For Quick Alerts
ALLOW NOTIFICATIONS  
For Daily Alerts

ಬೆನ್ನು ನೋವು ನಿವಾರಣೆಗೆ ಯಾವ ನಿದ್ರಾ ಭಂಗಿ ಉತ್ತಮ

|

ನಮ್ಮ ಆರೋಗ್ಯಕರ ಜೀವನಕ್ಕೆ ನಿದ್ರೆ ಬಹಳ ಅವಶ್ಯಕ. ನಮಗೆ ಯಾವುದೇ ಒತ್ತಡವಿದ್ದರೂ ಸಹ ಎಲ್ಲವನ್ನು ಮರೆತು ವೈದ್ಯರು ಹೇಳುವ ರೀತಿ ರಾತ್ರಿಯ ಸಮಯದಲ್ಲಿ ಕನಿಷ್ಠ ಎಂಟು ಗಂಟೆಗಳ ಕಾಲ ನಾವು ನಿದ್ರೆ ಮಾಡಲೇಬೇಕು. ಒಂದು ವೇಳೆ ಸರಿಯಾದ ನಿದ್ರೆ ನಮ್ಮದಾಗದಿದ್ದರೆ ಮರುದಿನ ಬೆಳಗ್ಗೆ ಹಾಸಿಗೆಯಿಂದ ಸರಾಗವಾಗಿ ಮೇಲೇಳಲು ಸಾಧ್ಯವಾಗುವುದಿಲ್ಲ. ಆ ದಿನದ ಕೆಲಸ ಕಾರ್ಯಗಳು ನಾವು ಅಂದುಕೊಂಡ ಮಟ್ಟಿಗೆ ನಡೆಯುವುದಿಲ್ಲ. ಹೆಚ್ಚು ಸೋಮಾರಿತನ ನಮ್ಮನ್ನು ಅವರಿಸುವುದರ ಜೊತೆಗೆ ಆರೋಗ್ಯ ಸಮಸ್ಯೆಗಳು ಕೂಡ ಶುರುವಾಗುತ್ತವೆ.

ನಾವು ಯಾರೇ ಆದರೂ ಹಾಸಿಗೆ ಮೇಲೆ ಒಂದೇ ರೀತಿ ಮಲಗಿಕೊಳ್ಳುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಭಂಗಿಯಲ್ಲಿ ಮಲಗಿ ನಿದ್ರಿಸುವ ಅಭ್ಯಾಸ ರೂಢಿಯಾಗಿರುತ್ತದೆ. ಹಾಗೆ ಮಲಗುತ್ತಿರುವುದು ಆರೋಗ್ಯಕರವೋ ಅಲ್ಲವೋ ಎಂಬುದು ಸರಿಯಾಗಿ ತಿಳಿದಿರುವುದಿಲ್ಲ. ಆದರೂ ಕೂಡ ಪ್ರತಿದಿನವೂ ಇದೇ ಅಭ್ಯಾಸ ಮುಂದುವರೆಯುತ್ತದೆ. ಹಾಗಾದರೆ ಪ್ರತಿದಿನವೂ ಒಂದೇ ಭಂಗಿಯಲ್ಲಿ ಮಲಗಿ ನಿದ್ರಿಸುವುದರಿಂದ ನಮ್ಮ ಆರೋಗ್ಯಕ್ಕೆ ಏನಾದರೂ ತೊಂದರೆ ಆಗುವುದೇ ಎಂಬ ಪ್ರಶ್ನೆ ಈಗ ನಿಮ್ಮನ್ನು ಕಾಡುತ್ತಿರಬಹುದು. ಈ ಲೇಖನದಲ್ಲಿ ನೀವು ಪ್ರತಿ ರಾತ್ರಿ ಮಲಗಿಕೊಳ್ಳುವ ಭಂಗಿಗೆ ಅನುಸಾರವಾಗಿ ನಿಮಗೆ ಉಂಟಾಗುವ ಆರೋಗ್ಯದ ಪ್ರಯೋಜನಗಳು ಮತ್ತು ಕೆಟ್ಟ ಪರಿಣಾಮಗಳನ್ನು ವಿವರಿಸಿ ತಿಳಿಸಲಾಗಿದೆ.

