For Quick Alerts
ALLOW NOTIFICATIONS  
For Daily Alerts

ಮಧುಮೇಹ ನಿಯಂತ್ರಿಣಕ್ಕೆ, ತೂಕ ಇಳಿಕೆಗೆ ಗೋಧಿ ಹುಲ್ಲಿನ ಜ್ಯೂಸ್ ಹೇಗೆ ಬಳಸಬೇಕು?

|

ಗೋಧಿ ಹುಲ್ಲಿನ ಪ್ರಯೋಜನಗಳ ಬಗ್ಗೆ ನಿಮ್ಮಲ್ಲಿ ಅನೇಕರಿಗೆ ತಿಳಿದರಿಬಹುದು. ಇನ್ನು ಮೈ ತೂಕ ಇಳಿಕೆ ಮಾಡಬೇಕೆಂದು ಬಯಸುವವರಿಗೆ ಈ ಹುಲ್ಲಿನ ಜ್ಯೂಸ್‌ ಕುಡಿಯುವಂತೆ ಕೆಲವರು ಸಲಹೆಯನ್ನೂ ಕೊಡುತ್ತಾರೆ. ಆದರೆ ಈ ಹುಲ್ಲು ತೂಕ ಇಳಿಕೆಗೆ ಮಾತ್ರವಲ್ಲ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣ ಮಾಡುವುದರಿಂದ ಮಧುಮೇಹಿಗಳಿಗೂ ತುಂಬಾನೇ ಒಳ್ಳೆಯದು.

ನ್ಯೂಟ್ರಿಷಿಯನಿಸ್ಟ್ ಪ್ರಕಾರ ಯಾವ ಆಹಾರದಲ್ಲಿ ಸಾಕಷ್ಟು ಪೋಷಕಾಂಶ ನೀಡುತ್ತದೋ ಅಂತಹ ಆಹಾರ ಸೂಪರ್‌ ಫುಡ್‌ ಆಗಿದ್ದು ಈ ಆಹಾರಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಾಗಿದೆ. ಗೋಧಿ ಹುಲ್ಲು ಅಂಥದ್ದೇ ಒಂದು ಆಹಾರವಾಗಿದೆ. ಇದನ್ನು ನಮ್ಮ ಪೂರ್ವಜರೂ ಬಳಸುತ್ತಿದ್ದರು.

ಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು

ಗೋಧಿ ಹುಲ್ಲಿನಲ್ಲಿರುವ ಪೋಷಕಾಂಶಗಳು

ಇದರಲ್ಲಿ ಅಮೈನೋ ಆಮ್ಲ, ಖನಿಜಾಂಶಗಳು, ಕ್ಲೋರೋಪೈಲ್, ವಿಟಮಿನ್‌ಗಳು, ಮೆಗ್ನಿಷ್ಯಿಯಂ, ಕಬ್ಬಿಣದಂಶ, ಕ್ಯಾಲ್ಸಿಯಂ, ಎಂಜೈಮ್ಸ್ ಇದ್ದು ಗ್ಲುಟೀನ್ ಫ್ರೀ ಆಹಾರ ತಿನ್ನುವವರಿಗೆ ಈ ಗೋಧಿ ಹುಲ್ಲು ವರವಾಗಿದೆ.

ಗೋಧಿ ಹುಲ್ಲಿನ ಜ್ಯೂಸ್‌ ಹೇಗೆ ತೆಗೆದು ಕೊಳ್ಳಬೇಕು?

ಗೋಧಿ ಹುಲ್ಲಿನ ಜ್ಯೂಸ್‌ ಹೇಗೆ ತೆಗೆದು ಕೊಳ್ಳಬೇಕು?

ಇದನ್ನು ಬೆಳಗ್ಗೆ ನೀರಿನ ಜೊತೆ ಬ್ಲೆಂಡ್ ಮಾಡಿ ಜ್ಯೂಸ್ ಆಗಿ ಕುಡಿಯಬಹುದು. ಬೆಳಗ್ಗೆ ಬಿಸಿ ನೀರಿನಲ್ಲಿ ಈ ಜ್ಯೂಸ್‌ ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ಇದು ಅತ್ಯಂತ ಆರೋಗ್ಯಕರ ಜೀವನಶೈಲಿ ಆಗಿದೆ.

ಹೀಗೆ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಪಡೆಯಬಹುದು?

1. ದೇಹವನ್ನು ಡಿಟಾಕ್ಸ್ ಮಾಡುತ್ತದೆ

1. ದೇಹವನ್ನು ಡಿಟಾಕ್ಸ್ ಮಾಡುತ್ತದೆ

ಇದರಲ್ಲಿರುವ ಕ್ಲೋರೋಪೈಲ್ ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುವುದರ ಜೊತೆಗೆ ಲಿವರ್‌ ಆರೋಗ್ಯ ಕಾಪಾಡುತ್ತೆ. ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರ ಹಾಕಿದರೆ ಅನೇಕ ರೋಗವನ್ನು ತಡೆಗಟ್ಟಬಹುದು.

2. ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು

2. ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು

ಇದರಲ್ಲಿರುವ ಎಂಜೈಮ್ಸ್‌ ಆಹಾರ ವಿಭಜನೆಗೆ ಹಾಗೂ ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತೆ. ಇದರಿಂದಾಗಿ ಸಾಮಾನ್ಯವಾಗಿ ಕಾಡುವ ಗ್ಯಾಸ್‌, ಹೊಟ್ಟೆ ಉಬ್ಬುವುದು, ಕಿಬೊಟ್ಟೆಯಲ್ಲಿ ನೋವು ಮುಂತಾದ ಸಮಸ್ಯೆ ಉಂಟಾಗುವುದಿಲ್ಲ.

3. ಚಯಾಪಚಯ ಕ್ರಿಯೆಗೆ ಸಹಕಾರಿ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು

3. ಚಯಾಪಚಯ ಕ್ರಿಯೆಗೆ ಸಹಕಾರಿ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು

ಇದರಲ್ಲಿ ಯಾವುದೇ ಕ್ಯಾಲೋರಿ ಅಥವಾ ಕೊಬ್ಬಿನಂಶ ಇರುವುದಿಲ್ಲ, ಇದರಿಂದಾಗಿ ಚಯಪಚಯ ಕ್ರಿಯೆಗೆ ತುಂಬಾನೇ ಸಹಕಾರಿ. ಇದರಿಂದಾಗಿ ಮೈ ತೂಕವೂ ಕಡಿಮೆಯಾಗುವುದು. ಅಲ್ಲದೆ ಇದು ಬೇಗನೆ ಹಸಿವು ಉಂಟು ಮಾಡುವುದಿಲ್ಲ ಆದ್ದರಿಂದಾಗಿ ಆಗಾಗ ತಿನ್ನಬೇಕು ಎಂದು ಕೂಡ ಅನಿಸುವುದಿಲ್ಲ.

ಇದು ಹೃದಯದ ಸ್ವಾಸ್ಥ್ಯ ಕೂಡ ಹೆಚ್ಚಿಸುತ್ತೆ.

4. ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಸುತ್ತದೆ

4. ರೋಗ ನಿರೋಧಕ ಶಕ್ತಿ ಕೂಡ ವೃದ್ಧಿಸುತ್ತದೆ

ಕೋವಿಡ್‌ 19 ಬಂದ ಮೇಲೆ ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿ ವೃದ್ಧಿಸುವತ್ತ ಹೆಚ್ಚಿನ ಗಮನ ನೀಡುತ್ತಿದ್ದೇವೆ. ಇದರಲ್ಲಿ ಉರಿಯೂತ ಕಡಿಮೆ ಮಾಡುವ ಗುಣವಿದ್ದು ದೇಹವನ್ನು ಬ್ಯಾಕ್ಟಿರಿಯಾ ಹಾಗೂ ಸೋಂಕು ವಿರುದ್ಧ ಹೀರಾಡಲು ಸಮರ್ಥವಾಗಿಸುತ್ತದೆ.

 5. ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಿಸುತ್ತೆ

5. ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಿಸುತ್ತೆ

ಗೋಧಿ ಹುಲ್ಲಿನಲ್ಲಿರು ಕ್ಲೋರೋಪೈಲ್ ಹೀಮೋಗ್ಲೋಬಿನ್‌ನಂತೆಯೇ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಹಾಗೂ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇರುವಂತೆ ನೋಡಿಕೊಳ್ಳುತ್ತದೆ ಅಲ್ಲದೆ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆಯೂ ನೋಡಿಕೊಳ್ಳುತ್ತದೆ.

6. ಜ್ಞಾಪಕ ಶಕ್ತಿಗೂ ಒಳ್ಳೆಯದು

6. ಜ್ಞಾಪಕ ಶಕ್ತಿಗೂ ಒಳ್ಳೆಯದು

ಈ ಜ್ಯೂಸ್‌ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತೆ, ಜ್ಞಾಪಕ ಶಕ್ತಿಯೂ ಹೆಚ್ಚಿಸುತ್ತೆ.

ಈಗ ಅತೀ ಹೆಚ್ಚು ಕಂಡು ಬರುವುದು ಲಿವರ್‌ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಮರೆವು. ಈ ಎಲ್ಲಾ ಸಮಸ್ಯೆಗಳನ್ನು ಗೋಧಿ ಹುಲ್ಲಿನ ಜ್ಯೂಸ್‌ ಕುಡಿದು ತಡೆಗಟ್ಟಬಹುದು ಎಂದಾದರೆ ಇದನ್ನು ನಮ್ಮ ಜೀವನಶೈಲಿಯಲ್ಲಿ ಅಳವಡಿಸುವುದು ಒಳ್ಳೆಯದೇ ಅಲ್ಲೇ?

English summary

Health Benefits of Wheatgrass Juice in Kannada

Here are health benefits of wheatgrass juice, read on...
X
Desktop Bottom Promotion