For Quick Alerts
ALLOW NOTIFICATIONS  
For Daily Alerts

ಈ ಸಿಂಪಲ್‌ ಟ್ರಿಕ್ಸ್‌ ಸಾಕು ಮಾವಿನ ಹಣ್ಣಿಗೆ ರಾಸಾಯನಿಕ ಹಾಕಲಾಗಿದೆಯೇ, ಇಲ್ಲ ಎಂದು ತಿಳಿಯಲು

|

ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಕಾಲಿಟ್ಟಿದ್ದೆ. ಇನ್ನು ಎರಡರಿಂದ -ಮೂರು ತಿಂಗಳು ಮಾವಿನ ಹಣ್ಣುಗಳದ್ದೇ ದರಬಾರು. ಬಗೆ-ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಮಾರುಕಟ್ಟೆಗೆ ಹೋದರೆ ಮಾವಿನ ಘಮ್ಮೆನ್ನುವ ಸುವಾಸನೆ ಕೇಳಿದಾಗ ಮಾವಿನ ಹಣ್ಣು ಖರೀದಿಸದೆ ಬರಲ ಮನಸ್ಸಾಗುವುದೇ ಇಲ್ಲ.

ಆದರೆ ಮಕ್ಕಳಿಗಾಗಿ, ನಮಗಾಗಿ ಹಣ್ಣುಗಳನ್ನು ಖರೀದಿಸುವಾಗ ಇವುಗಳನ್ನು ರಾಸಾಯನಿಕ ಹಾಕಿ ಹಣ್ಣು ಮಾಡಿರಬಹುದೇ ಎಂಬ ಒಂದು ಚಿಕ್ಕ ಅಳುಕು ನಮ್ಮಲ್ಲಿ ಇದ್ದೇ ಇರುತ್ತದೆ. ಮಾರುಕಟ್ಟೆಯಿಂದ ಖರೀದಿಸುವ ಮಾವಿನಹಣ್ಣುಗಳನ್ನು ರಾಸಾಯನಿಕ ಹಾಕಿ ಹಣ್ಣು ಮಾಡಲಾಗಿದೆಯೇ? ಎಂಬುವುದನ್ನು ಈ ಸಿಂಪಲ್‌ ಪರೀಕ್ಷೆಗಳಿಂದ ತಿಳಿಯಬಹುದು ನೋಡಿ:

1. ರುಚಿ

1. ರುಚಿ

ಮಾವಿನ ಹಣ್ಣುಸ್ವಭಾವಿಕವಾಗಿ ಹಣ್ಣಾಗಿದ್ದರೆ ಅಥವಾ ಕಾರ್ಬೈಡ್ ಹಾಕಿ ಹಣ್ಣು ಮಾಡಿದ್ದರೆ ರುಚಿಯಲ್ಲಿ ವ್ಯತ್ಯಾಸ ಇರುತ್ತದೆ. ನೀವು ಹಣ್ಣಾದ ಮಾವು ತಿಂದರೂ ಹಸಿ ಮಾವು ತಿಂದಾಗ ಅದರ ಕೆನೆಯಿಂದುಂಟಾಗುವ ಉರಿಯ ಅನುಭವ ಕೃತಕವಾಗಿ ಹಣ್ಣು ಮಾಡಿದ ಹಣ್ಣನ್ನು ತಿಂದಾಗಲೂ ಅನಿಸುವುದು. ಅಲ್ಲದೆ ಹಣ್ಣುಗಳು ನೋಡಲು ಹಳದಿ ಬಣ್ಣ ಇದ್ದರೂ ತಿಂದಾಗ ತುಂಬಾ ಹುಳಿ-ಹುಳಿ ಇರುತ್ತೆ.

2. ರಸ ಕಡಿಮೆ ಇರುತ್ತೆ

2. ರಸ ಕಡಿಮೆ ಇರುತ್ತೆ

ಕಾರ್ಬೈಡ್ ಹಾಕಿ ಹಣ್ಣು ಮಾಡಿದ್ದರೆ ಅಂಥ ಮಾವಿನ ಹಣ್ಣು ಕತ್ತರಿಸಿದಾಗ ರಸ ತುಂಬಾ ತುಂಬಾನೇ ಕಡಿಮೆ ಇರುತ್ತೆ.

3. ಬಣ್ಣ

3. ಬಣ್ಣ

ಕಾರ್ಬೈಡ್ ಹಾಕಿ ಹಣ್ಣ ಮಾಡಿದ್ದರೆ ನೋಡಲು ಹಳದಿ ಬಣ್ಣಕ್ಕೆ ತಿರುಗಿದ್ದರೂ ಅದ ತೊಟ್ಟು ನೋಡಿ, ಆ ಭಾಗ ಹಸಿರು ಅಥವಾ ತೆಳು ಹಳದಿ ಬಣ್ಣದಲ್ಲಿ ಇರುತ್ತೆ. ಇಂಥ ಹಣ್ಣುಗಳು ಕಣ್ಣಿಗೆ ಆಕರ್ಷಕವಾಗಿ ಕಂಡರೂ ಆರೋಗ್ಯಕ್ಕೆ ಹಾನಿಕಾರಕ.

