For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಬೇಕೇ ಹಾಗಾದ್ರೆ ದೋಸೆ ತಿನ್ನಿ

|

ದೇಹದ ಫಿಟ್ ನೆಸ್ ಕಾಪಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಆದರೆ ಈ ವೇಗದ ಜಗತ್ತಿನಲ್ಲಿ ದೇಹದ ಸದೃಢತೆ ಕಾಪಾಡಲು ಗಂಟೆಗಳ ಕಾಲ ವ್ಯಾಯಾಮ ಮಾಡುವ ವ್ಯವಧಾನ ಯಾರಿಗೂ ಇಲ್ಲವಾಗಿದೆ. ಹಾಗೂ ವ್ಯಾಯಾಮ ಮಾಡಿ ದೇಹ ಕರಗಿಸುವ ಪ್ರಯತ್ನ ಮಾಡಿದರೂ ವ್ಯಾಯಾಮದ ನಂತರ ಅಗತ್ಯ ಪ್ರಮಾಣದ ಪೋಷಕಾಂಶಗಳ ಆಹಾರಗಳನ್ನೇ ಸೇವಿಸುವುದು, ಇದನ್ನೇ ನಿತ್ಯ ಪಾಲಿಸುವುದು ಇನ್ನಷ್ಟು ತ್ರಾಸದಾಯಕ. ಅದರಲ್ಲೂ ಬಾಯಿಯ ರುಚಿ ಕಟ್ಟಿಹಾಕಿ ಡಯಟ್ ಮಾಡುವ ನಮ್ಮ ಯೋಜನೆ ರುಚಿಕರ ಆಹಾರ ನೋಡುತ್ತಿದ್ದಂತೆ ಮುರಿದಿರುತ್ತದೆ.

ಆದರೆ ನಾವು ನಿತ್ಯ ಸೇವಿಸುವ ಅದರಲ್ಲೂ ದಕ್ಷಿಣ ಭಾರತದ ಹಿಂದಿನ ಆಹಾರ ಪದ್ಧತಿಗಳು ದೇಹದ ಸ್ವಾಸ್ಥ್ಯ ಕಾಪಾಡುವ ಉತ್ತಮ ಆಹಾರಗಳಾಗಿದೆ ಎಂದು ಆಹಾರ ತಜ್ಞರು ಹೇಳುತ್ತಾರೆ. ಅದರಲ್ಲೂ ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಆಹಾರ, ಬೆಳಗಿನ ಉಪಹಾರ ದೋಸೆ ನಿಜವಾಗಿಯೂ ನಿಮ್ಮ ತೂಕ ಇಳಿಸುವಲ್ಲಿ ಪ್ರಾಮುಖ್ಯತೆ ವಹಿಸುತ್ತದೆ ಎಂದರೆ ನೀವು ನಂಬಲೇಬೇಕು!.

ತೂಕ ಇಳಿಸುವಲ್ಲಿ ದೋಸೆ ಹೇಗೆ ಸಹಕಾರಿ ಗೊತ್ತೆ?

ತೂಕ ಇಳಿಸುವಲ್ಲಿ ದೋಸೆ ಹೇಗೆ ಸಹಕಾರಿ ಗೊತ್ತೆ?

