For Quick Alerts
ALLOW NOTIFICATIONS  
For Daily Alerts

ಭಾರತೀಯ ಆಹಾರಶೈಲಿ ಮೂಲಕ ತೂಕ ಇಳಿಕೆ ಮಾಡುವುದು ಹೇಗೆ?

|

ಪ್ರತೀವರ್ಷ ಲಕ್ಷಾಂತರ ಜನರು ತೂಕ ಇಳಿಕೆಗೆ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಕೆಲವರು ಸಕ್ಸಸ್‌ ಆದರೆ ಮತ್ತೆ ಕೆಲವರಿಗೆ ತೂಕ ಇಳಿಕೆ ಸಾಧ್ಯವಾಗುವುದೇ ಇಲ್ಲ. ಇನ್ನು ಕೆಲವರು ಮೂರು-ನಾಲ್ಕು ತಿಂಗಳು ಕಷ್ಟಪಟ್ಟು ಮೈ ತೂಕ ಇಳಿಸಿ ಕೊಳ್ಳುತ್ತಾರೆ. ಆದರೆ ತಮ್ಮ ಡಯಟ್‌ ಪ್ಲ್ಯಾನ್ ( ತೂಕ ಇಳಿಕೆಯ ಆಹಾರಕ್ರಮ) ನಿಲ್ಲಿಸಿದ ಕೆಲವೇ ಕೆಲವೇ ತಿಂಗಳಿನಲ್ಲಿ ಮರಳಿ ದಪ್ಪಗಾಗುತ್ತಾರೆ.

ಡ್ಯಾಶ್‌ ಡಯಟ್, ಮೆಡಿಟೇರಿಯನ್, ಕೀಟೋ ಡಯಟ್‌ ಇಂಥ ಡಯಟ್‌ ಪ್ಲ್ಯಾನ್‌ಗಳು ತೂಕ ಇಳಿಕೆ ಮಾಡುವುದಾದರೂ ಸದಾ ಇದೇ ರೀತಿಯ ಆಹಾರ ಶೈಲಿ ಪಾಲಿಸುವುದು ಭಾರತೀಯರಾದ ನಮಗೆ ಸ್ವಲ್ಪ ಕಷ್ಟವೇ. ಏಕೆಂದರೆ ನಮ್ಮ ಆಹಾರಶೈಲಿಯೇ ಭಿನ್ನ. ಅದರಲ್ಲೂ ರಾಜ್ಯದಿಂದ-ರಾಜ್ಯಕ್ಕೆ, ಜಿಲ್ಲೆಯಿಂದ-ಜಿಲ್ಲೆಗೆ ಆಹಾರಶೈಲಿ ಭಿನ್ನವಾಗಿರುತ್ತದೆ. ಕೆಲವು ಕಡೆ ರೊಟ್ಟಿ ಹೆಚ್ಚು ಬಳಸಿದರೆ ಮತ್ತೆ ಕೆಲವು ಕಡೆ ಅನ್ನು ಹೆಚ್ಚು ಬಳಸುತ್ತಾರೆ. ಆದ್ದರಿಂದ ತೂಕ ಇಳಿಕೆಗೆ ನಿಮ್ಮದೇ ಆಹಾರಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಕೊಂಡರೆ ಸಾಕು. ಸಮತೂಕದ ಮೈ ಕಟ್ಟು, ಸದೃಢ ಆರೋಗ್ಯ ನಿಮ್ಮದಾಗಿರುವುದು.

