For Quick Alerts
ALLOW NOTIFICATIONS  
For Daily Alerts

ರಾಷ್ಟ್ರೀಯ ಪೋಷಕಾಂಶಗಳ ವಾರ: ಈ ರೀತಿ ಸ್ಮಾರ್ಟ್ ಆಗಿ ತಿಂದರೆ ಕಾಯಿಲೆ ಬರಲ್ಲ

|

ಆರೋಗ್ಯದ ಗುಟ್ಟು ಅಡಗಿರುವುದೇ ನಾವು ತಿನ್ನುವ ಆಹಾರದಲ್ಲಿ. ನಾವು ಹೇಗೆ ಆಹಾರ ಸೇವಿಸುತ್ತೇವೆ ಅದರಂತೆ ನಮ್ಮ ಆರೋಗ್ಯ ಕೂಡ ಇರುತ್ತದೆ. ಸಮತೂಕ ಹೊಂದಿರಬೇಕು, ರೋಗ ನಿರೋಧಕ ಶಕ್ತಿ ಚೆನ್ನಾಗಿರಬೇಕು ಎಂದರೆ ಸ್ಮಾರ್ಟ್ ಆಗಿ ತಿನ್ನುವುದು ಗೊತ್ತಿರಬೇಕು.

ಸ್ಮಾರ್ಟ್‌ ಆಗಿ ತಿನ್ನುವುದು ಎಂದರೇನು? ನಾವು ಎಷ್ಟು ಆಹಾರ ಸೇವಿಸಿದ್ದೆವು ಅನ್ನುವುದಕ್ಕಿಂತ ನಾವು ಏನು ಸೇವಿಸಿದ್ವಿ ಎಂಬವುದು ಮುಖ್ಯವಾಗುತ್ತೆ. ನಾವು ತಿನ್ನುವ ಆಹಾರದಲ್ಲಿ ಪೋಷಕಾಂಶಗಳಿಲ್ಲ ಎಂದರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಇದರಿಂದ ಕಾಯಿಲೆ ಹೆಚ್ಚುವುದು.

ಆದ್ದರಿಂದ ವಿಟಮಿನ್‌ಗಳು ಹಾಗೂ ಖನಿಜಾಂಶಗಳಿರುವ ಆಹಾರ ಸೇವಿಸಬೇಕು. ಅದರಲ್ಲೂ ಈ 5 ಪೋಷಕಾಂಶಗಳು ಇರುವಂತೆ ನೋಡಿಕೊಳ್ಳಿ

1.ಪ್ರೊಟೀನ್‌

1.ಪ್ರೊಟೀನ್‌

ದೇಹದ ಬೆಳವಣಿಗೆಗೆ ಹಾಗೂ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರೊಟೀನ್ ಅವಶ್ಯಕ. ದೇಹದಲ್ಲಿರುವ ಪ್ರತಿಯೊಂದು ಜೀವ ಕಣಗಳಿಗೆ ಪ್ರೊಟೀನ್ ಅವಶ್ಯಕವಾಗಿದೆ. ಪ್ರೊಟೀನ್‌ಗಳು ವಿವಿಧ ಬಗೆಯ ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ. ಆದರೆ ಎಲ್ಲಾ ಬಗೆಯ ಅಮೈನೋ ಆಮ್ಲವನ್ನು ದೇಹವು ಉತ್ಪತ್ತಿ ಮಾಡುವುದಿಲ್ಲ, ಅವುಗಳನ್ನು ಆಹಾರದ ಮೂಲಕ ಸೇವಿಸಬೇಕಾಗುತ್ತದೆ.

ಅಮೈನೋ ಆಮ್ಲಗಳಿರುವ ಆಹಾರಗಳು

* ಮಾಂಸಾಹಾರ

* ಮೊಟ್ಟೆ

* ಹಾಲಿನ ಉತ್ಪನ್ನಗಳು

* ಸೋಯಾ

* ನಟ್ಸ್‌

* ಕೆಲವೊಂದು ಸಸ್ಯಾಹಾರಗಳಲ್ಲಿಯೂ ಪ್ರೊಟೀನ್‌ ಇರುತ್ತದೆ ಉದಾಹರಣೆಗೆ ಫ್ಲ್ಯಾಕ್ಸಿ ಸೀಡ್.

ನಮ್ಮ ದೇಹದ ತೂಕಕ್ಕೆ ತಕ್ಕಂತೆ ಪ್ರೊಟೀನ್ ಆಹಾರ ಸೇವಿಸಬೇಕಾಗುತ್ತದೆ. 1 ಕೆಜಿ ತೂಕಕ್ಕೆ 0.8ಗ್ರಾಂ ಪ್ರೊಟೀನ್ ಅವಶ್ಯಕ.

2. ಕಾರ್ಬೋಹೈಡ್ರೇಟ್ಸ್‌

2. ಕಾರ್ಬೋಹೈಡ್ರೇಟ್ಸ್‌

ಕೆಲವರು ದಪ್ಪಗಾಗುತ್ತೇವೆ ಎಂದು ಕಾರ್ಬ್ಸ್ ತಿನ್ನುವುದು ಬಿಡುತ್ತಾರೆ. ಆದರೆ ಕಾರ್ಬ್ಸ್ ದೇಹಕ್ಕೆ ಅವಶ್ಯಕವಾಗಿದೆ, ಅದರಲ್ಲೂ ಮೆದುಳಿನ ಆರೋಗ್ಯಕ್ಕೆ ಅವಶ್ಯವಾಗಿದೆ. ನಿಮ್ಮ ಮೆದುಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ಹಹಿಸಬೇಕೆಂದರೆ ಕಾರ್ಬ್ಸ್ ಸೇವಿಸಲೇಬೇಕು. ಕಾರ್ಬ್ಸ್‌ ಕೊರತೆ ಉಂಟಾದರೆ ಮರೆವಿನ ಸಮಸ್ಯೆ ಕೂಡ ಉಂಟಾಗಬಹುದು.

