For Quick Alerts
ALLOW NOTIFICATIONS  
For Daily Alerts

ಪುಟ್ಟ ಹೃದಯದ ಆರೋಗ್ಯಕ್ಕೂ ಸ್ವಲ್ಪ ಆದ್ಯತೆ ನೀಡಿ!

By manu
|

ಟೀವಿಯಲ್ಲಿ ಬರುವ ಹಲವು ಜಾಹೀರಾತುಗಳಲ್ಲಿ ಕೆಲವು ಆಹಾರವಸ್ತುಗಳನ್ನು ಹೃದಯವನ್ನು ರಕ್ಷಿಸುವ ರಾಯಭಾರಿಗಳಂತೆ ಕೆಲವೊಮ್ಮೆ ಬಿಂಬಿಸಲಾಗುತ್ತದೆ. ತಮ್ಮ ಉತ್ಪನ್ನ ಬಳಸಿದರೆ ಮಾತ್ರ ಹೃದಯಕ್ಕೆ ಒಳ್ಳೆಯದೆಂದೂ ಬೇರಾವ ಉತ್ಪನ್ನ ಕೊಂಡರೆ ಕೆಲವು ದಿನಗಳಲ್ಲಿಯೇ ಗೊಟಕ್ ಅನ್ನುತ್ತೀರೆಂದೂ ಉತ್ಪ್ರೇಕ್ಷಿಸಲಾಗುತ್ತದೆ. ಅಂದಹಾಗೆ ಜಾಹೀರಾತು ಎಂದರೆ ಉತ್ಪ್ರೇಕ್ಷೆಯೇ ಅಲ್ಲವೇ? ಇದಕ್ಕೆ ಮರುಳಾಗದವರು ಯಾರು!

ವಾಸ್ತವವಾಗಿ ಈ ಜಾಹೀರಾತುಗಳು ಎದೆ ತಟ್ಟಿ ಹೇಳಿಕೊಳ್ಳುವ ಮತ್ತು ಹೃದಯಕ್ಕೆ ಉತ್ತಮವಾದ ಪೋಷಕಾಂಶಗಳಿದ್ದರೂ ಈ ಉತ್ಪನ್ನಗಳ ಬೆಲೆ ಮಾತ್ರ ಕಡಿಮೆ ಇರುವುದಿಲ್ಲ. ಜಾಹೀರಾತಿಗೆ ಸುರಿದ ಲಕ್ಷಾಂತರ ರೂಪಾಯಿ ಆ ಸಂಸ್ಥೆ ವಸೂಲಿ ಮಾಡಿಕೊಳ್ಳುವುದಾದರೂ ಹೇಗೆ? ಹೃದಯ ಬಡಿತದ ಏರಿಳಿತ: ಇದು ಅಪಾಯದ ಸೂಚನೆಯೇ?

ಯಾವುದೋ ರೂಪದರ್ಶಿ ದುಡ್ಡು ಪಡೆದ ಮುಲಾಜಿಗೆ ತಾನೆಂದೂ ಬಳಸದೇ ಬೇರೆಯವರಿಗೆ ಬಳಸಲು ಹೇಳಿದ ಉತ್ಪನ್ನವನ್ನು ಕೋಲೆಬಸವನಂತೆ ದುಬಾರಿ ಬೆಲೆ ಕೊಟ್ಟು ಮನೆಗೆ ತರುವ ಬದಲು ಇದಕ್ಕೂ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲ ಮತ್ತು ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳನ್ನು ಮನೆಯಲ್ಲಿಯೇ ಪಡೆಯಬಹುದು.

ಅಷ್ಟಕ್ಕೂ ನಮ್ಮ ಹಿರಿಯರು ಇಂತಹ ದುಬಾರಿ ಆಹಾರಗಳನ್ನು ಸೇವಿಸದೇ ಉತ್ತಮ ಆಯಸ್ಸು ಹೊಂದಿರಲಿಲ್ಲವೇ? ಕೆಳಗಿನ ಸ್ಲೈಡ್ ಶೋ ನಿಮಗೆ ಸೂಕ್ತವಾದ ಆಹಾರಗಳ ಆಯ್ಕೆಯನ್ನು ಸುಲಭಗೊಳಿಸಬಲ್ಲದು. ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ

