For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಆರೋಗ್ಯ ಹದಗೆಡದಿರಲು, ಈ ಆಹಾರಗಳನ್ನು ಆದಷ್ಟು ದೂರವಿಡಿ

|

ಚಳಿಗಾಲದ ಆಗಮನದೊಂದಿಗೆ, ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ, ಆದ್ದರಿಂದ ಈ ಋತುವಿನಲ್ಲಿ ದೇಹಕ್ಕೆ ವಿಶೇಷ ಕಾಳಜಿ ಬೇಕಾಗುತ್ತದೆ. ಅದಕ್ಕಾಗಿ ಸಾಧ್ಯವಾದಷ್ಟು ಆರೋಗ್ಯಕರ ಆಹಾರವನ್ನು ಸೇವಿಸಿ, ಇದರಿಂದ ರೋಗನಿರೋಧಕ ಶಕ್ತಿ ಉತ್ತಮವಾಗಿರುವುದಲ್ಲದೇ, ರೋಗಗಳು ದೂರವಾಗುತ್ತವೆ.

ಅದರ ಜೊತೆಗೆ, ಈ ಋತುವಿನಲ್ಲಿ ಕೆಲವು ಆಹಾರ ಪದಾರ್ಥಗಳಿಂದ ದೂರವಿರಿ ಏಕೆಂದರೆ ಅವುಗಳ ಸೇವನೆಯು ಶೀತ, ನೆಗಡಿ, ಊತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾದರೆ, ಯಾವ ಆಹಾರಗಳನ್ನು ತ್ಯಜಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಚಳಿಗಾಲದಲ್ಲಿ ದೂರವಿಡಬೇಕಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಚಳಿಗಾಲದಲ್ಲಿ ದೂರವಿಡಬೇಕಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ನಾವಿಂದು ಹೇಳುತ್ತಿರುವ ಆಹಾರ ಪದಾರ್ಥಗಳು ಹೆಚ್ಚಿನವರ ಫೇವರೆಟ್ ಆಗಿರುತ್ತವೆ, ಅದರಲ್ಲೂ ತಂಪಾದ ವಾತಾವರಣದಲ್ಲಿ ಇಂತಹ ತಿಂಡಿ-ತಿನಿಸು ಬೇಕೆನ್ನುವ ಬಯಕೆಯಾಗುವುದು ಸಾಮಾನ್ಯ. ಆದರೆ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಮರೆಯಬಾರದು. ಆರೋಗ್ಯ ಚೆನ್ನಾಗಿದ್ದರೆ ಮಾತ್ರ, ಉಳಿದೆಲ್ಲವೂ, ಆರೋಗ್ಯದ ದೃಷ್ಟಿಯಿಂದ ಇಂತಹ ಆಹಾರಗಳನ್ನು ಆದಷ್ಟು ಕಡಿಮೆ ಮಾಡುವುದು ಉತ್ತಮ.

1. ಡೈರಿ ಉತ್ಪನ್ನಗಳು:

ಡೈರಿ ಉತ್ಪನ್ನಗಳನ್ನು ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ, ಆದರೆ ಚಳಿಗಾಲದಲ್ಲಿ, ಹಾಲು, ಮೊಸರು, ಮಜ್ಜಿಗೆಯ ಅತಿಯಾದ ಸೇವನೆಯಿಂದ ಶೀತ ಮತ್ತು ನೆಗಡಿಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಅವುಗಳನ್ನು ಸೀಮಿತ ಪ್ರಮಾಣದಲ್ಲಿ ತೆಗದುಕೊಳ್ಳಲು ಪ್ರಾರಂಭಿಸಿ, ನಂತರ ಅವುಗಳನ್ನು ದೂರಮಾಡಿ.

2. ಸಿಹಿತಿಂಡಿಗಳು:

2. ಸಿಹಿತಿಂಡಿಗಳು:

ಈ ಋತುವಿನಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರುವ ಕೇಕ್, ಕುಕೀಸ್, ಸಿಹಿತಿಂಡಿಗಳು ಮತ್ತು ಇತರ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. ಇವು ದೇಹದಲ್ಲಿ ಉರಿಯೂತದ ಸಮಸ್ಯೆಯನ್ನು ಹೆಚ್ಚಿಸುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ, ಈ ಮೂಲಕ ಅನೇಕ ರೀತಿಯ ಸೋಂಕುಗಳಿಗೆ ಒಳಗಾಗುವ ಸಾಧ್ಯತೆಯನ್ನು ಉಂಟುಮಾಡುತ್ತವೆ.