* ಧಾನ್ಯಗಳು

*ಗೋಧಿ

* ನವಣೆ

* ಕೆಂಪಕ್ಕಿ

* ಕೆಲವೊಂದು ತರಕಾರಿ ಮತ್ತು ಹಣ್ಣುಗಳಲ್ಲಿ ಕಾರ್ಬ್ಸ್ ಇರುತ್ತದೆ.

ಆದ್ದರಿಂದ ಕಾರ್ಬ್ಸ್‌ ಆಹಾರವನ್ನು ಪ್ರತಿದಿನ ಆಹಾರದಲ್ಲಿ ಸೇವಿಸಿ.

3. ಕೊಬ್ಬಿನಂಶ

3. ಕೊಬ್ಬಿನಂಶ

ಕೊಬ್ಬಿನಂಶ ಕೂಡ ದೇಹಕ್ಕೆ ಅವಶ್ಯಕವಾಗಿದೆ. ನಮ್ಮ ದೇಹವು ಆಹಾರದಲ್ಲಿನ ವಿಟಮಿನ್‌ಗಳು ಹಾಗೂ ಖನಿಜಾಂಶ ಹೀರಿಕೊಳ್ಳಲು ಕೊಬ್ಬಿನಂಶ ಅವಶ್ಯಕ. ಕೊಬ್ಬಿನಂಶ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಆರೋಗ್ಯಕರ ಕೊಬ್ಬಿನಂಶ ಸೇವನೆಯಿಂದ ಹೃದಯಾಘಾತ ಕೂಡ ತಡೆಗಟ್ಟಬಹುದು.

ಆರೋಗ್ಯಕರ ಕೊಬ್ಬಿನಂಶವಿರುವ ಆಹಾರಗಳು

* ನಟ್ಸ್

* ತೆಂಗಿನೆಣ್ಣೆ

* ಸಾಸಿವೆಯೆಣ್ಣೆ

* ಎಳ್ಳೆಣ್ಣೆ

4. ವಿಟಮಿನ್‌ಗಳು

4. ವಿಟಮಿನ್‌ಗಳು

ದೇಹದಲ್ಲಿ ಚಯಪಚಯ ಕ್ರಿಯೆ ಸರಿಯಾಗಿ ನಡೆಯಲು ವಿಟಮಿನ್ಸ್‌ ಅವಶ್ಯಕ. ಆರೋಗ್ಯಕರ ದೇಹಕ್ಕೆ ವಿಟಮಿನ್‌ A, C, D, E, K ಮತ್ತು B ಕಾಂಪ್ಲೆಕ್ಸ್ ಅವಶ್ಯಕ. ಪ್ರತಿಯೊಂದು ವಿಟಮಿನ್‌ ಕೂಡ ಅದರದ್ದೇ ಆದ ಪ್ರಾಮುಖ್ಯತೆ ಹೊಂದಿದೆ. ಒಂದು ವಿಟಮಿನ್‌ ಕೊರತೆಯಾದರೂ ನಾನಾ ತೊಂದರೆಗಳು ಉಂಟಾಗುವುದು.

ಆರೋಗ್ಯಕರ ತ್ವಚೆ. ಮೂಳೆಯ ಆರೋಗ್ಯ, ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು, ಗಾಯ ಬೇಗನೆ ಒಣಗಲು, ರೋಗ ನಿರೋಧಕ ಶಕ್ತಿ ಉತ್ತಮವಾಗಿರಲು ವಿಟಮಿನ್ಸ್‌ ಅವಶ್ಯಕ.

ವಿಟಮಿನ್ಸ್ ನಿಮಗೆ ಹಣ್ಣು ಹಾಗೂ ತರಕಾರಿಗಳ ಸೇವನೆಯಿಂದ ದೊರೆಯುತ್ತದೆ.

5. ಖನಿಜಾಂಶಗಳು

5. ಖನಿಜಾಂಶಗಳು

ಮೂಳೆಗಳ ಆರೋಗ್ಯಕ್ಕೆ ಖನಿಜಾಂಶಗಳು ಅವಶ್ಯಕ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ, ಹಾರ್ಮೋನ್‌ಗಳ ಸಮತೋಲನಕ್ಕೆ, ರೋಗ ನಿರೋಧಕ ಶಕ್ತಿ ವೃದ್ಧಿಸಲು ಖನಿಜಾಂಶಗಳು ಅವಶ್ಯಕ.

ಕ್ಯಾಲ್ಸಿಯಂ, ಕಬ್ಬಿಣದಂಶ, ಪೊಟಾಷ್ಯಿಯಂ, ರಂಜಕ, ಸತು ಈ ಖನಿಜಾಂಶಗಳಿರುವ ಆಹಾರವನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ.

English summary

National Nutrition Week 2022: History, Theme and Importance of Feeding Smart in Kannada

National Nutrition Week 2022:These 5 Nutrition Must For Our Body, read on....
Story first published: Thursday, September 1, 2022, 11:12 [IST]
X
Desktop Bottom Promotion