ಹೃದಯದ ಆರೋಗ್ಯ ಸುರಕ್ಷತೆಗೆ ಒಂದಿಷ್ಟು ಉಪಯುಕ್ತ ಸಲಹೆಗಳು

By: manu
Subscribe to Boldsky

ಪ್ರೀತಿಸುವ ಪ್ರತಿಯೊಬ್ಬನೂ ಹೃದಯದ ಬಗ್ಗೆ ಮಾತನಾಡದೆ ಇರಲಿಕ್ಕಿಲ್ಲ. ಈ ಹೃದಯ ನಿನಗಾಗಿ...ಹೀಗೆ ಹಲವಾರು, ಸಿನಿಮಾ ಹಾಡುಗಳನ್ನು ನೀವು ಕೇಳಿರುವಿರಿ... ಅಷ್ಟೇ ಅಲ್ಲದೇ ಸಿನಿಮಾಗಳಲ್ಲೂ ಹೃದಯವನ್ನು ಹಲವಾರು ರೀತಿಯಿಂದಲೂ ವರ್ಣಿಸಿದ್ದಾರೆ. ಹೃದಯ ಜೋಪಾನವಾಗಿರಲು ಮಾಡಿ ಈ ವ್ಯಾಯಾಮ

ಇಂದಿನ ದಿನಗಳಲ್ಲಿ ಒಬ್ಬರ ಹೃದಯವನ್ನು ಮತ್ತೊಬ್ಬರಿಗೆ ಜೋಡಿಸುವಂತಹ ವೈದ್ಯಕೀಯ ಸಾಧನೆಯೂ ನಡೆದಿದೆ. ಆದರೆ ದೇಹದಲ್ಲಿರುವ ಹೃದಯಕ್ಕೆ ಅಪಾಯವನ್ನು ಉಂಟು ಮಾಡಬಲ್ಲ ಒಂದು ಅಂಶವೆಂದರೆ ಅದು ಅಪಧಮನಿ ತಡೆಯೊಡ್ಡುವುದು. ಇದು ಹೃದಯಕ್ಕೆ ತುಂಬಾ ಅಪಾಯಕಾರಿ. ಇಂತಹ ಸಮಸ್ಯೆಯಿಂದ ವರ್ಷಕ್ಕೆ ಹಲವಾರು ಮಂದಿ ಸಾವನ್ನಪ್ಪುತ್ತಾರೆ.   ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!

ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ನಾವು ಸಂಸ್ಕರಿತ ಆಹಾರ, ಕೊಬ್ಬಿನ ಆಹಾರವನ್ನು ಸೇವಿಸುವುದು. ಇದಕ್ಕೆ ಪರಿಹಾರ ಇಲ್ಲವೆಂದಲ್ಲ ಅಪಧಮನಿಯಲ್ಲಿರುವ ತಡೆಯನ್ನು ತೆಗೆದರೆ ಆಗ ಹೃದಯಕ್ಕೆ ಆಗುವಂತಹ ಅಪಾಯವು ತುಂಬಾ ಕಡಿಮೆಯಾಗುತ್ತದೆ... ಚಿಂತಿಸದಿರಿ ಇದಕ್ಕೆಂದೇ ಕೆಲವೊಂದು ಮನೆಮದ್ದನ್ನು ನೀಡಿದ್ದೇವೆ, ಚಾಚೂ ತಪ್ಪದೇ ಪಾಲಿಸಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಿ..... 

ಸಿಹಿ ಕುಂಬಳಕಾಯಿ

ಸಿಹಿ ಕುಂಬಳಕಾಯಿ

ಮ್ಯಾಗ್ನಿಷಿಯಂ ಕೊರತೆಯಿಂದ ಹೃದಯದ ಬಡೆತ ಹೆಚ್ಚಾದರೆ ಸಿಹಿ ಕುಂಬಳಕಾಯಿ ತಿನ್ನುವುದು ಒಳ್ಳೆಯದು. ಇದರಿಂದ ದೇಹಕ್ಕೆ ಅಗತ್ಯವಿರುವ ಮ್ಯಾಗ್ನಿಷಿಯಂ ದೊರೆಯು ಹೃದಯ ಸಾಧಾರಣವಾಗಿ ಬಡೆದುಕೊಳ್ಳುತ್ತದೆ. ಆರೋಗ್ಯದ ಪಾಲಿನ ಸಂಜೀವಿನಿ-ಸಿಹಿ ಕುಂಬಳಕಾಯಿ

