For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆ ಕುರಿತು ಈ ಮಾತುಗಳನ್ನು ನೀವು ನಂಬಲೇಬಾರದು

|

ಆಧುನಿಕ ಜೀವನಶೈಲಿಗೆ ತಕ್ಕ ಹಾಗೆ ಈ ಆಧುನಿಕ ಪಿಡುಗೂ ಕೂಡ ಜಗತ್ತಿನಾದ್ಯಂತ ಮಿಲಿಯಗಟ್ಟಲೆ ಜನರನ್ನ ಸರ್ವೇಸಾಮಾನ್ಯವಾಗಿಯೇ ಕಾಡುತ್ತಿದೆ. ಅಂದಹಾಗೆ, ಅದ್ಯಾವುದದು "ಆಧುನಿಕ ಪಿಡುಗು" ಅಂತಾ ಕೇಳ್ತಿದ್ದೀರಾ ? ಅದು ಬೇರೆ ಯಾವುದೂ ಅಲ್ಲ; ಬೊಜ್ಜುಮೈ ಅಥವಾ ಸ್ಥೂಲಕಾಯ. ತುಂಬಿಕೊಂಡಿರೋ ನಿಮ್ಮ ಕೆನ್ನೆಗಳು ಮೇಲ್ನೋಟಕ್ಕೇನೂ ಅಪಾಯಕಾರಿ ಅಂತಾ ಅನ್ನಿಸೋಲ್ಲವಾದ್ರೂ ಕೂಡ, ಬೊಜ್ಜು ಮೈ ಅನ್ನೋದು ನಿಮ್ಮ ಒಟ್ಟೂ ಆರೋಗ್ಯಕ್ಕೆ ಬಲು ಹಾನಿಕರವಾಗಬಲ್ಲದು.

ಬೊಜ್ಜುಮೈ ಅಧಿಕ ರಕ್ತದೊತ್ತಡಕ್ಕೆ, ಟೈಪ್ 2 ಮಧುಮೇಹಕ್ಕೆ, ಹೃದ್ರೋಗಗಳಿಗೆ, ಸಂಧಿವಾತಕ್ಕೆ, ಅತ್ಯಧಿಕ ಕೊಲೆಸ್ಟೆರಾಲ್ ಹೀಗೆ ಜೀವಕ್ಕೇ ಆಪತ್ತು ತರಬಹುದಾದಂತಹ ಹತ್ತು ಹಲವು ಮಾರಕ ರೋಗಗಳಿಗೆ ದಾರಿಮಾಡಿಕೊಡಬಲ್ಲದು. ಈ ಕಾರಣದಿಂದಾಗಿಯೇ ನೀವು ಹೇರಿಕೊಂಡಿರೋ ಆ ಹೆಚ್ಚುವರಿ ದೇಹತೂಕಾನಾ ಆದಷ್ಟು ಬೇಗನೇ ನಿಮ್ಮ ದೇಹದಿಂದ ಇಳಿಸಿಕೊಳ್ಳೋದು ತುಂಬಾನೇ ಒಳ್ಳೇದು. ಆದರೆ, ದೇಹತೂಕಾನಾ ಹಾಗೆ ಸಲೀಸಾಗಿ ಇಳಿಸಿಕೊಳ್ಳೋದು ಮಾತನಾಡಿದಷ್ಟೇನೂ ಸುಲಭ ಅಲ್ಲ!!

ದೇಹ ತೂಕವನ್ನ ಇಳಿಸಿಕೊಳ್ಳೋ ವಿಚಾರಾನಾ ತಲೆನೋವು ತರೋವಂತದ್ದು!! ಯಾಕೆಂದ್ರೇ ದೇಹತೂಕಾನಾ ಇಳಿಸಿಕೊಳ್ಳೋಕೆ ಸಾಕಷ್ಟು ಕಸರತ್ತು ಮಾಡಬೇಕಾಗುತ್ತದೆ. ಆದ್ರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯವಾದ ಅಂಶವಿದೆ. ಅದೇನೆಂದರೆ, ತೂಕವನ್ನ ಇಳಿಸಿಕೊಳ್ಳೋಕೆ ಅಂತಾ ವಿಪರೀತ ಕಸರತ್ತುಗಳನ್ನೇ ಮಾಡ್ತಾ ಇರೋದಕ್ಕಿಂತಾನೂ, ತೂಕವನ್ನ ಇಳಿಸಿಕೊಳ್ಳೋಕೆ ಇರೋ ಮಾರ್ಗೋಪಾಯಗಳನ್ನ ಸ್ವಲ್ಪ ಜಾಣತನದಿಂದ ಆರಿಸಿಕೊಂಡ್ರೆ ಅರ್ಧ ತಲೆನೋವು ಕಮ್ಮಿ ಆದ ಹಾಗೇನೇ!

