For Quick Alerts
ALLOW NOTIFICATIONS  
For Daily Alerts

ಹಂದಿ ಜ್ವರದ ಲಕ್ಷಣಗಳೇನು, ತಡೆಗಟ್ಟುವುದು ಹೇಗೆ?

|

ದೇಶದಲ್ಲಿ ಒಂದು ಕಡೆ ಕೊರೊನಾ ವೈರಸ್‌ ಭಯ, ಮತ್ತೊಂದುನ ಕಡೆಯಿಂದ ಹಳೆಯ ಶತ್ರು ಹಂದಿಜ್ವರ ಮರುಕಳುಹಿಸಿದೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ಈಗಾಗಲೇ 9 ಜನ ಬಲಿಯಾಗಿದ್ದಾರೆ.

ರಾಜ್ಯದಲ್ಲಿಯೂ H1N1 ಅಂದರೆ ಹಂದಿ ಜ್ವರ ಪತ್ತೆಯಾಗಿದ್ದು, ಈ ರೋಗದ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ. ಈ ರೋಗ ಹೆಚ್‌1ಎನ್‌1 ಎಂಬ ವೈರಸ್‌ನಿಂದ ಹರಡುವ ರೋಗವಾಗಿದೆ. ಈ ರೋಗ ಸೋಂಕಿತ ವ್ಯಕ್ತಿಗಳಿಂದ ಮತ್ತೊಬ್ಬರಿಗೆ ಹರಡುವುದು.

ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅಥವಾ ರೋಗ ಇರುವ ವ್ಯಕ್ತಿಯೊಂದಿಗಿನ ಸಂಪರ್ಕದಿಂದಾಗಿ ಹಂದಿಜ್ವರ ಉಂಟಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ, ಆದರೆ ಈ ವರ್ಷ ಫೆಬ್ರವರಿ-ಮಾರ್ಚ್‌ ತಿಂಗಳಿನಲ್ಲಿಯೇ ಪತ್ತೆಯಾಗಿದೆ.

H1N1 Symptoms

ಈ ಕಾಯಿಲೆ ಬಂದಾಗ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಸಾವು ಕೂಡ ಸಂಭವಿಸಬಹುದು. ಇಲ್ಲಿ ನಾವು ಹೆಚ್‌1ಎನ್‌1 ರೋಗದ ಅಪಾಯ ಯಾರಿಗೆ ಹೆಚ್ಚು? ಈ ರೋಗದ ಲಕ್ಷಣಗಳೇನು? ಇದನ್ನು ತಡೆಗಟ್ಟುವುದರ ಬಗ್ಗೆ ಕೆಲವೊಂದು ಮಾಹಿತಿ ನೀಡಿದ್ದೇವೆ ನೋಡಿ.

ಯಾರಿಗೆ ಅಪಾಯ ಹೆಚ್ಚು?

ಯಾರಿಗೆ ಅಪಾಯ ಹೆಚ್ಚು?

H1N1 ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ವಯಸ್ಸಾದವರಿಗೆ ಬೇಗ ತಗುಲುತ್ತದೆ. ಇವರುಗಳು ಹೃದಯ ಸಮಸ್ಯೆ, ಮತ್ತಿತರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು.

ಇದರಲ್ಲಿ ಎ ಮತ್ತು ಬಿ ಟೈಪ್ ಕಾಯಿಲೆಯನ್ನು ಮನೆಯಲ್ಲೇ ಗುಣಪಡಿಸಬಹುದು, ಅದೇ ಸಿ ಟೈಪ್‌ ಆಗಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಬೇಕು.

ಹಂದಿಜ್ವರದ ಲಕ್ಷಣಗಳೇನು?

ಹಂದಿಜ್ವರದ ಲಕ್ಷಣಗಳೇನು?

ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಗಾಳಿಯ ಮೂಲಕ ರೋಗಾಣುಗಳು ಹರಡುತ್ತವೆ.

