For Quick Alerts
ALLOW NOTIFICATIONS  
For Daily Alerts

ಹೃದಯ ಜೋಪಾನವಾಗಿರಲು ಮಾಡಿ ಈ ವ್ಯಾಯಾಮ

By Super
|

ನಿಮ್ಮ ಹೃದಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಬೇಕಾದಷ್ಟು ಚಟುವಟಿಕೆಗಳಿವೆ.ನಿಮ್ಮ ಜೀವನದಲ್ಲಿ ದೈಹಿಕ ಚಟುವಟಿಕೆಗಳನ್ನು ಹೆಚ್ಚು ಮಾಡಿಕೊಳ್ಳಬೇಕು.ಹೃದಯ ಸಂಬಂಧಿ ಮತ್ತು ಏರೋಬಿಕ್ಸ್ ವ್ಯಾಯಾಮಗಳು ನಿಮ್ಮ ಹೃದಯವನ್ನು ಹೆಚ್ಚು ಬಲಯುತವಾಗಿ ಮಾಡಿ ಸದಾ ಆರೋಗ್ಯಯುತವಾಗಿ ಇರುವಂತೆ ಮಾಡುತ್ತದೆ.

ಹೃದಯರಕ್ತನಾಳೀಯ ಫಿಟ್ನೆಸ್ ವ್ಯಾಯಾಮಗಳು ಹೃದಯಕ್ಕೆ ಬೇಕಾದ ಆಮ್ಲಜನಕವನ್ನು ಒದಗಿಸುತ್ತದೆ.ನಿಮ್ಮ ಹೃದಯ ಹೆಚ್ಚು ಬಲಯುತವಾದಂತೆ ನೀವು ಮೆಟ್ಟಿಲನ್ನು ಹತ್ತಿದ್ದಾಗ ನಿಮಗೆ ಸುಸ್ತು ಅನಿಸುವುದೇ ಇಲ್ಲ.ಹಾಗೆಯೇ ನೀವು ಹೆಚ್ಚು ಹೊತ್ತು ದೈಹಿಕ ಶ್ರಮಗಳನ್ನು ಮಾಡಬಹುದು ಮತ್ತು ಹೃದಯ ಬಡಿತ ಕಡಿಮೆ ಅಂದರೆ ಸರಿಯಾಗಿ ಇರುತ್ತದೆ,ಅದರರ್ಥ ನಿಮ್ಮ ಹೃದಯವು ರಕ್ತವನ್ನು ದೇಹದ ಇತರ ಭಾಗಗಳಿಗೆ ಸರಿಯಾಗಿ ನೀಡುತ್ತಿದೆ ಎಂದು.

ಹೃದಯ ಬಡಿತವನ್ನು ಹೆಚ್ಚಿಸಿ ಹೃದಯವನ್ನು ಸರಿಯಾಗಿ ಇಡಲು ಪ್ರತಿದಿನ 30 ನಿಮಿಷ ಏರೋಬಿಕ್ಸ್ ಮಾಡುವುದು ಅತ್ಯಂತ ಒಳ್ಳೆಯದು.ಒಂದು ವೇಳೆ ಆಗದಿದ್ದರೆ ವಾರದಲ್ಲಿ 3 ದಿನ 20 ನಿಮಿಷವಾದರೂ ಮಾಡಿದರೆ ಒಳ್ಳೆಯದು.

ಬ್ರಿಸ್ಕ್ ವಾಕಿಂಗ್ (ವೇಗ ನಡಿಗೆ)

ಬ್ರಿಸ್ಕ್ ವಾಕಿಂಗ್ (ವೇಗ ನಡಿಗೆ)

ಫಿಟ್ನೆಸ್ ಅನ್ನು ಉತ್ತಮಗೊಳಿಸಲು ಬಿಸ್ಕ್ ವಾಕಿಂಗ್ ಬಹಳ ಸಹಕಾರಿ.ಸರಿಯಾದ ಶೂ ಬಳಸಿ ನಡೆಯಲು ಪ್ರಾರಂಭಿಸಿ.ಪ್ರತಿದಿನ ಹೆಚ್ಚು ಹೆಚ್ಚು ನಡೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ ಮತ್ತು ಆರೋಗ್ಯಯುತವಾಗಿರಿ.