ಅಂಗಾತ ಕಾಲು ನೀಡಿ ಮಲಗಿಕೊಳ್ಳುವುದು

ಅಂಗಾತ ಕಾಲು ನೀಡಿ ಮಲಗಿಕೊಳ್ಳುವುದು

ರಾತ್ರಿ ನಿದ್ರೆ ಮಾಡುವ ಸಂದರ್ಭದಲ್ಲಿ ಹಾಸಿಗೆ ಕಡೆಗೆ ಬೆನ್ನು ಮಾಡಿ ನೇರವಾಗಿ ಎರಡೂ ಕಾಲುಗಳನ್ನು ನೀಡಿಕೊಂಡು ಕೈಗಳನ್ನು ಪಕ್ಕದಲ್ಲೇ ಇರಿಸಿಕೊಂಡು ಮಲಗುವುದು ಬೇರೆಲ್ಲಾ ಭಂಗಿಗಳಿಗೆ ಹೋಲಿಸಿದರೆ ತುಂಬಾ ಆರೋಗ್ಯಕರ ಎಂದು ಹೇಳುತ್ತಾರೆ. ಇದು ಥೇಟ್ ಯೋಗಾಸನದ ಶವಾಸನದ ಭಂಗಿಗೆ ಹೋಲಿಕೆ ಆಗುತ್ತದೆ. ಯೋಗಾಭ್ಯಾಸದಲ್ಲಿ ಕೂಡ ಶವಾಸನದ ಭಂಗಿಗೆ ಹೋಲುವ ಈ ರೀತಿಯ ಮಲಗುವಿಕೆ ನಮ್ಮ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯ ಪ್ರಯೋಜನಗಳನ್ನು ಉಂಟು ಮಾಡಲಿದೆ ಎಂದು ನಂಬಲಾಗಿದೆ.

ಶವಾಸನದ ಭಂಗಿಯಲ್ಲಿ ಮಲಗುವುದರಿಂದ ಉಂಟಾಗುವ ಆರೋಗ್ಯದ ಲಾಭಗಳು

ಶವಾಸನದ ಭಂಗಿಯಲ್ಲಿ ಮಲಗುವುದರಿಂದ ಉಂಟಾಗುವ ಆರೋಗ್ಯದ ಲಾಭಗಳು

ಹೊಟ್ಟೆಯಲ್ಲಿ ಗ್ಯಾಸ್ಟಿಕ್ ಆಮ್ಲ ಹೆಚ್ಚಾಗದಂತೆ ತಡೆದು ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ನಮ್ಮ ಭಂಗಿಯನ್ನು ಸರಿಪಡಿಸುತ್ತದೆ.

ತಲೆ ನೋವಿನ ಸಮಸ್ಯೆ ನಿವಾರಣೆ ಆಗುತ್ತದೆ.

ಮುಖ ಹಾಗೂ ಮೈ ಕೈ ಮೇಲಿನ ಸುಕ್ಕುಗಳು ಇಲ್ಲವಾಗುತ್ತವೆ.

ಮಹಿಳೆಯರಿಗೆ ಸ್ತನಗಳ ಆರೋಗ್ಯ ನಿರ್ವಹಣೆಯಾಗುತ್ತದೆ.

ನಿದ್ರಾಹೀನತೆ ದೂರವಾಗುತ್ತದೆ.

ಕುತ್ತಿಗೆ, ಬೆನ್ನುಹುರಿ ಮತ್ತು ತೋಳುಗಳ ಆರೋಗ್ಯಕ್ಕೆ ಅತ್ಯುತ್ತಮ ಪ್ರಭಾವ ಬೀರುವ ಒಳ್ಳೆಯ ಭಂಗಿ ಎಂದರೆ ಅದು ಶವಾಸನದಲ್ಲಿ ಮಲಗುವ ಭಂಗಿ ಎಂದು ಈಗಾಗಲೇ ಸಾಬೀತಾಗಿದೆ.

