For Quick Alerts
ALLOW NOTIFICATIONS  
For Daily Alerts

ತೆಳ್ಳಗಾಗಲು ಆ್ಯಪಲ್ ಸೈಡರ್ ವಿನೆಗರ್ ಹೇಗೆ ಬಳಸಬೇಕು?

|

ಆ್ಯಪಲ್ ಸೈಡರ್ ವಿನೆಗರ್ ಆರೋಗ್ಯಕರವಾದ ವಿನೆಗರ್ ಆಗಿದೆ. ಆದರೆ ಇದರ ಬಳಕೆ ನಮ್ಮಲ್ಲಿ ಹೆಚ್ಚಾಗಿ ಇಲ್ಲ. ಸೊಂಟದ ಸುತ್ತಳತೆ ಕಡಿಮೆ ಮಾಡುವಲ್ಲಿ ಆ್ಯಪಲ್ ಸೈಡರ್ ವಿನೆಗರ್‌ ತುಂಬಾ ಪ್ರಯೋಜನಕಾರಿ.

ಆ್ಯಪಲ್ ಸೈಡರ್ ವಿನೆಗರ್ ಆರೋಗ್ಯ ವೃದ್ಧಿಸುವಲ್ಲಿ ತುಂಬಾನೇ ಪ್ರಯೋಜನಕಾರಿ. ಇದರಲ್ಲಿರುವ ಆ್ಯಂಟಿಬ್ಯಾಕ್ಟಿರಿಯಾ ಅಂಶ , ಅಮೈನೋ ಆಮ್ಲ ಹಾಗೂ ಪೊಟಾಷ್ಯಿಯಂ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವಲ್ಲಿ ತುಂಬಾನೇ ಸಹಕಾರಿಯಾಗಿದೆ. ತೂಕ ಇಳಿಕೆಯಾಗಬೇಕೆಂದು ಬಯಸುವವರು ಇದನ್ನು ಬಳಸುವುದು ತುಂಬಾನೇ ಒಳ್ಳೆಯದು.

ತೂಕ ಇಳಿಕೆಯಲ್ಲಿ ಇದನ್ನು ಬಳಸುವುದಾದರೆ ಹೇಗೆ, ಇದು ತೂಕ ಇಳಿಕೆಗೆ ಹೇಗೆ ಸಹಕಾರಿ ಎಂದು ನೋಡೋಣ ಬನ್ನಿ:

 ಆ್ಯಪಲ್ ಸೈಡರ್ ವಿನೆಗರ್ ಬಳಕೆ

ಆ್ಯಪಲ್ ಸೈಡರ್ ವಿನೆಗರ್ ಬಳಕೆ

ಇದನ್ನು ತೂಕ ಇಳಿಕೆಯ ಪಾನೀಯವಾಗಿ ಬಳಸಬಹುದು. ಒಂದು ಲೋಟ ಬಿಸಿ ನೀರಿಗೆ 1 ಚಮಚ ಆ್ಯಪಲ್ ಸೈಡರ್ ವಿನೆಗರ್ ಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ, ಇದು ಸೊಂಟದ ಸುತ್ತಲಿರುವ ಕೊಬ್ಬು ಕರಗಿಸುವಲ್ಲಿ ಪರಿಣಾಮಕಾರಿಗೆಯಾಗಿದೆ.

ಹೇಗೆ?

ಹೇಗೆ?

ಆ್ಯಪಲ್ ಸೈಡರ್‌ ವಿನೆಗರ್‌ ಹಾಕಿದ ನೀರು ಕುಡಿದರೆ ಹೊಟ್ಟೆ ತುಂಬಿದ ಅನುಭವ ಇರುತ್ತದೆ. ಇದರಿಂದ ಬೇಗನೆ ಹೊಟ್ಟೆ ಹಸಿ ಉ ಉಂಟಾಗುವುದಿಲ್ಲ, ತೆಗೆದುಕೊಳ್ಳುವ ಆಹರ ಪ್ರಮಾಣವೂ ಕಡಿಮೆಯಾಗಿತ್ತದೆ. ಇದರಿಂದ ತೂಕ ಇಳಿಕೆಯಾಗುವುದು.

 ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ

ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ

ಆ್ಯಪಲ್‌ ಸೈಡರ್ ವಿನಗೆರ್ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ಅಧಿಕ ಕ್ಯಾಲೋರಿಯ ಆಹಾರ ಸೇವಿಸಿದ ಬಳಿಕ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯುವುದು ತುಂಬಾನೇ ಮುಖ್ಯ. ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವಲ್ಲಿ ಆ್ಯಪಲ್ ಸೈಡರ್ ವಿನೆಗರ್ ಪರಿಣಾಮಕಾರಿಯಾಗಿದೆ. ಇದರಿಂದಾಗಿ ಆರೋಗ್ಯಕರವಾದ ತೂಕ ಇಳಿಕೆಗೆ ಸಹಕಾರಿಯಾಗಿದೆ.