ಈ ಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದು

ಈ ಪರೀಕ್ಷೆಗಳ ಮೂಲಕ ಕಂಡು ಹಿಡಿಯಬಹುದು

* ಮಾವಿನ ಹಣ್ಣನ್ನು ಒಂದು ಬಕೆಟ್‌ ನೀರಿನಲ್ಲಿ ಹಾಕಿ ಅದು ನೀರಿನ ಮೇಲೆ ತೇಲಿದರೆ ಆ ಮಾವಿನ ಹಣ್ಣಿಗೆ ಕಾರ್ಬೈಡ್‌ ಹಾಕಲಾಗಿದೆ.

* ಇನ್ನು ಕಾರ್ಬೈಡ್‌ ಹಾಕಿ ಮಾವಿನ ಹಣ್ಣು C₂H₂ ( Acetylene gas ) ಉತ್ಪತ್ತಿ ಮಾಡುತ್ತೆ.

* ಮಾವಿನ ಹಣ್ಣಿನ ಬಾಕ್ಸ್ ಸಮೀಪ ಬೆಂಕಿಕಡ್ಡಿ ಗೀರಿದರೆ ಕಾರ್ಬೈಡ್ ಹಾಕಿದ್ದರೆ ಆ ಮಾವಿನ ಹಣ್ಣಿನ ಮೇಲ್ಬಾಗದಲ್ಲಿ ಬೆಂಕಿ ಕಾಣಿಸಬಹುದು. ಆದರೆ ಈ ಪರೀಕ್ಷೆ ತುಂಬಾ ಎಚ್ಚರಿಕೆಯಿಂದ ಮಾಡಿ, ಇಲ್ಲದಿದ್ದರೆ ಬೆಂಕಿ ಹತ್ತಿಕೊಳ್ಳಬಹುದು.

ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣಿನಲ್ಲಿ ಕಂಡು ಬರುವ ವ್ಯತ್ಯಾಸ

ನೈಸರ್ಗಿಕವಾಗಿ ಹಣ್ಣಾದ ಮಾವಿನ ಹಣ್ಣಿನಲ್ಲಿ ಕಂಡು ಬರುವ ವ್ಯತ್ಯಾಸ

* ಮಾವಿನ ಹಣ್ಣನ್ನು ಬಕೆಟ್ ನೀರಿನಲ್ಲಿ ಹಾಕಿದರೆ ಅದು ಮುಳುಗುತ್ತೆ.

* ನೈಸರ್ಗಿಕವಾಗಿ ಹಣ್ಣಾದರೆ ತೂಕ ಹಾಗೂ ಮಾವಿನ ಹಣ್ಣಿನಲ್ಲಿ ರಸ ಹೆಚ್ಚಾಗಿರುತ್ತೆ.

* ನೈಸರ್ಗಿಕವಾದ ಹಣ್ಣಾದರೆ ತುಂಬಾನೇ ರುಚಿಯಾಗಿರುತ್ತೆ.

ರಾಸಾಯನಿಕ ಹಾಕಿರುವ ಹಣ್ಣುಗಳನ್ನು ತೊಳೆದರೆ ರಾಸಾಯನಿಕ ತೆಗೆಯಬಹುದೇ?

ರಾಸಾಯನಿಕ ಹಾಕಿರುವ ಹಣ್ಣುಗಳನ್ನು ತೊಳೆದರೆ ರಾಸಾಯನಿಕ ತೆಗೆಯಬಹುದೇ?

ರಾಸಾಯನಿಕ ಹಾಕಿರುವ ಮಾವಿನ ಹಣ್ಣುಗಳನ್ನು ತೊಳೆದರೆ ಸ್ವಲ್ಪ ರಾಸಾಯನಿಕ ಹೋಗಬಹುದು. ಆದರಲ್ಲಿ ರಾಸಾಯನಿಕ ಅಂಶ ಇದ್ದೇ ಇರುತ್ತದೆ. ಮಧುಮೇಹ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗುವುದು. ಮಕ್ಕಳ ಆರೋಗ್ಯದ ಮೇಲೆ ತುಂಬಾನೇ ಕೆಟ್ಟ ಪರಿಣಾಮ ಬೀರುವುದು.

English summary

How To Identify Artificially Ripened Mangoes in Kannada

How to identify artificially ripened mangoes in Kannada, read on...
X
Desktop Bottom Promotion