಭಗಳಿವೆ. ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿ.

1. ಅಕಾಲಿಕ ನೆರಿಗೆ ಉಂಟಾಗುವುದಿಲ್ಲ: ಟೀಯಲ್ಲಿ antioxidants ಪ್ರಮಾಣ ಅಧಿಕವಾಗಿರುವುದರಿಂದ ರೋಗ ನಿಒರೋಧಕ ಸಾಮರ್ಥ್ಯ ಹೆಚ್ಚುತ್ತದೆ, ಪರಿಸರ ಮಾಲಿನ್ಯದಿಂದ ದೇಹದ ಮೇಲೆ ಬೀಳುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸುತ್ತದೆ. ಅತೀ ಮುಖ್ಯವಾಗಿ ಅಕಾಲಿಕ ನೆರಿಗೆ ಬೀಳವುದಿಲ್ಲ. ಸೌಂದರ್ಯವನ್ನು ಹೆಚ್ಚಿಸಲು ಗ್ರೀನ್ ಟೀ ಕುಡಿಯುವುದು ಒಳ್ಳೆಯದು.

2. ಕಡಿಮೆ ಕೆಫಿನ್: ಟೀಯಲ್ಲಿ ಕಾಫಿಗಿಂತ ಕಡಿಮೆ ಪ್ರಮಾಣದ ಕೆಫಿನ್ ಅಂಶವಿರುತ್ತದೆ. ಕಾಫಿಯಲ್ಲಿ ಕೆಫಿನ್ ಹೆಚ್ಚಗಿರುವುದರಿಂದ ಕೆಲವರಿಗೆ ಅಜೀರ್ಣ ಸಮಸ್ಯೆ ಉಂಟಾಗುತ್ತದೆ, ಅಂತಹವರು. ಟೀಯನ್ನು ದಿನಕ್ಕೆ 2 ಬಾರಿ ಕುಡಿದರೆ ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುವುದಿಲ್ಲ.

3. ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆಯ ನಿಯಂತ್ರಣ: ಪಾರ್ಶ್ವವಾಯು ಮತ್ತು ಹೃದಯಾಘಾತ ಸಮಸ್ಯೆಯು ದೇಹದಲ್ಲಿ ರಕ್ತ ಸಂಚಲನದಲ್ಲಿ ಉಂಟಾಗುವ ತೊಂದರೆಯಿಂದ ಉಂಟಾಗುತ್ತದೆ. ಟೀ ದೇಹ ಸೇರಿದಾಗ ಡ್ರೈನ್ ನಿಮ್ಮ ಬಾತ್ ರೂಮ್ ಪೈಪ್ ಶುದ್ಧವಾಗಿ ಇಡುವ ಹಾಗೆ ದೇಹದಲ್ಲಿ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ.

4. ಮೂಳೆಗಳನ್ನು ಬಲಪಡಿಸುತ್ತದೆ: ಟೀಯಲ್ಲಿ ಹಾಲು ಸೇರಿಸುವುದರಿಂದ ಮೂಳೆ ಬಲವಾಗುತ್ತದೆ ಎನ್ನುವ ವಾದ ಮಾಡುವುದು ಸರಿಯಲ್ಲ. ಏಕೆಂದರೆ 10 ವರ್ಷಕ್ಕಿಂತ ಅಧಿಕ ವರ್ಷದಿಂದ ಟೀ ಕುಡಿಯುವವರ ಮೂಳೆಯು ಟೀ ಕುಡಿಯದವರ (ಇವರು ಹಾಲು ಕುಡಿಯುತ್ತಿದ್ದರು) ಮೂಳೆಗೆ ಹೋಲಿಸಿದಾಗ ಟೀ ಕುಡಿಯುವವರ ಮೂಳೆ ದೃಢವಾಗಿರುತ್ತದೆ ಎಂದು ಇದರ ಬಗ್ಗೆ ನಡೆಸಿದ ಸಂಶೋಧನೆಯೊಂದು ಹೇಳುತ್ತದೆ.

English summary

Top 10 Health Benefits of Drinking Tea | Tips For Health | ಟೀ ಕುಡಿಯುವುದರಿಂದ 10 ಪ್ರಯೋಜನಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

There are lots of reasons why we are suggesting you to drink tea. If you're not drinking tea yet, read up on these 10 ways tea does your body good.
Story first published: Friday, March 30, 2012, 12:01 [IST]
X
Desktop Bottom Promotion