ಏನು ಮಾಡಬಾರದು?

ಏನು ಮಾಡಬಾರದು?

ಆ್ಯಪಲ್‌ ಸೈಡರ್ ವಿನಗೆರ್ ತೂಕ ಇಳಿಕೆಗೆ ಬಳಸುವುದಾದರೆ ಏನು ಮಾಡಬಾರದು?

  • ಇದನ್ನು ಹಾಗೇ ಕುಡಿಯಬಾರದು, ಅಲ್ಲದೆ ಅತೀ ಹೆಚ್ಚು ಕೂಡ ಬಳಸಬಾರದು. ದಿನದಲ್ಲಿ ಒಂದು ಚಮಚ ಅಷ್ಟೇ ಸಾಕು.
  • ಆ್ಯಪಲ್‌ ಸೈಡರ್ ವಿನಗೆರ್ ಅನ್ನು 2-3 ಬಾರಿ ತೆಗೆದುಕೊಳ್ಳುವುದು ಬೇಡ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರಷ್ಟೇ ಸಾಕು.
  • ಆ್ಯಪಲ್‌ ಸೈಡರ್ ವಿನಗೆರ್ ಅತೀ ಹೆಚ್ಚು ಬಳಸಿದರೆ ಅಸಿಡಿಟಿ ಉಂಟಾಗಬಹುದು, ಆದ್ದರಿಂದ ಮಿತಿಯಲ್ಲಿ ಬಳಸಿ.
  •  ಹೇಗೆ ಬಳಸಬಹುದು?

    ಹೇಗೆ ಬಳಸಬಹುದು?

    • ಒಂದು ಲೋಟ ಬಿಸಿ ನೀರಿನಲ್ಲಿ ಹಾಕಿ ಕುಡಿಯಬಹುದು.
    • ಸಲಾಡ್‌ ಆಲೀವ್‌ ಎಣ್ಣೆ ಹಾಗೂ ಆ್ಯಪಲ್‌ ಸೈಡರ್ ವಿನಗೆರ್ ಹಾಕಿ ಬಳಸಬಹುದು.
    • ಸೂಚನೆ: ಸಲಾಡ್‌ನಲ್ಲಿ ಬಳಸುವುದಾದರೆ ಆ ದಿನ ನೀರಿನಲ್ಲಿ ಹಾಕಿ ಕುಡಿಯಬೇಡಿ.

      ಆ್ಯಪಲ್‌ ಸೈಡರ್ ವಿನಗೆರ್ ಅತಿಯಾಗಿ ಸೇವಿಸಿದರೆ ಉಂಟಾಗುವ ಅಡ್ಡ ಪರಿಣಾಮಗಳು

      ಆ್ಯಪಲ್‌ ಸೈಡರ್ ವಿನಗೆರ್ ಅತಿಯಾಗಿ ಸೇವಿಸಿದರೆ ಉಂಟಾಗುವ ಅಡ್ಡ ಪರಿಣಾಮಗಳು

      • ಜೀರ್ಣಕ್ರಿಯೆಯ ಸಮಸ್ಯೆ ಉಂಟಾಗುವುದು
      • ಪೊಟಾಷ್ಯಿಯಂ ಕಡಿಮೆಯಾಗುವುದು ಹಾಗೂ ಮೂಳೆ ಸವೆತ ಉಂಟಾಗುವುದು.
      • ಇನ್ನು ಆ್ಯಪಲ್‌ ಸೈಡರ್ ವಿನಗೆರ್ ಸೇವಿಸಿದ ಬಳಿಕ ಬಾಯಿ ತೊಳೆಯಿರಿ, ಇಲ್ಲದಿದ್ದರೆ ಹಲ್ಲುಗಳು ಹಾಳಾಗುತ್ತದೆ.
      • ಸಲಹೆ: ತೂಕ ಇಳಿಕೆಗೆ ಆ್ಯಪಲ್‌ ಸೈಡರ್ ವಿನಗೆರ್ ತೆಗೆದುಕೊಳ್ಳುವ ವೈದ್ಯರ ಸಲಹೆ ಪಡೆದ ಬಳಿಕವಷ್ಟೇ ಸೇವಿಸಿ. ಅವರು ನಿಮಗೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು, ಒಂದು ವೇಳೆ ಇತರ ಆರೋಗ್ಯ ಸಮಸ್ಯೆ ಇದ್ದರೆ ಸೇವಿಸಬಹುದೇ, ಇಲ್ಲವೇ ಎಂಬುವುದರ ಬಗ್ಗೆ ಸೂಕ್ತ ಸಲಹೆ ನೀಡುತ್ತಾರೆ.

English summary

How To Use Apple Cider Vinegar For Weight Loss

Here are how to use apple cider vinegar for weight loss, read on,
Story first published: Tuesday, November 10, 2020, 16:34 [IST]
X
Desktop Bottom Promotion