Latest Updates
-
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ -
ಟೊಮೆಟೊ, ಶುಂಠಿ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಉಳಿಸಲು ಇಲ್ಲಿದೆ ಸ್ಮಾರ್ಟ್ ಟಿಪ್ಸ್! -
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ!
ವೆಸ್ಟ್ ನೈಲ್ ಜ್ವರಕ್ಕೆ ಕೇರಳದಲ್ಲಿ ವ್ಯಕ್ತಿ ಸಾವು: ಏನಿದು ಹೊಸ ಜ್ವರ? ಇದು ಹರಡುವುದೇ?
ಕೇರಳದ ಆರೋಗ್ಯ ಇಲಾಖೆ ಇದೀಗ ಹೊಸ ಬಗೆಯ ವೈರಸ್ ಬಗ್ಗೆ ಎಚ್ಚರಿಕೆ ನೀಡಿದ್ದು, ಎಲ್ಲಾ ಕಡೆ ಕಟ್ಟೆಚ್ಚರವಹಿಸಲಾಗಿದೆ. ಕೇರಳದ ತ್ರಶೂರ್ ಜಿಲ್ಲೆಯಲ್ಲಿ 47 ವರ್ಷದ ವ್ಯಕ್ತಿಯೊಬ್ಬರು ವೆಸ್ಟ್ ನೈಲ್ ಜ್ವರದ ಕಾರಣದಿಂದಾಗಿ ಮಾರ್ಚ್ 29ಕ್ಕೆ ಸಾವನ್ನಪ್ಪಿದ್ದಾರೆ. ಏನಿದು ವೆಸ್ಟ್ ನೈಲ್ ಜ್ವರ, ಈ ಹಿಂಎಯೇ ಈ ಜ್ವರ ಇತ್ತಾ ಅಥವಾ ಹೊಸದಾಗಿ ಈ ವೈರಸ್ ಪತ್ತೆಯಾಗಿದೆಯೇ ಎಂಬೆಲ್ಲಾ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಕಳೆದ ಮೂರು ವರ್ಷಗಳಿಂದ ಇಂಥ ಸಾವು ಆಗಿರಲಿಲ್ಲ
ಕಳೆದ ಮೂರು ವರ್ಷಗಳಿಂದ ವಾಹಕದ ಸೋಂಕಿನಿಂದ ಸಾವನ್ನಪ್ಪಿರುವ ಮೊದಲ ಪ್ರಕರಣ ಇದಾಗಿದೆ. ತ್ರಿಶೂರ್‌ನ ವ್ಯಕ್ತಿಗೆ ಮೇ 17ಕ್ಕೆ ಶೀತ, ಜ್ವರ ಕಂಡು ಬಂದಿತ್ತು, ಅವರು ಹಲವು ಆಸ್ಪತ್ರೆಯಿಂದ ಚಿಕಿತ್ಸೆ ಪಡೆರೂ ಗುಣಮುಖರಾಗಿರಲಿಲ್ಲ, ಕೊನೆಗೆ ತ್ರಿಶೂರ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು, ಆಗ ಅವರಿಗೆ ವೆಸ್ಟ್ ನೈಲ್ ಜ್ವರ ಇರುವುದು ತಿಳಿದು ಬಂತು. ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಏನಿದು ವೆಸ್ಟ್ ನೈಲ್ ವೈರಸ್?
ಈ ಜ್ವರ ಮೊದಲಿಗೆ 1937ರಲ್ಲಿ ಮೊದಲಿಗೆ ಉಗಾಂಡದಲ್ಲಿ ಪತ್ತೆಯಾಯಿತು. ಇದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದೆ. ಇದು flavivirus genus ವರ್ಗಕ್ಕೆ ಸೇರಿದ ವೈರಸ್ ಆಗಿದೆ. ಕ್ಯುಲೆಕ್ಸ್ ಜಾತಿಯ ಸೊಳ್ಳೆ ಯ ಮೂಲಕ ಈ ಕಾಯಿಲೆ ಹರಡುವುದು.