ಈ ವಿಚಾರದಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರೋ ಇನ್ನೊಂದು ಮುಖ್ಯವಾದ ಸಂಗತಿ ಏನೂಂದ್ರೆ, ತೂಕವನ್ನ ಕಳ್ಕೊಳ್ಳೋಕೆ ಸಂಬಂಧಿಸಿರೋ ಹಾಗೆ ನೀವು ಓದೋ ಎಲ್ಲ ಬರಹಗಳನ್ನೂ ಕಣ್ಮುಚ್ಚಿ ನಂಬೋಕೆ ಹೋಗ್ಬಾರ್ದು!! ತೂಕನಷ್ಟಕ್ಕೆ ಸಂಬಂಧ ಪಟ್ಟ ಸಾರ್ವತ್ರಿಕವಾಗಿ ಪ್ರಚಲಿತವಾಗಿರೋ ಒಂದಿಷ್ಟು ತಪ್ಪುಕಲ್ಪನೆಗಳ ಪಟ್ಟಿಯನ್ನ ನಾವಿಲ್ಲಿ ಕೊಟ್ಟಿದ್ದೇವೆ.

ಇಂತಹ ತಪ್ಪುಕಲ್ಪನೆಗಳನ್ನ ತೂಕ ಇಳಿಸಿಕೊಳ್ಳೋಕೆ ಮುಂದಾಗಿರೋ ನೀವು ಖಂಡಿತವಾಗಿಯೂ ನಂಬಲೇ ಬಾರದು. ಸರಿ ಹಾಗಾದರೆ.... ಆ ತಪ್ಪು ಕಲ್ಪನೆಗಳು ಯಾವ್ಯಾವುದು ಅಂತಾ ಈಗ ನೋಡೋಣ ಬನ್ನಿ.....

ಕೊಬ್ಬು ಸಂಗ್ರಹಗೊಂಡಿರೋ ದೇಹದ ಒಂದೇ ಭಾಗವನ್ನಷ್ಟೇ ಗುರಿಯಾಗಿಸಿಕೊಳ್ಳೋಕೆ ಆಗಲ್ಲ!

ಕೊಬ್ಬು ಸಂಗ್ರಹಗೊಂಡಿರೋ ದೇಹದ ಒಂದೇ ಭಾಗವನ್ನಷ್ಟೇ ಗುರಿಯಾಗಿಸಿಕೊಳ್ಳೋಕೆ ಆಗಲ್ಲ!

ನಿಮ್ಮ ತೋಳುಗಳಲ್ಲಿ ತುಂಬಿಕೊಂಡಿರೋ ಕೊಬ್ಬನ್ನ ಕರಗಿಸೋದು ಹೇಗೆ ಅನ್ನೋ ಚಿಂತೇನಾ ? ಅಥವಾ ನಿಮ್ಮ ತೊಡೆಗಳು ಹೊತ್ತುಕೊಂಡಿರೋ ಕೊಬ್ಬಿನ ಬಗ್ಗೆ ನಿಮಗೆ ತಲೆಬಿಸೀನಾ ? "ನಿಮ್ಮ ಇಡೀ ಶರೀರದ ಬಗ್ಗೆ ಗಮನಹರಿಸೋದು ಬಿಟ್ಟು ನೀವು ಕೊಬ್ಬು ತುಂಬಿಕೊಂಡಿರೋ ದೇಹದ ಯಾವುದೋ ಒಂದು ಭಾಗವನ್ನಷ್ಟೇ ಗುರಿಯಾಗಿಸಿಕೊಳ್ಳೋಕೆ ಆಗಲ್ಲ" ಅಂತೆಲ್ಲ ನೀವು ಎಲ್ಲಾದರೂ ಓದಿದ್ದರೆ ಅದೆಲ್ಲ ಶುದ್ಧ ತಪ್ಪು ಕಲ್ಪನೆ!! ತೂಕವನ್ನ ಇಳಿಸಿಕೊಳ್ಳೋಕೆ ಇರೋ ಸರಿಯಾದ ಮಾರ್ಗೋಪಾಯ ಅಂದ್ರೆ ಸರಿಯಾದದ್ದನ್ನೇ ತಿನ್ನೋದು ಮತ್ತು ವ್ಯಾಯಾಮ ಮಾಡೋದು. ಆರೋಗ್ಯಯುತವಾಗಿರೋ ಆಹಾರ ನಿಮ್ಮ ಸದೃಢರನ್ನಾಗಿಟ್ಟರೆ, ವ್ಯಾಯಾಮವು ನಿಮ್ಮ ಮಾಂಸಖಂಡಗಳನ್ನ ಬಲಯುತವಾಗಿಡುತ್ತೆ. ಈ ಎರಡು ನಿಯಮಗಳನ್ನ ನೀವು ಅಳವಡಿಸಿಕೊಂಡ್ರೆ, ನೀವು ಬಯಸಿದ ಫಲ ಖಂಡಿತ ನಿಮಗೆ ಸಿಕ್ಕೇ ಸಿಗುತ್ತೆ!!!

