For Quick Alerts
ALLOW NOTIFICATIONS  
For Daily Alerts

ಟೈಫಾಯ್ಡ್‌ ಬಳಿಕ ನಾನ್‌ವೆಜ್‌ ತಿನ್ನಬಹುದೇ? ಮೊಟ್ಟೆ ಯಾವಾಗ ತಿನ್ನಬಹುದು?

|

ಟೈಫಾಯ್ಡ್‌ ಬಂದಾಗ ಚೇತರಿಸಿಕೊಳ್ಳಲು ಸ್ವಲ್ಪ ಸಮಯಬೇಕಾಗುವುದು. ಆಸ್ಪತ್ರೆಯಿಂದ 3-5 ದಿನಗಳಲ್ಲಿ ಡಿಸ್ಚಾರ್ಜ್ ಆದರೂ ಆಹಾರಕ್ರಮ ಪಾಲಿಸುವುದು ತುಂಬಾನೇ ಮುಖ್ಯವಾಗುತ್ತೆ. ಕೆಲವರಿಗೆ ಡಾಕ್ಟರ್ 3 ತಿಂಗಳವರೆಗೆ ಮನೆ ಊಟ ಬಿಟ್ಟು ಬೇರೇನೂ ತಿನ್ನಬೇಡಿ ಎಂದು ಹೇಳುತ್ತಾರೆ. ಟೈಫಾಯ್ಡ್‌ನಿಂದ ಚೇತರಿಸಿದ ಬಳಿಕ ಕನಿಷ್ಢ ಒಂದು ತಿಂಗಳು ಹೊರಗಿನ ಆಹಾರ ಸೇವಿಸಬೇಡಿ, ಎಣ್ಣೆ ಪದಾರ್ಥಗಳನ್ನು ಸೇವಿಸಬೇಡಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

Typhoid Diet

ಟೈಫಾಯ್ಡ್‌ನಿಂದ ಚೇತರಿಸಿದ ಬಳಿಕ ಸ್ವಲ್ಪ ಸಮಯದವರೆಗೆ ಕೆಲವೊಂದು ಆಹಾರಗಳನ್ನು ತಿನ್ನಬಾರದು, ಅದರಲ್ಲಿ ನಾನ್‌ವೆಜ್‌ ಕೂಡ, ನಾನ್‌ವೆಜ್‌ ಆಹಾರವನ್ನು ಏಕೆ ತಿನ್ನಬಾರದು, ಯಾವಾಗಿನಿಂದ ಸೇವಿಸಬಹುದು ಎಂದು ನೋಡೋಣ ಬನ್ನಿ:
ಟೈಫಾಯ್ಡ್‌ನಿಂದ ಚೇತರಿಸಿದ ಬಳಿಕ ಸುಸ್ತು ಅಧಿಕವಿರುತ್ತದೆ

ಟೈಫಾಯ್ಡ್‌ನಿಂದ ಚೇತರಿಸಿದ ಬಳಿಕ ಸುಸ್ತು ಅಧಿಕವಿರುತ್ತದೆ

ಸಾಮಾನ್ಯ ಜ್ವರವಿದ್ದರೆ ಚೇತರಿಸಲು ಒಂದು ವಾರ ಬೇಕಾಗುವುದು. ಅಂಥದ್ದರಲ್ಲಿ ಟೈಫಾಯ್ಡ್‌ ಬಂದರೆ ಚೇತರಿಸಲು ಒಂದು ತಿಂಗಳಾದರೂ ಬೇಕಾಗುವುದು. ಆದ್ದರಿಂದ ಟೈಫಾಯ್ಡ್ ಆದವರು ಚೇತರಿಸಿಕೊಂಡ ಬಳಿಕ 3-5 ಬಾರಿ ಲಘು ಆಹಾರ ಸೇವಿಸಬೇಕು. ಹಣ್ಣುಗಳಾದ ಬಾಳೆಹಣ್ಣು, ಸೇಬು ಸೇವಿಸಬಹುದು. ಹಾಲು, ತೆಂಗಿನಕಾಯಿ, ರವೆ, ಆಲೂಗಡ್ಡೆ, ಸೊಪ್ಪು-ತರಕಾರಿ ಇವುಗಳನ್ನು ಬಳಸಬಹುದು. ತುಂಬಾನೇ ನೀರು ಕುಡಿಯಬೇಕು.

ಟೈಫಾಯ್ಡ್ ಆದರೆ ಯಾವ ಆಹಾರ ಸೇವಿಸಬಾರದು?

ಟೈಫಾಯ್ಡ್ ಆದರೆ ಯಾವ ಆಹಾರ ಸೇವಿಸಬಾರದು?

ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಫಾಸ್ಟ್‌ಫುಡ್‌, ಸ್ಪೈಸಿ ಫುಡ್, ಬೆಣ್ಣೆ, ತುಪ್ಪ ಇವುಗಳನ್ನು ಸ್ವಲ್ಪ ಸಮಯದವರೆಗೆ ಸೇವಿಸಬಾರದು. ಒಂದು ತಿಂಗಳಿನವರೆಗೆ ಈ ಬಗೆಯ ಆಹಾರಗಳನ್ನು ಸೇವಿಸಬಾರದು.

