For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಕಣಜ ಕಡಲೆಕಾಯಿಯಲ್ಲಿದೆ

By Super
|
Peanut for Good Health and Underweight problem
ಕಡಲೆ ಕಾಯಿಯನ್ನು ಹೇಗೆ ತಿಂದರೂ ರುಚಿಯೇ. ಹಸಿಯಾಗಿ, ಬೇಯಿಸಿ, ಹುರಿದು, ಹೇಗೆ ತಿಂದರೂ ಈ ಬಡವರ ಬಾದಾಮಿ ಬಾಯಿಗೆ ರುಚಿ ನೀಡುವುದರಲ್ಲಿ ಸಂದೇಹವಿಲ್ಲ. ಆದರೆ ಇದು ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಹಿತ. ಅದರಲ್ಲೂ ತೂಕ ಕಡಿಮೆಯ ಸಮಸ್ಯೆ ಇದ್ದವರು ಇದನ್ನು ಸೇವಿಸಿದರೆ ನಿರೀಕ್ಷಿತ ಫಲಿತಾಂಶ ಹೊಂದಬಹುದು.

ಕಡಲೆ ಕಾಯಿಯನ್ನು ಸುಮ್ಮನೆ ಬಾಯಿಗೆ ಹಾಕಿಕೊಳ್ಳುವವರೂ ಇದರ ಗುಣವನ್ನು ತಿಳಿದರೆ ಆಶ್ಚರ್ಯ ಪಡುವುದು ಗ್ಯಾರಂಟಿ. ಕಡಲೆ ಕಾಯಿಯಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅಂಶ ಏನೇನಿದೆ ಎಂದು ಇಲ್ಲಿ ತಿಳಿದುಕೊಳ್ಳಿ.

* ಹೇರಳ ಪ್ರೊಟೀನ್: ಕಡಲೆಕಾಯಿಯಲ್ಲಿ ಹೆಚ್ಚು ಪ್ರೊಟೀನ್ ಇದ್ದು, ಬಾಡಿ ಬಿಲ್ಡಿಂಗ್ ಬಯಸುವವರು ಮತ್ತು ಕಡಿಮೆ ತೂಕ ಇರುವವರಿಗೆ ಇದು ಹೆಚ್ಚು ಉಪಯೋಗಕರ. ಅದರಲ್ಲೂ ಕಡಲೆಕಾಯಿಯಿಂದ ತಯಾರಿಸುವ ಪೀನಟ್ ಬಟರ್ ನಲ್ಲಿ ಹೆಚ್ಚಿನ ಪೋಷಕಾಂಶವಿದೆ. ಪೀ ನಟ್ ಬಟರ್ ಒಂದೇ ಅಲ್ಲ, ಕಡಲೆ ಕಾಯಿಯನ್ನು ಯಾವ ರೀತಿ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.

* ಆಂಟಿಯಾಕ್ಸಿಡಂಟ್: ಕಡಲೆಬೀಜದಲ್ಲಿ ಹೆಚ್ಚಿನ ಮಟ್ಟದಲ್ಲಿ ಪಾಲಿಫೆನಾಲ್ ಆಂಟಿಯಾಕ್ಸಿಡಂಟ್ ಇದೆ. ಅದರಲ್ಲೂ ಕಡಲೆ ಬೀಜದಲ್ಲಿರುವ ಪಿ-ಕೌಮ್ಯಾರಿಕ್ ಆಸಿಡ್ ದೇಹಕ್ಕೆ ಹೆಚ್ಚು ಅವಶ್ಯಕ. ಕಡಲೆಕಾಯಿಯನ್ನು ಹುರಿಯುವುದರಿಂದ ಪಿ-ಕೌಮ್ಯಾರಿಕ್ ಇನ್ನಷ್ಟು ಹೆಚ್ಚಾಗಿ ಆಂಟಿಯಾಕ್ಸಿಡಂಟ್ ಗಳೂ ಶೇಕಡಾ 22 ರಷ್ಟು ಅಧಿಕವಾಗುತ್ತದೆ.

* ಸೇಬಿಗೆ ಸರಿಸಾಟಿ: ಕಪ್ಪು ದ್ರಾಕ್ಷಿ ಮತ್ತು ಸ್ಟ್ರಾಬೆರಿ ಹಣ್ಣುಗಳಲ್ಲಿರುವ ಆಂಟಿಯಾಕ್ಸಿಡಂಟ್ ಕಡಲೆ ಬೀಜದಲ್ಲೂ ದೊರೆಯುತ್ತೆ. ಸೇಬು, ಕ್ಯಾರೆಟ್ ಮತ್ತು ಬೀಟ್ ರೂಟ್ ಗಿಂತ ಕಡಲೆ ಕಾಯಿಯಿಂದಲೇ ಹೆಚ್ಚಿನ ಉಪಯೋಗವನ್ನು ಪಡೆಯಬಹುದು.

