Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಆಗಾಗ ಪ್ಯಾರಾಸಿಟಮೋಲ್ ತೆಗೆದುಕೊಂಡರೆ ಲಿವರ್‌ಗೆ ಹಾನಿಯಾಗುತ್ತೆ, ಜಾಗ್ರತೆ!
ಚಿಕ್ಕದಾಗಿ ತಲೆನೋವು ಪ್ಯಾರಾಸಿಟಮೋಲ್, ಜ್ವರ ಬಂದಿದೆ ಪ್ಯಾರಾಟಮೋಲ್, ಶೀತ ಪ್ಯಾರಾಸಿಟಮೋಲ್ ಹೀಗೆ ಕೆಲವರು ಆಗಾಗ ಪ್ಯಾರಾಸಿಟಮೋಲ್ ಮಾತ್ರೆ ನುಂಗುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಪ್ಯಾರಾಸಿಟಮೋಲ್ ಸಾಮಾನ್ಯವಾಗಿ ಬಳಸುವ ನೋವು ನಿವಾರಕವಾಗಿದೆ. ಆದರೆ ಈ ಪ್ಯಾರಾಸಿಟಮೋಲ್ ಆಗಾಗ ತೆಗೆದುಕೊಳ್ಳುವುದರಿಂದ ಲಿವರ್ ಹಾನಿಯಾಗುವುದು ಎಂದು ಅಧ್ಯಯನ ಹೇಳಿದೆ.
ಲಿವರ್ ಡ್ಯಾಮೇಜ್‌ಗೆ ಕಾರಣವಾಗುವ ಪ್ಯಾರಾಸಿಟಮೋಲ್
ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ (study by the University of Edinburgh)ಇಲಿಯ ಮೇಲೆ ಪ್ರಯೋಗ ಮಾಡಿ ಪ್ಯಾರಾಸಿಟಮೋಲ್ ಹೇಗೆ ಪ್ರಭಾವ ಬೀರುವುದು ಎಂದು ಪರೀಕ್ಷೆ ಮಾಡಲಾಯಿತು, ಆವಾಗ ಇದನ್ನು ಹೆಚ್ಚಾಗಿ ಸೇವಿಸುವುದರಿಂದ ಲಿವರ್‌ಗೆ ಹಾನಿಯಾಗುವುದು, ಇದರಿಂದ ಉಂಟಾದ ಹಾನಿಯನ್ನು ಸರಿಪಡಿಸಲು ಕೂಡ ಕಷ್ಟ ಎಂದು ಅಧ್ಯಯನ ಹೇಳಿದೆ.

ಸಾಮಾನ್ಯವಾಗಿ ಪ್ಯಾರಾಸಿಟಮೋಲ್ ಯಾವಾಗ ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ?
ಜ್ವರ ಬಂದಾಗ
ಮೈಕೈ ನೋವು ಇದ್ದಾಗ
ಬೆನ್ನುನೋವು
ತಲೆನೋವು
ಮೈಗ್ರೇನ್
ಸ್ನಾಯುಗಳಲ್ಲಿ ನೋವು
ಮುಟ್ಟಿನ ನೋವು
ಹಲ್ಲುನೋವು
ಶೀತ
ಪ್ಯಾರಾಸಿಟಮೋಲ್ ಹೇಗೆ ಕೆಲಸ ಮಾಡುತ್ತದೆ?
ಪ್ಯಾರಾಸಿಟಮೋಲ್ ಅನ್ನು ಕಳೆದ 70 ವರ್ಷಗಳಿಂದ ಬಳಸಲಾಗುತ್ತಿದೆ, ಅಲ್ಲದೆ ವೈದ್ಯರ ಚೀಟಿಯಿಲ್ಲದೆ ಮೆಡಿಕಲ್ ಶಾಪ್‌ನಿಂದ ಇದನ್ನು ಖರೀದಿಸಬಹುದು, ಪ್ಯಾರಾಸಿಟಮೋಲ್
ತೆಗೆದುಕೊಂಡಾಗ ಜ್ವರ, ಮೈಕೈ ನೋವು ಬೇಗನೆ ಕಡಿಮೆಯಾಗುವುದು, ಆದ್ದರಿಂದ ಪ್ಯಾರಾಸಿಟಮೋಲ್ ಮಾತ್ರೆಯನ್ನು ಸೇವಿಸುತ್ತೇವೆ, ಆದರೆ ಕೆಲವರು ಮೈಕೈ ನೋವು, ತಲೆನೋವು ಅಂತ ತುಂಬಾನೇ ಸೇವಿಸುತ್ತಾರೆ.
ಪ್ಯಾರಾಸಿಟಮೋಲ್ ಸೇವನೆಯಿಂದ ಅಂಗಾಂಗ ವೈಫಲ್ಯ ಉಂಟಾಗುವುದು
ಪ್ಯಾರಾಸಿಟಮೋಲ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಲಿವರ್‌ಗೆ ಹಾನಿಯುಂಟಾಗುವುದು. ಪ್ಯಾರಾಸಿಟಮೋಲ್ ಸೇವಿಸುವುದರಿಂದ ಇದು ಲಿವರ್‌ನ ಹತ್ತಿರದ ಜೀವ ಕಣಗಳನ್ನು ನಾಶ ಪಡಿಸುವುದರಿಂದ ಲಿವರ್‌ಗೆ ಹಾನಿಯುಂಟಾಗುವುದು. ಲಿವರ್‌ನ ನರಗಳಿಗೆ ಹಾನಿಯುಂಟಾಗುವುದು. ಇದರ ಜೊತೆಗೆ ಕ್ಯಾನ್ಸರ್, ಹೆಪಟೈಟಿಸ್ ಈ ರೀತಿ ಅನೇಕ ಅಡ್ಡಪರಿಣಾಮ ಉಂಟಾಗುವುದು.