ಇದು ಹೇಗೆ ಹರಡುತ್ತದೆ?
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವೈರಸ್ ತಗುಲಿರುವ ಸೊಳ್ಳೆ ಕಚ್ಚಿದಾಗ ಈ ವೈರಸ್ ಮನುಷ್ಯನ ದೇಹದ ಒಳಗಡೆ ಸೇರುತ್ತದೆ, ಈ ವೈರಸ್ ಮನುಷ್ಯನ ದೇಹದೊಳಗಡೆ ಸೇರಿದಾಗ ತುಂಬಾ ಸಂಖ್ಯೆಯಲ್ಲಿ ಉತ್ಪತ್ತಿಯಾಗುತ್ತದೆ ಇದರಿಂದಾಗಿ ರೋಗನಿರೋಧಕ ಶಕ್ತಿ ಕುಂದಿ ಕಾಯಿಲೆ ಬೀಳುವುದು.

ವೆಸ್ಟ್ ನೈಲ್ ವೈರಸ್‌ನ ಲಕ್ಷಣಗಳೇನು?
ವೆಸ್ಟ್ ನೈಲ್ ಸೋಂಕು ತಗುಲಿದರೆ ಶೇ.80ರಷ್ಟು ಜನರಿಗೆ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ, ಶೇ, 20ರಷ್ಟು ಜನರಲ್ಲಿ ಮಾತ್ರ ಈ ಲಕ್ಷಣಗಳು ಕಂಡು ಬರುತ್ತದೆ.
* ಜ್ವರ
* ತಲೆನೋವು
* ತುಂಬಾ ಸುಸ್ತು
* ಮೈಕೈ ನೋವು
* ವಾಂತಿ, ಬೇಧಿ
* ಮೈ ಮೇಲೆ ದದ್ದು ಅಥವಾ ಗುಳ್ಳೆಗಳು
* ಗ್ರಂಥಿಯಲ್ಲಿ ಊತವಾಗಿ ನುಂಗಲು ಕಷ್ಟವಾಗುವುದು
ಕೆಲವರಿಗೆ ರೋಗ ಲಕ್ಷಣಗಳು ಗಂಭೀರವಾಗಿ ಪಾರ್ಶ್ವಾಯು, ಎನ್ಸೆಫಾಲಿಟಿಸ್, ಮೆನಿಂಜೈಟಿಸ್ ಉಂಟಾಗಬಹುದು, ಸಾವು ಕೂಡ ಸಂಭವಿಸಬಹುದು.

ಈ ಕಾಯಿಲೆ ಹರಡುವುದನ್ನು ತಡೆಗಟ್ಟುವುದು ಹೇಗೆ?
ಈ ವೈರಸ್ ಸೊಳ್ಳೆಗಳ ಮೂಲಕ ಹರಡುತ್ತದೆ. ಇದು ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಕಾಯಿಲೆ ತಡೆಗಟ್ಟಲು ಪ್ರಮುಖವಾದ ಮಾರ್ಗವಾದ ಎಂದರೆ ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು.

ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು ಹೇಗೆ?
* ಉದ್ದವಾದ ತೋಳಿನ ಉಡುಪು ಧರಿಸಿ.
* ಸೊಳ್ಳೆ ರೆಪ್ಲೆಂಟ್ಸ್ ಬಳಸಿ
* ಮಲಗುವಾಗ ಸೊಳ್ಳೆ ಪರದೆ ಒಳಗಡೆ ಮಲಗಿ
* ಮನೆ ಹತ್ತಿರ ಸೊಳ್ಳೆ ಮೊಟ್ಟೆ ಹಾಕಿ ಮರಿ ಮಾಡಿದಿರಲು ಎಚ್ಚರವಹಿಸಿ.



Click it and Unblock the Notifications