ಹೆಚ್ಚು ಕಾಲ ಅಂಗಾತ ಮಲಗಿ ನಿದ್ರಿಸುವುದರಿಂದ ಉಂಟಾಗುವ ಆರೋಗ್ಯದ ಅನಾನುಕೂಲಗಳು

ಹೆಚ್ಚು ಕಾಲ ಅಂಗಾತ ಮಲಗಿ ನಿದ್ರಿಸುವುದರಿಂದ ಉಂಟಾಗುವ ಆರೋಗ್ಯದ ಅನಾನುಕೂಲಗಳು

ಗರ್ಭಿಣಿ ಮಹಿಳೆಯರಿಗೆ ತಮ್ಮ ಗರ್ಭಕೋಶದಲ್ಲಿನ ಭ್ರೂಣದ ಬೆಳವಣಿಗೆಗೆ ತೊಂದರೆ ಆಗಬಹುದು.

ಶವಾಸನದ ಭಂಗಿಯಲ್ಲಿ ಬಾಯಿಯಲ್ಲಿನ ನಾಲಿಗೆ ಕೆಳಭಾಗಕ್ಕೆ ಜಾರಿ ಹೋಗುವುದರಿಂದ ಗೊರಕೆ ಶಬ್ದ ಜಾಸ್ತಿ ಆಗಬಹುದು.

ಸೊಂಟ ನೋವು ಕಾಡಬಹುದು.

ಅಂಗಾತ ಮಲಗಿಕೊಳ್ಳುವ ಸಂದರ್ಭದಲ್ಲಿ ಈ ಟಿಪ್ಸ್ ಪಾಲಿಸಿ

ಅಂಗಾತ ಮಲಗಿಕೊಳ್ಳುವ ಸಂದರ್ಭದಲ್ಲಿ ಈ ಟಿಪ್ಸ್ ಪಾಲಿಸಿ

ಶವಾಸನ ಭಂಗಿಯಲ್ಲಿ ನೀವು ಮಲಗುವುದೇ ಆದರೆ ತಲೆಯ ಭಾಗಕ್ಕೆ ದಿಂಬು ಕೊಟ್ಟುಕೊಳ್ಳದೆ ಹಾಗೆ ಮಲಗಿ ಇದೇ ಭಂಗಿಯಲ್ಲಿ ನಿಮ್ಮ ಮಂಡಿಗಳ ಹಿಂಭಾಗದಲ್ಲಿ ಒಂದು ದಪ್ಪ ದಿಂಬನ್ನು ಇಟ್ಟು ಮಲಗುವುದರಿಂದ ಬಹು ಕಾಲದಿಂದ ಕಾಡುತ್ತಿರುವ ಸೊಂಟ ನೋವು ಮಾಯವಾಗುವ ಸಾಧ್ಯತೆ ಇದೆ.

ನೋಡಲು ಥೇಟ್ ಸ್ಟಾರ್ ಫಿಶ್ ರೀತಿ ಮಲಗುವುದು

ನೋಡಲು ಥೇಟ್ ಸ್ಟಾರ್ ಫಿಶ್ ರೀತಿ ಮಲಗುವುದು

ನಿದ್ರಾಹೀನತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಹೋಗಲಾಡಿಸಲು ಇದೊಂದು ಒಳ್ಳೆಯ ಭಂಗಿ ಎಂದು ತಿಳಿದುಕೊಳ್ಳಬಹುದು.

ರಾತ್ರಿಯ ಸಮಯದಲ್ಲಿ ಊಟ ಆದ ನಂತರ ಹಾಸಿಗೆ ಮೇಲೆ ಸ್ಟಾರ್ ಫಿಶ್ ರೀತಿ ಮಲಗಿ ನಿದ್ರಿಸುವ ಅಭ್ಯಾಸ ಮಾಡಿಕೊಳ್ಳುವುದರಿಂದ ಈ ಕೆಳಗಿನ ಉಪಯೋಗಗಳು ನಿಮ್ಮದಾಗಲಿವೆ.

ಗ್ಯಾಸ್ಟಿಕ್ ಸಮಸ್ಯೆ ( ಜಿ ಇ ಆರ್ ಡಿ ) ಮತ್ತು ಎದೆಯುರಿ ದೂರವಾಗುತ್ತದೆ.