 ಟೈಫಾಯ್ಡ್‌ ಬಳಿಕ ನಾನ್‌ವೆಜ್‌ ತಿನ್ನಬಾರದು ಏಕೆ?

ಟೈಫಾಯ್ಡ್‌ ಬಳಿಕ ನಾನ್‌ವೆಜ್‌ ತಿನ್ನಬಾರದು ಏಕೆ?

ಟೈಫಾಯ್ಡ್‌ ಬಳಿಕ ಜೀರ್ಣಕ್ರಿಯೆ ಶಕ್ತಿ ತುಂಬಾನೇ ಕಡಿಮೆಯಾಗಿರುತ್ತದೆ, ಏಕೆಂದರೆ ಟೈಫಾಯ್ಡ್‌ ಕರುಳಿನ ಮೇಲೆ ಪರಿಣಾಮ ಬೀರಿರುತ್ತೆ, ಆದ್ದರಿಂದಾಗಿ ನಾನ್‌ವೆಜ್‌ ತಿಂದರೆ ಜೀರ್ಣವಾಗಲು ಕಷ್ಟವಾಗುವುದು. ಆದ್ದರಿಂದ ಟೈಫಾಯ್ಡ್‌ ಬಳಿಕ ಸಂಪೂರ್ಣ ಚೇತರಿಸುವವರೆಗೆ ನಾನ್‌ವೆಜ್‌ ತಿನ್ನಬೇಡಿ.

 ಮೊಟ್ಟೆ ತಿನ್ನಬಹುದೇ?

ಮೊಟ್ಟೆ ತಿನ್ನಬಹುದೇ?

ಟೈಫಾಯ್ಡ್ ಆಗಿ ಎರಡು ವಾರಗಳ ಬಳಿಕ ನಿಮ್ಮ ಜೀರ್ಣಶಕ್ತಿಯಲ್ಲಿ ಏನೂ ತೊಂದರೆ ಇಲ್ಲದಿದ್ದರೆ ಮೊಟ್ಟೆ ತಿನ್ನಬಹುದು. ಒಂದು ತಿಂಗಳವರೆಗೆ ಮೊಟ್ಟೆಯ ಬಿಳಿಯಷ್ಟೇ ಸೇವಿಸಿ, ನಂತರ ನಿಧಾನಕ್ಕೆ ಇಡೀ ಮೊಟ್ಟೆ ಸೇವಿಸಿ.

ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಿ.

ನಾನ್‌ವೆಜ್‌ ಆಹಾರ ತಿನ್ನುವವರು ನಿಮ್ಮ ಆಹಾರಶೈಲಿಗೆ ನಿಧಾನಕ್ಕೆ ಮರಳಿ, ಇಲ್ಲದಿದ್ದರೆ ಅಜೀರ್ಣವಾಗಿ ಹೊಟ್ಟೆ ಉಬ್ಬಿಕೊಳ್ಳುವುದು.

ಕೊನೆಯದಾಗಿ

* ಟೈಫಾಯ್ಡ್‌ ಆದ ಬಳಿಕ ಪಾಲಿಸುವ ಆಹಾರಕ್ರ ಅಲ್ಪಾವಧಿಯಾಗಿದ್ದು ಈ ಆಹಾರಶೈಲಿ ಜೀರ್ಣಕ್ರಿಯೆಗೆ ಹಾಗೂ ಬೇಗನೆ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ.

* ಟೈಫಾಯ್ಡ್‌ ನಂತರ ಆಹಾರ ಟೈಫಾಯ್ಡ್ ಗುಣಪಡಿಸುವ ಅಥವಾ ತಡೆಗಟ್ಟುವ ವಿಧಾನವಲ್ಲ, ಈ ಆಹಾರಕ್ರಮ ಟೈಫಾಯ್ಡ್‌ನಿಂದ ದೇಹ ಚೇತರಿಸಿಕೊಳ್ಳಲು ಸಹಾಯ ಮಾಡುವುದು ಎಂಬುವುದು ನೆನಪಿರಲಿ.

* ನೀರು ಹಾಗೂ ಕಲುಷಿತ ಆಹಾರದಿಂದ ಹರಡುವ ಟೈಫಾಯ್ಡ್‌ ತಡೆಗಟ್ಟಲು ಅಡುಗೆಯಲ್ಲಿ ಶುಚಿತ್ವ ಪಾಲಿಸಿ, ಹೊರಗಡೆಯ ಆಹಾರ ತಿನ್ನದಿದ್ದರೆ ಒಳ್ಳೆಯದು.

* ಇನ್ನು ಟೈಫಾಯ್ಡ್ ಅಧಿಕವಿರುವ ಪ್ರದೇಶದ ಕಡೆ ಪ್ರಯಾಣ ಮಾಡುವುದದರೆ ಅಲ್ಲಗೆ ಹೋಗುವ ಕೆಲವು ವಾರಗಳ ಮುಂಚೆ ಟೈಪಾಯ್ಡ್ ತಡೆಗಟ್ಟುವ ಚುಚ್ಚುಮದ್ದು ಪಡೆಯಿರಿ.

English summary

Typhoid Diet: Can We Eat Non vegetarian Food After Typhoid in kannada

Typhoid Diet: When to eat non vegetarian food after typhoid read on.....
X
Desktop Bottom Promotion