ಗಿಡಮೂಲಿಕೆಗಳನ್ನು ಉಪ್ಪು ಮತ್ತು ಎಣ್ಣೆಯ ಬದಲಿಗೆ ಉಪಯೋಗಿಸಿ

ಉಪ್ಪಿಗಿಂತ ರುಚಿಯಿಲ್ಲ ಸರಿ, ಆದರೆ ಹೃದಯಕ್ಕೆ ಒಳ್ಳೆಯದಲ್ಲವಲ್ಲಾ? ನಿಮ್ಮ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬು ಹೆಚ್ಚಿದ್ದಷ್ಟೂ ಹೃದಯಕ್ಕೆ ಕೆಟ್ಟದು. ಆದ್ದರಿಂದ ನಿಮ್ಮ ಅಡುಗೆಗೆ ಉಪ್ಪಿನ ಬದಲು ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದನ್ನು ಹಸಿಯಾಗಿ ತಿಂದಷ್ಟೂ ಆರೋಗ್ಯಕ್ಕೆ ಉತ್ತಮವಾಗಿದೆ. ಅಡುಗೆಗೂ ಬಳಸಬಹುದು. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಚಪಾತಿಗಳ ಮೇಲೆ ಸವರಿ ತಿನ್ನುವುದು ಸಹಾ ಉತ್ತಮವಾಗಿದೆ. ರುಚಿಯಲ್ಲಿ ನಮ್ಮ ಸಾಮಾನ್ಯ ಎಣ್ಣೆಗಳಿಗೆ ಸಾಟಿಯಾಗದ ಈ ಎಣ್ಣೆ ಕೊಂಚ ದುಬಾರಿಯೂ ಆಗಿರುವುದರಿಂದ ಇನ್ನೂ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿಲ್ಲ. ಆದರೆ ಆರೋಗ್ಯದ ದೃಷ್ಟಿಯಿಂದ ರುಚಿ ಮತ್ತು ಬೆಲೆಯಲ್ಲಿ ಕೊಂಚ ಹೊಂದಾಣಿಕೆ ಮಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣ.

ಕಪ್ಪು ಬೀನ್ಸ್ ಕಾಳುಗಳು

ಕಪ್ಪು ಬೀನ್ಸ್ ಕಾಳುಗಳು

ಹೃದಯಕ್ಕೆ ಪೋಷಣೆ ನೀಡುವ ಪೋಷಕಾಂಶಗಳು ಕಪ್ಪು ಬೀನ್ಸ್ ಕಾಳುಗಳಲ್ಲಿ ಹೇರಳವಾಗಿರುತ್ತವೆ. ಫೋಲೇಟ್, ಮೆಗ್ನೀಶಿಯಂ ಮತ್ತು ವಿವಿಧ ಆಂಟಿ ಆಕ್ಸಿಡೆಂಟುಗಳು ರಕ್ತದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುವುವು. ಇದರಲ್ಲಿನ ಉತ್ತಮ ಪ್ರಮಾಣದ ಕರಗುವ ನಾರು ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆಗೊಳಿಸಲು ಸಹಾಕರಿಸುವುವು. ಕಪ್ಪು ಬೀನ್ಸ್ ಕಾಳುಗಳನ್ನು ನೆನೆಸಿ ಮೊಳಗೆ ಬರಿಸಿ ಸಾಲಾಡ್ ಗಳೊಂದಿಗೆ ಹಸಿಯಾಗಿಯೂ ಬೇಯಿಸಿ ತರಕಾರಿಯಂತೆ ಅಥವಾ ಸೂಪ್ ಮಾಡಿಕೊಂಡು ಸಹಾ ಸೇವಿಸಬಹುದು.

ಅಗತ್ಯ ಸೂಚನೆ

ಅಗತ್ಯ ಸೂಚನೆ

ಒಂದು ವೇಳೆ ಸಿದ್ಧ ರೂಪದಲ್ಲಿರುವ ಕ್ಯಾನ್ ನಲ್ಲಿರುವ ಕಾಳನ್ನು ಕೊಂಡರೆ ಇದರಲ್ಲಿ ಉಪ್ಪು ಅಧಿಕ ಪ್ರಮಾಣದಲ್ಲಿರುವುದರಿಂದ ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿ ಬಳಿಕ ಕೆಲವು ಬಾರಿ ತೊಳೆದುಕೊಳ್ಳುವ ಮೂಲಕ ಉಪ್ಪನ್ನು ನಿವಾರಿಸಬಹುದು.

ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ

ಸಾಲ್ಮನ್ ಮೀನು : ಹೃದಯಕ್ಕೆ ಅತ್ಯುತ್ತಮವಾದ ಆಹಾರ

ಹೃದಯಕ್ಕೆ ಅತ್ಯುತ್ತಮವಾದ ಆಹಾರಗಳಲ್ಲಿ ಸಾಲ್ಮನ್ ಮೀನು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇದರಲ್ಲಿರುವ ಒಮೆಗಾ - 3 ಕೊಬ್ಬಿನ ತೈಲವೇ ಇದಕ್ಕೆ ಕಾರಣ. ಈ ತೈಲ ಹೃದಯದೊತ್ತಡವನ್ನು ಕಡಿಮೆಗೊಳಿಸಿ ರಕ್ತಪರಿಚಲನೆಯ ಏರುಪೇರುಗಳನ್ನು ಸರಿಗೊಳಿಸುತ್ತದೆ. ಅಲ್ಲದೇ ಹೃದಯಕ್ಕೆ ಮಾರಕವಾಗಿರುವ ಟ್ರೈಗ್ಲಿಸರೈಡ್ ಗಳೆಂಬ ಕಣಗಳನ್ನೂ ನಿವಾರಿಸಿ ಹೃದಯದ ಉರಿಯನ್ನು ಶಮನಗೊಳಿಸುತ್ತದೆ. ವಾರಕ್ಕೆ ಕನಿಷ್ಟ ಎರಡು ತುಂಡು ಸಾಲ್ಮನ್ ಮೀನಿನ್ನು ಸೇವಿಸಲು ಅಮೇರಿಕಾದ ಹೃದಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ.

ಅಡುಗೆಗೆ ಸೂಚನೆ

ಅಡುಗೆಗೆ ಸೂಚನೆ

ಸಾಲ್ಮನ್ ಮೀನಿನ ತುಂಡಿಗೆ ವಿವಿಧ ತರಕಾರಿ ಮತ್ತು ಮಸಾಲೆಗಳನ್ನುಸವರಿ ಅಲ್ಯೂಮಿನಿಯಂ ಫಾಯಿಲ್ ನಿಂದ ಆವರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ ತಿನ್ನುವುದರಿಂದ ಅತ್ಯಧಿಕ ಪೋಷಕಾಂಶಗಳನ್ನು ಪಡೆಯಬಹುದು. ಹುರಿಯುವುದರಿಂದ ಹೆಚ್ಚು ಪೋಷಕಾಂಶಗಳು ನಷ್ಟವಾಗುವುವು. ಬೆಂದ ಮೀನನ್ನು ಬಿಡಿಬಿಡಿಯಾಗಿಸಿ ನಿಮ್ಮ ನೆಚ್ಚಿನ ಸಾಲಾಡ್ ನೊಂದಿಗೂ ಸೇವಿಸಬಹುದು.

ಬಾದಾಮಿಗಳು

ಬಾದಾಮಿಗಳು

ಹೃದಯಕ್ಕೆ ವಿವಿಧ ಒಣಫಲಗಳು ಉತ್ತಮವಾಗಿವೆ. ಒಣಫಲಗಳಲ್ಲಿ ಬಾದಾಮಿ ಉತ್ತಮವಾಗಿದೆ. ಇದನ್ನು ಹಸಿಯಾಗಿಯೂ, ನಿಮ್ಮ ನಿತ್ಯದ ಆಹಾರಗಳಲ್ಲಿ ಒಂದು ಭಾಗವಾಗಿಯೂ, ಚಿಕ್ಕದಾಗಿ ಕತ್ತರಿಸಿ ಸಿಹಿಪದಾರ್ಥಗಳಲ್ಲಿಯೂ ಬಳಸಬಹುದು. ಬಾದಾಮಿಯಲ್ಲಿ ಸಸ್ಯಜನ್ಯ ಸ್ಟೆರಾಲ್, ಕರಗುವ ನಾರು ಮತ್ತು ಹೃದಯಕ್ಕೆ ಪೂರಕವಾದ ಕೊಬ್ಬುಗಳಿವೆ. ಇವೆಲ್ಲವೂ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತವೆ. ಆದರೆ ಮಾರುಕಟ್ಟೆಯಲ್ಲಿ ಉಪ್ಪು ಸವರಿದ ಬಾದಾಮಿ ಇದ್ದರೆ ಅದನ್ನು ಬಳಸಬೇಡಿ. ಮುಂದೆ ಓದಿ...

