Just In
Don't Miss
- News
ಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆ
- Sports
ಐಎಸ್ಎಲ್: ಹೈದರಾಬಾದ್ ಎಫ್ಸಿ vs ಒಡಿಶಾ ಎಫ್ಸಿ, Live ಸ್ಕೋರ್
- Automobiles
2030ರ ವೇಳೆಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Movies
ಪ್ರಭಾಸ್ ನಟನೆಯ 'ಆದಿಪುರುಷ್' ಚಿತ್ರತಂಡದಿಂದ ಪ್ರಮುಖ ಅಪ್ಡೇಟ್
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಓಡುವಾಗ ಈ ತಪ್ಪುಗಳನ್ನು ಮಾಡಿದರೆ ತೂಕ ಕಮ್ಮಿಯಾಗಲ್ಲ
ನೀವು ಓಡುವುದನ್ನು ಅಭ್ಯಾಸ ಮಾಡುತ್ತೀದ್ದೀರಾ? ಸರಿಯಾಗಿ ಅಭ್ಯಾಸ ಮಾಡಿದರೂ ಯಾವುದೇ ಫಲಿತಾಂಶ ಲಭ್ಯವಾಗುತ್ತಿಲ್ಲವೇ? ಹಾಗಿದ್ದರೆ ನಿಮ್ಮ ಅಭ್ಯಾಸದಲ್ಲಿ ಏನೋ ತಪ್ಪಿದೆ ಎಂದರ್ಥ. ನೀವು ಮ್ಯಾರಥಾನ್ ಓಡಲು ಬಯಸುತ್ತಿರಲಿ ಅಥವಾ ತೂಕ ಇಳಿಸಿಕೊಳ್ಳಲು ಅಥವಾ ಸದೃಡರಾಗಲು ದಾರಿಗಳನ್ನು ಹುಡುಕುತ್ತಿರಲಿ, ನಿಮ್ಮ ದೈನಂದಿನ ಜೀವನದಲ್ಲಿ ಓಟದಂತಹ ಆರೋಗ್ಯಕರ ಅಭ್ಯಾಸವನ್ನು ಸೇರಿಸಲು ಎಂದಿಗೂ ತಡ ಮಾಡಬಾರದು.
ಆದರೆ ಇದೇ ಓಟದಿಂದ ನಿಮಗೆ ನೀವು ಬಯಸಿದ ರಿಸಲ್ಟ್ ದೊರೆಯುತ್ತಿಲ್ಲ ಅಂದ್ರೆ, ನಿಮ್ಮ ಅಭ್ಯಾಸದಲ್ಲಿ ಎಲ್ಲೋ ಎಡವಿದ್ದೀರಾ ಎಂಬುದು ಸತ್ಯ. ವಿಶೇಷವಾಗಿ ಹೊಸದಾಗಿ ಓಟ ಕಲಿಯುತ್ತಿರುವವರು ಕೆಲ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರಿಗೆ ಸರಿಯಾದ ಫಲಿತಾಂಶ ಲಭಿಸದೇ ಹೋಗಬಹುದು ಅಥವಾ ಕೆಲವೊಂದು ಗಾಯಗಳಿಗೂ ಕಾರಣವಾಗಬಹುದು. ಅಂತಹ ತಪ್ಪುಗಳು ಯಾವುವು? ಅವುಗಳಿಗೆ ಪರಿಹಾರವೇನೇಂಬುದನ್ನು ತಿಳಿದುಕೊಳ್ಳೋಣ.

ತಪ್ಪು # 1: ತಪ್ಪಾದ ಶೂಗಳ ಆಯ್ಕೆ:
ನೀವು ಓಟಕ್ಕೆ ಹೊಸಬರಾಗಿದ್ದಾಗ ಗಾಯಗಳನ್ನು ತಪ್ಪಿಸಲು ಸರಿಯಾದ ರೀತಿಯ ಶೂಗಳನ್ನು ಧರಿಸುವುದು ಅತ್ಯಗತ್ಯ. ಹೆಚ್ಚಾಗಿ ಹೊಸಬರು ತಮ್ಮ ಹಳೆಯ ತರಬೇತುದಾರೊಂದಿಗೆ ಪ್ರಾಕ್ಟೀಸ್ ಆರಂಭಿಸುತ್ತಾರೆ. ಆ ಸಂದರ್ಭದಲ್ಲಿ ತರಬೇತುದಾರರು ನಿಮ್ಮ ಕಾಲು ಅಥವಾ ಪಾದದ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿ ತೋರಲಾರರು. ಆದ್ದರಿಂದ ನಿಮ್ಮ ಕಾಲಿನ ಸುರಕ್ಷತೆಯನ್ನು ಸ್ವನಿರ್ಧಾರದಿಂದ ತೆಗೆದುಕೊಂಡು ಉತ್ತಮ ಶೂಗಳನ್ನು ಖರೀದಿಸುವುದು ಉತ್ತಮ.