ದಕ್ಷಿಣ ಭಾರತದ ಆಹಾರಗಳು ರುಚಿಕರ ಹಾಗೂ ಆರೋಗ್ಯಕರವಾಗಿದ್ದರೂ ಅದನ್ನು ತಯಾರಿಸುವ ವಿಧಾನವೂ ಮುಖ್ಯವಾಗುತ್ತದೆ. ದೋಸೆ ಬಹಳ ಸರಳವಾಗಿ ತಯಾರಿಸಬಹುದಾದ ಆರೋಗ್ಯಕರ ಆಹಾರವಾಗಿದೆ. ಆದರೆ ಇದಕ್ಕೆ ಅತ್ಯಧಿಕ ಮಸಾಲೆ, ತುಪ್ಪ, ಬೆಣ್ಣೆ ಬಳಸಿ ಸೇವಿಸುವುದು ರುಚಿಕರವಾದರೂ ಆರೋಗ್ಯಕರವಲ್ಲ. ಅದರಲ್ಲೂ ತೂಕ ಇಳಿಸುವವರಿಗೆ ಇದು ಸೂಕ್ತವಲ್ಲ. ಪೌಷ್ಠಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ ಗಳು ಕಡಿಮೆ ಇರುತ್ತದೆ, ಆದರೆ ಅಕ್ಕಿಯಾಲ್ಲಿ ತಯಾರಿಸಿದ ದೋಸೆಯಲ್ಲಿ ಕಾರ್ಬ್ಸಗಳು ಹೆಚ್ಚಿರುತ್ತದೆ. ಆದ್ದರಿಂದ ಇದು ತೂಕ ಇಳಿಸುವಲ್ಲಿ ವಿವಿಧ ತರದ ದೋಸೆ ಸಹಕಾರಿಯಾಗಿದೆ. ನೀವು ಸಹ ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಮತ್ತು ಆರೋಗ್ಯಕರ ಡಯಟ್ ಅನ್ನು ಅಳವಡಿಸಿಕೊಳ್ಳಲು ಚಿಂತಿಸುತ್ತಿದ್ದರೆ ದೋಸೆ ಅತ್ಯುತ್ತಮ ಆಯ್ಕೆಯಾಗಿದೆ.

ದೋಸೆ ಹಿಟ್ಟು, ತೂಕದ ಗುಟ್ಟು!

ದೋಸೆ ಹಿಟ್ಟು, ತೂಕದ ಗುಟ್ಟು!

ದೋಸೆ ಏಕೆ ಇಷ್ಟೊಂದು ಪೌಷ್ಟಿಕ ಆಹಾರವೆಂದರೆ, ಇದರಲ್ಲಿ ಬೆರೆತಿರುವ ಆರೋಗ್ಯಕಾರಿ ಆಹಾರ ಪದಾರ್ಥಗಳ ಮಿಶ್ರಣವೇ ಕಾರಣ. ಉದ್ದಿನ ಬೇಳೆ, ಅಕ್ಕಿ, ಮೆಂತ್ಯ, ಅವಶ್ಯವಿದ್ದರೆ ಕಡಲೆ ಬೇಳೆಗಳ ಮಿಶ್ರಣ ರುಚಿಕರ ಹಾಗೂ ಆರೋಗ್ಯಕಾರಿ ದೋಸೆ ತಯಾರಾಗಲು ಕಾರಣ. ಈ ಎಲ್ಲದರ ಮಿಶ್ರಣದಿಂದ ದೋಸೆಯಲ್ಲಿ ಅತ್ಯಧಿಕ ಕಾರ್ಬೊಹೈಡ್ರೇಟ್ ಮತ್ತು ಪೌಷ್ಟಿಕಾಂಶಗಳು ಇರುತ್ತದೆ. ಇದು ಆರೋಗ್ಯಕಾರಿ ಹಾಗೂ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ದೋಸೆಯ ಸೇವನೆಯಿಂದ ಸಮತೂಕದ ಪೌಷ್ಟಿಕಾಂಶಗಳು ದೇಹಕ್ಕೆ ಸೇರುತ್ತದೆ ಹಾಗೂ ರುಚಿಯಲ್ಲೂ ರಾಜಿಯಾಗುವ ಅಗತ್ಯವೇ ಇಲ್ಲ.