ಆಗಾಗ ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಬೇಡಿ
ವೈದ್ಯರು ಸೂಚಿಸಿದಾಗ ಮಾತ್ರ ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಿ, ಚಿಕ್ಕ-ಪುಟ್ಟ ವಿಷಯಗಳಿಗೆ ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಬೇಡಿ. ಹೀಗೆ ಆಗಾಗ ಮಾತ್ರೆ ತೆಗೆದುಕೊಳ್ಳುವುದರಿಂದ ಲಿವರ್ ಹಾನಿಯಾಗುವುದು, ಇದರಿಂದ ನಂತರ ಸರಿಪಡಿಸಲು ಸಾಧ್ಯವಾಗದಷ್ಟು ಲಿವರ್ ಹಾನಿಯಾಗುವುದರಿಂದ, ಮದ್ಯಪಾನಕ್ಕಿಂತಲೂ ಅಧಿಕ ಹಾನಿಯಾಗುವುದರಿಂದ ನೀವು ಈ ಕುರಿತು ಜಾಗ್ರತೆವಹಿಸಿ.
ನೀವು ಆಗಾಗ ಪ್ಯಾರಾಸಿಟಮೋಲ್ ತೆಗೆದುಕೊಳ್ಳುತ್ತಿದ್ದರೆ ಈ ಬಗೆಯ ಅಡ್ಡಪರಿಣಾಮಗಳು ಕಂಡು ಬರುವುದು:
- ಸುಸ್ತು
- ಉಸಿರಾಟದಲ್ಲಿ ತೊಂದರೆ
- ಉಗುರು ಹಾಗೂ ತುಟಿ ನೀಲಿ ಬಣ್ಣಕ್ಕೆ ತಿರುಗುವುದು
- ರಕ್ತಹೀನತೆ
- ಲಿವರ್ ಮತ್ತು ಕಿಡ್ನಿಗೆ ಹಾನಿಯಾಗುವುದು
- ಹೃದಯ ಸಂಬಂಧಿ ಸಮಸ್ಯೆ
- ಪಾರ್ಶ್ವವಾಯು
ಪ್ಯಾರಾಸಿಟಮೋಲ್ ಓವರ್‌ಡೋಸ್ ಆದರೆ ಏನಾಗುತ್ತೆ?
- ಕಿಬ್ಬೊಟ್ಟೆಯಲ್ಲಿ ನೋವು
- ಲಿವರ್‌ಗೆ ಸಮಸ್ಯೆ
- ಪಿಡ್ಸ್
- ಕೋಮಾಗೆ ಜಾರುವುದು, ಸಾವು ಕೂಡ ಸಂಭವಿಸಬಹುದು
- ಈ ರೀತಿಯೆಲ್ಲಾ ಪ್ಯಾರಾಸಿಟಮೋಲ್ ಓವರ್‌ಡೋಸ್ ಆದ 24 ಗಂಟೆಯೊಳಗೆ ಸಂಭವಿಸುವುದು.
ಮಕ್ಕಳಿಗೆ ಪ್ಯಾರಾಸಿಟಮೋಲ್ ನೀಡಬಹುದೇ?
ಮಕ್ಕಳಿಗೆ ಮಕ್ಕಳ ತಜ್ಞರು ಸೂಚಿಸಿದ ಪ್ಯಾರಾಸಿಟಮೋಲ್ ಅವರು ಸೂಚಿಸಿದ ಪ್ರಮಾಣದಲ್ಲಿ ನೀಡಬೇಕು, ನೀವು ಸ್ವ ಚಿಕಿತ್ಸೆ ಮಾಡಬೇಡಿ.
ಮಗುವಿಗೆ ಅಗ್ಯತಕ್ಕಿಂತ ಹೆಚ್ಚಿನ ಡೋಸ್ ನೀಡಬಾರದು
ಪ್ಯಾರಾಸಿಟಮೋಲ್ ನೀಡಿದ ಮೇಲೆ 6 ಗಂಟೆ ಅಂತರವಿರಬೇಕು, ಜ್ವರ ಕಮ್ಮಿಯಾಗಿಲ್ಲ ಎಂದು ಆಗಾಗ ನೀಡಬಾರದು.
ಗರ್ಭಿಣಿಯರು ಪ್ಯಾರಾಸಿಟಮೋಲ್
ಗರ್ಭಿಣಿಯರು ವೈದ್ಯರ ಸಲಹೆ ಪಡೆಯದೆ ಪ್ಯಾರಾಸಿಟಮೋಲ್ ಮಾತ್ರೆ ತೆಗೆದುಕೊಳ್ಳಬಾರದು. ಇದರಿಂದ ಗರ್ಭದಲ್ಲಿರುವ ಮಗುವಿಗೆ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಎದೆಹಾಲುಣಿಸುವ ತಾಯಂದಿರು ಕೂಡ ಸ್ವ ಚಿಕಿತ್ಸೆ ಮಾಡಲು ಹೋಗಬಾರದು.
ಆದ್ದರಿಂದ ನೀವು ಪ್ಯಾರಾಸಿಟಮೋಲ್ ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
