For Quick Alerts
ALLOW NOTIFICATIONS  
For Daily Alerts

ರೆಡಿಮೇಡ್ ಫುಡ್ ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

|
Ready made food
ಸಮಯದ ಅಭಾವವಿದ್ದಾಗಲೋ ಅಥವಾ ಅಡುಗೆ ತಯಾರಿಸೋದಕ್ಕೆ ಬೇಜಾರಾಗಿಯೋ ರೆಡಿಮೇಡ್ ಆಹಾರ ಸಾಮಾಗ್ರಿಗಳಿಗೆ ಮೊರೆ ಹೋಗುವುದು ಸಾಮಾನ್ಯ. ಆದರೆ ಎಲ್ಲಾ ರೆಡಿಮೇಡ್ ಆಹಾರಗಳೂ ಎಲ್ಲಾ ಸಮಯದಲ್ಲೂ ತಿನ್ನುವುದಕ್ಕೆ ಅಷ್ಟು ಆರೋಗ್ಯಕರವಾಗಿರುವುದಿಲ್ಲ. ಆದರೆ ಯಾವ ರೀತಿಯ ರೆಡಿಮೇಡ್ ಆಹಾರ ಸಾಮಾಗ್ರಿಯನ್ನು ಕೊಂಡುಕೊಂಡರೆ ಉತ್ತಮ ಎಂಬುದನ್ನು ಇಲ್ಲಿ ನೀಡಲಾಗಿದೆ.

* ಬೇಯಿಸಿದ ಮತ್ತು ಕಡಿಮೆ ಎಣ್ಣೆ ಇರುವ ಆಹಾರ ಪದಾರ್ಥವನ್ನೇ ಆಯ್ದುಕೊಳ್ಳಿ. ಆ ಆಹಾರಗಳು ತಾಜಾ ತಯಾರಿಸಿದ್ದಾಗಲಿ.

* ಸಲಾಡ್ ಗಳಂತಹ ಆಹಾರಗಳನ್ನು ತೆಗೆದುಕೊಳ್ಳಿ. ಹೆಚ್ಚು ಖಾರವಿರದಂತಹ ಮತ್ತು ತರಕಾರಿಗಳಿರುವ ರೆಡಿಮೇಡ್ ಆಹಾರವನ್ನು ತೆಗೆದುಕೊಳ್ಳಬಹುದು.

* ಬೆಣ್ಣೆ, ಚೀಸ್, ಕ್ರೀಂ ಮತ್ತು ಇನ್ನಿತರ ಡೈರಿ ಉತ್ಪಾದನೆಗಳನ್ನೊಳಗೊಂಡಿರುವ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳದಿದ್ದರೆ ಉತ್ತಮ.

* ಸುಲಭವಾಗಿ ಜೀರ್ಣವಾಗುವಂತಹ ಮತ್ತು ಹೆಚ್ಚು ಶಕ್ತಿ ಒದಗಿಸುವ ಧಾನ್ಯಗಳಿಂದ ತಯಾರಿಸಿರುವ ರೆಡಿಮೇಡ್ ಆಹಾರವನ್ನು ಕೊಂಡುಕೊಳ್ಳಬಹುದು. ಪಾಸ್ತಾ, ರಾಗಿ ಮುದ್ದೆ ಮುಂತಾದವನ್ನು ತೆಗೆದುಕೊಂಡರೆ ನಿಮ್ಮ ಆರೋಗ್ಯ ಸಧೃಡಗೊಳ್ಳುತ್ತದೆ.

* ಎಣ್ಣೆಯಲ್ಲಿ ಕರಿದ, ಎಣ್ಣೆಯಲ್ಲಿ ಅದ್ದಿದ ಮತ್ತು ತುಪ್ಪ ಹೆಚ್ಚು ಬಳಸಿರುವ ಆಹಾರ ಪದಾರ್ಥಗಳನ್ನು ಅಂದರೆ ಅಂಟಾಗಿರುವ ಸಿಹಿ ತಿಂಡಿ ಮತ್ತು ಉಪ್ಪಿನಕಾಯಿಗಳನ್ನು ಮುಟ್ಟದಿರುವುದೇ ಒಳ್ಳೆಯದು.

* ತಕ್ಷಣವೇ ದೊರೆಯುವ ಆದರೆ ಹೆಚ್ಚು ಕ್ಯಾಲೋರಿಗಳನ್ನು ಒಳಗೊಂಡಿರುವ ರೆಡಿಮೇಡ್ ಆಹಾರಗಳನ್ನು ಯಾವುದೇ ಕಾರಣಕ್ಕೂ ತಿನ್ನದಿದ್ದರೆ ಒಳಿತು.

English summary

Ready made food | Healthy eating | ಸಿದ್ಧ ಆಹಾರ | ಸಿದ್ಧ ಆಹಾರದ ಬಳಕೆ

All working professionals need to know that not all ready made food stuffs are safe to eat all time. Today we shall tell you on what type of ready made foods are safe to eat. Take a look
Story first published: Monday, August 15, 2011, 15:02 [IST]
X
Desktop Bottom Promotion