ಬೆನ್ನು ನೋವು ಮತ್ತು ಬೆನ್ನುಹುರಿಯ ಸಮಸ್ಯೆ ದೂರವಾಗುತ್ತದೆ.

ತಲೆ ನೋವಿನ ಸಮಸ್ಯೆ ಇಲ್ಲವಾಗುತ್ತದೆ.

ನಿದ್ರಾಹೀನತೆ ದೂರವಾಗುತ್ತದೆ.

ಸುಕ್ಕುಗಳು ಮತ್ತು ಇನ್ನಿತರ ಚರ್ಮದ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಸ್ಟಾರ್ ಫಿಶ್ ರೀತಿ ಮಲಗುವುದರಿಂದ ಆರೋಗ್ಯಕ್ಕೆ ಉಂಟಾಗುವ ಕೆಲವು ತೊಂದರೆಗಳು

ಸ್ಟಾರ್ ಫಿಶ್ ರೀತಿ ಮಲಗುವುದರಿಂದ ಆರೋಗ್ಯಕ್ಕೆ ಉಂಟಾಗುವ ಕೆಲವು ತೊಂದರೆಗಳು

ಸೊಂಟ ನೋವು ಬರುವ ಸಾಧ್ಯತೆ ಇದೆ

ನಿಮ್ಮ ಎರಡೂ ತೋಳುಗಳನ್ನು ತಲೆಯ ಹತ್ತಿರ ಇಟ್ಟುಕೊಂಡು ಹೆಚ್ಚು ಹೊತ್ತು ಮಲಗುವುದರಿಂದ ಭುಜಗಳ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಒತ್ತಡ ಉಂಟಾಗಿ ಇದ್ದಕ್ಕಿದ್ದಂತೆ ನೋವು ಕಾಡಲು ಪ್ರಾರಂಭ ಆಗಬಹುದು.

ಈಗಾಗಲೇ ಸ್ಲೀಪ್ ಅಪ್ನಿಯಾದಿಂದ ಬಳಲುತ್ತಿರುವ ರೋಗಿಗಳಲ್ಲಿ ಗೊರಕೆ ಶಬ್ದ ಹೆಚ್ಚಾಗುವ ಸಾಧ್ಯತೆ ಇದೆ.

ಸ್ಟಾರ್ ಫಿಶ್ ರೀತಿ ಮಲಗಿಕೊಳ್ಳುವ ಸಂದರ್ಭದಲ್ಲಿ ನಿಮಗೆ ಯಾವುದೇ ತೊಂದರೆ ಉಂಟಾಗಬಾರದು ಎಂದರೆ ಈ ಟಿಪ್ಸ್ ಅನುಸರಿಸಿ. ಏನೆಂದರೆ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ತಲೆಯ ಭಾಗದಲ್ಲಿ ಯಾವುದೇ ಕಾರಣಕ್ಕೂ ದಿಂಬನ್ನು ಇಟ್ಟುಕೊಳ್ಳದೆ ಸ್ಟಾರ್ ಫಿಶ್ ಭಂಗಿಯಲ್ಲಿ ಮಲಗುವ ರೂಡಿ ಮಾಡಿಕೊಳ್ಳಿ.