ದೇಹದ ಎಲ್ಲ ಕ್ಯಾಲೋರಿಗಳನ್ನೂ ಕಳ್ಕೋಬೇಕು!

ದೇಹದ ಎಲ್ಲ ಕ್ಯಾಲೋರಿಗಳನ್ನೂ ಕಳ್ಕೋಬೇಕು!

ನಿಮ್ಮ ದೇಹ ವ್ಯವಸ್ಥೆಯಲ್ಲಿರೋ ಪ್ರತಿಯೊಂದಕ್ಕೂ ಒಂದು ಉದ್ದೇಶವಿರುತ್ತದೆ, ಹಾಗೇನೇ ನಿಮ್ಮ ದೇಹದಲ್ಲಿರೋ ಕ್ಯಾಲರಿಗಳಿಗೂನೂ!! ಒಂದು ವೇಳೆ ನಿಮ್ಮ ಶರೀರವು ಎಲ್ಲ ಕ್ಯಾಲರಿಗಳನ್ನ ಮತ್ತು ಸೂಕ್ಷ್ಮ ಪೋಷಕತತ್ತ್ವಗಳನ್ನ ಕಳ್ಕೊಂಡ್ಬಿಟ್ರೆ, ನಿಮ್ಮ ಶರೀರಕ್ಕೆ ಒಳಿತಾಗೋದಕ್ಕಿಂತ ಹಾನಿಯಾಗೋ ಸಾಧ್ಯತೆನೇ ಹೆಚ್ಚು. ನೀವು ಸೇವಿಸೋ ಬೇರೆ ಬೇರೆ ಬಗೆಯ ಆಹಾರ ಪದಾರ್ಥಗಳು ಬೇರೆ ಬೇರೆ ರೀತಿಯ ಚಯಾಪಚಯ ಕ್ರಿಯೆಗಳಿಗೆ ಗುರಿಯಾಗುತ್ವೆ. ಹಾಗಾದಾಗ, ನಿಮ್ಮ ದೇಹದ ತೂಕವನ್ನ ನಿರ್ಧಾರ ಮಾಡೋವಂತಹ ನಿಮ್ಮ ಹಸಿವಿನ ಮೇಲೆ ಹಾಗೂ ವಿವಿಧ ಹಾರ್ಮೋನುಗಳ ಮೇಲೆ ಬೇರೆ ಬೇರೆ ರೀತಿಯ ಪರಿಣಾಮಗಳನ್ನೂ ಅವು ಉಂಟುಮಾಡುತ್ವೆ. ಹಾಗಾಗಿ, ಎಲ್ಲ ಕ್ಯಾಲರಿಗಳೂ ಒಂದೇ ರೀತಿಯವುಗಳಲ್ಲ. ಹಾಗಾಗಿ, ನೀವು ಎಲ್ಲಾನೂ ಬಿಟ್ಟುಬಿಡಬೇಕಂತೇನೂ ಇಲ್ಲ!

ಬಳಕೋ ಮೈಯ್ಯವರು ನೀವಾಗಬೇಕಿದ್ರೆ, ಕಾರ್ಬೋಹೈಡ್ರೇಟ್ ಸೇವನೆಯನ್ನ ಬಿಟ್ಟುಬಿಡಬೇಕು!

