For Quick Alerts
ALLOW NOTIFICATIONS  
For Daily Alerts

ಚಳಿಗಾಲ: ಈ 5 ಕಷಾಯ ಕುಡಿದರೆ ಕಾಯಿಲೆ ಬೀಳುವುದು ಕಡಿಮೆಯಾಗುವುದು

|

ಚಳಿಗಾಲದಲ್ಲಿ ಶೀತ, ಕೆಮ್ಮು ಈ ರೀತಿಯ ಸಮಸ್ಯೆಗಳು ಸರ್ವೇ ಸಾಮಾನ್ಯ, ಆದರೆ ಇಂಥ ಸಾಮಾನ್ಯ ಸಮಸ್ಯೆಗಳನ್ನು ಈ ಕೋವಿಡ್ 19 ಕಾಲದಲ್ಲಿ ಮೊದಲಿನಂತೆ ನಿರ್ಲಕ್ಷ್ಯ ಮಾಡಲು ಈಗ ಸಾಧ್ಯವಿಲ್ಲ.

ಶೀತ, ಕೆಮ್ಮು ಬಂದ್ರೆ ಕೋವಿಡ್ 19 ತಗುಲಿತ್ತಾ ಎಂಬ ಆತಂಕ ಶುರುವಾಗುವುದು, ಆದ್ದರಿಂದ ಈ ಸಮಯದಲ್ಲಿ ಆದಷ್ಟು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಕಡೆ ಗಮನ ನೀಡಬೇಕು. ಆಗ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಕಾಯಿಲೆಯಿಂದ ಸಿಗುವುದು, ಕೋವಿಡ್ 19 ಕೂಡ ತಡೆಗಟ್ಟಬಹುದು.

ನಾವಿಲ್ಲಿ ಕೆಲವೊಂದು ಪಾನೀಯಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ದಿನಾ ಹೀರಿದರೆ ಚಳಿಗಾಲದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುವುದು ನೋಡಿ:

1. ಅರಿಶಿಣ ಹಾಕಿದ ಹಾಲು

1. ಅರಿಶಿಣ ಹಾಕಿದ ಹಾಲು

ಕೆಲವರಿಗೆ ಹಾಲು ಇಷ್ಟವಾಗುವುದಿಲ್ಲ, ಅಂಥವರು ಬಾದಾಮಿ ಅಥವಾ ತೆಂಗಿನಕಾಯಿ ಹಾಲು ಜೊತೆ ಸವಿಯಬಹುದು.

ಇದನ್ನು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು

* ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು

* ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದು

* ತೂಕ ಇಳಿಕೆಗೆ ಸಹಕಾರಿ

* ಒಳ್ಲೆಯ ನಿದ್ದೆಗೆ ಸಹಕಾರಿ.

ಏನೆಲ್ಲಾ ಸಾಮಗ್ರಿ ಬೇಕು?

* 1/2 ಚಮಚ ಅರಿಶಿಣ ಪುಡಿ

* ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ

* ಸ್ವಲ್ಪ ಚಕ್ಕೆ ಪುಡಿ

* ಲವಂಗ

* ಶುಂಠಿ

* ಜೇನು

* ನಕ್ಷತ್ರ ಮೊಗ್ಗು

ಮಾಡುವುದು ಹೇಗೆ?

ಈ ಎಲ್ಲಾ ಸಾಮಗ್ರಿ ಹಾಲಿನಲ್ಲಿ ಹಾಕಿ ಕುದಿಸಿ ಕುಡಿಯಿರಿ.

2. ಬಾದಾಮಿ ಹಾಲು

2. ಬಾದಾಮಿ ಹಾಲು

ಚಳಿಗಾಲದಲ್ಲಿ ಬಾದಾಮಿ ಹಾಲು ಕುಡಿಯುವುದು ತುಂಬಾ ಒಳ್ಳೆಯದು. ಬೇಸಿಗೆಯಲ್ಲಿ ತಣ್ಣನೆಯ ಬಾದಾಮಿ ಹಾಲು ಕುಡಿದರೆ ಚಳಿಗಾಲದಲ್ಲಿ ಬಿಸಿ-ಬಿಸಿಯಾದ ಬಾದಾಮಿ ಹಾಲನ್ನು ಹೀರಿ.

