For Quick Alerts
ALLOW NOTIFICATIONS  
For Daily Alerts

ಬೆಳಗ್ಗಿನ ಈ 8 ಅಭ್ಯಾಸಗಳಿಂದಾಗಿ ಮೈ ತೂಕ ಹೆಚ್ಚಾಗುವುದು

|

ತೂಕ ಹೆಚ್ಚಾಗುತ್ತಿರುವುದು ಬಹುತೇಕರ ಸಮಸ್ಯೆಯಾಗಿದೆ. ಅಯ್ಯೋ ತೂಕ ಹೆಚ್ಚಾಗುತ್ತಿದ್ದೇನೆ, ಕಾರಣ ಏನು ಗೊತ್ತಿಲ್ಲ ಅಂತ ಕೆಲವರು ಹೇಳಿದರೆ, ಇನ್ನು ಕೆಲವರು ನಾನು ತುಂಬಾ ಕಡಿಮೆ ತಿನ್ನುತ್ತೇನೆ ಆದರೂ ದಪ್ಪಗಾಗುತ್ತಿದ್ದೇನೆ ಎಂದು ಕಳವಳ ವ್ಯಕ್ತ ಪಡಿಸುತ್ತಾರೆ.

Morning habits that can cause weight gain

ಆದರೆ ಕೆಲವೊಮ್ಮೆ ನಮಗೆ ಅರಿವಿಲ್ಲದೆ ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದಾಗಿ ಮೈ ತೂಕ ಹೆಚ್ಚಾಗುತ್ತಿರುತ್ತದೆ, ಆದರೆ ನಾವು ಅದರತ್ತ ಗಮನ ಕೊಟ್ಟಿರುವುದೇ ಇಲ್ಲ. ಇಲ್ಲಿ ನಾವು ಬೆಳಗ್ಗೆ ಏನು ಮಾಡುವುದರಿಂದ ಮೈ ತೂಕ ಹೆಚ್ಚಾಗುವುದು ಎಂದು ಈ ಲೇಖನದಲ್ಲಿ ಹೇಳಿದ್ದೇವೆ ನೋಡಿ:

1. ಬೆಳಗ್ಗೆ ಎದ್ದು ನೀರು ಕುಡಿಯದಿರುವುದು

1. ಬೆಳಗ್ಗೆ ಎದ್ದು ನೀರು ಕುಡಿಯದಿರುವುದು

ಬೆಳಗ್ಗೆ ಎದ್ದ ಮೇಲೆ ನೀರು ಕುಡಿಯುವುದು ಅದರಲ್ಲೂ ಬಿಸಿ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯ ಅಭ್ಯಾಸ. ಆದರೆ ಹೆಚ್ಚಿನವರಿಗೆ ಈ ಅಭ್ಯಾಸವೇ ಇರುವುದಿಲ್ಲ. ಇದು ತೂಕನ ಏರಿಕೆಗೆ ಒಂದು ಕಾರಣವಾಗಿದೆ. ಬೆಳಗ್ಗೆ ಎದ್ದ ತಕ್ಷಣ ಎರಡು ಲೋಟ ಬಿಸಿ ನೀರು ಕುಡಿದರೆ ಇದು ಚಯಾಪಚಯ ಕ್ರಿಯೆ ತುಂಬಾ ಸಹಾಯ ಮಾಡುತ್ತದೆ.

ಅಲ್ಲದೆ ನೀರು ಹೊಟ್ಟೆ ಸೇರಿದಾಗ ಅವಶ್ಯಕವಾಗಿ ಕುರುಕಲು ತಿಂಡಿಗಳು ತಿನ್ನುವುದು ಕಡಿಮೆಯಾಗುತ್ತದೆ. ದೇಹದಲ್ಲಿ ನೀರಿನಂಶ ಕಾಪಾಡುತ್ತದೆ.