ಪಕ್ಕಕ್ಕೆ ತಿರುಗಿ ನೇರವಾಗಿ ಕಾಲು ನೀಡಿ ಮಲಗುವುದು

ಪಕ್ಕಕ್ಕೆ ತಿರುಗಿ ನೇರವಾಗಿ ಕಾಲು ನೀಡಿ ಮಲಗುವುದು

ಸಾಧಾರಣವಾಗಿ ನಾವು ಮಲಗಿಕೊಂಡಾಗ ಇಡೀ ರಾತ್ರಿ ಒಂದೇ ರೀತಿ ಮಲಗಿರುತ್ತೇವೆ ಎಂದು ಹೇಳಲು ಬರುವುದಿಲ್ಲ. ನಿದ್ರೆ ಮಧ್ಯದಲ್ಲಿ ಆಗಾಗ ಅತ್ತಿತ್ತ ಹೊರಳಾಡುತ್ತಿರುತ್ತೇವೆ. ಹೀಗೆ ಹೊರಳಾಡುವ ಸಂದರ್ಭದಲ್ಲಿ ಎಡ ಬದಿಗೆ ಅಥವಾ ಬಲ ಬದಿಗೆ ತಿರುಗಿಕೊಂಡು ನೇರವಾಗಿ ಕಾಲು ನೀಡಿಕೊಂಡು ಮಲಗುತ್ತೇವೆ. ಎಡ ಬದಿಗೆ ತಿರುಗಿ ಮಲಗುವ ಅಭ್ಯಾಸ ಸಾಕಷ್ಟು ಒಳ್ಳೆಯ ಆರೋಗ್ಯ ಲಾಭಗಳನ್ನು ತಂದು ಕೊಡುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಲಾಭಗಳು ಯಾವುವು

ಆರೋಗ್ಯ ಲಾಭಗಳು ಯಾವುವು

ನಿಮ್ಮ ದೇಹದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಪ್ರಾರಂಭ ಮಾಡುತ್ತದೆ.

ಬೆನ್ನುಹುರಿಯ ಸಮಸ್ಯೆಯನ್ನು ಹೊಂದಿರುವವರಿಗೆ ಇದೊಂದು ಒಳ್ಳೆಯ ಭಂಗಿ ಎಂದು ಕರೆಯಲ್ಪಡುತ್ತದೆ.

ನಿಮ್ಮ ಕುತ್ತಿಗೆ ನೋವು ಮತ್ತು ಬೆನ್ನು ನೋವು ನಿಯಂತ್ರಣದಲ್ಲಿರುತ್ತದೆ.

ಈ ಭಂಗಿಯ ಆರೋಗ್ಯ ಪ್ರಯೋಜನಗಳನ್ನು ಅರಿತು ವೈದ್ಯರು ಗರ್ಭಿಣಿ ಮಹಿಳೆಯರಿಗೆ ಇದೇ ರೀತಿ ಮಲಗಲು ಹೇಳುತ್ತಾರೆ.

ಗೊರಕೆ ಹೊಡೆಯುವವರಿಗೆ ಗೊರಕೆ ಶಬ್ದ ಕಡಿಮೆಯಾಗುತ್ತದೆ.

ಸ್ಲೀಪ್ ಅಪ್ನಿಯಾ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ

ಎದೆಯುರಿ ಸಮಸ್ಯೆ ಕಡಿಮೆಯಾಗುತ್ತದೆ

ಮೆದುಳಿನ ಭಾಗದಲ್ಲಿರುವ ವಿಷಕಾರಿ ತ್ಯಾಜ್ಯವನ್ನು ನಿಮ್ಮ ದೇಹ ಹೊರ ಹಾಕಲು ಸಹಾಯವಾಗುತ್ತದೆ. ಇದರಿಂದ ಅಲ್ಜಿಮರ್ ಮತ್ತು ಡೆಮೆನ್ಷಿಯ ಕಾಯಿಲೆ ಬರದಂತೆ ತಡೆಯಬಹುದು.

ರಾತ್ರಿ ಮಲಗಿರುವ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ.

ಈ ನಿರ್ದಿಷ್ಟವಾದ ಭಂಗಿಯಿಂದ ಆರೋಗ್ಯ ತೊಂದರೆಗಳು ಆಗುತ್ತವೆಯೇ?

ಈ ನಿರ್ದಿಷ್ಟವಾದ ಭಂಗಿಯಿಂದ ಆರೋಗ್ಯ ತೊಂದರೆಗಳು ಆಗುತ್ತವೆಯೇ?

ವಯಸ್ಸಾಗುವಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಅಂದರೆ ಚರ್ಮ ಸಂಬಂಧಿತ ಸಮಸ್ಯೆಗಳು ( ಚರ್ಮದ ಮೇಲೆ ಅಲ್ಲಲ್ಲಿ ಸುಕ್ಕುಗಳು, ಗೀರುಗಳು ) ಪ್ರಾರಂಭ ಆಗಬಹುದು.

