For Quick Alerts
ALLOW NOTIFICATIONS  
For Daily Alerts

ಉಡುಪಿಯಲ್ಲಿ ಇಲಿ ಜ್ವರ: ಇದರ ಲಕ್ಷಣಗಳೇನು? ಅಪಾಯಕಾರಿಯೇ?

|

ಮಳೆಗಾಲವಾಗಿರುವುದರಿಂದ ಸಾಮಾನ್ಯವಾಗಿ ಕಾಡುವ ಜ್ವರ, ಶೀತ, ಕೆಮ್ಮು ಈ ರೀತಿಯ ಸಮಸ್ಯೆಗಳ ಜೊತೆಗೆ ಗಂಭೀರ ಸಮಸ್ಯೆಗಳಾದ ಮಲೇರಿಯಾ, ಡೆಂಗ್ಯೂ ಕೂಡ ಹೆಚ್ಚಾಗಿದೆ. ಇದರ ಜೊತೆಗೆ ಕೊರೊನಾವೈರಸ್‌ ಕಾಟ ಹೆಚ್ಚಾಗುತ್ತಿದೆ, ಮಂಕಿಪಾಕ್ಸ್‌ ಆತಂಕವೂ ಹೆಚ್ಚಿದೆ.

Rat Fever causes, symptoms, complications, diagnosis and treatment in kannada

ಈಗ ಕರ್ನಾಟಕದ ಉಡುಪಿಯಲ್ಲಿ ಇಲಿ ಜ್ವರ ಪತ್ತೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 173 ಇಲಿ ಜ್ವರ ಕೇಸ್‌ಗಳು ಪತ್ತೆಯಾಗಿದೆ. ಅದರಲ್ಲಿ 85 ಕೇಸ್‌ಗಳು ಉಡುಪಿಯಲ್ಲಿ ಹಾಗೂ 54 ಕುಂದಾಪುರ, 34 ಕಾರ್ಕಳ ತಾಲೂಕಿನಲ್ಲಿ ಪತ್ತೆಯಾಗಿದೆ.

ಇಲಿ ಜ್ವರ 2023 ಅಕ್ಟೋಬರ್‌ವರೆಗೆ ಕಂಡು ಬರುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

2018ರಲ್ಲಿ330 ಕೇಸ್‌ಗಳು ಪತ್ತೆಯಾಗಿತ್ತು, 2019ರಲ್ಲಿ 334 ಕೇಸ್‌ಗಳು ಕಂಡು ಬಂದಿತ್ತು, ಈ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಸ್ವಲ್ಪ ಕಡಿಮೆ ಇದೆ.

ಇಲಿ ಜ್ವರದ ಲಕ್ಷಣಗಳೇನು? ಇದು ಅಪಾಯಕಾರಿಯೇ? ಇಲಿ ಜ್ವರ ತಡೆಗಟ್ಟುವುದು ಹೇಗೆ ಎಂಬುವುದನ್ನು ನೋಡೋಣ ಬನ್ನಿ:

ಇಲಿ ಜ್ವರ ಹೇಗೆ ಬರುತ್ತದೆ?

ಇಲಿ ಜ್ವರ ಹೇಗೆ ಬರುತ್ತದೆ?

ಇಲಿಗಳಲ್ಲಿ ಎರಡು ಬಗೆಯ ಬ್ಯಾಕ್ಟಿರಿಯಾಗಳಿರುತ್ತದೆ. ಸ್ಟ್ರೆಪ್ಟೋಬಾಸಿಲಸ್ ಮೊನಿಲಿಫಾರ್ಮಿಸ್(streptobacillus moniliformis) ಹಾಗೂ ಸ್ಪಿರಿಲಮ್ ಮೈನಸ್ (spirillum minus) ಎಂಬ ಬ್ಯಾಕ್ಟಿರಿಯಾಗಳು ಇಲಿ ಜ್ವರಕ್ಕೆ ಕಾರಣವಾಗಿದೆ.