2. ಸಂಸ್ಕರಿಸಿದ ಆಹಾರ ಸೇವನೆ

2. ಸಂಸ್ಕರಿಸಿದ ಆಹಾರ ಸೇವನೆ

ಹಿಂದಿನ ಆಹಾರ ಶೈಲಿಗೂ ಈಗೀನ ಆಹಾರ ಶೈಲಿಗೂ ತುಂಬಾ ವ್ಯತ್ಯಾಸವಿದೆ. ಹಿಂದೆ ಪ್ರತಿಯೊಂದು ಅಡುಗೆ ಮನೆಯಲ್ಲಿ ಮಾಡಿ ತಿನ್ನುತ್ತಿದ್ದರು, ಈಗ ಎಲ್ಲಾ ಅಡುಗೆ ರೆಡಿಮೇಡ್‌ ಸಿಗುತ್ತದೆ. ಒಂದು ನಿಮಿಷ ಕುದಿಸಿದರೆ ಸಾಕು, ಅಡುಗೆ ರೆಡಿ, ಹಾಗಾಗಿ ಟೈಮ್‌ ಇಲ್ಲ ಎಂದು ಸಂಸ್ಕರಿಸಿದ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಿದ್ದೇವೆ. ಇದರಿಂದಾಗಿ ಮೈ ತೂಕ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಆಹಾರಶೈಲಿ ತೂಕ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

3. ಬೆಳಗ್ಗೆ ಉಪಾಹಾರ ಮಾಡದೇ ಇರುವುದು

3. ಬೆಳಗ್ಗೆ ಉಪಾಹಾರ ಮಾಡದೇ ಇರುವುದು

ಈ ಅಭ್ಯಾಸ ತುಂಬಾ ಜನರಲ್ಲಿ ಇರುತ್ತದೆ. ಬೆಳಗ್ಗೆ ಒಂದು ಹೊತ್ತು ಊಟ ಬಿಡುವುದರಿಂದ ತೂಕ ಕಡಿಮೆಯಾಗಬಹುದೆಂದು ಭಾವಿಸುತ್ತಾರೆ. ಆದರೆ ಬೆಳಗ್ಗೆ ಏನೂ ತಿನ್ನದೇ ಇರುವುದು ನಾವು ಮಾಡುವ ದೊಡ್ಡ ತಪ್ಪಾಗಿದೆ. ಬೆಳಗ್ಗೆ ಏನೂ ತಿನ್ನದೇ ಹೋದರೆ ಚಯಾಪಚಯ ಕ್ರಿಯೆ ನಿಧಾನವಾಗುವುದು. ಇನ್ನು ಬೆಳಗ್ಗೆ ಏನು ತಿನ್ನದೇ ಇರುವವುದರಿಂದ ನಂತರ ಹೊಟ್ಟೆ ಹಸಿವು ಉಂಟಾದಾಗ ಕುರುಕಲು ತಿಂಡಿ ಸವಿಯುತ್ತಾರೆ. ಹೀಗೆ ಮಾಡುವುದರಿಂದ ತೂಕ ಹೆಚ್ಚುವುದು.

4. ಬ್ರೇಕ್‌ಫಾಸ್ಟ್‌ ತುಂಬಾ ಕಡಿಮೆ ತಿನ್ನುವುದು

4. ಬ್ರೇಕ್‌ಫಾಸ್ಟ್‌ ತುಂಬಾ ಕಡಿಮೆ ತಿನ್ನುವುದು

ಬ್ರೇಕ್‌ಫಾಸ್ಟ್ ರಾಜನಂತೆ, ಲಂಚ್‌ ಮಂತ್ರಿಯಂತೆ, ಡಿನ್ನರ್‌ ಭಿಕ್ಷುಕನಂತೆ ತಿನ್ನಬೇಕು ಎಂಬ ಮಾತು ಕೇಳಿರಬಹುದು. ಬೆಳಗ್ಗಿನ ಬ್ರೇಕ್‌ಫಾಸ್ಟ್ ಆರೋಗ್ಯಕರವಾಗಿರಬೇಕು ಹಾಗೂ ಹೊಟ್ಟೆ ತುಂಬಾ ತಿನ್ನಬೇಕು. ಏಕೆಂದರೆ ಬೆಳಗ್ಗೆ ತಿಂದಿದ್ದು ಕರಗುವ ಶಕ್ತಿ ನಮ್ಮ ದೇಹಕ್ಕೆ. ಬೆಳಗ್ಗೆ ಅಧಿಕ ತಿಂದರೆ ಮಧ್ಯಾಹ್ನ ಹೆಚ್ಚು ಆಹಾರ ಬೇಕಾಗಿಲ್ಲ, ಬೆಳಗ್ಗೆ ಕಡಿಮೆ ತಿಂದರೆ ಮಧ್ಯಾಹ್ನ ಹೆಚ್ಚು ತಿನ್ನುವುದರಿಂದ ಮೈ ತೂಕ ಹೆಚ್ಚಾಗುವುದು.