ಒಂದೇ ಕಡೆಗೆ ತಿರುಗಿಕೊಂಡು ಹೆಚ್ಚು ಹೊತ್ತು ಮಲಗುವ ಕಾರಣದಿಂದ ಕೆಳಭಾಗದ ಕಾಲಿನ ಮೇಲಿರುವ ಇನ್ನೊಂದು ಕಾಲಿಗೆ ಯಾವುದೇ ಬೆಂಬಲ ಇಲ್ಲದಿರುವುದರಿಂದ ಯಾವುದೇ ನೋವು ಇಲ್ಲದವರಿಗೂ ಕೂಡ ಬೆನ್ನು ಅಥವಾ ಸೊಂಟ ನೋವು ಬರುವ ಸಾಧ್ಯತೆ ಇದೆ.

ಕೆಲವು ಬಾರಿ ಕೆಲವರಿಗೆ ಈ ಭಂಗಿಯಿಂದ ಕುತ್ತಿಗೆ ನೋವು ಕೂಡ ಬಂದು ಧೀರ್ಘವಾಗಿ ಕಾಡುವ ಸಾಧ್ಯತೆ ಇರುತ್ತದೆ.

ನೀವು ಈ ಟಿಪ್ಸ್ ಅನುಸರಿಸಿದರೆ ನಿಮಗೆ ಎದುರಾಗುವ ಆರೋಗ್ಯ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು

ಈ ಭಂಗಿಯಲ್ಲಿ ಆರಾಮದಾಯಕವಾಗಿ ನಿದ್ರೆ ಮಾಡಿ ಒಳ್ಳೆಯ ಆರೋಗ್ಯ ಲಾಭಗಳನ್ನು ನಿಮ್ಮದಾಗಿಸಿಕೊಳ್ಳಬೇಕೆಂದರೆ ತಲೆಯ ಭಾಗಕ್ಕೆ ಹೆಚ್ಚು ಎತ್ತರದ ದಿಂಬನ್ನು ಇರಿಸಿ ನಿಮ್ಮ ಎರಡೂ ಕಾಲುಗಳ ಮಧ್ಯೆ ಚಿಕ್ಕದಾದ ದಿಂಬನ್ನು ಇರಿಸಿಕೊಂಡು ನಿದ್ರೆ ಮಾಡಲು ಮುಂದಾಗಿ.

ಎರಡೂ ಕೈಗಳನ್ನು ತಲೆಯ ಬಳಿ ಮಡಚಿಕೊಂಡು ಒಂದು ಬದಿಯಲ್ಲಿ ಮಲಗುವುದು

ಕೈಗಳನ್ನು ಮಡಿಚಿ ತಲೆಯ ಬದಿ ಇಟ್ಟು ಮಲಗುವ ಕಾರಣದಿಂದ ರಕ್ತ ಸಂಚಾರ ಕಡಿಮೆಯಾಗಿ ತೋಳುಗಳ ಭಾಗದಲ್ಲಿ ನೋವು ಪ್ರಾರಂಭ ಆಗಬಹುದು.

ನರಗಳ ಮೇಲೆ ಬೀಳುವ ಒತ್ತಡದ ಪ್ರಭಾವದಿಂದ ಹೊಟ್ಟೆ ಮತ್ತು ಲಿವರ್ ಭಾಗಕ್ಕೆ ಹೆಚ್ಚು ಒತ್ತಡ ವರ್ಗಾವಣೆಯಾಗುವ ಸಾಧ್ಯತೆಯಿದೆ.

ಪ್ರತಿ ದಿನವೂ ಇದೇ ರೀತಿ ಮಲಗುವ ಅಭ್ಯಾಸ ನಿಮ್ಮದಾದರೆ ನಿಮ್ಮ ಯೌವ್ವನ ದೂರವಾಗಿ ವಯಸ್ಸಾಗುವಿಕೆ ಸಮಸ್ಯೆ ಕಾಡಬಹುದು.