ಇಲಿ ಕ್ಚಿದಾಗ ಅಥವಾ ಪರಿಷಿದಾಗ ಅಥವಾ ಇಲಿ ಕಚ್ಚಿದ ಆಹಾರ , ಹಣ್ಣುಗಳನ್ನು ಸೇವಿಸಿದಾಗ ಈ ಬ್ಯಾಕ್ಟಿರಿಯಾ ಮನುಷ್ಯನ ದೇಹಕ್ಕೆ ಸೇರಿ ಜ್ವರ ಬರುವುದು.

ಯಾರಿಗೆ ಇಲಿ ಜ್ವರ ಬರುವ ಸಾಧ್ಯತೆ ಇದೆ?

ಯಾರಿಗೆ ಇಲಿ ಜ್ವರ ಬರುವ ಸಾಧ್ಯತೆ ಇದೆ?

* ಮನೆಯಲ್ಲಿ ಇಲಿಯನ್ನು ಸಾಕು ಪ್ರಾಣಿಯಂತೆ ಸಾಕುವವರಿಗೆ

* ಇತರ ಪ್ರಾಣಿಗಳಿಗೆ (ಬೆಕ್ಕು) ತಿನ್ನಲು ಇಲಿಯನ್ನು ಸಾಕುತ್ತಿದ್ದರೆ

* ಇಲಿಗಳ ಸಂಖ್ಯೆ ಹೆಚ್ಚಾಗಿರುವ ಕಡೆ ವಾಸಿಸುತ್ತಿರುವವರಿಗೆ

* ವಯಸ್ಸಾದವರಿಗೆ

* ಗರ್ಭಿಣಿಯರಿಗೆ

* ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ

ಇಲಿ ಜ್ವರದ ಲಕ್ಷಣಗಳೇನು?

ಇಲಿ ಜ್ವರದ ಲಕ್ಷಣಗಳೇನು?

* ತಲೆನೋವು

* ಜ್ವರ

* ಗುಳ್ಳೆಗಳು ಏಳುವುದು

* ವಾಂತಿ

* ಮೈಕೈ ನೋವು

* ಸಂಧಿಗಳಲ್ಲಿ ಊತ

ಚಿಕಿತ್ಸೆ

ಚಿಕಿತ್ಸೆ

* ಇಲಿ ಜ್ವರ ಬಂದಾಗಲೇ ಚಿಕಿತ್ಸೆ ನೀಡಿದರೆ ಏನೂ ಸಮಸ್ಯೆಯಿಲ್ಲ, ನಿರ್ಲಕ್ಷ್ಯ ಮಾಡಿದರೆ ಸಾವು ಸಂಭವಿಸಬಹುದು.

* ಆ್ಯಂಟಿಬಯೋಟಿಕ್‌ ಇದಕ್ಕೆ ಪರಿಣಾಮಕಾರಿಯಾಗಿದೆ.

* ಇಲಿ ಪರಿಚಿದರೆ, ಕಚ್ಚಿದರೆ ಆ ಭಾಗವನ್ನು ಸೋಪು ಹಚ್ಚಿ ತೊಳೆಯಿರಿ.

* ಇಲಿ ಕಚ್ಚಿದರೆ ತಕ್ಷಣವೇ ವೈದ್ಯರಿಗೆ ತೋರಿಸಿ.

ತಡೆಗಟ್ಟುವುದು ಹೇಗೆ?

ತಡೆಗಟ್ಟುವುದು ಹೇಗೆ?

ಇಲಿ ಕಚ್ಚಿದ ಆಹಾರಗಳನ್ನು ಸೇವಿಸಬೇಡಿ

* ಇಲಿಗಳು ಮನೆಯೊಳಗಡೆ ಬಾರದಂತೆ ವ್ಯವಸ್ಥೆ ಮಾಡಿ

* ತಂದಿರುವ ಹಣ್ಣು, ತರಕಾರಿಗಳನ್ನು ಇಲಿ ಓಡಾಡುವ ಕಡೆ ಇಡಬೇಡಿ.

English summary

Rat Fever causes, symptoms, complications, diagnosis and treatment in kannada

Rat Fever In Udupi: what causes rat fever, symptoms, complications, diagnosis and treatment, read on...
X
Desktop Bottom Promotion