ಪ್ರಯೋಜನಗಳು

* ದೇಹವನ್ನು ಬೆಚ್ಚಗಿಡುವುದು

*ಪ್ರೊಟೀನ್ ಹಾಗೂ ಒಳ್ಳೆಯ ಕೊಬ್ಬಿನಂಶ ಸಿಗುವುದು

* ರೋಗ ನಿರೋಧಕ ಶಕ್ತಿ ಹೆಚ್ಚುವುದು

ಬೇಕಾಗುವ ಸಾಮಗ್ರಿ

* ಹಾಲು

* 7-8 ಬಾದಾಮಿ (ಚಿಕ್ಕದಾಗಿ ಕತ್ತರಿಸಿದ್ದು ಅಥವಾ ಪುಡಿ ಮಾಡಿದ್ದು)

* ಚಿಟಿಕೆಯಷ್ಟು ಕೇಸರಿ

* ಏಲಕ್ಕಿ

ಮಾಡುವ ವಿಧಾನ

ಹಾಲಿಗೆ ಪುಡಿ ಮಾಡಿದ ಬಾದಾಮಿ ಹಾಕಿ ಕುದಿಸಿ ಅದಕ್ಕೆ ಕೇಸರಿ ಹಾಗೂ ಏಲಕ್ಕಿ ಸೇರಿಸಿ ಮತ್ತೆ ಸ್ವಲ್ಪ ಹೊತ್ತು ಕುದಿಸಿ ಕುಡಿಯಿರಿ.

3. ಹಾಟ್ ಆ್ಯಪಲ್ ಸಿಡರ್ ವಿನೆಗರ್‌

3. ಹಾಟ್ ಆ್ಯಪಲ್ ಸಿಡರ್ ವಿನೆಗರ್‌

ಚಳಿಗಾಲದಲ್ಲಿ ಆ್ಯಪಲ್‌ ಸಿಡೆಗರ್‌ ವಿನಗೆರ್‌ಗೆ ಸ್ವಲ್ಪ ಮಸಾಲೆ ಪದಾರ್ಥ ಸೇರಿಸಿ ಕುಡಿದರೆ ತುಂಬಾನೇ ಒಳ್ಳೆಯದು.

ಇದರಿಂದ ದೊರೆಯುವ ಪ್ರಯೋಜನಗಳು

* ಉರಿಯೂತ ಕಡಿಮೆಯಾಗುವುದು

* ಜೀರ್ಣಕ್ರಿಯೆಗೆ ಒಳ್ಳೆಯದು

* ಚಯಪಚಯ ಕ್ರಿಯೆ ಉತ್ತಮವಾಗುವುದು

* ದೇಹವನ್ನು ಡಿಟಾಕ್ಸ್ ಮಾಡುವುದು

ಬೇಕಾಗುವ ಸಾಮಗ್ರಿ

* 7-8 ಸೇಬು

* 1 ನಿಂಬೆ ಹಣ್ಣು

* 1 ಕಿತ್ತಳೆ

* ಕ್ರೇನ್‌ಬೆರ್ರಿ

* ಲವಂಗ

* 1 ನಕ್ಷತ್ರ ಮೊಗ್ಗು

* ಸ್ವೀಟ್ನರ್

ಮಾಡುವ ವಿಧಾನ

* ಸೇಬಿನ ಸಿಪ್ಪೆ ಸುಲಿಯಿರಿ.

* ಒಂದು ಕಿತ್ತಳೆ, ನಿಂಬೆಯ ಸಿಪ್ಪೆ ಸುಲಿಯಿರಿ, ನಂತರ ಚಿಕ್ಕದಾಗಿ ಕತ್ತರಿಸಿ

* ಕ್ರೇನ್‌ಬೆರ್ರಿ ಸೇರಿಸಿ

* 2 ಇಂಚಿನಷ್ಟು ದೊಡ್ಡದಾದ ಚಕ್ಕೆ, 1 ಲವಂಗ, 1 ನಕ್ಷತ್ರ ಮೊಗ್ಗು ಸೇರಿಸಿ

* ಸ್ವೀಟ್ನರ್ ಸೇರಿಸಿ ( *ಕೋಕನಟ್ ಶುಗರ್, ಮ್ಯಾಪ್ಲೆ ಸಿರಪ್ ಹೀಗೆ ಯಾವುದೇ ಸ್ವೀಟ್ನರ್ ಸೇರಿಸಬಹುದು)

* ದೊಡ್ಡ ಪ್ಯಾನ್‌ನಲ್ಲಿ 2-3 ಲೀಟರ್, ಈ ಸಾಮಗ್ರಿ ಹಾಕಿ ನೀರು ಸೇರಿಸಿ ಕುದಿಸಿ,

* 3 ಲೀಟರ್ ನೀರು ಒಂದೂವರೆ ಲೀಟರ್ ಆಗುವಷ್ಟು ಹೊತ್ತು ಆರಿದ ಮೇಲೆ ಕುದಿಸಿ ಫ್ರಿಡ್ಜ್‌ನಲ್ಲಿಟ್ಟು ಕುಡಿಯಿರಿ. ಒಮ್ಮೆ ಮಾಡಿದರೆ 2 ವಾರಗಳವರೆಗೆ ಬಳಸಬಹುದು.