ಇದೊಂದು ಟಿಪ್ಸ್ ಫಾಲೋ ಮಾಡಿ

ಇದೊಂದು ಟಿಪ್ಸ್ ಫಾಲೋ ಮಾಡಿ

ನೀವು ಇದೇ ಭಂಗಿಯಲ್ಲಿ ಮಲಗಿ ನಿದ್ರೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದೇ ಆದರೆ ನಿಮ್ಮ ಮಂಡಿಗಳ ಮಧ್ಯದಲ್ಲಿ ಒಂದು ದಿಂಬನ್ನು ಇಟ್ಟುಕೊಂಡು ಮಲಗಿ ಆರಾಮವಾಗಿ ನಿದ್ರಿಸಿ.

ಗರ್ಭದಲ್ಲಿರುವ ಮಗುವಿನ ರೀತಿ ಮಲಗಿಕೊಳ್ಳುವುದು

ಇದನ್ನು ಭ್ರೂಣದ ಭಂಗಿ ಎಂದು ಕರೆಯುತ್ತಾರೆ. ಒಬ್ಬ ಗರ್ಭಿಣಿ ತಾಯಿಯ ಗರ್ಭಾಶಯದಲ್ಲಿ ಬೆಳವಣಿಗೆ ಹೊಂದುತ್ತಿರುವ ಮಗು ತನ್ನ ಎರಡೂ ಮಂಡಿಗಳನ್ನು ಎದೆಯ ಭಾಗಕ್ಕೆ ತಂದು ಕುತ್ತಿಗೆ ಭಾಗವನ್ನು ಮುಂಭಾಗಕ್ಕೆ ಮಡಚಿಕೊಂಡು ಮಲಗಿರುವ ರೀತಿ ಇದಾಗಿದೆ ಎಂದು ಹೇಳಬಹುದು. ಸಂಶೋಧನೆಯ ಪ್ರಕಾರ ಪುರುಷರಿಗಿಂತ ಹೆಚ್ಚು ಮಹಿಳೆಯರು ಈ ಭಂಗಿಯಲ್ಲಿ ಮಲಗಲು ಇಷ್ಟಪಡುತ್ತಾರೆ.

ಭ್ರೂಣದ ಭಂಗಿಯಲ್ಲಿ ಮಲಗಿಕೊಳ್ಳುವುದರಿಂದ ಸಿಗುವ ಆರೋಗ್ಯ ಲಾಭಗಳು

ಭ್ರೂಣದ ಭಂಗಿಯಲ್ಲಿ ಮಲಗಿಕೊಳ್ಳುವುದರಿಂದ ಸಿಗುವ ಆರೋಗ್ಯ ಲಾಭಗಳು

ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ.

ಗೊರಕೆ ಶಬ್ದ ಕಡಿಮೆಯಾಗುತ್ತದೆ.

ಗರ್ಭಿಣಿಯರಿಗೆ ವೈದ್ಯರು ಈ ಭಂಗಿಯಲ್ಲಿ ಮಲಗಿಕೊಳ್ಳಲು ಶಿಫಾರಸ್ಸು ಮಾಡುತ್ತಾರೆ.

ಈ ಭಂಗಿಯ ಅನಾನುಕೂಲಗಳು ಹೀಗಿವೆ

ಈ ಭಂಗಿಯ ಅನಾನುಕೂಲಗಳು ಹೀಗಿವೆ

ಕುತ್ತಿಗೆ ಮತ್ತು ಬೆನ್ನು ನೋವು ಈ ಭಂಗಿಯ ಸಾಮಾನ್ಯ ಸಮಸ್ಯೆ.

ಚರ್ಮದ ಮೇಲೆ ಅಲ್ಲಲ್ಲಿ ಸುಕ್ಕುಗಳು ಕಂಡುಬರುವ ಸಾಧ್ಯತೆ ಇದೆ. ಮಹಿಳೆಯರಿಗೆ ಸ್ತನಗಳು ಜೋತು ಬೀಳುವ ಸಾಧ್ಯತೆ ಇದೆ.

