Just In
Don't Miss
- News
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ: ಒಎಂಆರ್ ಶೀಟ್ ತಿದ್ದುಪಡಿ ಶಂಕೆ
- Movies
OTTಯಲ್ಲೂ ಗೆದ್ದು ಬೀಗಿದ 'ದಿ ಕಾಶ್ಮೀರ್ ಫೈಲ್ಸ್': ವೀವ್ಸ್ ಎಷ್ಟು?
- Automobiles
ಜೂನ್ 20ರಂದು ಬಿಡುಗಡೆಯಾಗಲಿದೆ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ
- Technology
ವಿಕಲಚೇತನರಿಗಾಗಿ ಹೊಸ ಫೀಚರ್ಸ್ ಪ್ರಕಟಿಸಿದ ನೆಟ್ಫ್ಲಿಕ್ಸ್! ವಿಶೇಷತೆ ಏನು?
- Finance
ಮೇ ಅಂತ್ಯದಲ್ಲಿ ಮುಷ್ಕರಕ್ಕೆ ಬ್ಯಾಂಕ್ ನೌಕರರ ಎಚ್ಚರಿಕೆ, ಕಾರಣವೇನು?
- Sports
ಕಿಂಗ್ ಇಸ್ ಬ್ಯಾಕ್: ಫಾರ್ಮ್ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರು
- Education
Karnataka SSLC Supplementary Exam 2022 : ಜೂನ್ 27 ರಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ : ಶಿಕ್ಷಣ ಸಚಿವ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
5 ವರ್ಷದ ಕೆಳಗಿನ ಮಕ್ಕಳಲ್ಲಿ ಕಂಡು ಬರುತ್ತಿದೆ ಟೊಮೆಟೊ ಜ್ವರ: ಏನಿದು ಟೊಮೆಟೊ ಜ್ವರ? ಇದರ ಲಕ್ಷಣಗಳೇನು?
ಕೇರಳದಲ್ಲಿ ಟೊಮೆಟೊ ಜ್ವರದ ಆತಂಕ ಎದುರಾಗದೆ. ಈಗಾಗಲೇ ಕೇಳರದ ಕೊಲ್ಲಂನ 82 ಜನರಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡಿದೆ. ಈ ಟೊಮೆಟೊ ಜ್ವರ ಕಾಣಿಸಿಕೊಂಡಿರುವುದು 5 ವರ್ಷದ ಕೆಳಗಿನ ಮಕ್ಕಳಲ್ಲಿ ಆಗಿದೆ ಎಂದು ಅಲ್ಲಿಯ ಸ್ಥಳೀಯ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಏನಿದು ಟೊಮೆಟೊ ಜ್ವರ? ಮಕ್ಕಳಲ್ಲಿ ಈ ಜ್ವರ ಕಾಣಿಸಿದರೆ ಕಂಡು ಬರುವ ಲಕ್ಷಣಗಳೇನು, ಚಿಕಿತ್ಸೆಯೇನು ಎಂದು ನೋಡೋಣ ಬನ್ನಿ:

ಟೊಮೆಟೊ ಜ್ವರ ಎಂದರೇನು?
ಟೊಮೆಟೊ ಜ್ವರ ಅಥವಾ ಟೊಮೆಟೊ ಫ್ಲೂ ಒಂದು ಬಗೆಯ ವೈರಲ್ ಸೋಂಕು ಆಗಿದ್ದು 5 ವರ್ಷದ ಕೆಳಗಿನ ಮಕ್ಕಳಲ್ಲಿ ಕಂಡು ಬರುತ್ತದೆ. ಕೇರಳ ಸರ್ಕಾರವೂ ಎಲ್ಲಾ ಪ್ರಕರಣಗಳತ್ತ ಕೂಲಂಕಷವಾಗಿ ಗಮನ ಹರಿಸಿದ್ದು ಮಕ್ಕಳಿಗೆ ಅಗ್ಯತ ಚಿಕಿತ್ಸೆ ಹಾಗೂ ರೋಗ ಹರಡುವುದನ್ನು ತಡೆಗಟ್ಟುವತ್ತ ಕಾರ್ಯಪ್ರವೃತ್ತಿಯಾಗಿದೆ. ಇದೀಗ ಕೊಲ್ಲಂನ ಅರ್ಯನ್‌ಕಾವು, ಅಂಚಲ ಹಾಗೂ ನೆಡವುತ್ತೂರ್ ಈ ಪ್ರದೇಶಗಳಲ್ಲಿ ಕಂಡು ಬಂದಿದೆ.
ಅಂಗಡಿನವಾಡಿ, ನರ್ಸರಿ ಕ್ಲೋಸ್ ಮಾಡಲಾಗಿದೆ
ಗ್ರಾಮಸ್ಥರಿಗೆ ಈ ಜ್ವರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ. ನರ್ಸರಿ, ಅಂಗನವಾಡಿಗಳನ್ನು ಮುಚ್ಚಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಅಂಕಿ ಅಂಶದ ಪ್ರಕಾರ 82 ಪ್ರಕರಣಗಳು ದಾಖಲಾಗಿವೆ, ಖಾಸಗಿ ಆಸ್ಪತ್ರೆಯಿಂದ ಲೆಕ್ಕ ಇನ್ನೂ ಸಿಕ್ಕಿಲ್ಲ.
ಟೊಮೆಟೊ ಜ್ವರಕ್ಕೆ ಕಾರಣ:
ಟೊಮೆಟೊ ಜ್ವರಕ್ಕೆ ನಿಗದಿತ ಕಾರಣ ತಿಳಿದು ಬಂದಿಲ್ಲಿ