ಸುಲಭ ಜೀರ್ಣಕ್ರಿಯೆ

ಸುಲಭ ಜೀರ್ಣಕ್ರಿಯೆ

ಸಂಪೂರ್ಣ ನೈಸರ್ಗಿಕ ಆಹಾರ ಪದಾರ್ಥಗಳಿಂದ ತಯಾರಿಸಿದ ದೋಸೆ ದೇಹಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ದೋಸೆಯ ಹಿಟ್ಟು ಕನಿಷ್ಟ 6-7 ಗಂಟೆಗಳ ಕಾಲ ಹುದುಗಿರುತ್ತದೆ ಮತ್ತು ಸಸ್ಯ ಆಧಾರಿತ ಪೌಷ್ಟಿಕಾಂಶಗಳಾಗಿದೆ. ಹಲವು ಆರೋಗ್ಯಕಾರಿ ಅಂಶವುಳ್ಳ ದೋಸೆ ಹುದುಗಿರುವ ಪರಿಣಾಮ ಬಹುಬೇಗನೆ ಜೀರ್ಣವಾಗುತ್ತದೆ. ಇದು ಜೀರ್ಣವಾಗಲು ಹೆಚ್ಚಿನ ಶ್ರಮದ ಅಗತ್ಯವಿಲ್ಲ ಅಲ್ಲದೆ ನೀವು ದೋಸೆ ಸೇವಿಸಿದಾಗ ಹೆಚ್ಚಿನ ನೀರು ಸೇವಿಸುವಂತೆ ಭಾಸವಾಗುತ್ತದೆ ಆದ್ದರಿಂದ ದೇಹಕ್ಕೆ ಹೆಚ್ಚಿನಂಶ ನೀರು ಸಹ ಸೇರುತ್ತದೆ.

ಕಡಿಮೆ ಕ್ಯಾಲೋರಿ

ಕಡಿಮೆ ಕ್ಯಾಲೋರಿ

ಬಹುಜನಪ್ರಿಯ ರುಚಿಕರ ದೋಸೆಯಲ್ಲಿರುವ ಕಡಿಮೆ ಮಟ್ಟದ ಕ್ಯಾಲೋರಿ, ಅಲ್ಲದೇ ದೋಸೆಯನ್ನು ನಾನ್ ಸ್ಟಿಕ್ ಪಾತ್ರೆಯಲ್ಲಿ ಕಡಿಮೆ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ಎಣ್ಣೆ ಇಲ್ಲದೆಯೂ ದೋಸೆಯನ್ನು ತಯಾರಿಸಬಹುದಾಗಿದ್ದು ಇದು ಇನ್ನಷ್ಟು ಆರೋಗ್ಯ ಸಹಕಾರಿಯಾಗಲು ಕಾರಣ.

ಮೂಳೆಗಳಿಗೆ ಉತ್ತಮ

ಮೂಳೆಗಳಿಗೆ ಉತ್ತಮ

ದೋಸೆಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಸಹ ಹೇರಳವಾಗಿರುವುದರಿಂದ ದೇಹದಲ್ಲಿ ಸಾಮರ್ಥ್ಯ ಮತ್ತು ಶಕ್ತಿ ತುಂಬುತ್ತದೆ. ಅಲ್ಲದೇ ಮೂಳೆಗಳು ಬಲಿಷ್ಠವಾಗಲು ಮತ್ತು ಆಮ್ಲಜನಕದ ಸರಬರಾಜು ಹೆಚ್ಚಾಗಲು ಸಹ ಕಾರಣವಾಗಿದೆ ಎಂಬುದು ನಿಜಕ್ಕೂ ಅಚ್ಚರಿಯ ವಿಷಯ.

ಒಟ್ಟಾರೆ ದೋಸೆ ಆರೋಗ್ಯಕರವಾಗಿ ದೇಹದ ತೂಕವನ್ನು ಕಡಿಮೆ ಮಾಡಲು ಅಥವಾ ಕಾಪಾಡಲು ಪ್ರಮುಖ ಪಾತ್ರವಹಿಸಲಿದೆ. ರುಚಿಯಲ್ಲಿ ರಾಜಿಯಾಗದೆ ದೇಹದ ತೂಕ ಇಳಿಸುವವರಿಗೆ ದೋಸೆ ಅತ್ಯುತ್ತಮ ಆಹಾರ ಎಂಬುದರಲ್ಲಿ ಎರಡು ಮಾತಿಲ್ಲ.

English summary

Is Dosa Good for Weight-Watchers?

In the fast-paced world, staying fit and healthy has turned out to be the need of the hour. No matter how much you workout, eating right happens to be the most pivotal part of your weight loss journey.
Story first published: Friday, October 11, 2019, 15:05 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X