* ರಕ್ತದಲ್ಲಿನ ಕೊಲೆಸ್ಟ್ರಾಲ್ ಕರಗಿಸುತ್ತೆ: ಉಪ್ಪು ಬೆರೆಸದಿರುವ ಕಡಲೆ ಬೀಜ ರಕ್ತನಾಳಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಮೋನೊಸಾಚುರೇಟೆಡ್ ಫ್ಯಾಟ್ ರಕ್ತದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ

* ಜೀವ ಕಣಗಳ ರಕ್ಷಣೆ: ಜೀವ ಕಣಗಳು ತೊಂದರೆಗೀಡಾಗಿದ್ದರೆ ಕಡಲೆಕಾಯಿ ಸೇವನೆಯಿಂದ ಅದಕ್ಕೆ ಚೈತನ್ಯ ನೀಡಬಹುದು. ಇದರಲ್ಲಿನ ನಿಯಾಸಿನ್ ಅಂಶ ವ್ಯಕ್ತಿ ವಯಸ್ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಮರೆವು ರೋಗ ಮತ್ತು ಇನ್ನಿತರ ವಯಸ್ಸಿನ ಸಂಬಂಧಿ ರೋಗಗಳನ್ನು ದೂರವಿರಿಸಲು ಸಹಕಾರಿ.

* ವಿಟಮಿನ್ ಇ: ಕಡಲೆ ಕಾಯಿಯಲ್ಲಿನ ವಿಟಮಿನ್ ಇ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಿದೆ.

* ಕಬ್ಬಿಣಾಂಶ: ಕಡಲೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ಕೆಂಪು ರಕ್ತಕಣಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ.

* ಅಧಿಕ ಕ್ಯಾಲ್ಸಿಯಂ:
ಕಡಲೆ ಕಾಯಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದ್ದರಿಂದ ಕಡಲೆ ಕಾಯಿ ಸೇವನೆ ಮೂಳೆ, ಎಲುಬುಗಳು ಗಟ್ಟಿಯಿರುವಂತೆ ನೋಡಿಕೊಳ್ಳುತ್ತದೆ.

* ಲಕ್ವ ಸಮಸ್ಯೆ: ಕಡಲೆ ಕಾಯಿಯಲ್ಲಿನ ಬಯೋಫ್ಲೇವನಾಯ್ಡ್ ಅಂಶ ಮೆದುಳಿನಲ್ಲಿ ರಕ್ತಸಂಚಲನವನ್ನು ಶೇಕಡಾ 30 ರಷ್ಟು ಹೆಚ್ಚಾಗಿಸಿ ಲಕ್ವ ಹೊಡೆಯುವ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಸ್ವಲ್ಪವೇ ಕಡಲೆ ಕಾಯಿ ಅಥವಾ ಬೀಜ ಬಳಸಿದರೂ ಸರಿ ದೇಹದಲ್ಲಿ ತುಂಬಿಕೊಂಡಿರುವ ಕೆಟ್ಟ ಕೊಲೆಸ್ಟ್ರಾಲನ್ನು ಶೇಕಡಾ 14 ರಷ್ಟು ಕರಗಿಸುತ್ತದೆ.

* ನಾರಿನಂಶ-ಕಡಲೆ ಕಾಯಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ ಪೈಲ್ಸ್ ಸಮಸ್ಯೆಯಿಂದ ಬಳಲುತ್ತಿದ್ದವರು ಇದರ ಸೇವನೆಯನ್ನು ಮಾಡಿದರೆ ಉತ್ತಮ. ಅಷ್ಟೇ ಅಲ್ಲ, ಕಡಲೆ ಕಾಯಿ ಸೇವನೆ ಪುರುಷ ಮತ್ತು ಸ್ರೀಯರ ಹಾರ್ಮೋನುಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

English summary

Peanut Health Benefits | Peanut for Good Health and Underweight problem | ಕಡಲೆ ಕಾಯಿ ಆರೋಗ್ಯಕರ ಉಪಯೋಗ | ಕಡಿಮೆ ತೂಕದ ಸಮಸ್ಯೆಗೆ ಕಡಲೆಕಾಯಿ ಪರಿಹಾರ

Peanut also called ground nuts have several health benefits in it. peanut contain high concentration of proteins and anti oxidants. It is also helpful for those who are suffering from underweight problem.
X
Desktop Bottom Promotion