ಟೊಮೆಟೊ ಜ್ವರ ವೈರಲ್ ಜ್ವರವೇ?
ಇದರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಟೊಮೆಟೊ ಜ್ವರ ವೈರಲ್ ಜ್ವರವೇ ಅಥವಾ ಚಿಕನ್ ಗುನ್ಯಾ, ಡೆಂಗ್ಯೂ ನಂತರ ಕಾಣಿಸಿಕೊಳ್ಳುತ್ತಿರುವ ಜ್ವರವೇ ಎಂಬುವುದೇ ಇನ್ನು ಖಚಿತವಾಗಿಲ್ಲ.

ಟೊಮೆಟೊ ಜ್ವರದ ಲಕ್ಷಣಗಳು
* ಮಕ್ಕಳಲ್ಲಿ ಕೆಂಪು-ಕೆಂಪು ಗುಳ್ಳೆಗಳು ಕಂಡು ಬರುವುದು
* ಅತ್ಯಧಿಕ ಜ್ವರ
* ಮೈಕೈ ನೋವು
* ಸಂಧಿಯಲ್ಲಿ ನೋವು
* ತಲೆಸುತ್ತು
* ಚಿಕ್ಕ ಟೊಮೆಟೊ ಗಾತ್ರದಲ್ಲಿ ಗುಳ್ಳೆಗಳು ಕಂಡು ಬರುವುದು
* ನಾಲಗೆಯಲ್ಲಿ ಕಿರಿಕಿರಿ(ಗುಳ್ಳೆಗಳು ಕಂಡು ಬರುವುದು)
* ಕೈಗಳು, ಮಂಡಿ, ಹಿಂಬದಿಯಲ್ಲಿ ಬಣ್ಣ ವ್ಯತ್ಯಾಸವಾಗುವುದು.
* ಕೆಲ ಮಕ್ಕಳಲ್ಲಿ ಗುಳ್ಳೆಗಳಲ್ಲಿ ಚಿಕ್ಕ ಹುಳಗಳು ಕಂಡು ಬರುವುದು.

ಚಿಕಿತ್ಸೆ
ಟೊಮೆಟೊ ಜ್ವರದ ಬಗ್ಗೆ ಪೋಷಕರು ತುಂಬಾ ಆತಂಕ ಪಡಬೇಕಾಗಿಲ್ಲ, ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮೂಲಕ ಗುಣಪಡಿಸಬಹುದು.
* ಮಕ್ಕಳಲ್ಲಿಈ ಲಕ್ಷಣಗಳು ಕಂಡು ಬಂದರೆ ಕೂಡಲೇ ಮಕ್ಕಳ ವೈದ್ಯರ ಬಳಿ ಕರೆದುಕೊಂಡು ಹೋಗಿ.
* ಈ ರೀತಿ ಲಕ್ಷಣಗಳು ಮಕ್ಕಳಲ್ಲಿ ಕಂಡು ಬಂದರೆ ಅವರಿಗೆ ಸಾಕಷ್ಟು ನೀರು ಕುಡಿಸಿ, ಅವರ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.
* ಮಗು ಗುಳ್ಳೆಗಳನ್ನು ತುರಿಸಿ ಗಾಯ ಮಾಡದಂತೆ ನೋಡಿಕೊಳ್ಳಿ. ಉಗುರುಗಳನ್ನು ಚಿಕ್ಕದಾಗಿ ಕತ್ತರಿಸಿ.
* ಶುಚಿತ್ವ ಕಡೆ ಗಮನ ನೀಡಿ.
* ಬಿಸಿ ನೀರಿನಲ್ಲಿ ಸ್ನಾನ ಮಾಡಿಸಿ.
* ಬೇರೆ ಮಕ್ಕಲ ಜೊತೆ ಆಡಲು ಬಿಡಬೇಡಿ, ಅವರಿಗೂ ಹರಡುವ ಸಾಧ್ಯತೆ ಇದೆ.
* ಮಗುವಿನ ಜ್ವರ ಕಡಿಮೆಯಾಗುವವರೆಗೆ ಚೆನ್ನಾಗಿ ಆರೈಕೆ ಮಾಡಿ.