* ಸತತ ಕೆಮ್ಮು, ಅತೀವ ಜ್ವರ, ಕಫಗಟ್ಟಿರುವ ಗಂಟಲು, ಇಡಿಯ ದೇಹದ ಒಂದೊಂದು ಅಂಗವೂ ನೋವಿನಿಂದ ಕಿರುಗುಟ್ಟುವುದು, ಸುಸ್ತು, ತಲೆ ಎತ್ತಲಾರದಷ್ಟು ತಲೆನೋವು ಮತ್ತು ವಾಂತಿ ಮತ್ತು ಬೇಧಿ.

* ಈ ವೈರಸ್ ಪೀಡಿತ ಹಂದಿಯ ಮಾಂಸವನ್ನು ಸರಿಯಾಗಿ ಸ್ವಚ್ಛಗೊಳಿಸದೇ ಅಥವಾ ಬೇಯಿಸದೇ ತಿಂದರೆ ರೋಗ ಸಂಭವವಿರುತ್ತದೆ. * ರೋಗಾಣು ಬೆರೆತ ನೀರು, ಮಾಂಸ, ಸೇವಿಸುವುದರಿಂದ ರೋಗ ಹರಡಬಹುದು.

* ಹಂದಿಜ್ವರ ಪೀಡಿತ ವ್ಯಕ್ತಿಯ ಜೊಲ್ಲು, ಸೀನಿನ ಮೂಲಕ ಸಿಡಿದ ದ್ರವ ಆಹಾರ ವಸ್ತುಗಳಿಗೆ ಸೇರಿದರೆ ಸೊಂಕು ತಗಲುವ ಸಾಧ್ಯತೆಯಿದೆ.

* ಮೂಗಿಗೆ ಸದಾ ಬಟ್ಟೆ ಕಟ್ಟಿಕೊಳ್ಳುವುದರಿಂದ ಕೆಲ ಪ್ರಮಾಣದಲ್ಲಿ ರೋಗ ಹರಡುವುದನ್ನು ತಡೆಯಬಹುದು.

ಎಚ್ಚರಿಕೆ ಕ್ರಮಗಳು:

ಎಚ್ಚರಿಕೆ ಕ್ರಮಗಳು:

* ಮನೆಯಲ್ಲಿ ಬಿಸಿನೀರನ್ನು ಸೇವಿಸುವುದು, ಸಣ್ಣ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು, ನೀರಿನಲ್ಲಿ ಆಡಲು ಬಿಡಬಾರದು ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

* ನದಿ ಪಾತ್ರದ ಪ್ರವಾಸಿತಾಣಗಳಿಗೆ ಹೋಗುವಾಗ, ಆಸ್ಪತ್ರೆಗಳಿಗೆ ಭೇಟಿ ನೀಡುವಾಗ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವ ವೇಳೆ ಮುಖಕ್ಕೆ ಮಾಸ್ಕ್ ಧರಿಸಬೇಕು. * ಮನೆಯಲ್ಲಿ ಯಾರಿಗಾದರೂ ಎಚ್1ಎನ್1 ಸೋಂಕಿದರೆ ಇತರೆ ಸದಸ್ಯರು ಮಾಸ್ಕ್‌ಗಳನ್ನು ಧರಿಸಬೇಕು.

* ಸೋಂಕು ತಗುಲಿದವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಿ ಹೆಚ್ಚಾಗಿ ಅವರೊಂದಿಗೆ ಸಂಪರ್ಕ ಬೆಳೆಸಬಾರದು ಮತ್ತು ಸೇವಿಸುವ ಆಹಾರ ಪಾತ್ರೆಗಳನ್ನೂ ಸಹ ಕ್ರಿಮಿನಾಶಕ ಅಥವಾ ಉಪ್ಪು ನೀರಿನಿಂದ ತೊಳೆಯಬೇಕು.