ಅಡುಗೆಗೆ ಆಲೀವ್ ಎಣ್ಣೆಯನ್ನು ಬಳಸಿ

ಅಡುಗೆಗೆ ಆಲೀವ್ ಎಣ್ಣೆಯನ್ನು ಬಳಸಿ

ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಚಪಾತಿಗಳ ಮೇಲೆ ಸವರಿ ತಿನ್ನುವುದು ಸಹಾ ಉತ್ತಮವಾಗಿದೆ. ರುಚಿಯಲ್ಲಿ ನಮ್ಮ ಸಾಮಾನ್ಯ ಎಣ್ಣೆಗಳಿಗೆ ಸಾಟಿಯಾಗದ ಈ ಎಣ್ಣೆ ಕೊಂಚ ದುಬಾರಿಯೂ ಆಗಿರುವುದರಿಂದ ಇನ್ನೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಲ್ಲ.

ಅಡುಗೆಗೆ ಆಲೀವ್ ಎಣ್ಣೆಯನ್ನು ಬಳಸಿ

ಅಡುಗೆಗೆ ಆಲೀವ್ ಎಣ್ಣೆಯನ್ನು ಬಳಸಿ

ಆದರೆ ಆರೋಗ್ಯದ ದೃಷ್ಟಿಯಿಂದ ರುಚಿ ಮತ್ತು ಬೆಲೆಯಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣ.

ಬಾದಾಮಿಗಳು

ಬಾದಾಮಿಗಳು

ಹೃದಯಕ್ಕೆ ವಿವಿಧ ಒಣಫಲಗಳು ಉತ್ತಮವಾಗಿವೆ. ಒಣಫಲಗಳಲ್ಲಿ ಬಾದಾಮಿ ಉತ್ತಮವಾಗಿದೆ. ಇದನ್ನು ಹಸಿಯಾಗಿಯೂ, ನಿಮ್ಮ ನಿತ್ಯದ ಆಹಾರಗಳಲ್ಲಿ ಒಂದು ಭಾಗವಾಗಿಯೂ, ಚಿಕ್ಕದಾಗಿ ಕತ್ತರಿಸಿ ಸಿಹಿಪದಾರ್ಥಗಳಲ್ಲಿಯೂ ಬಳಸಬಹುದು.

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ.

ಬಾರ್ಲಿ

ಬಾರ್ಲಿ

ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ. ಬಾರ್ಲಿ ನೀರು: ಇದುವೇ ಆರೋಗ್ಯ ವೃದ್ಧಿಗೆ ಪನ್ನೀರು

ಮೀನು ಸೇವಿಸಿ

ಮೀನು ಸೇವಿಸಿ

ತೈಲಯುಕ್ತ ಮೀನು ಮತ್ತು ಒಮೆಗಾ-3 ಫ್ಯಾಟ್ ಇರುವ ಆಹಾರ ಸೇವಿಸಿ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಲಾಭಕರ. ಬಂಗಡೆ, ಸಾರ್ಡೀನ್ ಗಳು, ತಾಜಾ ಮೀನು, ಸಾಲ್ಮನ್ ಮೀನಿನಲ್ಲಿ ಒಮೆಗಾ-3 ಕೊಬ್ಬು ಹೇರಳವಾಗಿದೆ ಮತ್ತು ಇದು ಹೃದಯದ ಕಾಯಿಲೆಗಳನ್ನು ತಡೆಯಲು ನೆರವಾಗುತ್ತದೆ.

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ಒಂದು ಗ್ಲಾಸ್ ದಾಳಿಂಬೆ ಜ್ಯೂಸ್

ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು.

 
English summary

Things to Do Daily to Keep Your Heart Healthy

Here are few things you need to do every day to help your heart work most efficiently. Incorporate these habits into your lifestyle and your heart health will be the best it can be for you.
Story first published: Friday, December 16, 2016, 11:36 [IST]
Please Wait while comments are loading...
Subscribe Newsletter