ತಪ್ಪು # 2: ತುಂಬಾ ವೇಗವಾಗಿ ಓಡುವುದು
ಹೊಸದಾಗಿ ಓಡುವ ಅಭ್ಯಾಸ ಮಾಡಿಕೊಂಡರು ತುಂಬಾ ಉತ್ಸುಕರಾಗಿರುತ್ತಾರೆ. ವೇಗವಾಗಿ ಓಡುವುದು ಉತ್ತಮ ಎಂದು ಭಾವಿಸಿರುತ್ತಾರೆ. ಆದರೆ ಇದು ತಪ್ಪು. ನೀವು ತಕ್ಷಣವೇ ವೇಗವಾಗಿ ಓಡಲು ಆರಂಭಿಸಿದರೆ, ಅದು ನಿಮ್ಮ ಮೊಣಕಾಲು ಗಾಯ ಅಥವಾ ಶಿನ್ ಸ್ಪಿ÷್ಲಂಟ್‌ಗೆ ಕಾರಣವಾಗಬಹುದು. ಅದೇ ಕಾರಣಕ್ಕಾಗಿ ಅನೇಕ ಹೊಸ ಓಟಗಾರರು ಉತ್ಸುಕರಾಗುತ್ತಾರೆ ಮತ್ತು ಅವರು ವೇಗವಾಗಿ ಓಡುತ್ತಾರೆಂದು ಭಾವಿಸಿ, ಅದು ಉತ್ತಮವಾಗಿರುತ್ತದೆ. ನೀವು ನಿಧಾನವಾಗಿ ಓಡುವುದನ್ನು ಆರಂಭಿಸಿ, ಸಮಯ ಕಳೆದಹಾಗೇ ವೇಗವನ್ನು ಹೆಚ್ಚಿಸಿಕೊಳ್ಳಬೇಕು. ಅಷ್ಟೇ ಅಲ್ಲ, ವೇಗಕ್ಕೆ ತಕ್ಕಂತೆ ಸಮಯವನ್ನು ನಿಗದಿಪಡಿಸಿಕೊಂಡರೆ ಉತ್ತಮ.

ತಪ್ಪು # 3: ಓವರ್ ಸ್ಟ್ರೆಡಿಂಗ್
ಇದು ಹೆಚ್ಚಿನ ಓಟಗಾರರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ಓಡುವಾಗಿ ನಿಮ್ಮ ಪಾದ ಸರಿಯಾಗಿ ನೆಲ ಮುಟ್ಟುವಂತೆ ಓಡಿ. ಕೇವಲ ಮುಮ್ಮಡಿಯನ್ನು ನೆಲಕ್ಕೆ ತಾಗಿಸಿ ಓಟವನ್ನು ಅಭ್ಯಾಸ ಮಾಡುವುದು ಹಲವಾರು ಗಾಯಗಳಿಗೆ ಕಾರಣವಾಗಬಹುದು.

ತಪ್ಪು # 4: ಓಡುವಾಗ ಸರಿಯಾಗಿ ಉಸಿರಾಡುವುದಿಲ್ಲ
ಓಡುವಾಗ ಸರಿಯಾಗಿ ಉಸಿರಾಟ ನಡೆಸದಿದ್ದರೆ ಅದು ಬಹಳಷ್ಟು ಆರೋಗ್ಯ ಸಮಸ್ಯೆಗಳ ಜೊತೆಗೆ ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವು ಓಡುವಾಗ ನಿಮ್ಮ ಬಾಯಿ ಮತ್ತು ಮೂಗಿನ ಮೂಲಕ ಉಸಿರಾಡುವುದನ್ನು ಖಚಿತಪಡಿಸಿಕೊಳ್ಳಿ. ಇದು ನಿಮಗೆ ಸಾಕಷ್ಟು ಆಮ್ಲಜನಕವನ್ನು ಪಡೆದುಕೊಳ್ಳಲು ನೆರವಾಗುತ್ತದೆ.