3. ಕೆಫೀನ್:

3. ಕೆಫೀನ್:

ಎನರ್ಜಿ ಡ್ರಿಂಕ್ಸ್, ಕಾಫಿ, ಸ್ಪೋರ್ಟ್ಸ್ ಡ್ರಿಂಕ್ಸ್ ಗಳಲ್ಲಿ ಕೆಫೀನ್ ಹೇರಳವಾಗಿರುವ ಕಾರಣ ಚಳಿಗಾಲದಲ್ಲಿ ಇವುಗಳನ್ನು ಸಹ ತ್ಯಜಿಸಬೇಕು. ಕೆಫೀನ್ನ ಹೆಚ್ಚಿನ ಸೇವನೆಯು ದೇಹದಲ್ಲಿ ನೀರಿನ ನಷ್ಟಕ್ಕೆ ಕಾರಣವಾಗುತ್ತದೆ, ಇದರಿಂದಾಗಿ ಶುಷ್ಕತೆಯ ಸಮಸ್ಯೆ ಹೆಚ್ಚಾಗುತ್ತದೆ. ಇದು ನಿಮ್ಮ ಮುಖ ಹಾಗೂ ಕೂದಲಿನಲ್ಲಿ ಗೋಚರವಾಗಲು ಪ್ರಾರಂಭವಾಗುತ್ತದೆ. ಜೊತೆಗೆ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದು ನಾನಾ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುವುದು.

4. ಸಂಸ್ಕರಿಸಿದ ಆಹಾರ:

4. ಸಂಸ್ಕರಿಸಿದ ಆಹಾರ:

ವಿಶೇಷವಾಗಿ ಚಳಿಗಾಲದಲ್ಲಿ ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು ಏಕೆಂದರೆ ದೇಹವು ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಹೊಟ್ಟೆಯು ದಿನವಿಡೀ ಆಲಸ್ಯ, ಗ್ಯಾಸ್, ಅಸಿಡಿಟಿಯಿಂದ ತುಂಬಿಕೊಂಡು, ಭಾರವೆನಿಸುತ್ತದೆ. ಯಾವುದೇ ಚಟುವಟಿಕೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸಂಸ್ಕರಿಸಿದ ಆಹಾರಗಳಾದ ಬ್ರೆಡ್, ಕುಕೀಸ್ಗಳನ್ನು ಸೇವಿಸಬೇಡಿ.

5. ಹುರಿದ ಆಹಾರ:

5. ಹುರಿದ ಆಹಾರ:

ಸಾಮಾನ್ಯವಾಗಿ ಚಳಿಗಾಲದಲ್ಲಿ ಮನಸ್ಸು ಹಾಗೂ ನಾಲಿಗೆ ಕೇಳುವುದು ಈ ಹುರಿದ ತಿಂಡಿಗಳನ್ನೇ. ಆದರೆ, ಹುರಿದ ಅಥವಾ ಕರಿದ ಆಹಾರಗಳನ್ನು ಸ್ಥೂಲಕಾಯತೆ ಮತ್ತು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದರ ಜೊತೆಗೆ, ಲೋಳೆಗೆ ಕಾರಣವಾಗಬಹುದು. ಆದುದರಿಂದ ಈ ಋತುವಿನಲ್ಲಿ ಇದನ್ನು ತಿನ್ನಬೇಡಿ. ಇದನ್ನು ಇತರ ಯಾವುದೇ ಋತುಗಳಲ್ಲಿ ತಿಂದರೂ ಸಹ, ಅದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ ಎಂಬುದನ್ನು ನೆನಪಿಡಿ.

ಹಾಗಾದ್ರೆ, ಯಾವ ಆಹಾರ ದೇಹಕ್ಕೆ ಉತ್ತಮ?:

ಪ್ರಸ್ತುತ ಇರುವ ಕೊರೊನಾ ಕಾಲದಲ್ಲಿ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳುವುದು ತುಂಬ ಮುಖ್ಯ. ಆದ್ದರಿಂದ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚೆಚ್ಚು ಸೇವಿಸಿ, ಜೊತೆಗೆ ಹಸಿರು ಸೊಪ್ಪು, ತರಕಾರಿಗಳು, ತಾಜಾ ಹಣ್ಣಿನ ರಸ, ಹಣ್ಣುಹಂಪಲು ಆಹಾರದಲ್ಲಿರಲಿ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ನಮ್ಮನ್ನು ಫಿಟ್ ಆಗಿ ಇಡುತ್ತವೆ.

English summary

Food Items To exclude In Your Diet To Keep Yourself Healthy in Winter in kannada

Here we talking about Food Items To exclude In Your Diet To Keep Yourself Healthy in Winter in kannada, read on
Story first published: Wednesday, December 1, 2021, 10:59 [IST]
X
Desktop Bottom Promotion