For Quick Alerts
ALLOW NOTIFICATIONS  
For Daily Alerts

ಸೀಸನಲ್‌ ಫ್ಲೂ, ವೈರಲ್‌ ಜ್ವರ: ಲಕ್ಷಣಗಳೇನು? ಬೇಗನೆ ಚೇತರಿಸಿಕೊಳ್ಳುವುದು ಹೇಗೆ?

|

ಈಗ ಎಲ್ಲಾ ಕಡೆ ಜ್ವರ ಹೆಚ್ಚಾಗಿದೆ, ಆಸ್ಪತ್ರೆಯಲ್ಲೇ ಜ್ವರ-ಶೀತ, ಕೆಮ್ಮು ಅಂತ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಬದಲಾದ ವಾತಾವರಣ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ, ಬೆಳಗ್ಗೆ ನೋಡಿದರೆ ಮಂಜು ಸುರಿಯುತ್ತಿರುತ್ತದೆ, ಸಂಜೆ ಹೊತ್ತಿನಲ್ಲಿ ತಣ್ಣನೆಯ ಗಾಳಿ ಇದರಿಂದಾಗಿ ಜನರಲ್ಲಿ ಶೀತ-ಕೆಮ್ಮು ಹೆಚ್ಚಾಗಿ ಕಂಡು ಬರುತ್ತದೆ. ಮನೆಯಲ್ಲಿ ಒಬ್ಬರಿಗೆ ವೈರಲ್‌ ಜ್ವರ ಬಂದ್ರೆ ಮನೆಯಲ್ಲಿ ಇತರರಿಗೂ ಹರಡುವುದು.

ವೈರಲ್‌ ಜ್ವರ ಎಂದರೇನು, ಇದರ ಲಕ್ಷಣಗಳೇನು? ವೈರಲ್‌ ಜ್ವರಕ್ಕೆ ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ವೈರಲ್ ಜ್ವರ ಎಂದರೇನು?

ವೈರಲ್ ಜ್ವರ ಎಂದರೇನು?

ನಮ್ಮ ದೇಹ ಉಷ್ನತೆ ಸಾಮಾನ್ಯಕ್ಕಿಂತ ಹೆಚ್ಚಿದ್ದರೆ ಅದು ಜ್ವರ. ವೈರಲ್‌ ಸೋಂಕು ಉಂಟಾದಾಗ ನಮ್ಮ ದೇಹಕ್ಕೆ ಅದರ ವಿರುದ್ಧ ಹೋರಾಡಲು ಸಾಧ್ಯವಾಗದಿದ್ದಾಗ ಜ್ವರ ಉಂಟಾಗುವುದು.

ಸಾಮಾನ್ಯವಾಗಿ ವೈರಲ್ ಜ್ವರ ಉಂಟಾದಾಗ 3-4 ದಿನದಲ್ಲಿ ಕಡಿಮೆಯಾಗುವುದು, ಆದರೆ ಕೆಲವೊಂದು ವೈರಲ್‌ ಸೋಂಕು ಅಂದ್ರೆ ಡೆಂಗ್ಯೂ ಉಂಟಾದರೆ ತುಂಬಾ ಜ್ವರ ಇರುತ್ತದೆ.

ವೈರಲ್‌ ಜ್ವರದ ಲಕ್ಷಣಗಳೇನು?

ವೈರಲ್‌ ಜ್ವರದ ಲಕ್ಷಣಗಳೇನು?

* ಚಳಿಯಾಗುವುದು

* ಬೆವರುವುದು

* ನಿರ್ಜಲೀಕರಣ

* ತಲೆನೋವು

* ಮೈಕೈ ನೋವು

* ತುಂಬಾ ಸುಸ್ತಾಗುವುದು

* ಹಸಿವು ಇಲ್ಲದಿರುವುದು

ವೈರಲ್ ಜ್ವರ ಹೇಗೆ ಹರಡುವುದು?

ವೈರಲ್ ಜ್ವರ ಹೇಗೆ ಹರಡುವುದು?

* ಜ್ವರ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.

