Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
Lassa Fever: ಲಸ್ಸಾ ಜ್ವರದಿಂದ ಮೊದಲ ಸಾವು: ಈ ಜ್ವರ ಹೇಗೆ ಬರುತ್ತದೆ, ಲಕ್ಷಣಗಳೇನು?
ವಿಶ್ವಕ್ಕೆ ಎರಡು ವರ್ಷದಿಂದ ಕೊರೊನಾ ವೈರಸ್ ಕಾಡುತ್ತಲೇ ಇದೆ. ಇನ್ನೇನು ಹೋಯ್ತು ಎನ್ನುವಷ್ಟರಲ್ಲಿ ಹೊಸ ರೂಪದಲ್ಲಿ ಕಂಟಕವಾಗುತ್ತಿದೆ. ಇತ್ತೀಚೆಗಷ್ಟೇ ಒಮಿಕ್ರಾನ್ ಹಾವಳಿಯಿಂದ ತತ್ತರಿಸಿದ್ದೆವು. ಸಾವು-ಸೋವಿನ ಸಂಖ್ಯೆ ಕಡಿಮೆ ಇದ್ದರೂ ಸೋಕು ಅತೀ ಹೆಚ್ಚಿನ ಜನರಿಗೆ ತಗುಲಿತ್ತು, ಈಗ ಒಮಿಕ್ರಾನ್ ಸ್ವಲ್ಪ ಕಡಿಮೆಯಾಗಿದೆ, ಇದೀಗ ಲಸ್ಸಾ ಜ್ವರ ಒಬ್ಬರ ಸಾವಿಗೆ ಕಾರಣವಾಗಿರುವುದು ಆತಂಕ ಮೂಡಿಸಿದೆ.

2009ರಿಂದ ಲಸ್ಸಾ ಜ್ವರಕ್ಕೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ ನಾರ್ತ್ ಆಫ್ ಲಂಡನ್‌ನಲ್ಲಿ ನೆಲೆಸಿರುವ ಕುಟುಂಬವೊಂದು ಪಶ್ಚಿಮ ಆಫ್ರಿಕಕ್ಕೆ ಪ್ರಯಾಣ ಮಾಡಿತ್ತು. ಅಲ್ಲಿಂದ ಬಂದ ಮೇಲೆ ಕುಟುಂಬದಲ್ಲಿ 3 ಜನರಲ್ಲಿ ಲಸ್ಸಾ ಜ್ವರ ಕಂಡು ಬಂದಿತ್ತು, ಅದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಲಸ್ಸ ವೈರಸ್
ಲಸ್ಸ ಜ್ವರಕ್ಕೆ ಕಾರಣ ಇಬೋಲಾ ಮತ್ತು ಮಾರ್ಬರ್ಗ್ ಕುಟುಂಬಕ್ಕೆ ಸೇರಿದ ವೈರಸ್‌ಗಳಾಗಿವೆ. ಆದರೆ ಇದರಲ್ಲಿ ಸಾವು ಸಂಭವಿಸುವುದು ಕಡಿಮೆ. ಇದು ಮೊದಲಿಗೆ ನೈಜೇರಿಯಾದ ಲಸ್ಸದಲ್ಲಿ ಪತ್ತೆಯಾಗಿರುವುದರಿಂದ ಇದಕ್ಕೆ ಲಸ್ಸ ಜ್ವರ ಎಂದು ಹೆಸರಿಡಲಾಗಿದೆ. ಈ ವೈರಸ್ ಮೊದಲಿಗೆ 1969ರಲ್ಲಿ ಕಂಡು ಬಂದಿತ್ತು. ಯುಕೆಯ ಪಬ್ಲಿಕ್ ಹೆಲ್ತ್ ಬಾಡಿ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿ 'ಈ ಕುಟುಂಬದ ಸಂಪರ್ಕಕ್ಕೆ ಬಂದವರನ್ನು ಟ್ರೇಸ್ ಮಾಡಿ ಅವಶ್ಯಕ ಸಹಾಯ ಹಾಗೂ ಸಲಹೆ ನೀಡಲಾಗುವುದು' ಎಂದು ಹೇಳಿದೆ.
ಇನ್ನಿಬ್ಬರಲ್ಲಿ ಒಬ್ಬರು ಗುಣಮುಖರಾಗಿದ್ದು ಮತ್ತೊಬ್ಬರಿಗೆ ಪರಿಣಿತರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಯುಕೆಯ ಪಬ್ಲಿಕ್ ಹೆಲ್ತ್ ಬಾಡಿ ಹೇಳಿದೆ.