ರನ್ನಿಂಗ್ (ಓಡುವುದು)

ರನ್ನಿಂಗ್ (ಓಡುವುದು)

ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಲು ರನ್ನಿಂಗ್ ಸುಲಭ ವಿಧಾನ (150 ಪೌಂಡ್ ಇರುವ ವ್ಯಕ್ತಿ ಪ್ರತಿ ಮೈಲಿಗೆ 100 ಕ್ಯಾಲೋರಿ ಕಡಿಮೆ ಮಾಡಿಕೊಳ್ಳಬಹುದು).ಮೊದಲು ಬ್ರಿಸ್ಕ್ ವಾಕ್ ಪ್ರಾರಂಭಿಸಿ ಪ್ರತಿ 10 ನಿಮಿಷಕ್ಕೆ 2 - 3 ನಿಮಿಷ ರನ್ನಿಂಗ್ ಮಾಡಿ.ಇದನ್ನು ಪ್ರತಿ ದಿನ ಮಾಡುತ್ತಿದ್ದಾರೆ ಅಭ್ಯಾಸದ ನಂತರ ನಿಮಗೆ ವಾಕ್ ಮಾಡುವ ಅವಶ್ಯಕತೆಯೇ ಇರುವುದಿಲ್ಲ,ಸತತವಾಗಿ ರನ್ನಿಂಗ್ ಮಾಡಬಹುದು.

ಮೆಟ್ಟಿಲು ಹತ್ತಿ ಇಳಿಯಿರಿ

ಮೆಟ್ಟಿಲು ಹತ್ತಿ ಇಳಿಯಿರಿ

ನಿಮ್ಮ ಹೃದಯವನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಲು ಮೆಟ್ಟಿಲು ಹತ್ತುವುದು ಒಳ್ಳೆಯ ವಿಧಾನ.

ಯೋಗ

ಯೋಗ

ಯೋಗ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ದೇಹ ಆರೋಗ್ಯಯುತವಾಗಿ ಮತ್ತು ಹೃದಯ ಕೂಡ ಆರೋಗ್ಯಯುತವಾಗಿ ಕೆಲಸ ಮಾಡಲು ಸಹಕರಿಸುತ್ತದೆ.ಜೊತೆಗೆ ಒತ್ತಡ ಕಡಿಮೆ ಮಾಡಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

ತೂಕ ತರಬೇತಿ

ತೂಕ ತರಬೇತಿ

ತೂಕ ತರಬೇತಿ ಪಡೆಯುವುದರಿಂದ ನಿಮ್ಮ ರಕ್ತದ ಒತ್ತಡ ಕಡಿಮೆ ಆಗುತ್ತದೆ.ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆ ಆಗಲು ಸಹಕರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಕಡಿಮೆ ಆಗುತ್ತದೆ.ದೇಹದಲ್ಲಿ ಕೊಬ್ಬನ್ನು ಕಡಿಮೆ ಮಾಡಿ ನೇರ ಮಾಂಸ ಖಂಡಗಳನ್ನು ಹೆಚ್ಚು ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗಿ ಸಮ ತೂಕ ಕಾಪಾಡಿಕೊಳ್ಳಲು ಸಹಕಾರಿ ಆಗುತ್ತದೆ.

ಏರೋಬಿಕ್ ಜೊತೆಗೆ ಬಲ ತರಬೇತಿ ಹೃದಯದ ಅರೋಗ್ಯ ಹೆಚ್ಚಿಸುತ್ತದೆ.ಇದು ವಯಸ್ಸಿಗೆ ಸಂಬಂದಿಸಿದ ಮೂಳೆ ಸವೆತ ತಡೆಗಟ್ಟುತ್ತದೆ.ಬಲ ತರಬೇತಿ ಹೃದಯ ಬಡಿತ ಹೆಚ್ಚಿಸುವುದಿಲ್ಲ ಆದರೆ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.ಸ್ನಾಯು ಟೋನ್ ನ ಅಗತ್ಯವಿರುವಲ್ಲಿ ಇದನ್ನು ಹೆಚ್ಚು ಮಾಡಿ ಮತ್ತು ಗುಂಪು ಸ್ನಾಯುಗಳ ಬಗ್ಗೆಯೂ ಗಮನವಿರಲಿ.

ಸ್ವಿಮ್ಮಿಂಗ್ (ಈಜು)

ಸ್ವಿಮ್ಮಿಂಗ್ (ಈಜು)

ನೀರು ನಿಮ್ಮ ಇಡೀ ದೇಹವನ್ನು ಚೆನ್ನಾಗಿ ಕಾಪಾಡುತ್ತದೆ.ನೀರಿನಲ್ಲಿ ದೇಹದ ಫಿಟ್ನೆಸ್ ಗಾಗಿ ಮಾಡುವ ವ್ಯಾಯಾಮ ಥವಾ ಸ್ವಿಮ್ಮಿಂಗ್ ನಿಮ್ಮನ್ನು ಹೆಚ್ಚು ಆರೋಗ್ಯಯುತವಾಗಿ ಮಾಡುತ್ತದೆ.ಇದು ನಿಮ್ಮ ಹೃದಯ ಬಡಿತ ಸುಗಮವಾಗಿಸುತ್ತದೆ.ನೀರು ಒದಗಿಸುವ ಬಹು ನಿರೋಧಕ ಸ್ನಾಯುವನ್ನು ಬಲಯುತವಾಗಿ ಮಾಡುತ್ತದೆ.ನಿಮಗೆ ಸಂಧಿ ಸಮಸ್ಯೆ ಇದ್ದಾರೆ ವಾಕಿಂಗ್ ಅಥವಾ ರನ್ನಿಂಗ್ ಅದನ್ನು ಉಲ್ಬಣಗೊಳಿಸುತ್ತದೆ ಆದ್ದರಿಂದ ಸ್ವಿಮ್ಮಿಂಗ್ ಇದಕ್ಕೆ ಉತ್ತಮ ಉಪಾಯ.