* ಈ ರೋಗದ ಸೋಂಕಿರುವ ಸ್ಥಳಗಳಲ್ಲಿ ಮೂಗು, ಬಾಯಿಯನ್ನು ಕರವಸ್ತ್ರ ಅಥವಾ ಮಾಸ್ಕ್‌ನಿಂದ ಮುಚ್ಚಿಕೊಳ್ಳಬೇಕು. ಕೈ ತೊಳೆಯದೆ ಯಾವುದೇ ಆಹಾರ ಸೇವನೆ ಮಾಡಬಾರದು. ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳಬೇಕು.

ಹಂದಿಜ್ವರಕ್ಕೆ ಮನೆಮದ್ದು:

ಹಂದಿಜ್ವರಕ್ಕೆ ಮನೆಮದ್ದು:

* ಹಂದಿಜ್ವರಕ್ಕೆ ಅಮೃತಬಳ್ಳಿಯೂ ಉತ್ತಮ ಮತ್ತು ಪರಿಣಾಮಕಾರಿಯಾದ ಔಷಧಿಯಾಗಿದೆ. ಈ ಬಳ್ಳಿಯ ಸುಮಾರು ಒಂದು ಅಡಿ ಉದ್ದವನ್ನು ಕತ್ತರಿಸಿಕೊಂಡು ನೀರಿನಲ್ಲಿ ಬೇಯಿಸಿ. ಈ ನೀರಿಗೆ ಐದರಿಂದ ಆರು ತುಳಸಿ ಎಲೆಗಳನ್ನು ಸೇರಿಸಿ. ಸುಮಾರು ಇಪ್ಪತ್ತು ನಿಮಿಷಗಳ ಕುದಿಯುವಿಕೆಯ ಬಳಿಕ ಎಲೆ ತನ್ನ ಸಾರವನ್ನೆಲ್ಲಾ ನೀರಿನಲ್ಲಿ ಬಿಡುತ್ತದೆ. ಈ ನೀರಿಗೆ ಹಿಮಾಲಯದ ಸೇಂಧಾ ಉಪ್ಪು (ಹಿಮಾಲಯದ ಕೆಂಪು ಕಲ್ಲುಪ್ಪು), ಕೆಲವು ಕಾಳು ಕಾಳುಮೆಣಸು, ಕಪ್ಪು ಉಪ್ಪು (black salt), ಕಲ್ಲುಸಕ್ಕರೆಯ ಚಿಕ್ಕ ತುಂಡು ಹಾಕಿ ಕದಡಿ ಹಾಗೇ ಬಿಡಿ. ಸ್ವಲ್ಪ ತಣಿದ ಬಳಿಕ ಈ ನೀರನ್ನು ಸೋಸಿ ಉಗುರುಬೆಚ್ಚಗಿರುವಂತೆಯೇ ಕುಡಿಯಿರಿ.

* ಒಂದು ಚಿಕ್ಕ ಗುಳಿಗೆಯ ಗಾತ್ರದ ಕರ್ಪೂರವನ್ನು ನೀರಿನಲ್ಲಿ ಕದಡಿ ಕರಗಿದ ಬಳಿಕ ಕುಡಿಯುವುದೂ ಹಂದಿಜ್ವರಕ್ಕೆ ಉತ್ತಮ ಚಿಕಿತ್ಸೆಯಾಗಿದೆ. ಆದರೆ ಇದರ ಪ್ರಮಾಣ ತಿಂಗಳಿಗೆ ಒಂದು ಲೋಟ ಮಾತ್ರ.

* ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಿದರೆ ಒಳ್ಳೆಯದು.

English summary

H1N1 Symptoms And How To Prevent It

Oneside coronavirus scare, another side old enemy has reared its head again in India. In the country’s northern state of Uttar Pradeshnine people died. here we given types to avoid H1N1.
X
Desktop Bottom Promotion