ಬಾದಾಮಿಗಳು

ಬಾದಾಮಿಗಳು

ಅಂತೆಯೇ ಹುರಿದದ್ದು ಸಿಕ್ಕರೂ ಕೊಳ್ಳಬೇಡಿ. ಏಕೆಂದರೆ ಅವಧಿ ಮುಗಿಯುತ್ತಾ ಬಂದಿರುವ ಬಾದಾಮಿಗಳನ್ನು ಹುರಿದ ರೂಪದಲ್ಲಿ ಮಾರಲಾಗುತ್ತದೆ. ಇವುಗಳಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ. ಉತ್ತಮವೆಂದರೆ ತಾಜಾ ಫಲಗಳನ್ನು ಕೊಂಡು ಕಡಿಮೆ ಉರಿಯಲ್ಲಿ ಕೊಂಚವೇ ಕೊಂಚ ಬಿಸಿಮಾಡುವುದರಿಂದ ಇದರಲ್ಲಿರುವ ಕೊಬ್ಬು ಕರಗಿ ರುಚಿಯನ್ನು ಹೆಚ್ಚಿಸುವುದರ ಜೊತೆಗೇ ಸುಲಭವಾಗಿ ರಕ್ತವನ್ನು ಸೇರುತ್ತದೆ.

ಸಿಹಿಗೆಣಸು

ಸಿಹಿಗೆಣಸು

ಸಿಹಿಗೆಣಸು ಸಹಾ ಹೃದಯಕ್ಕೆ ಒಂದು ಉತ್ತಮವಾದ ಆಹಾರವಾಗಿದೆ. ರಕ್ತದಲ್ಲಿ ಸಕ್ಕರೆಯನ್ನು ಸೇರಿಸುವ ಕ್ಷಮತೆಯನ್ನು ಮಾಪನ ಮಾಡುವ ಗ್ಲೈಸೆಮಿಕ್ ಕೋಷ್ಟಕದಲ್ಲಿ (glycemic index) ಸಿಹಿಗೆಣಸು ಕೆಳಗಿನ ಸ್ಥಾನದಲ್ಲಿ (ಅಂದರೆ ಕಡಿಮೆ ಸಕ್ಕರೆಯನ್ನು ನೀಡುವ) ಬರುವುದರಿಂದ ನಿಮ್ಮ ಆಹಾರದಲ್ಲಿ ಆಲುಗಡ್ಡೆಗೆ ಬದಲಾಗಿ ಬಳಸಬಹುದಾದ ಎಲ್ಲಾ ಅರ್ಹತೆಯನ್ನು ಪಡೆದಿದೆ.

ಸಿಹಿಗೆಣಸು

ಸಿಹಿಗೆಣಸು

ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ಮತ್ತು ಕರಗುವ ನಾರು, ವಿಟಮಿನ್ ಎ, ಲೈಕೋಪೀನ್ ಎಂಬ ಪೋಷಕಾಂಶಗಳು ಹೃದಯಕ್ಕೆ ಉತ್ತಮವಾಗಿದ್ದು ನಿಧಾನವಾಗಿ ಜೀರ್ಣಗೊಳ್ಳುವ ಮೂಲಕ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಧಾನವಾಗಿ ಮತ್ತು ಸೂಕ್ತ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಸಿಹಿಗೆಣಸನ್ನು ಹಸಿಯಾಗಿ ಸೇವಿಸುವುದು ಉತ್ತಮ. ಚಿಕ್ಕದಾಗಿ ತುಂಡು ಮಾಡಿದ ಗೆಣಸನ್ನು ನಿಮ್ಮ ನಿತ್ಯದ ಸಾಲಾಡ್ ನೊಂದಿಗೆ ಸ್ವಲ್ಪ ದಾಲ್ಚಿನ್ನಿ ಪುಡಿ ಮತ್ತು ಲಿಂಬೆರಸವನ್ನು ಚಿಮುಕಿಸಿ ಸೇವಿಸುವುದರಿಂದ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

ಬಾರ್ಲಿ

ಬಾರ್ಲಿ

ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ.

ಕಡಿಮೆ ಕೊಬ್ಬಿನ ಮೊಸರು

ಕಡಿಮೆ ಕೊಬ್ಬಿನ ಮೊಸರು

ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ.

ಕಡಿಮೆ ಕೊಬ್ಬಿನ ಮೊಸರು

ಕಡಿಮೆ ಕೊಬ್ಬಿನ ಮೊಸರು

ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು.

