For Quick Alerts
ALLOW NOTIFICATIONS  
For Daily Alerts

ಪಶ್ಚಿಮ ಬಂಗಾಳದಲ್ಲಿ ಹೆಚ್ಚಾಗುತ್ತಿದೆ ಬ್ಲ್ಯಾಕ್‌ ಫೀವರ್‌: ತುಂಬಾ ಮಾರಣಾಂತಿಕ ಜ್ವರ ಇದು

|

ಪಶ್ಚಿಮ ಬಂಗಾಳದ ಜಿಲ್ಲೆಗಳಲ್ಲಿ ಬ್ಲ್ಯಾಕ್‌ ಫೀವರ್ ಹೆಚ್ಚಾಗುತ್ತಿದೆ. ಕಳೆದ ಕೆಲವು ವಾರಗಳಿಂದ 65ಕ್ಕೂ ಅಧಿಕ ಪ್ರಕರಣಗಳು ಕಂಡು ಬಂದಿದೆ. ಪಶ್ಚಿಮ ಬಂಗಾಳದ 11 ಜಿಲ್ಲೆಗಳಲ್ಲಿ ಈ ಬ್ಲ್ಯಾಕ್‌ ಫೀವರ್‌ ಪತ್ತೆಯಾಗಿದ್ದು, ರಾಜಧಾನಿ ಕೋಲ್ಕತ್ತದಲ್ಲಿ ಈ ಜ್ವರ ಕಂಡು ಬಂದಿಲ್ಲ.

ಬ್ಲ್ಯಾಕ್‌ ಫೀವರ್‌ ಎಂದರೇನು? ಇದರ ಲಕ್ಷಣಗಳೇನು ಎಂದು ನೋಡೋಣ ಬನ್ನಿ:

ಬ್ಲ್ಯಾಕ್‌ ಫೀವರ್ ಎಂದರೇನು?

ಬ್ಲ್ಯಾಕ್‌ ಫೀವರ್ ಎಂದರೇನು?

ಬ್ಲ್ಯಾಕ್‌ ಫೀವರ್ ತುಂಬಾ ಅಪಾಯಕಾರಿಯಾದ ಜ್ವರವಾಗಿದ್ದು ಶೇ. 95ರಷ್ಟು ಚಿಕಿತ್ಸೆ ಫಲಕಾರಿಯಾಗಲ್ಲ. 'leishmania donovani'(ಲೀಶ್‌ಮೇನಿಯಾ ಡೊನೊವಾನಿ) ಸೋಂಕು ತಗುಲಿರುವ ಸ್ಯಾಂಡ್‌ಫ್ಲೈಸ್ ಕಚ್ಚಿದಾಗ ಬರುವುದು. ಇದರಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ.

ಬ್ಲ್ಯಾಕ್ ಫೀವರ್‌ಗೆ ಕಾರಣವೇನು?

ಬ್ಲ್ಯಾಕ್ ಫೀವರ್‌ಗೆ ಕಾರಣವೇನು?

ಪೋಷಕಾಂಶದ ಕೊರತೆ, ಮನೆಯನ್ನು ಶುದ್ಧವಾಗಿ ಇಡದಿರುವುದು, ದುರ್ಬಲ ರೋಗ ನಿರೋಧಕ ಶಕ್ತಿ ಇರುವವರಿಗೆ, ಕಡು ಬಡವರಿಗೆ ಈ ಫೀವರ್ ಕಂಡು ಬರುವುದು. ಕಾಡುಗಳ ನಾಶ, ಬಿಲ್ಡಿಂಗ್‌, ಡ್ಯಾಂಗಳ ನಿರ್ಮಾಣ , ನಗರೀಕರಣ ಇವುಗಳು ಕೂಡ ಬ್ಲ್ಯಾಕ್‌ ಫೀವರ್‌ಗೆ ಕಾರಣಗಳಾಗಿವೆ.

ಬ್ಲ್ಯಾಕ್ ಫೀವರ್‌ ಲಕ್ಷಣಗಳೇನು?

ಬ್ಲ್ಯಾಕ್ ಫೀವರ್‌ ಲಕ್ಷಣಗಳೇನು?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಬ್ಲ್ಯಾಕ್‌ ಫೀವರ್‌ ಲಕ್ಷಣಗಳೆಂದರೆ

* ತುಂಬಾ ತೂಕ ಕಡಿಮೆಯಾಗುವುದು

* ಆಗಾಗ ಕಾಡುವ ಜ್ವರ

* ಲಿವರ್, ಗುಲ್ಮದ ಗಾತ್ರ ದೊಡ್ಡದಾಗುವುದು

* ರಕ್ತಹೀನತೆ

ಬ್ಲ್ಯಾಕ್‌ ಪೀವರ್‌ಗೆ ಚಿಕಿತ್ಸೆಯೇನು?

ಬ್ಲ್ಯಾಕ್‌ ಪೀವರ್‌ಗೆ ಚಿಕಿತ್ಸೆಯೇನು?

parasitological ಅಥವಾ serological ಟೆಸ್ಟ್‌ಗಳ ಮೂಲಕ ಬ್ಲ್ಯಾಕ್‌ ಫೀವರ್‌ ಪತ್ತೆ ಹಚ್ಚಲಾಗುವುದು. ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು, ಆದರೆ ಬ್ಲ್ಯಾಕ್‌ ಫೀವರ್‌ ಬಂದರೆ ರೋಗಿ ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ.

English summary

Black Fever aka Kala-azar spreads in West Bengal; know meaning, symptoms & treatment in kannada

Kala-azar aka black fever has been reported in 11 districts of West Bengal. Know what is black Fever, meaning, causes, treatment, symptoms and other details about the disease in kannada,
Story first published: Monday, July 18, 2022, 17:26 [IST]
X
Desktop Bottom Promotion