For Quick Alerts
ALLOW NOTIFICATIONS  
For Daily Alerts

ಒಂದು ತಿಂಗಳು ನಿತ್ಯ ಶುಂಠಿ ಸೇವಿಸಿದರೆ ನಮ್ಮ ದೇಹದಲ್ಲಿ ಈ ಆರೋಗ್ಯಕರ ಬದಲಾವಣೆ ಆಗುತ್ತದೆ

|

ಆಯುರ್ವೇದದ ಪ್ರಕಾರ ಭಾರತೀಯ ಮಸಾಲೆ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿದರೆ ಸಾಕು ಸರ್ವ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ ಮತ್ತು ನಿವಾರಣೆ ಮಾಡುತ್ತದೆ.

ಅಂಥಾ ಪರಿಣಾಮಕಾರಿ ಮಸಾಲೆ ಪದಾರ್ಥಗಳಲ್ಲಿ ಒಂದಾದ ಶುಂಠಿ ಅಗಾದವಾದ ಶಕ್ತಿ ಹಾಗೂ ಅನಾರೋಗ್ಯ ತಡೆಯುವ ಗುಣವನ್ನು ಹೊಂದಿದೆ.

123

ಈ ಶುಂಠಿಯನ್ನು ಒಂದು ತಿಂಗಳ ಕಾಲ ನಿತ್ಯ ಇಂತಿಷ್ಟು ಸೇವಿಸಿದರೆ ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
ಈ ಶುಂಠಿಯ ಪೋಷಕಾಂಶಗಳೇನು, ಯಾವೆಲ್ಲಾ ಕಾಯಿಲೆಗೆ ಮದ್ದು ಈ ಶುಂಠಿ, ಇದನ್ನು ನಿತ್ಯ ಸೇವಿಸಿದರೆ ಏನಾಗುತ್ತದೆ ಮುಂದೆ ತಿಳಿಯೋಣ:

ಶುಂಠಿಯಲ್ಲಿರುವ ಪೋಷಕಾಂಶಗಳು
ಶುಂಠಿಯು ಬಹಳ ಗಾಢವಾದ ರುಚಿಯನ್ನು ಹೊಂದಿರುವ ಮಸಾಲೆ. ಶುಂಠಿಯು ರುಚಿ ಮಾತ್ರವಲ್ಲ, ಸಾಕಷ್ಟು ಉತ್ತಮ ಗುಣಗಳನ್ನು ಹೊಂದಿದೆ.
* ಶುಂಠಿಯಲ್ಲಿ ಜಿಂಜರಾಲ್, ಶೋಗೋಲ್, ಜಿಂಗೈಬೆರೆನ್ ಮತ್ತು ಹಲವು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ.
* ಶುಂಠಿಯಲ್ಲಿ ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿದೆ. ಆಯುರ್ವೇದ ಕಾಲದಿಂದಲೂ ಶುಂಠಿಯನ್ನು ಎಲ್ಲಾ ರೀತಿಯ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು.
* ನಿಯಮಿತವಾಗಿ ಶುಂಠಿ ತಿನ್ನುವುದು ನಮ್ಮ ದೇಹವನ್ನು ಆರೋಗ್ಯಕರವಾಗಿಡಲು ಸಾಕಷ್ಟು ರೀತಿ ಸಹಾಯ ಮಾಡುತ್ತದೆ.

ಯಾವೆಲ್ಲಾ ಕಾಯಿಲೆಗೆ ಮದ್ದು ಈ ಶುಂಠಿ
* ಶುಂಠಿಯು ಜಿಂಜರಾಲ್ ಅನ್ನು ಹೊಂದಿದ್ದು ಇದು ವಾಕರಿಕೆ ಮತ್ತು ವಾಂತಿಯಂತಹ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಶುಂಠಿಯು ಊದಿಕೊಂಡ ಕೀಲುಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
* ಶುಂಠಿಯು ಶೊಗೋಲ್ ಜೀವಸತ್ವಗಳನ್ನು ಸಹ ಹೊಂದಿದ್ದು, ಇದು ನೋವು ನಿವಾರಕವಾಗಿ ಕೆಲಸ ಮಾಡುತ್ತದೆ, ಅಷ್ಟೇ ಅಲ್ಲದೆ ಕ್ಯಾನ್ಸರ್ ಮತ್ತು ಹೃದ್ರೋಗದ ವಿರುದ್ಧವೂ ಹೋರಾಡುತ್ತದೆ.
* ಶುಂಠಿಯಲ್ಲಿರುವ ಜಿಂಜಿಬೆರೆನ್ ಅಂಶವು ವಿಶೇಷವಾಗಿ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು.
* ಶುಂಠಿಯು ಬಹುತೇಕರನ್ನು ಕಾಡುವ ಕಾಯಿಲೆ ಮಧುಮೇಹ ವಿರೋಧಿ ಪರಿಣಾಮವನ್ನು ಸಹ ಹೊಂದಿದೆ ಮತ್ತು ಮೆದುಳಿನ ಕಾರ್ಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಸುಧಾರಿಸುತ್ತದೆ.