ಬಳಕೋ ಮೈಯ್ಯವರು ನೀವಾಗಬೇಕಿದ್ರೆ, ಕಾರ್ಬೋಹೈಡ್ರೇಟ್ ಸೇವನೆಯನ್ನ ಬಿಟ್ಟುಬಿಡಬೇಕು!

ಹೌದು! ಅದೇನೋ ನಿಜ!! ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಇರೋ ಆಹಾರ ಸೇವನೆ ನಿಮ್ಮ ಆರೋಗ್ಯವಾಗಿರಿಸುತ್ತೆ ಹಾಗೂ ಜೊತೆಗೆ ದೇಹ ತೂಕಾನಾ ಕಳ್ಕೋಳ್ಳೋಕೂ ನೆರವಾಗುತ್ತೆ. ಆದ್ರೆ ಅದರರ್ಥ ನೀವು ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನ ಪೂರ್ತಿ ಬಿಟ್ಟೇ ಬಿಡ್ಬೇಕು ಅಂತೇನೂ ಅಲ್ಲ! ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನ ಇತಿಮಿತಿಯಲ್ಲಿ ಮಾಡಿ, ಪ್ರೋಟೀನ್ ನ ಜಾಸ್ತಿ ಸೇವಿಸಿ. ಹೀಗೆ ಮಾಡೋದ್ರಿಂದ ನೀವು ದೇಹತೂಕಾನಾ ಪರಿಣಾಮಕಾರಿಯಾಗಿ ಕಡಿಮೆ ಮಾಡ್ಕೋಬೋದು.

ಶರೀರದಲ್ಲಿರೋ ಕೊಬ್ಬಿನಾಂಶವನ್ನ ನಾಮಾವಶೇಷಗೊಳಿಸಬೇಕು!

ಶರೀರದಲ್ಲಿರೋ ಕೊಬ್ಬಿನಾಂಶವನ್ನ ನಾಮಾವಶೇಷಗೊಳಿಸಬೇಕು!

ಕ್ಯಾಲರಿಗಳ ಹಾಗೇನೇ, ಎಲ್ಲ ವಿಧದ ಕೊಬ್ಬುಗಳೂ ಕೆಟ್ಟವಾಗಿರೋಲ್ಲ! ಕೊಬ್ಬಿನಾಂಶ ಇರೋ ಆಹಾರವಸ್ತುಗಳನ್ನ ತಿನ್ನದೇ ಇರೋದು ಒಳ್ಳೇ ಉಪಾಯ ಅಂತಾ ಅನ್ನಿಸಬಹುದಾದರೂ ನಿಜಕ್ಕೂ ಅದೇನೂ ಅಂತಹ ಒಳ್ಳೆಯ ಯೋಚನೆ ಏನಲ್ಲ. ಆರೋಗ್ಯಕರ ಕೊಬ್ಬುಗಳು ನಿಮ್ಮ ಮೆದುಳು ಹಾಗೂ ತ್ವಚೆಯ ಆರೋಗ್ಯಕ್ಕೆ ಒಳ್ಳೆಯವು. ಹಾಗೇನೇ ಅವು ನಿಮ್ಮ ಹಸಿವನ್ನ ಹಿಂಗಿಸೋದರ ಮೂಲಕ ತೂಕನಷ್ಟಕ್ಕೂ ಸಹಾಯ ಆಗುತ್ವೆ! ಕಾಳುಗಳು, ಶೇಂಗಾಬೆಣ್ಣೆ, ಬೀಜಗಳು, ಅವೊಕಾಡೊಗಳು, ಹಾಗೂ ಕೊಬ್ಬುಯುಕ್ತ ಮೀನಿನಲ್ಲಿ ಕೊಬ್ಬಿನಾಂಶ ಇರುತ್ತೆ. ಇಂತಹ ಆಹಾರ ವಸ್ತುಗಳು ನಿಮ್ಮ ಹಸಿವೆಯನ್ನ ಕಡಿಮೆ ಮಾಡುತ್ವೆ ಹಾಗೂ ಆ ಮೂಲಕ ತೂಕನಷ್ಟಕ್ಕೆ ದಾರಿ ಮಾಡಿ ಕೊಡುತ್ವೆ.