4. ಶುಂಠಿ ಮತ್ತು ಜೇನಿನ ಕಷಾಯ

4. ಶುಂಠಿ ಮತ್ತು ಜೇನಿನ ಕಷಾಯ

ಶುಂಠಿ ಮತ್ತು ಜೇನನ್ನು ಅನೇಕ ಆರೊಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸುತ್ತೇವೆ. ಸಾಮಾನ್ಯ ಕೆಮ್ಮು-ಶೀತ ಶುಂಠಿ ಮತ್ತು ಟೀ ಕಷಾಯಕ್ಕೆ ಹೆದರಿ ದೂರಾಗುವುದು. ಪ್ರಯೋಜನಗಳು

*ದೇಹವನ್ನು ಬೆಚ್ಚಗಿಡುತ್ತದೆ

* ಶೀತ, ಕೆಮ್ಮು ತಡೆಗಟ್ಟುತ್ತೆ

* ರೋಗ ನಿರೊಧಕ ಶಕ್ತಿ ಹೆಚ್ಚಿಸುವುದು

ಬೇಕಾಗುವ ಸಾಮಗ್ರಿ

* ಶುಂಠಿ

* ಚಕ್ಕೆ

* ಜೇನು

ಮಾಡುವ

ಶುಂ ಠಿ, ಚಕ್ಕೆ ಹಾಕಿದ ನೀರನ್ನು ಕುದಿಸಿ, ಅದಕ್ಕೆ ಜೇನು ಸೇರಿಸಿ ಕುಡಿಯಿರಿ.

5. ಬಿಸಿ ನಿಂಬೆ ಪಾನೀಯ

5. ಬಿಸಿ ನಿಂಬೆ ಪಾನೀಯ

ಬೆಳಗ್ಗೆ ಬಿಸಿ ನೀರಿಗೆ ನಿಂಬೆರಸ ಹಾಕಿ ಕುಡಿಯುತ್ತಿದ್ದೀರಾ ಒಳ್ಳೆಯದೇ, ಈ ರೀತಿಯ ಕಷಾಯ ಮಾಡಿ ಕುಡಿದರೆ ಕೆಮ್ಮು-ಶೀತ ಕಾಡುವುದಿಲ್ಲ

ಪ್ರಯೋಜನಗಳು

* ಜೀರ್ಣಕ್ರಿಯೆ ಉತ್ತಮವಾಗುವುದು

* ದೇಹವನ್ನು ಡಿಟಾಕ್ಸ್ ಮಾಡುವುದು

* ತೂಕ ಇಳಿಕೆಗೆ ಸಹಕಾರಿ.

ಬೇಕಾಗುವ ಸಾಮಗ್ರಿ

* ಕಾಳು ಮೆಣಸು

* ಉಪ್ಪು

* ನಿಂಬೆರಸ

* ಜೇನು

* ಬಿಸಿ ನೀರು

ಮಾಡುವ ವಿಧಾನ

* ಒಂದು ಲೋಟ ಬಿಸಿ ನೀರಿಗೆ ಸ್ವಲ್ಪ ಕಾಳು ಮೆಣಸಿನ ಪುಡಿ, ಉಪ್ಪು, ಜೇನು, ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ ಕುಡಿಯಿರಿ.

ಸಲಹೆ: ಈ ಎಲ್ಲಾ ಪಾನೀಯ ಒಂದೇ ದಿನ ಟ್ರೈ ಮಾಡಬೇಡಿ, ನಿಮಗೆ ಯಾವುದು ಸೂಕ್ತ ಅನಿಸುವುದೋ ಅದನ್ನು ಮಾಡಿ ಕುಡಿಯಿರಿ.

English summary

Stay Healthy In Winters With These Drinks in Kannada

Stay healthy in winters with these drinks in Kannada, Read on...
Story first published: Monday, January 10, 2022, 17:39 [IST]
X
Desktop Bottom Promotion