5. ಬ್ರೇಕ್‌ಫಾಸ್ಟ್‌ ತುಂಬಾ ಲೇಟ್‌ ತಿನ್ನುವುದು

5. ಬ್ರೇಕ್‌ಫಾಸ್ಟ್‌ ತುಂಬಾ ಲೇಟ್‌ ತಿನ್ನುವುದು

ಬ್ರೇಕ್‌ಫಾಸ್ಟ್‌ ತುಂಬಾ ಲೇಟ್‌ ತಿನ್ನುವುದರಿಂದ ಕೂಡ ಮೈ ತೂಕ ಹೆಚ್ಚಾಗುವುದು. ದೇಹದ ಅಂಗಗಳಿಗೆ ತಮ್ಮಮ್ಮ ಕಾರ್ಯಗಳನ್ನು ಮಾಡಲು ಶಕ್ತಿ ಬೇಕಾಗಿರುತ್ತದೆ. ಹೊಟ್ಟೆ ಖಾಲಿ ಇದ್ರೆ ಅಸಿಡಿಕ್ ರಸ ಉತ್ಪತ್ತಿಯಾಗುತ್ತದೆ, ಇದರಿಂದ ಉರಿಯೂತ, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಆದ್ದರಿಂದ ಬೆಳಗ್ಗೆ ಎದ್ದ ಬಳಿಕ ಎರಡು ಗಂಟೆಯ ಒಳಗೆ ಬ್ರೇಕ್‌ಫಾಸ್ಟ್ ಮುಗಿಸುವುದು ಆರೋಗ್ಯಕರ.

6. ವ್ಯಾಯಾಮ ಮಾಡದೇ ಇರುವುದು

6. ವ್ಯಾಯಾಮ ಮಾಡದೇ ಇರುವುದು

ಬೆಳಗ್ಗೆ ಎಷ್ಟೇ ಟೈಮ್ ಇಲ್ಲ ಅಂದ್ರೂ ಅರ್ಧ ಗಂಟೆ ವ್ಯಾಯಾಮಕ್ಕೆ ಮೀಸಲಿಟ್ಟರೆ ಮುಂದೆ ಆಸ್ಪತ್ರೆಗೆ ಟೈಮ್‌ ಮೀಸಲಿಡಬೇಕಾಗುವುದಿಲ್ಲ. ವ್ಯಾಯಾಮ ಮಾಡುವುದರಿಂದ ಮೈ ಕೊಬ್ಬು ಕರಗುವುದು, ಮನಸ್ಸಿಗೆ ಹೊಸ ಚೈತನ್ಯ ದೊರೆಯುತ್ತದೆ. ದೇಹ ಫಿಟ್‌ ಆಗಿರಬೇಕೆಂದರೆ ದೇಹಕ್ಕೆ ವ್ಯಾಯಾಮ ಬೇಕೇಬೇಕು.

7. ತುಂಬಾ ನಿದ್ದೆ ಮಾಡುವುದು

7. ತುಂಬಾ ನಿದ್ದೆ ಮಾಡುವುದು

ದಿನದಲ್ಲಿ 6-8 ಗಂಟೆ ನಿದ್ದೆ ಮಾಡುವುದು ಆರೋಗ್ಯಕರ, ಆದರೆ ಕೆಲವರು 10 ಗಂಟೆಗೂ ಅಧಿಕ ಹೊತ್ತು ನಿದ್ದೆ ಮಾಡುತ್ತಾರೆ. ಈ ಅಭ್ಯಾಸ ಆಲಸ್ಯ ಉಂಟು ಮಾಡುವುದು ಮಾತ್ರವಲ್ಲ ಮೈ ತೂಕ ಹೆಚ್ಚು ಮಾಡುವುದು. ತುಂಬಾ ನಿದ್ದೆ ಮಾಡುವುದರಿಂದ ಚಯಾಪಚಯ ಕ್ರಿಯೆ ಕೂಡ ನಿಧಾನವಾಗುವುದು. ಚಯಾಪಚಯ ಕ್ರಿಯೆ ಸರಿಯಾಗಿ ನಡೆಯದಿದ್ದರೆ ದೇಹದ ಮೈ ತೂಕ ಹೆಚ್ಚುವುದು.