ಹೊಟ್ಟೆ ಕೆಳಗೆ ಮಾಡಿ ಮಲಗಿಕೊಳ್ಳುವುದು

ಹೊಟ್ಟೆ ಕೆಳಗೆ ಮಾಡಿ ಮಲಗಿಕೊಳ್ಳುವುದು

ಇದು ಅತ್ಯಂತ ಅನಾರೋಗ್ಯಕರವಾದ ಮಲಗುವ ಭಂಗಿ ಎಂದು ಆರೋಗ್ಯ ತಜ್ಞರು ಕರೆಯುತ್ತಾರೆ. ಮಕ್ಕಳ ಸಹಿತ ಯಾರೂ ಕೂಡ ಈ ಭಂಗಿಯಲ್ಲಿ ಹೆಚ್ಚು ಹೊತ್ತು ಮಲಗಬಾರದು. ವಿಶೇಷವಾಗಿ ಗರ್ಭಿಣಿಯರು ಈ ರೀತಿಯಲ್ಲಿ ಮಲಗುವುದನ್ನು ಎಂದಿಗೂ ಅಭ್ಯಾಸ ಮಾಡಿಕೊಳ್ಳಲೇಬಾರದು.

ಹೊಟ್ಟೆ ಕೆಳಗೆ ಮಾಡಿಕೊಂಡು ಮಲಗುವುದರಿಂದ ಉಂಟಾಗುವ ಒಂದೇ ಒಂದು ಒಳ್ಳೆಯ ಲಾಭ ಎಂದರೆ ಗೊರಕೆ ಹೊಡೆಯುವ ಅಭ್ಯಾಸ ಇರುವವರಿಗೆ ಗೊರಕೆ ಹೊಡೆಯುವ ಸಂಭವ ತಪ್ಪುತ್ತದೆ.

ಇದರಿಂದ ನಿಮ್ಮ ಆರೋಗ್ಯಕ್ಕೆ ಉಂಟಾಗುವ ಕೆಟ್ಟ ಪರಿಣಾಮಗಳು

ಇದರಿಂದ ನಿಮ್ಮ ಆರೋಗ್ಯಕ್ಕೆ ಉಂಟಾಗುವ ಕೆಟ್ಟ ಪರಿಣಾಮಗಳು

ವಿಪರೀತವಾಗಿ ಬೆನ್ನು ನೋವು ಮತ್ತು ಬೆನ್ನುಹುರಿಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.

ಬಹು ಅಂಗಾಂಗಗಳ ಒತ್ತಡ ಮತ್ತು ಸಮಸ್ಯೆ ಎದುರಾಗಬಹುದು.

ದಿಂಬಿನ ಮೇಲೆ ಮುಖ ಇಟ್ಟು ಮಲಗುವುದರಿಂದ ಮುಖದ ಭಾಗಕ್ಕೆ ಸರಿಯಾಗಿ ರಕ್ತಸಂಚಾರ ಆಗದೇ ಇರುವುದರಿಂದ ಬಹಳ ಬೇಗನೆ ಮುಖದ ಮೇಲೆ ಸುಕ್ಕುಗಳು ಆವರಿಸಿಕೊಳ್ಳುತ್ತವೆ.

ಇದೊಂದು ಟಿಪ್ಸ್ ತಪ್ಪದೇ ಅನುಸರಿಸಿ

ಇದೊಂದು ಟಿಪ್ಸ್ ತಪ್ಪದೇ ಅನುಸರಿಸಿ

ನೀವು ಹೆಚ್ಚು ಹೊತ್ತು ಹೊಟ್ಟೆಯನ್ನು ಕೆಳಗೆ ಮಾಡಿಕೊಂಡು ಬೆನ್ನು ಮೇಲೆ ಮಾಡಿಕೊಂಡು ಮಲಗಲು ಹೋಗಬೇಡಿ. ಹಾಗೂ ಒಂದೊಮ್ಮೆ ಮಲಗಿದರೆ ಹೊಟ್ಟೆಯ ಕೆಳಗೆ ಒಂದು ಮೆತ್ತನೆಯ ದಿಂಬನ್ನು ಇಟ್ಟುಕೊಳ್ಳುವುದನ್ನು ಮರೆಯಬೇಡಿ.

English summary

Best Sleeping Positions for your Lower Back Pain in kannada

Here we are discussing about Best Sleeping Positions for your Lower Back Pain and which position is best and how it effects on your health in kannada. Read more.
Story first published: Friday, September 11, 2020, 14:58 [IST]
X
Desktop Bottom Promotion