ಒಂದು ತಿಂಗಳ ಕಾಲ ಪ್ರತಿದಿನ ಶುಂಠಿ ತಿಂದರೆ ಏನಾಗುತ್ತದೆ?
ಪ್ರತಿದಿನ ಶುಂಠಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅದರೆ ನೆನಪಿಡಿ, ನೀವು ಪ್ರತಿದಿನ ಶುಂಠಿಯ ತುಂಡನ್ನು ಜಗಿದು ತಿನ್ನುವ ಅಗತ್ಯವಿಲ್ಲ. ಬದಲಾಗಿ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮತ್ತು ಅದನ್ನು ನಿಮ್ಮ ಚಹಾ ಅಥವಾ ಅಹಾರದೊಂದಿಗೆ ಮಿಶ್ರಣ ಮಾಡಿ ಸವಿಯಬಹುದು.

ಪ್ರತಿದಿನ ಶುಂಠಿ ಸೆವಿಸುವುದರಿಂದ ನಮ್ಮ ದೇಹದಲ್ಲಾಗುವ ಬದಲಾವಣೆಗಳೇನು:

* ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಒಂದು ತಿಂಗಳ ಕಾಲ ಪ್ರತಿದಿನ ಶುಂಠಿಯನ್ನು ತಿನ್ನುವುದು ದೇಹದಲ್ಲಿ "ಕೆಟ್ಟ" ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಪದಾರ್ಥಗಳಿಂದ ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಪ್ರಮಾಣ ಕಡಿಮೆಯಾಗುತ್ತದೆ.

* ಉರಿಯೂತ ನಿವಾರಕ: ಶುಂಠಿಯ ಉರಿಯೂತದ ಪರಿಣಾಮದಿಂದಾಗಿ ದೇಹದಲ್ಲಿ ಉರಿಯೂತವು ವೇಗವಾಗಿ ಕಡಿಮೆಯಾಗುತ್ತದೆ.

* ವಾಕರಿಕೆ ಇಲ್ಲವಾಗಿಸುತ್ತದೆ: ಪ್ರತಿದಿನ ಶುಂಠಿ ತಿನ್ನುವುದರಿಂದ ನಿಮಗೆ ಆಗಾಗ ಅಥವಾ ಬೆಳಗಿನ ಹೊತ್ತು ವಾಕರಿಕೆಯ ಸಮಸ್ಯೆ ಇದ್ದರೆ ನಿವಾರಣೆಯಾಗುತ್ತದೆ. ಅದರಲ್ಲೂ, ವಿಶೇಷವಾಗಿ ಗರ್ಭಿಣಿಯರು ಮತ್ತು ಕೀಮೋಥೆರಪಿಗೆ ಒಳಗಾಗುವವರು ಇದರಿಂದ ಸಾಕಷ್ಟು ಪ್ರಯೋಜನ ಪಡೆಯಬಹುದು.

* ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಶುಂಠಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಜ್ವರ, ಶೀತ, ಕೆಮ್ಮು ಅಥವಾ ವೈರಸ್‌ನಿಂದ ಅನಾರೋಗ್ಯಕ್ಕೀಡಾಗಿದ್ದರೆ ಶುಂಠಿಯು ನಿಮಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

* ಸ್ನಾಯು ನೋವು ನಿವಾರಣೆ: ನೀವು ಸ್ನಾಯು ನೋವು ಅಥವಾ ಕೈಕಾಲುಗಳಲ್ಲಿ ನೋವು ಹೊಂದಿದ್ದರೆ ಶುಂಠಿ ತಿನ್ನುವುದು ಇದಕ್ಕೆ ಉತ್ತಮ ಪರಿಹಾರವಾಗಿದೆ. ಪ್ರತಿದಿನ ಶುಂಠಿಯನ್ನು ಸೇವಿಸುವುದರಿಂದ ಕೀಲು ನೋವುಗಳು ಕ್ರಮೇಣ ಕಡಿಮೆಯಾಗುತ್ತದೆ.

* ಕರುಳಿನ ಕ್ರಿಯೆಯನ್ನು ಉತ್ತೇಜಿಸುತ್ತದೆ: ಪ್ರತಿದಿನವೂ ಶುಂಠಿ ತಿನ್ನುವುದು ನಿಮ್ಮ ಕರುಳಿನ ಕ್ರಿಯೆ ಉತ್ತಮವಾಗಿಸಲು ಬಹಳಷ್ಟು ಒಳ್ಳೆಯದು. ನೀವು ನಿಯಮಿತವಾಗಿ ಮಲಬದ್ಧತೆಯಿಂದ ಬಳಲುತ್ತಿದ್ದರಂತೂ ಶುಂಠಿ ಉತ್ತಮ ಔಷಧ.

* ಮುಟ್ಟಿನ ನೋವು: ಹೆಣ್ಣುಮಕ್ಕಳಿಗೆ ತಿಂಗಳ ಸಮಯದಲ್ಲಿ ಹೆಚ್ಚು ನೋವು ಬಾಧಿಸುತ್ತಿದ್ದರೆ ಪ್ರತಿದಿನ ಶುಂಠಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಶುಂಠಿಯು ತೀವ್ರವಾದ ಕಿಬ್ಬೊಟ್ಟೆಯ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.

English summary

What Happens If You Eat Ginger Daily in Kannada

Here we are discussing about What Happens If You Eat Ginger Daily in Kannada. Read more.
Story first published: Wednesday, December 21, 2022, 8:05 [IST]
X
Desktop Bottom Promotion