* ಆಹಾರ ಅಥವಾ ನೀರಿನಲ್ಲಿ ಸೋಂಕು ಇದ್ದರೆ ಆ ಆಹಾರವನ್ನು ಸೇವಿಸಿದಾಗ ಸೋಂಕು ಹರಡುವುದು.

* ಸೊಂಕು ಇರುವ ವ್ಯಕ್ತಿಗೆ ಸೊಳ್ಳೆ ಕಚ್ಚಿ ಆ ಸೊಳ್ಳೆ ಮತ್ತೊಬ್ಬರಿಗೆ ಕಚ್ಚಿದಾಗ ಸೊಂಕು ಹರಡುವುದು ಉದಾಹರಣೆಗೆ ಡೆಂಗ್ಯೂ ಅಥವಾ ಮಲೇರಿಯಾ.

* ದೇಹದ ಬೆವರು ಅಥವಾ ರಕ್ತದ ಮೂಲಕ ಕೂಡ ಸೋಂಕು ಹರಡುವುದು. ಹೆಚ್‌ಐವಿ, ಹೆಪಟೈಟಿಸ್ ಬಿ ಇವೆಲ್ಲಾ ದೇಹದ ಮೂಲಕ ಮತ್ತೊಬ್ಬರಿಗೆ ಹರಡುವುದು.

ವೈರಲ್ ಜ್ವರ ಇದೆಯೆಂದು ತಿಳಿಯುವುದು ಹೇಗೆ?

ವೈರಲ್ ಜ್ವರ ಇದೆಯೆಂದು ತಿಳಿಯುವುದು ಹೇಗೆ?

* ಗಂಟಲು ಕೆರೆತ, ಸೀತ, ಕೆಮ್ಮು ಇದ್ದರೆ ಸ್ವ್ಯಾಬ್‌ ಪರೀಕ್ಷೆ ಮಾಡಿಸಿ, ಅದು ನೆಗೆಟಿವ್‌ ಬಂದ್ರೆ ಕೊರೊನಾ ಅಲ್ಲ ವೈರಲ್‌ ಜ್ವರ ಎಂದು ಹೇಳಬಹುದು.

* ರಕ್ತ ಪರೀಕ್ಷೆ ಮಾಡಿಸಿದಾಗ ದೇಹದಲ್ಲಿ ಬಿಳಿ ರಕ್ತಕಣಗಳು ಕಡಿಮೆಯಾದರೆ ವೈರಲ್ ಸೋಂಕು ತಗುಲಿದೆ ಎಂದು ತಿಳಿಯುವುದು.

ವೈರಲ್‌ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

ವೈರಲ್‌ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಏನು ಮಾಡಬೇಕು?

* ವೈದ್ಯರು ನೀಡಿರುವ ಮಾತ್ರೆಗಳನ್ನು ಸೇವಿಸಿ.

* ಸಾಕಷ್ಟು ವಿಶ್ರಾಂತಿ ಪಡೆಯಿರಿ

* ಸಾಕಷ್ಟು ನೀರು ಕುಡಿಯಿರಿ

* ತುಂಬಾ ಜ್ವರ ಇದ್ದರೆ ಉಗುರು ಬೆಚ್ಚಗಿನ ನೀರಿಗೆ ಟವಲ್‌ ಅದ್ದಿ ಮೈ ಒರೆಸಿ, ಹೀಗೆ ಮಾಡುವುದರಿಂದ ಮೈ ಉಷ್ಣತೆ ಕಡಿಮೆಯಾಗುವುದು.

* ವಿಟಮಿನ್‌ ಸಿ ಇರುವ ಆಹಾರ ಸೇವಿಸಿ.

* ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯಿರಿ

* ಚಿಕನ್‌ ಸೂಪ್‌ ಮಾಡಿ ಕುಡಿಯಿರಿ.

ಇವೆಲ್ಲಾ ಜ್ವರದಿಂದ ಬೇಗನೆ ಚೇತರಿಸಿಕೊಳ್ಳಲು ಸಹಾಯ ಮಾಡುವುದು.

English summary

Seasonal flu, Viral fever: Symptoms, Causes, Diagnosis, Treatment in Kannada

Seasonal flu, Viral fever: Symptoms, Causes, Diagnosis, Treatment in Kannada...
X
Desktop Bottom Promotion