ಚೆರ್ರಿ ಹಣ್ಣುಗಳು

ಚೆರ್ರಿ ಹಣ್ಣುಗಳು

ಸಿಹಿಹುಳಿ ಸ್ವಾದದ ಚೆರ್ರಿ ಹಣ್ಣುಗಳು ತಾಜಾ ರೂಪದಲ್ಲಿ ಕೆಲವೊಮ್ಮೆ ಲಭ್ಯವಿದ್ದರೂ ಒಣರೂಪದಲ್ಲಿ ವರ್ಷವಿಡೀ ಲಭ್ಯವಾಗುತ್ತದೆ. ಜೊತೆಗೇ ಜ್ಯೂಸ್ ರೂಪದಲ್ಲಿಯೂ ಸಿಗುತ್ತದೆ. ಚೆರ್ರಿಹಣ್ಣುಗಳು ಹೃದಯಕ್ಕೆ ಉತ್ತಮವಾದ ಹಣ್ಣುಗಳಾಗಿವೆ. ಇದರಲ್ಲಿರುವ ಆಂಥೋಸಯಾನಿನ್ (anthocyanin) ಎಂಬ ಆಂಟಿ ಆಕ್ಸಿಡೆಂಟುಗಳು ರಕ್ತನಾಳಗಳ ದೃಢತೆಯನ್ನು ಹೆಚ್ಚಿಸುವ ಗುಣ ಹೊಂದಿವೆ. ಯಾವುದೇ ರೂಪದಲ್ಲಿ ಲಭ್ಯವಾದ ಚೆರ್ರಿ ಹಣ್ಣುಗಳನ್ನು ನಿಮ್ಮ ಆಹಾರದ ಒಂದು ಭಾಗವಾಗಿಸಿಕೊಂಡರೆ ಹೃದಯಕ್ಕೆ ಉತ್ತಮ ಪೋಷಣೆ ದೊರಕುತ್ತದೆ. ಒಣಫಲವನ್ನು ಪುಡಿಗೊಳಿಸಿ ನಿಮ್ಮ ನೆಚ್ಚಿನ ಸಾಲಾಡ್, ಅನ್ನ ಮತ್ತು ಇತರ ಖಾದ್ಯಗಳೊಡನೆ ಬೆರೆಸಿ ತಿನ್ನುವುದರಿಂದ ರುಚಿ ಹೆಚ್ಚುವುದರ ಜೊತೆಗೇ ಆರೋಗ್ಯವೂ ವೃದ್ಧಿಸುತ್ತದೆ.

ಓಟ್ಸ್

ಓಟ್ಸ್

ಓಟ್ಸ್ ಅಥವಾ ತೋಕೆಗೋಧಿಯಲ್ಲಿ ವಿವಿಧ ಪೋಷಕಾಂಶಗಳಿದ್ದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಬಹುಕಾಲ ಏಕಪ್ರಮಾಣದಲ್ಲಿಸುವ ಗುಣ ಹೊಂದಿದೆ. ಈ ಗುಣ ಮಧುಮೇಹಿಗಳಿಗೆ ಉತ್ತಮವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗದ ನಾರು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸುತ್ತದೆ.

ಓಟ್ಸ್

ಓಟ್ಸ್

ಪರಿಣಾಮವಾಗಿ ಹೃದಯದ ಆರೋಗ್ಯ ವೃದ್ಧಿಸುತ್ತದೆ. ಓಟ್ಸ್ ಬಳಸಿ ಸೇವಿಸಿದ ಆಹಾರ ಜೀರ್ಣಗೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಸಮಯ ಆಹಾರವಿಲ್ಲದೇ ಇರುವ ಸಂದರ್ಭಕ್ಕೆ ಸೂಕ್ತವೂ ಆರೋಗ್ಯಕರವೂ ಆಗಿದೆ. ಆದರೆ ಪುಡಿರೂಪದ ಓಟ್ಸ್ ಗಿಂತ ಕಾಳು ರೂಪದಲ್ಲಿ (ಕುಚ್ಚಿಗೆಯ ನುಚ್ಚಿನ ರೂಪದಲ್ಲಿ) ಸಿಗುವ ಓಟ್ಸ್ ಉತ್ತಮವಾಗಿದೆ.


English summary

Foods That Can Save Your Heart

Heart is important organ as it pumps blood to all the organs of the body. The heart must also receive its supply of blood. Sometimes the arteries suppling blood to heart are clogged due the the deposition of cholesterol causing heart attack. Today, Boldsky will share with you some best foods for a strong and healthy heart. Have a look at some food that can prevent heart diseases.
X
Desktop Bottom Promotion