ತಪ್ಪು # 5: ರನ್ನಿಂಗ್‌ಗೆ ತಪ್ಪಾದ ಬಟ್ಟೆಗಳನ್ನು ಧರಿಸುವುದು
ನೀವು ಧರಿಸುವ ಬಟ್ಟೆ ಸಹ ರನ್ನಿಂಗ್‌ಗೆ ಬಹಳ ಮುಖ್ಯ. ಕೆಲವು ಓಟಗಾರರು ಹವಾಮಾನ ಪರಿಸ್ಥಿತಿಗಳನ್ನು ಗಮನಿಸದೇ ಯಾವುದೋ ಒಂದು ಬಟ್ಟೆಯನ್ನು ಧರಿಸುತ್ತಾಎ. ಇದು ಕೆಲವೊಮ್ಮೆ ಹವಾಮಾನ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ. ಉದಾಹರಣೆಗೆ, ಮೈತುಂಬಾ ಬಟ್ಟೆಗಳನ್ನು ಧರಿಸುವುದರಿಂದ ಕೆಲವೇ ಕಿಲೋಮೀಟರ್‌ಗಳ ನಂತರ ನೀವು ತುಂಬಾ ಬಿಸಿಯಾಗಿರುತ್ತೀರಿ. ಆರಾಮದಾಯಕ ತಾಪಮಾನವನ್ನು ಕಾಪಾಡುವ ಬಟ್ಟೆಗಳನ್ನು ಧರಿಸುವುದು ಉತ್ತಮ.

ತಪ್ಪು # 6: ದೇಹದ ಭಂಗಿ ಸರಿಯಾಗಿರದೇ ಇರುವುದು:
ಓಡುವಾಗ ನಿಮ್ಮ ತೋಳುಗಳನ್ನು ಅಕ್ಕಪಕ್ಕಕ್ಕೆ ತಿರುಗಿಸುತ್ತೀರಾ? ಹೌದು, ನೀವು ಅದನ್ನು ತಪ್ಪಾಗಿ ಮಾಡುತ್ತಿದ್ದೀರಿ. ದೇಹದ ಮೇಲ್ಭಾಗದ ಕಳಪೆ ಭಂಗಿಯು ಉಸಿರಾಟಕ್ಕೆ ಅನಾನುಕೂಲವಾಗುವಂತೆ ಮಡಬಹುದು. ಆದ್ದರಿಂದ, ನಿಮ್ಮ ಕೈಗಳನ್ನು ಸೊಂಟದ ಮಟ್ಟದಲ್ಲಿ ಮತ್ತು ತೋಳುಗಳನ್ನು ೯೦ ಡಿಗ್ರಿ ಕೋನದಲ್ಲಿ ಇಟ್ಟುಕೊಳ್ಳಬೇಕು, ನಿಮ್ಮ ಮೊಣಕೈಯನ್ನು ನಿಮ್ಮ ಬದಿಯಲ್ಲಿ ಇರಿಸಿ. ನಿಮ್ಮ ತೋಳುಗಳು ಹಿಂದಕ್ಕೆ ಮತ್ತು ಮುಂದಕ್ಕೆ ಸ್ವಿಂಗ್ ಆಗಬೇಕು.

ತಪ್ಪು #7: ಸಾಕಷ್ಟು ನೀರು ಕುಡಿಯುವುದಿಲ್ಲ.
ಸಾಕಷು ನೀರು ಕುಡಿಯುವುದು ಎಲ್ಲಾ ತರಹದ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯಕ. ಅದೇ ರೀತಿ ಓಡುವಾಗಲೂ ಸಾಕಷ್ಟು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನೀರು ಕುಡಿಯದೇ ಇರುವದರಿಂದ ದುರ್ಬಲ ಕರ‍್ಯಕ್ಷಮತೆ ಹಾಗೂ ತಲೆನೋವುಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಒಂದು ದಿನದಲ್ಲಿ ಕನಿಷ್ಠ ೮-೧೦ ಗ್ಲಾಸ್ ನೀರನ್ನು ಕುಡಿಯುವುದು ಸುಲಭವಾದ ಪರಿಹಾರವಾಗಿದೆ.