ತೂಕನಷ್ಟಕ್ಕೆ ನೆರವಾಗೋ ಸಪ್ಲಿಮೆಂಟ್ ಗಳನ್ನ ಕಣ್ಮುಚ್ಚಿ ತಗೋಬೋದು!

ತೂಕನಷ್ಟಕ್ಕೆ ನೆರವಾಗೋ ಸಪ್ಲಿಮೆಂಟ್ ಗಳನ್ನ ಕಣ್ಮುಚ್ಚಿ ತಗೋಬೋದು!

ಈಗಿನ ಕಾಲಾನೇ ಹಾಗೇ ನೋಡಿ! ಯಾರಿಗೂ ಯಾವ್ದಕ್ಕೂ ತಾಳ್ಮೇನೇ ಇಲ್ಲ. ಎಲ್ಲಾನೂ ಫ಼ಟಾಫ಼ಟ್ ಅಂತ ಆಗ್ಬಿಡ್ಬೇಕು. ಹಾಗಾಗಿನೇ ಈಗಿನ ಜನರು ಎಷ್ಟು ಬೇಗ ಸಾಧ್ಯಾನೋ ಅಷ್ಟು ಬೇಗ ತೂಕಾನಾ ಇಳಿಸ್ಕೊಳ್ಳೋಕೆ ಅಂತಾ "ತೂಕನಷ್ಟಕ್ಕೆ ನೆರವಾಗುತ್ವೆ" ಅಂತಾ ಅನ್ನಿಸಿಕೊಂಡಿರೋ ಗುಳಿಗೆಗಳು ಮತ್ತು ಸಪ್ಲಿಮೆಂಟ್ ಗಳನ್ನ ತಗೊಳ್ಳೋಕೆ ಶುರು ಮಾಡಿದ್ದಾರೆ. ನಿಜ ಹೇಳ್ಬೇಕೂಂತಂದ್ರೆ ಇಂತಹ ಗುಳಿಗೆಗಳು ನಿಮ್ಮ ಆರೋಗ್ಯಕ್ಕೆ ವಿಪರೀತ ಹಾನಿ ಮಾಡೋ ಸಾಧ್ಯತೆ ಇದೆ. ಸಾಲದ್ದಕ್ಕೆ ಆ ಸಪ್ಲಿಮೆಂಟ್ ಗಳು ಅಷ್ಟೇನೂ ಒಳ್ಳೇ ಫಲಿತಾಂಶಗಳನ್ನ ಕೊಟ್ಟಿರೋ ಉದಾಹರಣೆಗಳಿಲ್ಲ. ನಾವು ಇಷ್ಟೆಲ್ಲ ಹೇಳಿದ್ಮೇಲೂ ನಿಮಗೆ ಅವುಗಳನ್ನ ತಗೊಳ್ಳೇ ಬೇಕು ಅನ್ನೋ ಹಠ ಇದ್ರೆ, ಅವುಗಳನ್ನ ತಗೋಳೋಕೆ ಮುಂಚೆ ಯಾವ್ದಕ್ಕೂ ಒಂದ್ಸಲ ನಿಮ್ಮ ಡಾಕ್ಟ್ರನ್ನ ಭೇಟಿ ಮಾಡಿ ಅವ್ರ ಸಲಹೇನಾ ಪಡ್ಕೋಳಿ.

ಕಡಿಮೆ ತಿನ್ನಿ, ಜಾಸ್ತಿ ವ್ಯಾಯಾಮ ಮಾಡಿ!

ಕಡಿಮೆ ತಿನ್ನಿ, ಜಾಸ್ತಿ ವ್ಯಾಯಾಮ ಮಾಡಿ!