8. ಬೆಳಗ್ಗೆ ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲದಿರುವುದು

8. ಬೆಳಗ್ಗೆ ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲದಿರುವುದು

ವಿಟಮಿನ್ ಡಿ ಕೊರತೆ ಉಂಟಾದರೆ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ವಿಟಮಿನ್‌ ಡಿ ನೈಸರ್ಗಿಕವಾಗಿ ಸೂರ್ಯನ ಬೆಳಕಿನಿಂದ ದೊರೆಯುತ್ತದೆ. ಮುಂಜಾನೆ ಸ್ವಲ್ಪ ಹೊತ್ತು ಸೂರ್ಯನ ಬೆಳಕಿಗೆ ಮೈಯೊಡ್ಡಿ ನಿಲ್ಲುವುದು ತುಂಬಾ ಆರೋಗ್ಯಕರ, ಇದು ಚಯಾಪಚಯ ಕ್ರಿಯೆಗೆ ಸಹಕಾರಿ.

ಸಲಹೆ: ತೂಕ ಹೆಚ್ಷಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ ಹಾಗೂ ಅಭ್ಯಾಸಗಳು, ಇದರಲ್ಲಿ ಬದಲಾವಣೆ ಮಾಡಿ ಖಂಡಿತ ಮೈ ತೂಕ ಕಡಿಮೆಯಾಗುವುದು.

ತೂಕದ ಬಗ್ಗೆ ಅತೀ ಹೆಚ್ಚು ಕೇಳ್ಪಡುವ ಪ್ರಶ್ನೆಗಳಿವು

ತೂಕದ ಬಗ್ಗೆ ಅತೀ ಹೆಚ್ಚು ಕೇಳ್ಪಡುವ ಪ್ರಶ್ನೆಗಳಿವು

1. ಬೆಳಗ್ಗೆ ಮೈ ತೂಕ ಕಡಿಮೆ ಇರುತ್ತದೆ ಏಕೆ?

ಬೆಳಗ್ಗೆ ತೂಕ ಚೆಕ್‌ ಮಾಡಿದರೆ ನಾವು ಇರುವ ತೂಕಕ್ಕಿಂತ ಕಡಿಮೆ ತೂಕ ತೋರಿಸುತ್ತದೆ. ಏಕೆಂದರೆ ಬೆಳಗ್ಗಿನ ಹೊತ್ತು ಹೊಟ್ಟೆ ಖಾಲಿ ಇರುತ್ತದೆ, ನಂತರ ತಿನ್ನಲು, ಕುಡಿಯಲು ಪ್ರಾರಂಭಿಸುತ್ತೇವೆ.

2. ಬೆಳಗ್ಗೆ ಏನು ತೆಗೆದುಕೊಂಡರೆ ಮೈ ತೂಕ ಕಡಿಮೆಯಾಗುವುದು

ಬಿಸಿ ನೀರಿಗೆ ನಿಂಬೆ ಹಣ್ಣು ಹಾಕಿ ಕುಡಿಯುವುದು, ಗ್ರೇನ್‌ ಟೀ, ಚಕ್ಕೆ ಟೀ ಹೀಗೆ ತೂಕ ಕಡಿಮೆಯಾಗಲು ಅನೇಕ ಆರೋಗ್ಯಕರ ಪಾನೀಯಗಳಿವೆ, ಅವುಗಳನ್ನು ತೆಗೆದುಕೊಳ್ಳಬಹುದು.

English summary

Morning Habits That Can Cause Weight Gain

If your weight loss efforts are met with no positive result at all, there is a chance you are following the wrong practices at the start of the day.
Story first published: Saturday, February 15, 2020, 14:48 [IST]
X
Desktop Bottom Promotion