ಲಸ್ಸ ಜ್ವರ ಎಂದರೇನು?
ಲಾಸ ವೈರಸ್ ಮೊದಲಿಗೆ ನೈಜೇರಿಯಾದ ಲಸ್ಸಾದಲ್ಲಿ 1969ರಲ್ಲಿ ಕಂಡು ಬಂದಿತು. ಇದು ಇಲಿಗಳಿಂದ ಹರಡುವುದು ಇದು ಸಾಂಕ್ರಾಮಿಕವಲ್ಲ. ಸೋಂಕು ಇರುವ ಇಲಿ ಮೂತ್ರ ಮಾಡಿದ ಆಹಾರವನ್ನು ಅಥವಾ ವಸ್ತುವನ್ನು ಮುಟ್ಟಿದಾಗ ಮನುಷ್ಯರಿಗೆ ಬರುತ್ತದೆ ಅಥವಾ ಸೋಂಕು ತಗುಲಿದ ವ್ಯಕ್ತಿಯ ದೇಹದ ದ್ರವದಿಂದಲೂ ಹರಡುವುದು. ಅರೋಗ್ಯ ಇಲಾಖೆಗಳಲ್ಲಿ ಇದು ಒಬ್ಬರಿಂದ ಒಬ್ಬರಿಗೆ ಹರಡುವುದು.

ಲಸ್ಸ ವೈರಸ್ ಲಕ್ಷಣಗಳೇನು?
ಚಿಕ್ಕದಾಗಿ ಜ್ವರ, ತಲೆಸುತ್ತು, ಸುಸ್ತು, ತಲೆನೋವು ಈ ಲಕ್ಷಣಗಳು ಕಂಡು ಬರುವುದು. ಕಾಯಿಲೆ ಅಧಿಕವಾದರೆ ರಕ್ತಸ್ರಾವ, ಉಸಿರಾಟದ ತೊಂದರೆ, ವಾಂತಿ, ಮುಖದಲ್ಲಿ ಊತ, ಎದೆ ನೋವು, ಬೆನ್ನು , ಕಿಟ್ಟೊಬ್ಬೆಯಲ್ಲಿ ನೋವು ಉಂಟಾಗುವುದು. ಈ ಸೋಂಕು ತಗುಲಿ 1-3 ವಾರಗಳಲ್ಲಿ ರೋಗ ಲಕ್ಷನಗಳು ಕಂಡು ಬರುವುದು.ಕೆಲವರಿಗೆಕಿವಿ ಕೇಳಿಸದಂತಾಗುವುದು, ಕಾಯಿಲೆಯಿಂದ ಗುಣಮುಖರಾದ ಕಿವಿ ಕೇಳಿಸದೇ ಉಳಿಯಬಹುದು.

ಲಸ್ಸಾ ವೈರಸ್ ಎಷ್ಟು ಅಪಾಯಕಾರಿ?
ಕಾಯಿಲೆಯ ಲಕ್ಷಣಗಳು ಗಂಭೀರವಾಗಿರುತ್ತೆ, ಆದರೆ ಶೇ. 99ರಷ್ಟು ಜನ ಗುಣಮುಖರಾಗುತ್ತಾರೆ, ಇದರಲ್ಲಿ ಸಾವಿನ ಸಂಖ್ಯೆ ಶೇ.1ರಷ್ಟಿದೆ.

ಇದನ್ನು ತಡೆಗಟ್ಟುವುದು ಹೇಗೆ?
ಇಲಿಗಳ ಸಂಪರ್ಕಕ್ಕೆ ಬಬರಬಾರದು, ಇಲಿಗಳು ಮನೆಗೆ ಬರುವುದನ್ನು ತಡೆಗಟ್ಟಿ, ಆಹಾರವನ್ನು ಇಲಿ ಬಾಯಿ ಹಾಕದಂಥ ಪಾತ್ರೆಯಲ್ಲಿಡಿ. ಇಲಿಗಳಿಂದಲೇ ಈ ಕಾಯಿಲೆ ಹರಡುವುದು, ಆದ್ದರಿಂದ ಇಲಿಗಳು ಮನೆಗೆ ಬಾರದಂತೆ ಸೂಕ್ತ ವ್ಯವಸ್ಥೆ ಮಾಡಿ.



Click it and Unblock the Notifications