ದೇಹದ ತೂಕವನ್ನ ಇಳಿಸಿಕೊಳ್ಳೋ ವಿಚಾರಕ್ಕೆ ಬಂದಾಗ, ತಿನ್ನೋದು ಮತ್ತು ವ್ಯಾಯಾಮ ಇವೆರಡರ ಮಧ್ಯೆ ಸಮತೋಲನ ಇರ್ಬೇಕು ಅಂತಾ ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿವೆ. ಕೊಬ್ಬನ್ನ ಕರಗಿಸಿಕೊಳ್ಳೋದಕ್ಕೆ ಅಧಿಕ ಕ್ಯಾಲರಿಗಳನ್ನ ಕಳ್ಕೋಬೇಕು ಅನ್ನೋದೇನೋ ನಿಜ! ಆದರೆ, ಹೀಗಂದಾಗ "ತಿನ್ನೋದನ್ನೇ ಕಡಿಮೆ ಮಾಡ್ಬೇಕು" ಅನ್ನೋ ತೀರ್ಮಾನಕ್ಕೆ ನೀವು ಬರೋ ಸಾಧ್ಯತೆ ಹೆಚ್ಚು ಅಲ್ವಾ ?! ತೂಕನಷ್ಟದ ನಿಮ್ಮ ಪ್ರಯಾಣದಲ್ಲಿ ನೀವು ಮಾಡಿಕೊಳ್ಳೋ ಬದಲಾವಣೆಗಳು ಶಾಶ್ವತವಾದವುಗಳು. ಹಾಗಾಗಿ, ನಿಮ್ಮ ಆಯ್ಕೆಗಳ ಬಗ್ಗೆ ನಿಗಾ ಇರಲಿ. "ಕಡಿಮೆ ತಿನ್ನಿ, ಜಾಸ್ತಿ ವ್ಯಾಯಾಮ ಮಾಡಿ" ಅನ್ನೋದು ಅಷ್ಟೇನೂ ಪರಿಣಾಮಕಾರಿ ಸಲಹೆ ಅಲ್ಲ. ದೀರ್ಘಕಾಲದ ನಿಮ್ಮ ತೂಕನಷ್ಟದ ಪ್ರಯಾಣದಲ್ಲಿ ಈ ಸಲಹೆ ಉಪಯೋಗಕ್ಕೆ ಬರೋಲ್ಲ. ಹಾಗಾಗಿ, ನೀವು ತಿನ್ನೋ ಆಹಾರ ಮತ್ತೆ ಮಾಡೋ ವ್ಯಾಯಾಮ ಇವೆರಡರ ನಡುವೆ ಸಮತೋಲನ ಇರ್ಲಿ.

ತೂಕನಷ್ಟ ಮಾಡ್ಕೋಳೋ ತಾಕತ್ತು ಮನಶ್ಯಕ್ತಿಯನ್ನ ಅವಲಂಬಿಸಿರೋವಂತಹದ್ದು

ತೂಕನಷ್ಟ ಮಾಡ್ಕೋಳೋ ತಾಕತ್ತು ಮನಶ್ಯಕ್ತಿಯನ್ನ ಅವಲಂಬಿಸಿರೋವಂತಹದ್ದು

ಬಹಳ ತ್ರಾಸದಾಯಕವಾಗಿರೋವಂತಹದ್ದಾದರೂ ಕೂಡ, ಕೊನೆಗೆ ಒಳ್ಳೇ ಫಲವನ್ನೇ ಕೊಡೋವಂತಹಾ ಈ ತೂಕನಷ್ಟದ ವಿಚಾರ ಇದ್ಯಲ್ಲ, ಇದನ್ನ ಸಾಧಿಸೋಕೆ ತುಂಬಾನೇ ಮನಶ್ಯಕ್ತಿ ಇರ್ಬೇಕು ಅನ್ನೋದು ನಿಜಾನೇ! ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿರೋ ಒಂದು ವಿಚಾರ ಏನೂಂತಂದ್ರೆ ಈ ಬೊಜ್ಜುಮೈ ಅನ್ನೋದು ಒಂದು ಸಂಕೀರ್ಣ ಸಮಸ್ಯೆ ಆಗಿದ್ದು, ಬೊಜ್ಜುಮೈ ಉಂಟಾಗೋದಕ್ಕೆ ಹಲವಾರು ಸಂಗತಿಗಳು ಪ್ರಮುಖ ಪಾತ್ರ ವಹಿಸುತ್ವೆ. ವಂಶವಾಹಿಗಳು, ಜೈವಿಕ ಹಾಗೂ ಪರಿಸರಕ್ಕೆ ಸಂಬಂಧಿಸಿರೋ ಅಂಶಗಳೂ ಕೂಡ ದೇಹದ ತೂಕದ ಮೇಲೆ ಪ್ರಭಾವ ಬೀರುತ್ವೆ!

English summary

Weight Loss Myths in Kannada

People tell so many things about weight loss, but some will be just muth, here we explored weight loss myth have a look.
Story first published: Wednesday, January 13, 2021, 17:48 [IST]
X
Desktop Bottom Promotion