ತೂಕ ಇಳಿಕೆಗೆ ನಿಮ್ಮದೇ ಆಹಾರಕ್ರಮದಲ್ಲಿ ಮಾಡಬೇಕಾದ ಬದಲಾವಣೆಗಳು

1. ಗುಣಮಟ್ಟದ ಆಹಾರ ಬಳಸಿ

1. ಗುಣಮಟ್ಟದ ಆಹಾರ ಬಳಸಿ

ಮಾಂಸಾಹಾರವನ್ನು ಹೆಚ್ಚು ಬಳಸುವ ಬದಲು ಸಸ್ಯಾಹಾರ ಹೆಚ್ಚಾಗಿ ಸೇವಿಸಬೇಕು. ಆಲೂಗಡ್ಡೆ, ಬೀನ್ಸ್, ಸಲಾಡ್, ನವಣೆ, ತಾಜಾ ಹಣ್ಣುಗಳು, ನಾರಿನಂಶ ಅಧಿಕವಿರುವ ಆಹಾರಗಳು ನಿಮ್ಮ ತಟ್ಟೆಯಲ್ಲಿರಲಿ. ಇದು ನಿಮ್ಮ ಹಸಿವನ್ನು ನಿಯಂತ್ರಿಸುವುದರ ಜೊತೆಗೆ ತೂಕ ಇಳಿಕೆಗೂ ತುಂಬಾನೇ ಸಹಕಾರಿ.

2. ಅಡುಗೆ ಕೋಣೆಯಲ್ಲಿ ಆರೋಗ್ಯಕರ ಆಹಾರವೇ ಇರಲಿ

2. ಅಡುಗೆ ಕೋಣೆಯಲ್ಲಿ ಆರೋಗ್ಯಕರ ಆಹಾರವೇ ಇರಲಿ

ಬ್ರೆಡ್, ಪಾಸ್ತಾ, ಮ್ಯಾಗಿ , ಮೈದಾ ವಸ್ತುಗಳು ಈ ರೀತಿಯ ವಸ್ತುಗಳನ್ನು ಅಡುಗೆ ಮನೆಯಲ್ಲಿ ತಂದಿಟ್ಟರೆ ಅದನ್ನೇ ಬಳಸುತ್ತೇವೆ ಇದರ ಬದಲಿಗೆ ಹಣ್ಣು, ತರಕಾರಿ, ಕಾಳುಗಳು, ಧಾನ್ಯಗಳು ಇವುಗಳನ್ನು ಹೆಚ್ಚಾಗಿ ತಂದು ಇದರಿಂದ ಅಡುಗೆ ಮಾಡಿ ಸೇವಿಸಿ.

3. ಮೊದಲೇ ಆಹಾರ ಚಾರ್ಟ್ ಮಾಡಿ

3. ಮೊದಲೇ ಆಹಾರ ಚಾರ್ಟ್ ಮಾಡಿ

ಎಷ್ಟೇ ಬ್ಯುಸಿಯಿದ್ದರೂ ನಿಮ್ಮ ದೇಹಕ್ಕೆ ಅಗ್ಯತವಾದ ಪೋಷಕಾಂಶಗಳು ಸಿಗುವಂತೆ ನೋಡಿಕೊಳ್ಳಬೇಕು. ನೀವು ಹಾಗಾಗಿ ಈ ವಾರ ನೀವು ತಿನ್ನಬೇಕಾದ ಆಹಾರದ ಲಿಸ್ಟ್ ಮಾಡಿಕೊಳ್ಳಿ. ಮೂರು ಹೊತ್ತಿನ ಆಹಾರ, ಸ್ನ್ಯಾಕ್ಸ್ ಏನು ತಿನ್ನಬೇಕೆಂದು ಪ್ಲ್ಯಾನ್ ರೆಡಿ ಮಾಡಿ, ಅದನ್ನು ಪಾಲಿಸಿ. ಹೀಗೆ ಮಾಡುವುದರಿಂದ ಹೊರಗಿನಿಂದ ತಿನ್ನುವುದು ತಪ್ಪುತ್ತದೆ ಆರೋಗ್ಯಕರ ಆಹಾರವೂ ಸಿಗುತ್ತದೆ. ಸ್ನ್ಯಾಕ್ಸ್ ಗೆ ಮೊಳಕೆ ಬರಿಸಿದ ಕಾಳುಗಳು, ಹಣ್ಣುಗಳು, ನಟ್ಸ್ ಇಂಥ ಆಹಾರವನ್ನಷ್ಟೇ ಬಳಸಿ.