ಸೈಕ್ಲಿಂಗ್

ಸೈಕ್ಲಿಂಗ್

ಸೈಕ್ಲಿಂಗ್ ಸ್ನಾಯುಗಳಿಗೆ ಕಡಿಮೆ ಪ್ರಭಾವ ಬೀರುವ ವ್ಯಾಯಾಮಗಳು.ಜಿಮ್ ಮತ್ತು ಸ್ಪಿನ್ ತರಬೇತಿಗಳಲ್ಲಿ ಇದನ್ನು ಒಬ್ಬರೇ ಮಾಡಬಹುದು.ಅಥವಾ ಹೊರಗೆ ಹೋಗುವಾಗ ಕೂಡ ಸೈಕ್ಲಿಂಗ್ ಮಾಡುವುದು ಸೂಕ್ತ.ನಿಮ್ಮ ಹೃದಯ ಸರಿಯಾಗಿ ಪಂಪ್ ಮಾಡುತ್ತಿದ್ದರೆ ದೇಹದಲ್ಲಿ ಬಲ ಹೆಚ್ಚಿರುತ್ತದೆ.ನಿಮ್ಮ ಸ್ನಾಯುಗಳಿಗೆ ಸೈಕ್ಲಿಂಗ್ ಹೆಚ್ಚು ಬಲ ಬರುವಂತೆ ಮಾಡುತ್ತದೆ.

ಇಂಟರ್ವಲ್ ಅಥವಾ ಸರ್ಕ್ಯೂಟ್ ತರಬೇತಿ

ಇಂಟರ್ವಲ್ ಅಥವಾ ಸರ್ಕ್ಯೂಟ್ ತರಬೇತಿ

ನಿಮ್ಮ ಕರ್ಡಿಯೋ ಜೊತೆ ಮಿಶ್ರ ವ್ಯಾಯಾಮ ಮಾಡಿ.ಉದಾಹರಣೆಗೆ ಪ್ರತಿ 3 ನಿಮಿಷದ ಹೃದಯ ವ್ಯಾಯಾಮದಲ್ಲಿ 1 ಬಲ ಬರುವ ವ್ಯಾಯಾಮ ಅಥವಾ ಹೃದಯಕ್ಕೆ ಸಂಬಂಧಿಸಿದ ತೀವ್ರ ವ್ಯಾಯಾಮವನ್ನು 1 ನಿಮಿಷ ಮಾಡಿ.ಇನ್ನೊಂದು ವಿಧಾನವೆಂದರೆ 5 ರಿಂದ 10 ಬಲ ತರಬೇತಿ ವ್ಯಾಯಾಮವನ್ನು ಆರಿಸಿಕೊಂಡು ಅದನ್ನು 1 ಸೆಟ್ ಮಾಡಿಕೊಂಡು ಮಾಡಿ.ತೂಕ ಕಡಿಮೆ ಮಾಡುವ ಮತ್ತು ಅಧಿಕ ಪುನಾರಾವರ್ತನೆಯ ವ್ಯಾಯಾಮಗಳು ಒಂದು ವ್ಯಾಯಾಮದಿಂದ ಇನ್ನೊಂದು ವ್ಯಾಯಾಮಕ್ಕೆ ಕ್ಷಿಪ್ರವಾಗಿ ಬದಲಾಯಿಸುವಾಗ ನಿಮ್ಮ ಹೃದಯದ ಬಡಿತವನ್ನು ಏರಿಸಲು ಸಹಕರಿಸುತ್ತದೆ.ಈ ರೀತಿಯ ವ್ಯಾಯಾಮಗಳು ನಿಮಗೆ ಹೆಚ್ಚು ವ್ಯಾಯಾಮ ಮಾಡಲು ಪ್ರೇರೆಪಿಸುವುದರೊಂದಿಗೆ ನಿಮ್ಮ ಹೃದಯವನ್ನು ಆರೋಗ್ಯಯುತವಾಗಿ ಇಡುತ್ತದೆ,ಸ್ನಾಯುಗಳನ್ನು ಬಲಗೊಳಿಸುತ್ತದೆ ಹೆಚ್ಚು ಸಹಿಷ್ಣುತೆ ನೀಡುತ್ತದೆ.

English summary

Exercises to keep your heart healthy

There are dozens of activities you can do to help your heart. The plan is to increase the amount of physical activity in your life. Aerobic or cardiovascular exercise is any form of activity that increases your heart rate, challenging your heart to work harder and become stronger.
X
Desktop Bottom Promotion