4. ಪೋಷಕಾಂಶ ಅಧಿಕವಿರುವ ಬ್ರೇಕ್‌ಫಾಸ್ಟ್ ಸೇವಿಸಿ

4. ಪೋಷಕಾಂಶ ಅಧಿಕವಿರುವ ಬ್ರೇಕ್‌ಫಾಸ್ಟ್ ಸೇವಿಸಿ

ಬೆಳಗ್ಗೆ ನೀವು ಪೋಷಕಾಂಶ ಅಧಿಕವಿರುವ ಆಹಾರ ಸೇವಿಸಬೇಕು. ಬೆಳಗ್ಗೆ ಚೆನ್ನಾಗಿ ತಿಂದರೆ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡಲು ದೇಹಕ್ಕೆ ಶಕ್ತಿ ದೊರೆಯುವುದು ಅಲ್ಲದೆ ಆಗಾಗ ಹಸಿವು ಉಂಟಾಗುವುದನ್ನು ಕೂಡ ನಿಯಂತ್ರಿಸಬಹುದು.

5. ತಿನ್ನುವ ಆಹಾರವನ್ನು ಆಸಕ್ತಿಕರವಾಗಿಸಿ

5. ತಿನ್ನುವ ಆಹಾರವನ್ನು ಆಸಕ್ತಿಕರವಾಗಿಸಿ

ದಿನಾ ಒಂದೇ ಬಗೆಯ ಅಥವಾ ಒಂದೇ ಶೈಲಿಯ ಆಹಾರ ತಿನ್ನುತ್ತಿದ್ದರೆ ಬೋರಾಗುವುದು. ಆಹಾರ ಖುಷಿಯಾಗಿರಬೇಕಾದರೆ ರುಚಿಯಾಗಿರಬೇಕು. ಆಹಾರವನ್ನು ರುಚಿಕರವಾಗಿ ಹಾಗೂ ಆರೋಗ್ಯಕರವಾಗಿ ಮಾಡಿ ತಿನ್ನುವುದರಿಂದ ಬಾಯಿಗೆ ತೃಪ್ತಿ ಆರೋಗ್ಯಕ್ಕೆ ಒಳ್ಳೆಯದು. ನಟ್ಸ್, ಹಣ್ಣುಗಳು, ತರಕಾರಿಗಳು, ಮೊಳಕೆ ಕಾಳುಗಳು ಇವುಗಳು ತಿನ್ನಲು ರುಚಿಯಾಗಿರುವುದರಿಂದ ಇವುಗಳನ್ನು ಹೆಚ್ಚಾಗಿ ಬಳಸಿ.

ತೂಕ ಇಳಿಕೆಗೆ ಬಳಸಬೇಕಾದ ತರಕಾರಿಗಳು

ತೂಕ ಇಳಿಕೆಗೆ ಬಳಸಬೇಕಾದ ತರಕಾರಿಗಳು

ಪಾಲಾಕ್, ಇತರ ಸೊಪ್ಪುಗಳು, ಟೊಮೆಟೊ, ಈರುಳ್ಳಿ, ಬೆಂಡೆಕಾಯಿ ಅಣಬೆ, ಕ್ಯಾಬೇಜ್, ಹೂಕೋಸು, ಬ್ರೊಕೋಲಿ

ಹಣ್ಣುಗಳು: ಪಪ್ಪಾಯಿ, ಕಿತ್ತಳೆ, ಹುಣಸೆಹಣ್ಣು, ಸೇಬು, ಕಲ್ಲಂಗಡಿ, ಕರ್ಬೂಜ, ಬಾಳೆಹಣ್ಣು

ಬೀಜಗಳು: ಬಾದಾಮಿ, ಪಿಸ್ತಾ, ಕಡಲೆ ಬೀಜ, ಕುಂಬಳಕಾಯಿ ಬೀಜ, ಅಗಸೆ ಬೀಜ ಮುಂತಾದವುಗಳು

ಸಂಬಾರ ಪದಾರ್ಥಗಳು: ಅರಿಶಿಣ, ಕೊತ್ತಂಬರಿ, ಜೀರಿಗೆ, ಬೆಳ್ಳುಳ್ಳಿ, ಕಾಳುಮೆಣಸು, ಮೆಂತೆ, ಏಲಕ್ಕಿ ಮುಂತಾದವು

ಪ್ರೊಟೀನ್‌ಗಾಗಿ: ಪನ್ನೀರ್, ಟೋಫು

English summary

Indian Plant Based Diet Plan for Weight Loss

Here are indian plant based diet for weight loss, Read on....
X
Desktop Bottom Promotion